ಶೀರ್ಷಿಕೆ : ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಪ್ರಾರಂಭ
ಲಿಂಕ್ : ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಪ್ರಾರಂಭ
ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಪ್ರಾರಂಭ
ಕೊಪ್ಪಳ ಜು. 29 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ, ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ವ್ಯವಸ್ಥೆಯನ್ನು ಕಳೆದ ಜು. 24 ರಿಂದ ಪ್ರಾರಂಭಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ತಿಳಿಸಿದ್ದಾರೆ.
ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಅಧಿಸೂಚಿತ ‘ಎ’ವರ್ಗದ ದೇವಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಜು. 24 ರಂದು ಶ್ರಾವಣ ಮಾಸದಿಂದ ಪ್ರತಿ ನಿತ್ಯ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಂದೆ ಈ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಪ್ರತಿ ನಿತ್ಯ ಮದ್ಯಾಹ್ನ 12-30 ರಿಂದ 2-30 ಗಂಟೆಯವರೆಗೆ ಉಚಿತ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ. ಅಲ್ಲದೆ ಈ ಕ್ಷೇತ್ರದಲ್ಲಿ ದೇವಸ್ಥಾನದ ಮೇಲೆ ಇರುವ ಶಿಥಿಲಾವಸ್ಥೆಯಲ್ಲಿದ್ದ ಕೈಪಿಡಿ ಗೊಂಬೆಗಳು ಮತ್ತು ಎರಡು ಗೋಪುರಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಹೊಸದಾಗಿ ನಿರ್ಮಾಣ ಮಾಡುವುದು ಮತ್ತು ರಥದ ಶೆಡ್‍ನ್ನು ಸ್ಥಳಾಂತರಿಸಿ ಶೆಡ್ ನಿರ್ಮಾಣ ಮಾಡಲು 101 ಲಕ್ಷಗಳಲ್ಲಿ ಕಾಮಗಾರಿ ಸಹಾ ಹಮ್ಮಿಕೊಳ್ಳಲಾಗಿದೆ. ಭಕ್ತರು ಕ್ಷೇತ್ರದ ಅಭಿವೃದ್ದಿಗೆ ಹಾಗೂ ಪ್ರತಿನಿತ್ಯ ಹಮ್ಮಿಕೊಳ್ಳಲು ಉದ್ದೇಶಿಸಿರುವ ಉಚಿತ ಅನ್ನ ಪ್ರಸಾದದ ವ್ಯವಸ್ಥೆಗೆ ತಮ್ಮ ತನು, ಮನದಿಂದ ಕಾಣಿಕೆ, ಮುಡುಪು, ಬೆಳ್ಳಿ, ಬಂಗಾರ ಮತ್ತು ದವಸ ದಾನ್ಯಗಳನ್ನು ದೇವಸ್ಥಾನದ ಗಣಕೀಕೃತ ಕೌಂಟರ್‍ನಲ್ಲಿ ಸಲ್ಲಿಸಿ ಸೂಕ್ತ ರಶೀದಿ ಪಡೆಯಬಹುದು ಅಥವಾ ಹುಂಡಿಯಲ್ಲಿ ಹಾಕಬಹುದಾಗಿದೆ. ದೇವಸ್ಥಾನದ ವತಿಯಿಂದ ದವಸ ದಾನ್ಯವನ್ನಾಗಲೀ ಅಥವಾ ಮುಡುಪು ಕಾಣಿಕೆ ವಸೂಲಿಗಾಗಿ ದೇವಸ್ಥಾನದ ವತಿಯಿಂದ ಯಾರನ್ನು ನೇಮಿಸಿರುವುದಿಲ್ಲ. ಯಾವುದೇ ಮದ್ಯವರ್ತಿಗಳು ದೇವಸ್ಥಾನದ ಹೆಸರಿನಲ್ಲಿ ಕಾಣಿಕೆ ಅಥವಾ ದವಸಧಾನ್ಯಗಳ ವಸೂಲಾತಿಗೆ ಬಂದಲ್ಲಿ, ಅಂತಹವರ ವಿರುದ್ದ ಕ್ರಮ ಜರುಗಿಸಲು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಹೀಗಾಗಿ ಲೇಖನಗಳು ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಪ್ರಾರಂಭ
ಎಲ್ಲಾ ಲೇಖನಗಳು ಆಗಿದೆ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಪ್ರಾರಂಭ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಪ್ರಾರಂಭ ಲಿಂಕ್ ವಿಳಾಸ https://dekalungi.blogspot.com/2017/07/blog-post_746.html
0 Response to "ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನಿತ್ಯ ಉಚಿತ ಅನ್ನದಾಸೋಹ ಪ್ರಾರಂಭ"
ಕಾಮೆಂಟ್ ಪೋಸ್ಟ್ ಮಾಡಿ