ಶೀರ್ಷಿಕೆ : ಜಿಲ್ಲೆಯ ವಿವಿಧೆಡೆ ಉದ್ಯೋಗಖಾತ್ರಿ ಯೋಜನೆ ಅರಿವು
ಲಿಂಕ್ : ಜಿಲ್ಲೆಯ ವಿವಿಧೆಡೆ ಉದ್ಯೋಗಖಾತ್ರಿ ಯೋಜನೆ ಅರಿವು
ಜಿಲ್ಲೆಯ ವಿವಿಧೆಡೆ ಉದ್ಯೋಗಖಾತ್ರಿ ಯೋಜನೆ ಅರಿವು
ಕೊಪ್ಪಳ ಜು. 13 (ಕರ್ನಾಟಕ ವಾರ್ತೆ): ಕೊಪ್ಪಳ ಜಲ್ಲಾ ಪಂಚಾಯತ್ ವ್ಯಾಪ್ತಿಯ ಚಳಗೇರಾ, ನವಲಿ, ಬೂದಗುಂಪಾ, ಹೇರೂರು ಗ್ರಾಮ ಪಂಚಾಯತಿಗಳಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೆರೆ ಅಭಿವೃದ್ಧಿ ನಡೆಯುವ ಸ್ಥಳದಲ್ಲಿ ರೋಜಗಾರ್ ದಿನ ಆಚರಿಸುವ ಮೂಲಕ ಅರಿವು ಮೂಡಿಸಲಾಯಿತು.
ಉದ್ಯೋಗಖಾತ್ರಿ ಯೋಜನೆಯ ಜಿಲ್ಲಾ ಐ.ಇ.ಸಿ. ಸಂಯೋಕ ಶ್ರೀನಿವಾಸ ಚಿತ್ರಗಾರ ರವರು ವಿವಿಧ ಗ್ರಾಮಗಳಲ್ಲಿ ರೋಜಗಾರ್ ದಿನ ಆಚರಿಸುವ ಮೂಲಕ ಕೂಲಿಕಾರರಿಗೆ ವೈಯಕ್ತಿಕ ಬ್ಯಾಂಕ್ ಖಾತೆ ಹೊಂದುವ ಕುರಿತು ಮತ್ತು ಯೋಜನೆಯಲ್ಲಿ ನಿಗದಿಪಡಿಸಿದ ಪರಿಮಾಣದಲ್ಲಿ ಹೂಳನ್ನು ತೆಗೆಸುವಂತೆ ಗ್ರಾಮ ಕೂಲಿ ಸಹಾಯಕರಿಗೆ ಮತ್ತು ಕಾಯಕ ಬಂಧುಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಅರಿವು ಮೂಡಿಸಿದರು.
ಅದರಂತೆ ಸ್ಥಳದಲ್ಲಿದ್ದ ಕೂಲಿಕಾರರಿಗೆ ಅಂತರ್ಜಲ ಹೆಚ್ಚಿಸುವ ಕಾಮಗಾರಿಯಾದ ಕೃಷಿ ಹೊಂಡ ಕಾಮಗಾರಿಗಳನ್ನು ತಮ್ಮ ತಮ್ಮ ಹೊಲಗಳಲ್ಲಿ ಅನುಷ್ಟಾನಗೊಳಿಸುವುದರಿಂದ ಮಳೆಯ ಸಮಯದಲ್ಲಿ ನೀರಿನಿಂದ ಕೃಷಿ ಹೊಂಡ ಭರ್ತಿಯಾಗಿ ನೀರಾವರಿ ಬೆಳೆ ಬೆಳೆಯಲು ಮತ್ತು ಹೈನೋದ್ಯಮ ಚಟುವಟಿಕೆಯನ್ನು ಚುರುಕುಗೊಳಿಸಿ ತಮ್ಮ ಆರ್ಥಿಕ ಜೀವನ ಮಟ್ಟ ಸುಧಾರಿಸಿಕೊಳ್ಳಲು ಅನುಕೂಲವಾಗುವುದು ಎಂದು ತಿಳಿಸಿದರು. ದನದ ದೊಡ್ಡಿ, ಕೊಳವೆ ಭಾವಿ ಮರುಪೂರಣ ಘಟಕ ಇನ್ನಿತರೆ ಕಾಮಾಗರಿಗಳಲ್ಲಿ ಕೆಲಸ ನಿರ್ವಹಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕ ಸಂಘದ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಹಾಯಕರು, ತಾಲ್ಲೂಕು ಐ.ಇ.ಸಿ ಸಂಯೋಜಕರು, ತಾಲ್ಲೂಕು ತಾಂತ್ರಿಕ ಸಂಯೋಜಕರು ಬಿ.ಎಫ್.ಟಿ. ಮತ್ತು ಗಣಕ ಯಂತ್ರ ನಿರ್ವಾಹಕರು ಹಾಜರಿದ್ದರು.
ಹೀಗಾಗಿ ಲೇಖನಗಳು ಜಿಲ್ಲೆಯ ವಿವಿಧೆಡೆ ಉದ್ಯೋಗಖಾತ್ರಿ ಯೋಜನೆ ಅರಿವು
ಎಲ್ಲಾ ಲೇಖನಗಳು ಆಗಿದೆ ಜಿಲ್ಲೆಯ ವಿವಿಧೆಡೆ ಉದ್ಯೋಗಖಾತ್ರಿ ಯೋಜನೆ ಅರಿವು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲೆಯ ವಿವಿಧೆಡೆ ಉದ್ಯೋಗಖಾತ್ರಿ ಯೋಜನೆ ಅರಿವು ಲಿಂಕ್ ವಿಳಾಸ https://dekalungi.blogspot.com/2017/07/blog-post_72.html
0 Response to "ಜಿಲ್ಲೆಯ ವಿವಿಧೆಡೆ ಉದ್ಯೋಗಖಾತ್ರಿ ಯೋಜನೆ ಅರಿವು"
ಕಾಮೆಂಟ್ ಪೋಸ್ಟ್ ಮಾಡಿ