ಶೀರ್ಷಿಕೆ : ಶಿವಪುರದಲ್ಲಿ ಸಿರಿಧಾನ್ಯಗಳ ಕಿಸಾನ್ ಗೋಷ್ಠಿ
ಲಿಂಕ್ : ಶಿವಪುರದಲ್ಲಿ ಸಿರಿಧಾನ್ಯಗಳ ಕಿಸಾನ್ ಗೋಷ್ಠಿ
ಶಿವಪುರದಲ್ಲಿ ಸಿರಿಧಾನ್ಯಗಳ ಕಿಸಾನ್ ಗೋಷ್ಠಿ
ಕೊಪ್ಪಳ ಜು. 07 (ಕರ್ನಾಟಕ ವಾರ್ತೆ): ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ ಹಾಗೂ ಕೃಷಿ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಸಿರಿಧಾನ್ಯಗಳ ಉತ್ಪಾದನೆಗಾಗಿ ವಿಶೇಷ ಪ್ಯಾಕೇಜ್ ಕಾರ್ಯಕ್ರಮದಡಿ ಸಿರಿಧಾನ್ಯಗಳ ಕಿಸಾನ್ ಗೋಷ್ಠಿ ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.
ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಮ್.ಬಿ. ಪಾಟೀಲ ಅವರು, ಸಿರಿಧಾನ್ಯಗಳ ಮಹತ್ವ ಹಾಗೂ ಅಗತ್ಯತೆಯ ಬಗ್ಗೆ ತಿಳಿಸಿದರು. ರಾಯಚೂರು ಕೃಷಿ ವಿ.ವಿ. ಮುಖ್ಯ ವಿಜ್ಞಾನಿಕ ಅಧಿಕಾರಿ ಡಾ. ಬಿ.ಎಮ್. ಚಿತ್ತಾಪುರ, ಅವರು ಸಿರಿಧಾನ್ಯಗಳ ಬೇಸಾಯ ಕ್ರಮಗಳ ಬಗ್ಗೆ ತಿಳಿಸಿದರು. ಎನ್.ಎಫ್.ಎಸ್.ಎಂ. ಕೃಷಿ ಇಲಾಖೆಯ ಜಿಲ್ಲಾ ಸಲಹೆಗಾರ ಎಸ್.ಬಿ. ಕೋಣಿ ಅವರು ಸಿರಿಧಾನ್ಯಗಳ ಉತ್ಪಾದನೆಗಾಗಿ ಸರ್ಕಾರದಿಂದ ನೀಡುತ್ತಿರುವ ವಿಶೇಷ ಪ್ಯಾಕೇಜ್ ಬಗ್ಗೆ ವಿವರಿಸಿ, ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಸಿರಿಧಾನ್ಯ ಬೆಳೆದ ರೈತ ಶಿವಬಾಬು ತಮ್ಮ ಅನುಭವ ಹಂಚಿಕೊಂಡರು. ಕಿಸಾನ್ ಗೋಷ್ಠಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ತುಕಾರಾಂ ಸೇರಿದಂತರೆ ವಿದ್ಯಾಧರ, ಮಾರುತಿ ಪೂಜಾರ, ನಾಗರಾಜ್, ವಿಶ್ವನಾಥ ಅಗಡಿ, ಶ್ರೀನಿವಾಸರಾವ್ ಮತ್ತಿತರೆ ರೈತ ಮುಖಂಡರು, ರೈತರು ಭಾಗವಹಿಸಿದ್ದರು.
ಹೀಗಾಗಿ ಲೇಖನಗಳು ಶಿವಪುರದಲ್ಲಿ ಸಿರಿಧಾನ್ಯಗಳ ಕಿಸಾನ್ ಗೋಷ್ಠಿ
ಎಲ್ಲಾ ಲೇಖನಗಳು ಆಗಿದೆ ಶಿವಪುರದಲ್ಲಿ ಸಿರಿಧಾನ್ಯಗಳ ಕಿಸಾನ್ ಗೋಷ್ಠಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಶಿವಪುರದಲ್ಲಿ ಸಿರಿಧಾನ್ಯಗಳ ಕಿಸಾನ್ ಗೋಷ್ಠಿ ಲಿಂಕ್ ವಿಳಾಸ https://dekalungi.blogspot.com/2017/07/blog-post_89.html
0 Response to "ಶಿವಪುರದಲ್ಲಿ ಸಿರಿಧಾನ್ಯಗಳ ಕಿಸಾನ್ ಗೋಷ್ಠಿ"
ಕಾಮೆಂಟ್ ಪೋಸ್ಟ್ ಮಾಡಿ