ಶೀರ್ಷಿಕೆ : ಧನಶ್ರೀ ಯೋಜನೆ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಲಿಂಕ್ : ಧನಶ್ರೀ ಯೋಜನೆ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಧನಶ್ರೀ ಯೋಜನೆ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಕೊಪ್ಪಳ, ಜು. 24 (ಕರ್ನಾಟಕ ವಾರ್ತೆ): ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿಗೆ ಧನಶ್ರೀ ಯೋಜನೆಯಡಿ ಪ್ರೋತ್ಸಾಹಧನಕ್ಕಾಗಿ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರಿನ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯಂತೆ ಧನಶ್ರೀ ಯೋಜನೆಯಡಿ ಹೆಚ್.ಐ.ವಿ ಸೋಂಕಿತ ಮತ್ತು ಬಾಧಿತ ಮಹಿಳೆಯರಿಗೆ ತಲಾ ಫಲಾನುಭವಿಗೆ ರೂ. 40,000/- ಗಳ ನೇರ ಸಾಲ ಹಾಗೂ ರೂ. 10,000/- ಗಳ ಸಹಾಧನದಂತೆ ಕೊಪ್ಪಳ ಜಿಲ್ಲೆಗೆ 27 ಗುರಿ ನಿಗದಿ ಪಡಿಸಿದ್ದು, ಯೋಜನೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು 18 ರಿಂದ 50 ವರ್ಷ ವಯೋಮಿತಿಯಲ್ಲಿರಬೇಕು. ರಾಷ್ಟ್ರೀಕೃತ ಬ್ಯಾಂಕ್ ಖಾತೆ ಹೊಂದಿರಬೇಕು. ಯಾವುದೇ ಆರ್ಥಿಕ ಸಂಸ್ಥೆ/ ಬ್ಯಾಂಕುಗಳಲ್ಲಿ ಸಾಲಗಾರರಾಗಿರಬಾರದು. ಗಂಡ, ಹೆಂಡತಿ, ಎರಡು ಮಕ್ಕಳು ಹೊಂದಿರುವ ಕುಟುಂಬದಲ್ಲಿ ಒಬ್ಬ ಮಹಿಳೆ ಮಾತ್ರ ಯೋಜನೆಯ ಸೌಲಭ್ಯ ಹೊಂದಲು ಅರ್ಹರು. ಕುಟುಂಬದಲ್ಲಿ (5:1) ಮಹಿಳೆ ಹೆಚ್.ಐ.ವಿ ಸೋಂಕಿತಳಾಗಿದ್ದರೆ, (5:2) ಮಹಿಳೆ ಹೆಚ್.ಐ.ವಿ ಯಿಂದ ಬಾಧಿತಳಾಗಿದ್ದರೆ (ಹೆಂಡತಿ ಅಥವಾ 18 ವರ್ಷ ಮೀರಿದ ಅವಿವಹಿತ ಮಗಳು) ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದ್ದು, ಈ ಕುರಿತಾಗಿ ವೈದ್ಯಕೀಯ ವರದಿಯನ್ನು ಜಿಲ್ಲಾ ಆರೋಗ್ಯ ಕೇಂದ್ರದಿಂದ ಪಡೆಯಬೇಕು. ಐ.ಸಿ.ಟಿ.ಸಿ/ ಪಿ.ಪಿ.ಸಿ.ಟಿ.ಸಿ ಕೇಂದ್ರಗಳಲ್ಲಿ ಪಡೆದ ಹೆಚ್.ಐ.ವಿ ಸೋಂಕು ಇರುವ ಸಂಬಂಧ ವೈದ್ಯಕೀಯ ವರದಿ ಪಡೆದಿರಬೇಕು.
ಸಾಲ ಪಡೆಯಲು ಉದ್ದೇಶಿಸಿದ ಆದಾಯೋತ್ಪನ್ನ ಚಟುವಟಿಕೆಯ ಯೋಜನಾ ವರದಿಯೊಂದಿಗೆ, ಇತ್ತಿಚಿನ ನಾಲ್ಕು ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ, ಗುರುತಿನ ಚೀಟಿ, ಆಧಾರ ಕಾರ್ಡ, ಪಡಿತರ ಚೀಟಿ, ಅರ್ಜಿದಾರರ ಮತ್ತು ನಿಗಮದೊಂದಿಗೆ ಸಾಲದ ಕುರಿತಾಗಿ ರೂ. 20 ಛಾಪಾ ಕಾಗದದಲ್ಲಿ ಮಾಡಿಕೊಳ್ಳುವ ಒಪ್ಪಂದ (ಎಂ.ಓ.ಯು) ಇತ್ಯಾದಿಗಳೊಂದಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ ಕೊಪ್ಪಳ, ಇವರ ಕಛೇರಿಗೆ ಆಗಸ್ಟ್. 19 ರೊಳಗಾಗಿ ಸಲ್ಲಿಸಬೇಕು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಧನಶ್ರೀ ಯೋಜನೆ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಧನಶ್ರೀ ಯೋಜನೆ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಧನಶ್ರೀ ಯೋಜನೆ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/07/blog-post_753.html
0 Response to "ಧನಶ್ರೀ ಯೋಜನೆ : ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ