ಶೀರ್ಷಿಕೆ : ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಅನ್ಸಾರಿ ಅವರಿಂದ ಭೂಮಿ ಪೂಜೆ
ಲಿಂಕ್ : ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಅನ್ಸಾರಿ ಅವರಿಂದ ಭೂಮಿ ಪೂಜೆ
ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಅನ್ಸಾರಿ ಅವರಿಂದ ಭೂಮಿ ಪೂಜೆ
ಕೊಪ್ಪಳ ಜು. 13 (ಕರ್ನಾಟಕ ವಾರ್ತೆ): ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪಳ ತಾಲೂಕಿನ ಬುಡಶೆಟ್ನಾಳ ಗ್ರಾಮದಲ್ಲಿ 6. 18 ಕೋಟಿ ರೂ. ವೆಚ್ಚದಲ್ಲಿ ತಾಳಕನಕಾಪುರ-ಬುಡಶೆಟ್ನಾಳ-ಕಲಕೇರಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಭೂಮಿ ಪೂಜೆ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿ ಆಗಿದೆ. ನಗರ ಪ್ರದೇಶದ ಸೌಲಭ್ಯಗಳನ್ನು ಗ್ರಾಮೀಣ ಭಾಗಕ್ಕೂ ದೊರಕಿಸಲು ಡಾಂಬರ್, ಸಿಸಿ ರಸ್ತೆ, ಶುದ್ದ ಕುಡಿಯುವ ನೀರಿನ ಘಟಕಗಳು ಸೇರಿದಂತೆ ಹತ್ತಾರು ಮೂಲ ಸೌಲಭ್ಯ ಒದಗಿಸಲಾಗುತ್ತಿದೆ. ಕ್ಷೇತ್ರದ ಜನ ನೀಡಿರುವ ಅಧಿಕಾರವನ್ನು ಕ್ಷೇತ್ರದ ಜನರಿಗಾಗಿ ವಿನಿಯೋಗಿಸುತ್ತಿದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಹೇಳಿದರು.
ಗಣ್ಯರಾದ ಸಂಗಮೇಶ ಬಾದವಾಡಗಿ ಮಾತನಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರ ಇತಿಹಾಸದಲ್ಲಿ ದಾಖಲೆ ಪ್ರಮಾಣದಲ್ಲಿ ಅಭಿವೃದ್ದಿ ಕೆಲಸ ಕೈಗೊಂಡಿದ್ದಾರೆ. ಎಲ್ಲ ಜಾತಿ ಜನಾಂಗ ಸಮುದಾಯಗಳಿಗೆ ಸಮಪಾಲು ಸಮಬಾಳು ತತ್ವದಡಿ ಸೌಲಭ್ಯ ಒದಗಿಸುತ್ತಿದ್ದು, ಧಾರ್ಮಿಕ ಸ್ಥಳಗಳ ಕಾಮಗಾರಿಗಳಿಗೆ ವೈಯಕ್ತಿಕ ಧನ ಸಹಾಯದ ಮೂಲಕ ಭಾವೈಕ್ಯತೆ ಮೂಡಿಸಿದ್ದಾರೆ ಎಂದರು.
ನಂತರ ಶಾಸಕರು 3. 65 ಕೋಟಿ ರೂ. ವೆಚ್ಚದ ವನಬಳ್ಳಾರಿ-ಅರಿಶಿನಕೇರಿ, 3. 57 ಕೋಟಿ ರೂ. ವೆಚ್ಚದ ಭೀಮನೂರು-ಟನಕನಕಲ್ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೂ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗಣ್ಯರಾದ ಹನುಮಂತಪ್ಪ ಅರಶಿನಕೇರಿ, ಮಲ್ಲೇಶಪ್ಪ ಗುಮಗೇರಿ, ಗಾಳೆಪ್ಪ ಗಂಟಿ, ಪರಮೆಶ ಬಡಿಗೇರ, ಹನುಂತಪ್ಪ ಲಂಕೆ, ಎಸ್.ಬಿ.ಖಾದ್ರಿ, ವೀರೇಶ ತಾವರಗೇರಿ, ಬಸವರಾಜ ಚಿಲವಾಡಗಿ, ಅಮರೇಶ ಉಪಲಾಪುರ, ಅನಿಲ್ ಬೊರಟ್ಟಿ, ಬಾಷಾ ಹಿರೇಮನಿ, ಎಪಿಎಂಸಿ ಸದಸ್ಯ ರಾಮನಗೌಡ, ಬಸವಕುಮಾರ ಪಟ್ಟಣಶೆಟ್ಟರ ಇತರರು ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಅನ್ಸಾರಿ ಅವರಿಂದ ಭೂಮಿ ಪೂಜೆ
ಎಲ್ಲಾ ಲೇಖನಗಳು ಆಗಿದೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಅನ್ಸಾರಿ ಅವರಿಂದ ಭೂಮಿ ಪೂಜೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಅನ್ಸಾರಿ ಅವರಿಂದ ಭೂಮಿ ಪೂಜೆ ಲಿಂಕ್ ವಿಳಾಸ https://dekalungi.blogspot.com/2017/07/blog-post_78.html
0 Response to "ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಇಕ್ಬಾಲ್ ಅನ್ಸಾರಿ ಅವರಿಂದ ಭೂಮಿ ಪೂಜೆ"
ಕಾಮೆಂಟ್ ಪೋಸ್ಟ್ ಮಾಡಿ