ಶೀರ್ಷಿಕೆ : ಖಾಸಗಿ ಸೆಂಟರ್‍ಗಳಲ್ಲಿ ಬಡವರಿಗೆ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ : ಡಾ. ರಾಮಕೃಷ್ಣ . ಹೆಚ್
ಲಿಂಕ್ : ಖಾಸಗಿ ಸೆಂಟರ್‍ಗಳಲ್ಲಿ ಬಡವರಿಗೆ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ : ಡಾ. ರಾಮಕೃಷ್ಣ . ಹೆಚ್
ಖಾಸಗಿ ಸೆಂಟರ್‍ಗಳಲ್ಲಿ ಬಡವರಿಗೆ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ : ಡಾ. ರಾಮಕೃಷ್ಣ . ಹೆಚ್
ಕೊಪ್ಪಳ, ಜು. 19(ಕರ್ನಾಟಕ ವಾರ್ತೆ): ಸರ್ಕಾರಿ ವೈದ್ಯಾಧಿಕಾರಿಗಳ ಶಿಫಾರಸು ಆಧಾರದಲ್ಲಿ ಬಡ ಮಹಿಳೆಯರಿಗೆ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಜನನಿ ಶಿಶು ಸುರಕ್ಷಾ ಯೋಜನೆಯಡಿ ಉಚಿತವಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತಹ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ನವರು ಸಹಕಾರ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಹೆಚ್. ಅವರು ಹೇಳಿದರು.
ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆಯಡಿ ಪಿ.ಪಿ. & ಪಿ.ಎನ್.ಡಿ.ಟಿ -1995ರ ಕಾಯ್ದೆಯಡಿ ಬುಧವಾರದಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಛೇರಿಯಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೋಗಿಗಳಿಗೆ ಯಾವುದೇ ಸ್ಕ್ಯಾನಿಂಗ್‍ಗಳಿಗಾಗಿ ಕನಿಷ್ಠ 500 ರೂ.ಗಳನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳು ಪಡೆಯುತ್ತಿದ್ದು, ಬಡ ಕುಟುಂಬದವರಿಗೆ ಈ ಹಣ ಭರಿಸುವುದು ಕಷ್ಟಕರ. ಅರ್ಹ ಬಡ ಕುಟುಂಬದ ಫಲಾನುಭವಿಗಳ ಹಿತದೃಷ್ಠಿಯಿಂದ ಅಂತಹ ಬಡ ರೋಗಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜನನಿ ಶಿಶು ಸುರಕ್ಷಾ ಯೋಜನೆಯಡಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು, ಬಡ ಕುಟುಂಬಗಳ ರೋಗಿಗಳಿಗೆ ಉಚಿತವಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆ ಕಾಯ್ದೆಯಡಿ ಪಿ.ಪಿ. & ಪಿ.ಎನ್.ಡಿ.ಟಿ -1995ರ ಕಾಯ್ದೆಯಡಿ ಎಲ್ಲ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳು ಆರೋಗ್ಯ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಈ ರೀತಿ ನೋಂದಣಿಯಾಗಿರುವ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳೊಂದಿಗೆ ಆರೋಗ್ಯ ಇಲಾಖೆಯು ಒಡಂಬಡಿಕೆ ಮಾಡಿಕೊಂಡು, ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು, ರೋಗಿಗಳಿಗೆ ಎಂ.ಐ., ಇ.ಎನ್.ಸಿ. ಮುಂತಾದ ಸ್ಕ್ಯಾನಿಂಗ್‍ಗಾಗಿ ಶಿಫಾರಸು ಮಾಡಿದ ಸಂದರ್ಭದಲ್ಲಿ, ಅಂತಹ ಪತ್ರದ ಆಧಾರದಲ್ಲಿ ಬಡ ರೋಗಿಗಳಿಂದ ಯಾವುದೇ ಹಣ ಪಡೆಯದೆ, ಉಚಿತವಾಗಿ ಸ್ಕ್ಯಾನಿಂಗ್ ಮಾಡಿಕೊಡಬೇಕು. ಆರೋಗ್ಯ ಇಲಾಖೆಯು ಇಂತಹ ಪ್ರತಿ ಸ್ಕ್ಯಾನಿಂಗ್‍ಗೆ 360 ರೂ.ಗಳನ್ನು ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ನವರಿಗೆ ಪಾವತಿಸಲಿದೆ. ಹೀಗಾಗಿ ರೋಗಿಗಳಿಗೆ ಉಚಿತವಾಗಿ ಸ್ಕ್ಯಾನಿಂಗ್ ಸೇವೆ ನೀಡಿದಂತಾಗಲಿದೆ. ಜಿಲ್ಲೆಯ ಎಲ್ಲ ಖಾಸಗಿ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಇಲಾಖೆಯೊಂದಿಗೆ ವೈದ್ಯರು ಸಹಕರಿಸಿ, ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಮಟ್ಟದ ಸಲಹ ಸಮಿತಿಯ ಅಧ್ಯಕ್ಷರು ಹಾಗೂ ಕಾರಟಗಿ ಸರಕಾರಿ ಆರೋಗ್ಯ ಕೇಂದ್ರದ ಮಕ್ಕಳ ತಜ್ಞರಾದ ಡಾ. ಶರಣಪ್ಪ ಚಕೋತಿ, ಸಮಿತಿಯ ಸದಸ್ಯರುಗಳಾದ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಅಲಕಾನಂದಾ ಮಳಗಿ, ವಕೀಲರಾದ ಎ.ಕೆ. ಪಾಟೀಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜಂಬಯ್ಯ ಉಪಸ್ಥಿತರಿದ್ದರು.
ಹೀಗಾಗಿ ಲೇಖನಗಳು ಖಾಸಗಿ ಸೆಂಟರ್‍ಗಳಲ್ಲಿ ಬಡವರಿಗೆ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ : ಡಾ. ರಾಮಕೃಷ್ಣ . ಹೆಚ್
ಎಲ್ಲಾ ಲೇಖನಗಳು ಆಗಿದೆ ಖಾಸಗಿ ಸೆಂಟರ್‍ಗಳಲ್ಲಿ ಬಡವರಿಗೆ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ : ಡಾ. ರಾಮಕೃಷ್ಣ . ಹೆಚ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಖಾಸಗಿ ಸೆಂಟರ್‍ಗಳಲ್ಲಿ ಬಡವರಿಗೆ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ : ಡಾ. ರಾಮಕೃಷ್ಣ . ಹೆಚ್ ಲಿಂಕ್ ವಿಳಾಸ https://dekalungi.blogspot.com/2017/07/blog-post_74.html
0 Response to "ಖಾಸಗಿ ಸೆಂಟರ್‍ಗಳಲ್ಲಿ ಬಡವರಿಗೆ ಉಚಿತ ಸ್ಕ್ಯಾನಿಂಗ್ ವ್ಯವಸ್ಥೆ : ಡಾ. ರಾಮಕೃಷ್ಣ . ಹೆಚ್"
ಕಾಮೆಂಟ್ ಪೋಸ್ಟ್ ಮಾಡಿ