NEWS AND PHOTO DATE: 04--07--2017

NEWS AND PHOTO DATE: 04--07--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 04--07--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 04--07--2017
ಲಿಂಕ್ : NEWS AND PHOTO DATE: 04--07--2017

ಓದಿ


NEWS AND PHOTO DATE: 04--07--2017

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ರಚನೆ
****************************************
ಕಲಬುರಗಿ,ಜುಲೈ.04.(ಕ.ವಾ.)-ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ರಚಿಸಿದ್ದು, ಈಗಾಗಲೇ ವ್ಯವಸ್ಥಾಪಕ ನಿರ್ದೇಶಕರನ್ನು ಗುರುತಿಸಲಾಗಿದೆ. ಆದಷ್ಟು ಬೇಗ ಅಧ್ಯಕ್ಷರ ನೇಮಕ ಮಾಡಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ ತಿಳಿಸಿದರು.
ಅವರು ಮಂಗಳವಾರ ಮಹಾನಗರ ಪಾಲಿಕೆಯ ಟೌನ್ ಹಾಲ್‍ನಲ್ಲಿ ಸಫಾಯಿ ಕರ್ಮಚಾರಿಗಳೊಂದಿಗೆ ನೇರ ಸಂವಾದ ನಡೆಸಿ ಮಾತನಾಡಿ, ರಾಜ್ಯದಲ್ಲಿ ಕೆಲಸದಿಂದ ತೆಗೆದು ಹಾಕಿರುವ ಪೌರ ಕಾರ್ಮಿಕರನ್ನು ಆರು ತಿಂಗಳ ಅವಧಿಯಲ್ಲಿ ಮರು ನೇಮಕ ಮಾಡಲಾಗಿದೆ ಎಂದರು.
1993ರಿಂದ ಇಲ್ಲಿಯವರೆಗೆ ಮ್ಯಾನಹೋಲ್ ಅಥವಾ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಮಾಡುವಾಗ ಮೃತಪಟ್ಟ 61 ಮ್ಯಾನುಯಲ್ ಸ್ಕಾವೆಂಜರ್‍ಗಳಿಗೆ ಪರಿಹಾರ ದೊರಕಿಸಲಾಗಿದೆ. ಮ್ಯಾನುಯಲ್ ಸ್ಕ್ಯಾವೆಂಜರ್‍ಗಳಿಗೆ ಗುರುತಿಸಿ ಪ್ರಮಾಣಪತ್ರ ನೀಡಿರುವ ಪ್ರಥಮ ಜಿಲ್ಲೆ ಕಲಬುರಗಿಯಾಗಿದ್ದು, ಒಂದು ವಾರದಲ್ಲಿ ಅವರಿಗೆ ಸರ್ಕಾರದಿಂದ ನೀಡುವ ಎಲ್ಲ ಸಹಾಯ ದೊರಕಿಸಲಾಗುವುದು. ಕೇಂದ್ರ ಸರ್ಕಾರ ನೀಡುವ 40,000 ಹಾಗೂ ರಾಜ್ಯ ಸರ್ಕಾರದ 1 ಲಕ್ಷ ರೂ.ಗಳನ್ನು ಠೇವಣಿ ಮಾಡಲಾಗುವುದು ಎಂದರು.
ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 45 ಖಾಯಂ ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿ ಕೊಡಲಾಗಿದೆ. 85 ಜನ ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಎಲ್.ಪಿ.ಜಿ. ಸ್ಟೋವ್ ನೀಡಲಾಗಿದೆ. 40 ಜನ ಖಾಯಂ ಪೌರ ಕಾರ್ಮಿಕರಿಗೆ ಜೀವ ವಿಮೆ ಮಾಡಲಾಗಿದೆ. 848 ಜನ ಪೌರ ಕಾರ್ಮಿಕರಿಗೆ ಈ ವರ್ಷದಿಂದ ಮುಂದಿನ 5 ವರ್ಷದವರೆಗೆ ಪ್ರಧಾನಮಂತ್ರಿ ಬಿಮಾ ಯೋಜನೆಯಡಿ ನೋಂದಾಯಿಸಲು ಪ್ರಿಮಿಯಂ ಕಟ್ಟಲಾಗುತ್ತಿದೆ. ಎಲ್ಲರಿಗೂ ಆಧಾರ್ ಆಧಾರದ ಬಯೋಮೆಟ್ರಿಕ್ ಸಿಸ್ಟಂ ಜಾರಿಗೊಳಿಸಿ ವೇತನ ನೀಡಲಾಗುತ್ತಿದೆ. ಪೌರ ಕಾರ್ಮಿಕರಿಗೆ ಮುಂದಿನ ಆರು ತಿಂಗಳವರೆಗೆ ವೇತನ ನೀಡಲು 16 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಪೌರ ಕಾರ್ಮಿಕರ ಸಂಖ್ಯೆಯನ್ನು 700ರಿಂದ 1024ಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ ಕೆಲಸ ಮಾಡುತ್ತಿದ್ದ 40 ಜನ ಪೌರ ಕಾರ್ಮಿಕರನ್ನು ದಿನಗೂಲಿ ಆಧಾರದ ಮೇಲೆ ವಿವಿಧ ಯೋಜನೆಗಳಡಿಯಲ್ಲಿ ಭರ್ತಿ ಮಾಡಲಾಗುವುದು ಎಂದÀು ಮಾಹಿತಿ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ದಿಲೀಪ ಕಾರೇಕರ್, ಮಹಾನಗರ ಪಾಲಿಕೆ ಸದಸ್ಯ ರಮಾನಂದ ಉಪಾಧ್ಯಾಯ, ಶರಣು ಮತ್ತಿತರರು ತಮ್ಮ ಅಹವಾಲನ್ನು ಅಧ್ಯಕ್ಷರಿಗೆ ಸಲ್ಲಿಸಿದರು.
ಆಯೋಗದ ಸದಸ್ಯ ಗೋಕುಲನಾರಾಯಣಸ್ವಾಮಿ, ಆಯೋಗದ ಸಂಶೋಧನಾಧಿಕಾರಿ ಮಂಜುನಾಥ, ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಪಿ. ಜಾಧವ, ಸಫಾಯಿ ಕರ್ಮಚಾರಿ ಮುಖಂಡರು, ಸಫಾಯಿ ಕರ್ಮಚಾರಿಗಳು ಸಂವಾದಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಅಧ್ಯಕ್ಷರು ಸುಪರ ಮಾರ್ಕೇಟ್, ಇಂದಿರಾ ನಗರ, ಕೇಂದ್ರ ಬಸ್ ನಿಲ್ದಾಣ ಹಾಗೂ ಇತ್ತೀಚೆಗೆ ಚರಂಡಿಯಲ್ಲಿ ಬಿದ್ದು ಸಾವನಪ್ಪಿದ ಬಾಲಕನ ಕುಟುಂಬದವರನ್ನು ಗಾಜಿಪುರದಲ್ಲಿ ಭೇಟಿ ಮಾಡಿದರು.

ಸಫಾಯಿ ಕರ್ಮಚಾರಿಗಳ ಸಮೀಕ್ಷೆಗೆ ಸೂಚನೆ
***************************************
ಕಲಬುರಗಿ,ಜುಲೈ.04.(ಕ.ವಾ.)-ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳ ಸಮೀಕ್ಷೆ 15 ದಿನಗಳಲ್ಲಿ ಕೈಗೊಂಡು ಅವರಿಗೆ ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಹಾಗೂ ಪುನರ್ವಸತಿ ಸೌಲಭ್ಯ ದೊರಕಿಸಬೇಕೆಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ ತಿಳಿಸಿದರು.
ಅವರು ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಮಟ್ಟದ ಮತ್ತು ಉಪವಿಭಾಗ ಮಟ್ಟದ ಜಾಗೃತ ಸಮಿತಿ ರಚನೆ ಮಾಡಿ ಸಫಾಯಿ ಕರ್ಮಚಾರಿಗಳ ಸಮರ್ಪಕ ಸಮೀಕ್ಷೆ ಕೈಗೊಳ್ಳಬೇಕು. ಅವರಿಗೆ ಕೇಂದ್ರ ಸರ್ಕಾರದಿಂದ ಸಿಗುವ ಠೇವಣಿ ಮೊತ್ತ 70 ಕೋಟಿ ರೂ.ಗಳು ಖರ್ಚಾಗದೇ ಉಳಿದಿದ್ದು, ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದರು.
ಮಲ-ಮೂತ್ರವನ್ನು ನೇರವಾಗಿ ಚರಂಡಿಗೆ ಅಥವಾ ರಸ್ತೆಗೆ ಬಿಡುವುದು ಕ್ರಿಮಿನಲ್ ಅಪರಾಧವಾಗಿದೆ. ಆದರೆ ನಗರದಲ್ಲಿ ಸುಮಾರು 500 ಕಡೆಗಳಲ್ಲಿ ಮಲ-ಮೂತ್ರ ನೇರವಾಗಿ ಚರಂಡಿ ಸೇರುತ್ತಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಮಹಾನಗರ ಪಾಲಿಕೆಯ ಪರಿಸರ ಮತ್ತು ಆರೋಗ್ಯ ಅಧಿಕಾರಿಗಳು ಇಂತಹ ಪ್ರದೇಶಗಳಿಗೆ ಭೇಟಿ ನೀಡಿ ಮಲ-ಮೂತ್ರ ಚರಂಡಿಗೆ ಸೇರುವುದನ್ನು ತಪ್ಪಿಸಲು ವೈಯಕ್ತಿಕ ಶೌಚಾಲಯಗಳ ಸಂಪರ್ಕವನ್ನು ಸ್ಥಗಿತಗೊಳಿಸಿ ಅವರಿಗೆ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕೆಂದು ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ 650 ಮ್ಯಾನುಯಲ್ ಸ್ಕ್ಯಾವೆಂಜರ್‍ಗಳಿರುವ ಬಗ್ಗೆ ಈ ಹಿಂದಿನ ವರದಿಯಲ್ಲಿ ನಮೂದಿಸಲಾಗಿದೆ. ಆದರೆ ಸಧ್ಯ ಮ್ಯಾನುಯಲ್ ಸ್ಕ್ಯಾವೆಂಜರ್‍ಗಳು ಇಲ್ಲ ಎಂದು ವರದಿ ಮಾಡಲಾಗಿದೆ. 15 ದಿನದೊಳಗಾಗಿ 650 ಮ್ಯಾನುಯಲ್ ಸ್ಕ್ಯಾವೆಂಜರ್‍ಗಳನ್ನು ಪುನರ್ವಸತಿ ಮಾಡಿರುವ ಬಗ್ಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಪೂರ್ಣ ಮಾಹಿತಿ ಪಡೆದು ಆಯೋಗಕ್ಕೆ ಸಲ್ಲಿಸಲು ತಿಳಿಸಿದರು.
ನಗರದಲ್ಲಿ ಪೌರ ಕಾರ್ಮಿಕರು ತಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಾನಗರ ಪಾಲಿಕೆ ಮತ್ತು ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗಾಗಿ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಅರಿವು ಮೂಡಿಸುವ ಕಾರ್ಯಕ್ರಮವನ್ನು 15 ದಿನದೊಳಗಾಗಿ ಹಮ್ಮಿಕೊಳ್ಳಬೇಕು. ಅವರ ಆರೋಗ್ಯ ತಪಾಸಣೆಯನ್ನು ಕೈಗೊಂಡು ಮಾರಣಾಂತಿಕ ಕಾಯಿಲೆಗಳಿಂದ ನರಳುತ್ತಿದ್ದರೆ ಹೆಚ್ಚಿನ ಚಿಕಿತ್ಸೆ ದೊರಕಿಸಬೇಕೆಂದು ತಿಳಿಸಿದರು.
ನಗರದಲ್ಲಿ ಸುಮಾರು 25 ಸಾರ್ವಜನಿಕ ಶೌಚಾಲಯಗಳಿದ್ದು, ಅವುಗಳ ನಿರ್ವಹಣೆಗೆ ಟೆಂಡರ್ ಕರೆದಾಗ ಹೊರರಾಜ್ಯದ ಸಫಾಯಿ ಕರ್ಮಚಾರಿಗಳು ನಿರ್ವಹಣೆಗೆ ಅರ್ಹರಾಗುತ್ತಿದ್ದಾರೆ. ಸ್ಥಳೀಯವಾಗಿ ಲಭ್ಯವಿರುವ ಸಫಾಯಿ ಕರ್ಮಚಾರಿಗಳಿಗೆ ಪ್ರಾಯೋಗಿಕವಾಗಿ ಒಂದು ಶೌಚಾಲಯವನ್ನು ನಿರ್ವಹಣೆಗೆ ವಹಿಸಲು ಆಯೋಗ ಒಪ್ಪಿಗೆ ನೀಡುವುದು. ಪ್ರಾಯೋಗಿಕವಾಗಿ ಒಂದು ಶೌಚಾಲಯವನ್ನು ಸ್ಥಳೀಯರಿಗೆ ನಿರ್ವಹಿಸಲು ಕ್ರಮ ಜರುಗಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಮಾತನಾಡಿ, ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಒಳಚರಂಡಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದು ಪೂರ್ಣಗೊಂಡರೆ ಶೇ. 90ರಷ್ಟು ಮನೆಗಳಿಗೆ ಒಳಚರಂಡಿ ಸಂಪರ್ಕ ದೊರೆಯುತ್ತದೆ. ನಗರದಲ್ಲಿ 52 ಕಡೆಗಳಲ್ಲಿ ಒಳಚರಂಡಿಯ ಮಿಸ್ಸಿಂಗ್ ಲಿಂಕ್‍ಗಳಿದ್ದು ಅವುಗಳನ್ನು ಸರಿಪಡಿಸಲಾಗುತ್ತಿದೆ. ನಗರದಲ್ಲಿರುವ ತೆರೆದ ಚರಂಡಿಯನ್ನು ಶಹಾಬಾದ್ ಫರ್ಸಿಯಿಂದ ಮುಚ್ಚಲು ಸಂಪೂರ್ಣ ಯೋಜನೆ ಸಿದ್ಧಗೊಳಿಸಲಾಗಿದೆ. ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಿಂದ ತೆರೆÀದ ಚರಂಡಿ ಮುಚ್ಚಲು ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಆಯೋಗದ ಸದಸ್ಯ ಗೋಕುಲನಾರಾಯಣಸ್ವಾಮಿ, ಆಯೋಗದ ಸಂಶೋಧನಾಧಿಕಾರಿ ಮಂಜುನಾಥ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಒಳಚರಂಡಿ ಮಂಡಳಿ ಮತ್ತು ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಅಮಾನತ್ತಿಗೆ ಶಿಫಾರಸ್ಸು
ಕಲಬುರಗಿ,ಜುಲೈ.04.(ಕ.ವಾ.)-ಮಲ-ಮೂತ್ರವನ್ನು ನೇರವಾಗಿ ಚರಂಡಿಗೆ ಬಿಡುತ್ತಿದ್ದರು ಯಾವುದೇ ಕ್ರಮ ಜರುಗಿಸದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ಕೇಂದ್ರ ಬಸ್‍ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಅಮಾನತ್ತುಗೊಳಿಸಲು ಆಯೋಗ ಶಿಫಾರಸ್ಸು ಮಾಡುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ ತಿಳಿಸಿದರು.
ಅವರು ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಲ-ಮೂತ್ರವನ್ನು ನೇರವಾಗಿ ಚರಂಡಿಗೆ ಅಥವಾ ರಸ್ತೆಗೆ ಬಿಡುವುದು ಅಪರಾಧವಾಗಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಮೇಲೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ದೂರು ದಾಖಲಿಸಬೇಕು. ಈ ದೂರಿನ ಆಧಾರದ ಮೇಲೆ ಆಯೋಗವು ಈ ಇಬ್ಬರೂ ಅಧಿಕಾರಿಗಳ ಅಮಾನತ್ತಿಗೆ ಸೂಕ್ತ ಕ್ರಮ ಜರುಗಿಸುವುದು ಎಂದರು.
ಮಹಾನಗರ ಪಾಲಿಕೆಯ ಪರಿಸರ ಅಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳು ಸಹ ಮಲ-ಮೂತ್ರ ಚರಂಡಿ ಸೇರುವುದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಆಯುಕ್ತರು ಈ ಅಧಿಕಾರಿಗಳ ವಿಚಾರಣೆ ಕೈಗೊಂಡು ಸೂಕ್ತ ಕ್ರಮ ಜರುಗಿಸಬೇಕೆಂದು ತಿಳಿಸಿದರು.
ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದ್ದು, ಸಫಾಯಿ ಕರ್ಮಚಾರಿಗಳ ಕಾಲೋನಿಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಖಾಯಂ ಪೌರ ಕಾರ್ಮಿಕರಿಗೆÉ 6 ಲಕ್ಷ ರೂ.ಗಳಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ವಸತಿ ಭಾಗ್ಯ ಯೋಜನೆ ಜಾರಿಗೊಳಿಸಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಪೌರ ಕಾರ್ಮಿಕರಿಗೆ ಅತೀ ಹೆಚ್ಚು ವೇತನ ನೀಡುವ ರಾಜ್ಯ ನಮ್ಮದಾಗಿದ್ದು, ಪೌರ ಕಾರ್ಮಿಕರಿಗೆ ತಿಂಗಳಿಗೆ ಸುಮಾರು 17000ರೂ.ಗಳನ್ನು ನೀಡಲಾಗುತ್ತಿದೆ ಎಂದರು.
ಪೌರ ಕಾರ್ಮಿಕರ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ 10 ಕೋಟಿ ರೂ.ಗಳಲ್ಲಿ ಆರೋಗ್ಯ ಭಾಗ್ಯ ಯೋಜನೆ ರೂಪಿಸಿದ್ದು, ಎಲ್ಲ ಪೌರ ಕಾರ್ಮಿಕರನ್ನು ಜ್ಯೋತಿ ಸಂಜೀವಿನಿ ಯೋಜನೆಯಡಿ ತರಲಾಗುತ್ತಿದೆ. ಎಲ್ಲ ಪೌರ ಕಾರ್ಮಿಕರಿಗೆ 3 ತಿಂಗಳಿಗೊಮ್ಮೆ ಮಾಸ್ಟರ್ ಚಕಪ್ ಮಾಡಿಸಲಾಗುತ್ತಿದೆ ಹಾಗೂ ಪೌರ ಕಾರ್ಮಿಕರ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡಲು ಅನುಕೂಲವಾಗುವ ಹಾಗೆಯೇ ಶೇ. 5ರಷ್ಟು ಪ್ರವೇಶ ಮೀಸಲಾತಿ ನೀಡಲಾಗಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಪೌರ ಕಾರ್ಮಿಕರಿಗೆ ಶೇ. 80ರಷ್ಟು ಸವಲತ್ತುಗಳನ್ನು ನೀಡಲಾಗುತ್ತಿದೆ. ಶೇ. 50ರಷ್ಟು ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರಿಗೆ ಉಪಹಾರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಯೋಗದ ಸದಸ್ಯ ಗೋಕುಲನಾರಾಯಣಸ್ವಾಮಿ, ಆಯೋಗದ ಸಂಶೋಧನಾಧಿಕಾರಿ ಮಂಜುನಾಥ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಉಪಸ್ಥಿತರಿದ್ದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಪ್ರವಾಸ
ಕಲಬುರಗಿ,ಜುಲೈ.04.(ಕ.ವಾ.)-ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ|| ಕೃಪಾ ಅಮರ ಆಳ್ವಾ ಅವರು ಯಾದಗಿರಿಯಿಂದ ಜುಲೈ 5ರಂದು ಮಧ್ಯಾಹ್ನ 4 ಗಂಟೆಗೆ ಕಲಬುರಗಿಗೆ ಆಗಮಿಸುವರು. ಅಂದು ಮಧ್ಯಾಹ್ನ 4.30 ರಿಂದ ಸಂಜೆ 6 ಗಂಟೆಯವರೆಗೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.

ಕಲಾ ಶಿಬಿರಕ್ಕಾಗಿ ಹಿರಿಯ ಕಲಾವಿದರಿಂದ ಅರ್ಜಿ ಆಹ್ವಾನ
**************************************************
ಕಲಬುರಗಿ,ಜುಲೈ.04.(ಕ.ವಾ.)-ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ 2016-17ನೇ ಸಾಲಿನಲ್ಲಿ ಯಕ್ಷಗಾನ ಮತ್ತು ಬಯಲಾಟ ಕಲಾ ಶಿಬಿರವನ್ನು ನಡೆಸಲು ಉದ್ದೇಶಿಸಿದೆ. ಇದಕ್ಕಾಗಿ ತರಬೇತಿ ನೀಡಬಯಸುವ ಹಿರಿಯ ಕಲಾವಿದರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟ್ರಾರ್ ತಿಳಿಸಿದ್ದಾರೆ.
ಯಕ್ಷಗಾನ ಮತ್ತು ಬಯಲಾಟ ಕಲಾ ಪ್ರಕಾರಗಳಲ್ಲಿ (ತೆಂಕುತಿಟ್ಟು./ಬುಡಗುತಿಟ್ಟು, ಯಕ್ಷಗಾನ, ಮೂಡಲಪಾಯ ಯಕ್ಷಗಾನ, ಶ್ರೀಕೃಷ್ಣಪಾರಿಜಾತ, ದೊಡ್ಡಾಟ, ಸಣ್ಣಾಟ, ಘಟ್ಟದಕೋರೆ, ತೊಗಲುಗೊಂಬೆಯಾಟ, ಸೂತ್ರದಗೊಂಬೆಯಾಟ, ಸಲಾಕೆಗೊಂಬೆಯಾಟ) ತರಬೇತಿ ನೀಡಬಯಸುವ ಹಿರಿಯ ಕಲಾವಿದರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಯ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಜುಲೈ 21ರೊಳಗಾಗಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ ಬೆಂಗಳೂರು-2 ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 080-22113146ನ್ನು ಸಂಪರ್ಕಿಸಲು ಕೋರಿದೆ.
ರೈತರು ವಾತಾವರಣ ಅನುಗುಣವಾಗಿ ಕೃಷಿ ಚಟುವಟಿಕೆ ಕೈಗೊಳ್ಳಲು ಸೂಚನೆ
ಕಲಬುರಗಿ,ಜುಲೈ.04.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಮುಂದಿನ 48 ಗಂಟೆಗಳಲ್ಲಿ ಮಳೆಯಾಗುವ ಸಂಭವ ತುಂಬಾ ಕಡಿಮೆಯಿದ್ದು, ಜಿಲ್ಲೆಯ ರೈತ ಭಾಂದವರು ಸ್ಥಳಿಯ ವಾತಾವರಣಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಹೆಸರು ಮತ್ತು ಉದ್ದು ಬೆಳೆಯಲ್ಲಿ ಸಸ್ಯ ಹೇನು ಮತ್ತು ಥ್ರೀಪ್ಸ್ ಕೀಟ ನಿರ್ವಹಣಾ ಕ್ರಮಗಳ ವಿವರ ಇಂತಿದೆ: ಕಲಬುರಗಿ ಜಿಲ್ಲೆಯಲ್ಲಿ 2017-18 ನೇ ಸಾಲಿಗೆ ಈಗಾಗಲೇ ಹೆಸರು ಮತ್ತು ಉದ್ದು ಬೆಳೆ ಬಿತ್ತನೆಯಾಗಿದ್ದು, ಬೆಳೆವಣಿಗೆಯ ಹಂತದಲ್ಲಿರುತ್ತದೆ. ಹೆಸರು ಮತ್ತು ಉದ್ದು ಬೆಳೆಗೆ ಸಸ್ಯ ಹೇನು ಮತ್ತು ಥ್ರೀಪ್ಸ್ ಕೀಟಗಳು ಬೆಳೆಯ ಎಳೆಯ ಭಾಗದಿಂದ ರಸವನ್ನು ಹೀರಿ ಬೆಳೆಯನ್ನು ಕುಗ್ಗಿಸುತ್ತವೆ, ಆದ್ದರಿಂದ ಸಸ್ಯ ಹೇನು ಮತ್ತು ಥೀಪ್ಸ್ ಕೀಟ ಭಾದೆ ಕಂಡುಬಂದಲ್ಲಿ, ಸದರಿ ಕೀಟ ನಿಯಂತ್ರಣಕ್ಕೆ ಪ್ರತಿ ಲೀಟರ ನೀರಿಗೆ 1 ಮಿ.ಲೀಟರ ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ. ಅಥವಾ 1 ಮಿ.ಲೀ. ಮೊನೋಕ್ರೋಟಾಫಾಸ್ 36 ಎಸ್.ಎಲ್. ಅಥವಾ 1.7 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಬೇರೆಸಿ ಸಿಂಪಡಿಸಬೇಕು. ಅದರಂತೆ ತೊಗರೆ, ಹೆಸರು, ಉದ್ದು , ಸೋಯಾಬಿನ ಮತ್ತು ಈಗಾಗಲೇ ಬೀತ್ತನೆ ಮಾಡಿದ ಬೆಳೆಗಳಲ್ಲಿ 40 ದಿವಸಗೊಳಗಾಗಿ ಎಡೆಕುಂಠಿ ಹೊಡೆದು ಕಳೆಗಳನ್ನು ತೆಗೆಯಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಜುಲೈ 5ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
********************************************
ಕಲಬುರಗಿ,ಜುಲೈ.04.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಬ್ಯಾಂಕ್ ಕಾಲೋನಿ ಫೀಡರ್ ವ್ಯಾಪ್ತಿಗಳಲ್ಲಿ ನಿರ್ವಹಣಾ ಕಾರ್ಯ ಹಾಗೂ 11 ಕೆ.ವಿ. ಮಹಾವೀರ ಪೀಡರ್ ವ್ಯಾಪ್ತಿಯ ಮೋಹನ ಲಾಡ್ಡ್‍ದಿಂದ ಅಂಡರ್ ಬ್ರಿಜ್‍ವರೆಗಿನ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸ ಕೈಗೊಳ್ಳುವ ಪ್ರಯುಕ್ತ ಜುಲೈ 5ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ಮತ್ತು ಸಮಯದ ವಿವರ ಇಂತಿದೆ.
11 ಕೆ.ವಿ. ಬ್ಯಾಂಕ್ ಕಾಲೋನಿ: ಬೆಳಗಿನ 10 ರಿಂದ ಸಂಜೆ 4 ಗಂಟೆಯವರೆಗೆ ಗಂಜ್ ಮೊನಪ್ಪಾ ದಾಲಮಿಲ್, ಕಸಾಯಿ ಮಜೀದ್, ನಬಿ ಹೋಟೆಲ್, ಕಿರಾಣ ಬಜಾರ, ಪುಟಾಣಿಗಲ್ಲಿ, ರಂಗಿನ ಮಜಿದ, ಸದರ ಮೊಹಲ್ಲಾ, ಸಿಟಿ ಮಾರ್ಕೆಟ್, ಗಂಜ ಮೇನ್‍ರೋಡ್, ಎಪಿಎಂಸಿ ಯಾರ್ಡ್, ಸಂಜೀವ ನಗರ, ಫಿಲ್ಟರ್ ಬೆಡ್ ವಾಟರ್ ಸಪ್ಲೈ ನಗರೇಶ್ವರ ಮಂದಿರ, ಗಡಂಗ ವಿ.ಆರ್.ಎಲ್. ಟಿ.ಸಿ. ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ ಮಹಾವೀರ ನಗರ ಫೀಡರ್: ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಹಾವೀರನಗರ, ಶಾಸ್ತ್ರಿನಗರ, ಹನುಮಾನ ನಗರ, ಪಂಚಶೀಲ ನಗರ, ವೆಂಕಟೇಶ ನಗರ. ಕೆ.ಇ.ಬಿ. ಸ್ಟೋರ್, ಕೆ.ಇ.ಬಿ. ಕ್ವಾರ್ಟರ್ಸ್, ಪಿ.ಡಬ್ಲ್ಯೂ.ಡಿ. ಕಚೆÉೀರಿ, ಅಮಲ್‍ವಾಡಿ ಸ್ಟೇಶನ್ ಬಜಾರ್ ಅಪ್ಪÀರ ಲೆನ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ಉಚಿತ ಹೈನುಗಾರಿಕೆ ತರಬೇತಿ ಶಿಬಿರ
*********************************
ಕಲಬುರಗಿ,ಜುಲೈ.04.(ಕ.ವಾ.)-ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರವು ಮೂರು ದಿನಗಳ ಉಚಿತ “ಹೈನುಗಾರಿಕೆ” ತರಬೇತಿ ಶಿಬಿರವನ್ನು ಬಾಗಲಕೋಟೆಯಲ್ಲಿ 2017ರ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಏರ್ಪಡಿಸಲಿದೆ. ಅಧಿಕ ಇಳುವರಿಗೆ ಅನುಸರಿಸಬೇಕಾದ ಆಧುನಿಕ ಪದ್ಧತಿಗಳು, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು.
ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಮುಂತಾದವರು ತಮ್ಮ ಹಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಜುಲೈ 10ರೊಳಗಾಗಿ ನೋಂದಾಯಿಸಲು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ.ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-587103 ಕಚೇರಿ ಹಾಗೂ ಮೊಬೈಲ್ ಸಂಖ್ಯೆ 9482630790ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಜುಲೈ 8ರಂದು ವಸತಿ ಶಾಲೆಗಳ ಪ್ರವೇಶಕ್ಕೆ ಕೌನ್ಸ್‍ಲಿಂಗ್
***************************************************
ಕಲಬುರಗಿ,ಜುಲೈ.04.(ಕ.ವಾ.)-ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ವಸತಿ ಶಾಲೆಗಳ 7ನೇ ಮತ್ತು 8ನೇ ತರಗತಿ ಪ್ರವೇಶಕ್ಕಾಗಿ 2017ರ ಜುಲೈ 8 ರಂದು ಬೆಳಿಗ್ಗೆ 10 ಗಂಟೆಯಿಂದ ಕಲಬುರಗಿಯ (ಏಶಿಯನ್ ಮಾಲ್ ಪಕ್ಕದ) ಜಗತ್ ಎಸ್.ಸಿ/ಎಸ್.ಟಿ. ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯಲ್ಲಿ ಕೌನ್ಸಲಿಂಗ್ ಜರುಗಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ದೂರವಾಣಿ ಕರೆಯ ಮೂಲಕ ಸಂಪರ್ಕಿಸಲಾಗುವುದು. ಪ್ರವೇಶ ಪರೀಕ್ಷೆಗೆ ಹಾಜರಾಗಿ ಅರ್ಹರಾಗಿರುವ ವಿದ್ಯಾರ್ಥಿಗಳ ಪಾಲಕರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದಾರೆ.

ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ತಾಲೂಕು ಅಲ್ಪಸಂಖ್ಯಾತರ ಕಚೇರಿ ಪ್ರಾರಂಭ
*************************************************************
ಕಲಬುರಗಿ,ಜುಲೈ.04.(ಕ.ವಾ.)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯವನ್ನು 2017-18ನೇ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕಗೊಳಿಸಿ ಆಯಾ ತಾಲೂಕುಗಳಲ್ಲಿನ ಇಲಾಖೆಯ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಪ್ರಾರಂಭಿಸಲಾಗುತ್ತಿದೆ. ಸದರಿ ತಾಲೂಕು ಕಚೇರಿಗಳಿಗೆ ಕಚೇರಿ ಸಮಯದಲ್ಲಿ ಭೇಟಿ ನೀಡಿ ಅಲ್ಪಸಂಖ್ಯಾತರ ಇಲಾಖೆಯ ಪ್ರಮುಖ ಯೋಜನೆ ಮತ್ತು ಸೌಲಭ್ಯಗಳ ಮಾಹಿತಿ ಪಡೆಯಲು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಎಲ್ಲ ಅಲ್ಪಸಂಖ್ಯಾತರ ಸಮುದಾಯದ ಜನರಲ್ಲಿ ಮತ್ತು ಸಂಘ ಸಂಸ್ಥೆಗಳಿಗೆ ತಿಳಿಸಿದ್ದಾರೆ.
ತಾಲೂಕಿನ ಹೆಸರು ಮತ್ತು ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ. ಅಫಜಲಪುರ ಮತ್ತು ಕಲಬುರಗಿ: ಮೊಬೈಲ್ ಸಂ. 9008571256. ಆಳಂದ: ಮೊಬೈಲ್ ಸಂ. 9449785047. ಜೇವರ್ಗಿ: ಮೊಬೈಲ್ ಸಂ. 9535775141. ಸೇಡಂ: ಮೊಬೈಲ್ ಸಂ. 9972554852. ಚಿಂಚೋಳಿ: ಮೊಬೈಲ್ ಸಂ. 7026555466. ಚಿತ್ತಾಪುರ: ಮೊಬೈಲ್ ಸಂ. 9019491939.

ಮಹಿಳಾ ಕಲ್ಯಾಣ ಸಂಸ್ಥೆಯಲ್ಲಿ ಯುವ ಸ್ಪಂದನ ಅರಿವು ಕಾರ್ಯಕ್ರಮ
***********************************************************
ಕಲಬುರಗಿ,ಜುಲೈ.04.(ಕ.ವಾ.)-ಕಲಬುರಗಿ ಮನೀಷಾ ಮಹಿಳಾ ಕಲ್ಯಾಣ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ನರ್ಸಿಂಗ್, ಟೈಲರಿಂಗ್, ಬ್ಯೂಟಿ ಪಾರ್ಲರ್, ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲೀಷ್. ವಿದ್ಯಾರ್ಥಿನಿಯರಿಗೆ ಸಂಬಂಧಗಳು ಸುರಕ್ಷತೆ, ಸಂವಹನ ಶಿಕ್ಷಣ ಬೆಳವಣಿಗೆ ಲಿಂಗ ಮತ್ತು ಲೈಂಗಿಕತೆ ಆರೋಗ್ಯ ಮತ್ತು ಜೀವನಶೈಲಿ ಈ ವಿಷಯಗಳ ಕುರಿತು ಸೋಮವಾರ ಯುವ ಪರಿವರ್ತಕರಾದ ದೇವಪ್ಪಾ ಆರ್. ಕನ್ನಡಗಿ ಅವರು ಯುವ ಸ್ಪಂದನ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಉಷಾ ಶರ್ಮಾ ಪಾಟೀಲ ಹಾಗೂ ಸಿಬ್ಬಂದಿಗಳಾದ ಮಹಾನಂದ, ಅಶ್ವಿನಿ, ಗೌರಿ ಹಾಗೂ ಯುವ ಪರಿವರ್ತಕರಾದ ರಾಜಕುಮಾರ, ಮತ್ತು ಆಶಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ರಾಜ್ಯ ಯುವನೀತಿ-2012ರ ಅನ್ವಯ ಕರ್ನಾಟಕ ರಾಜ್ಯದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮತ್ತು ಜನ ಆರೋಗ್ಯ ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಯುವ ಸ್ಪಂದನ ಕಾರ್ಯಕ್ರಮವು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಟಾನಗೊಂಡಿದೆ. ಈ ಕೇಂದ್ರಗಳ ಮೂಲಕ ಯುವ ಜನರಿಗಾಗಿ ಸಮಗ್ರ ಸ್ವಾಭಾವಿಕ, ಮಾನಸಿಕ ಮತ್ತು ಮನೋಸಾಮಾಜಿಕ ಬೆಂಬಲ ಸೇವೆಗಳನ್ನು ನೀಡುವುದು ಯುವ ಸ್ಪಂದನ ಕಾರ್ಯಕ್ರಮದ ಗುರಿಯಾಗಿದೆ









ಹೀಗಾಗಿ ಲೇಖನಗಳು NEWS AND PHOTO DATE: 04--07--2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 04--07--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 04--07--2017 ಲಿಂಕ್ ವಿಳಾಸ https://dekalungi.blogspot.com/2017/07/news-and-photo-date-04-07-2017.html

Subscribe to receive free email updates:

0 Response to "NEWS AND PHOTO DATE: 04--07--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ