ಶೀರ್ಷಿಕೆ :
ಲಿಂಕ್ :
ಉಳುವವರ ಪರ ವಕಾಲತ್ತು : ಇದು ಬೆಳೆದೇ ಉಣ್ಣುವವರ ಸಂಕಷ್ಟಕ್ಕೆ ಹಿಡಿದ ಕನ್ನಡಿ
ಗುದ್ದಲಿಯ ಕೆಲಸ ಅಲ್ಲಿಗೆ ನಿಂತಿದೆ
ಪಂಚಾಂಗದಂತೆ ಮಳೆಯೂ ಬಿತ್ತೂ ಹತ್ತು ಹನಿ ;
ಬೆವರಿಳಿದು ಬೊಗಸೆ ಹಾಗೂ ತುಂಬಿದೆ. -ಕೆ.ಎಸ್.ನರಸಿಂಸ್ವಾಮಿ.
ರೈತರ ಹಿತವನ್ನೆ ಮುಖ್ಯವಾಗಿಟ್ಟುಕೊಂಡು ಅನ್ನದಾತರ ಪರವಾಗಿನಿಂತು ನಿಸ್ವಾರ್ಥವಾಗಿ ಹೋರಾಟಮಾಡಿದವರು ನಮ್ಮಲ್ಲಿ ಕಡಿಮೆ. ಎಲ್ಲಾ ರಾಜಕೀಯ ಪಕ್ಷಗಳ ದಾಳಗಳಾಗಿ ರೈತರು ಬಳಕೆಯಾಗುತ್ತಲೇ ಬಂದಿದ್ದಾರೆ. ಎಲ್ಲಾ ಪಕ್ಷಗಳ ನಾಯಕರು ರೈತರ ಪರವಾಗಿ ದನಿ ಎತ್ತರಿಸಿ ಮಾತನಾಡುತ್ತಾರೆ. ಇಷ್ಟೆ ಅಲ್ಲ ರಾಜ್ಯದಲ್ಲೇ ಆರು ವಿಶ್ವವಿದ್ಯಾಲಯಗಳು ರೈತವಿಜ್ಞಾನ ಅಧ್ಯಾಯನ,ಆಧ್ಯಾಪನ, ಸಂಶೋಧನೆ ಮತ್ತಿತರರ ಕೆಲಸಗಳಲ್ಲಿ ನಿರತವಾಗಿವೆ. ರಾಜ್ಯ ಸಕರ್ಾರದಲ್ಲಿ ಕೃಷಿ ಇಲಾಖೆಗೊಬ್ಬ ಮಂತ್ರಿಯೂ ಇದ್ದಾರೆ. ರೈತರಿಗಾಗಿಯೇ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಸಕರ್ಾರವೂ ನಮ್ಮದೇ. ಇಷ್ಟಾದರೂ ರಾಜ್ಯದ ರೈತರ ಪರಿಸ್ಥಿತಿ ಸುಧಾರಿಸಿದೆಯೇ ? ಎಂಬ ಪ್ರಶ್ನೆಗೆ ಸಿಗುವ ಉತ್ತರ ನಿರಶಾದಾಯಕವಾಗಿದೆ.
ರೈತರನ್ನು ಸುಧಾರಿತ ಸ್ವಾವಲಂಭಿ ಕೃಷಿಗೆ ಸಿದ್ಧಪಡಿಸುವ ಕೆಲಸ ನಮ್ಮಲ್ಲಿ ಆಗಲಿಲ್ಲ. ಮಣ್ಣು,ನೀರು,ಬೀಜ,ಗೊಬ್ಬರದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಕೆಲಸವನ್ನು ನಮ್ಮ ಸಕರ್ಾರಗಳು ಮಾಡಲಿಲ್ಲ. ರಸಾಯನಿಕ ಗೊಬ್ಬರಗಳ ಬಳಕೆಗೆ ಕೊಟ್ಟಷ್ಟು ಆದ್ಯತೆಯನ್ನು ರೈತರನ್ನು ಸ್ವಾವಲಂಬಿಗಳಾಗಿ ಮಾಡುವ ಕಡೆಗೆ ಕೊಡಲಿಲ್ಲ. ಪರಿಣಾಮ ರೈತರ ಆತ್ಮಹತ್ಯೆಗಳು ಸರಣಿಯೋಪಾದಿಯಲ್ಲಿ ನಡೆದವು.ನೆಲ,ಜಲ,ಗಾಳಿ ಕಲುಷಿತವಾಗಿ ಅನ್ನದ ಬಟ್ಟಲು ವಿಷಮಯವಾಯಿತು.
ಇಂತಹ ದುಷ್ಪರಿಣಾಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವ ಸಣ್ಣ ಪ್ರಯತ್ನಗಳು ಅಲ್ಲಿಲ್ಲಿ ನಡೆಯುತ್ತಿವೆ. ರೈತರನ್ನು ಸ್ವಾವಲಂಭಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಅನೇಕ ಪ್ರಜ್ಞಾವಂತರು ಸ್ವತಃ ಕೃಷಿಕರಾಗಿ, ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ಅನ್ನದಾತನಿಗೆ ಆತ್ಮವಿಶ್ವಾಸ ತುಂಬಿ ದಿಕ್ಕು ತಪ್ಪಿರುವ ಬೇಸಾಯವನ್ನು ಸರಿದಾರಿಗೆ ತರಲು ಶ್ರಮಿಸುತ್ತಿದ್ದಾರೆ.
ಅಂತಹವರಲ್ಲಿ ಪ್ರಮುಖರು ಡಾ.ಟಿ.ಎಸ್.ಚನ್ನೇಶ್. ಕೃಷಿ ವಿಜ್ಞಾನಿಯಾಗಿರುವ ಚನ್ನೇಶ್ ಕೃಷಿ ಶಿಕ್ಷಣದ ಅಂತರಂಗವನ್ನು ಬಲ್ಲವರು. "ಕೃಷಿ ವಿಜ್ಞಾನದ ಅಧ್ಯಯನವೂ ಸಹ ಕೃಷಿಕರಾಗುವಂತೆ ಪ್ರೇರೆಪಿಸುವ ಬಗೆಗೆ ಅನುಮಾನಗಳಿವೆ" ಎನ್ನುತ್ತಲೇ ಸುಸ್ಥಿರ ಕೃಷಿಯನ್ನು ನಾಶಮಾಡಲು ಹೊರಟಿರುವ ಕಪರ್ೋರೇಟ್ ಕಂಪನಿಗಳು ನಡೆಸಿರುವ ಹುನ್ನಾರವನ್ನು ಎಳೆಎಳೆಯಾಗಿ ಬಿಡಿಸಿ ಅರ್ಥಮಾಡಿಸುತ್ತಾರೆ.
ಪಾರಂಪರಿಕ ಕೃಷಿಯ ಮೇಲೆ ಆಧುನಿಕತೆಯ ಹೆಸರಿನಲ್ಲಿ ನಡೆದ ದಾಳಿಯಿಂದ ಆದ ಅನಾಹುತಗಳು ಒಂದೆರಡಲ್ಲ. ಈ ಅನಾಹುತಗಳ ಬಗ್ಗೆ ರೈತರಿಗೆ ಇನ್ನೂ ಯಾರೂ ಸರಿಯಾದ ತಿಳಿವಳಿಕೆ ನೀಡದಿರುವುದು ದುರಂತ.
ಈ ನಿಟ್ಟಿನಲ್ಲಿ ಮೈಸೂರಿನ ರೂಪ ಪ್ರಕಾಶನ ಹೊರತಂದಿರುವ ಡಾ.ಟಿ.ಎಸ್.ಚನ್ನೇಶ್ ಅವರ " ಉಳುವವರ ಪರ ವಕಾಲತ್ತು" ಜನಪರ ಕೃಷಿವಿಜ್ಞಾನ ಲೇಖನಗಳ ಪುಸ್ತಕ ಕೃಷಿಯ ಸಂಕಟಗಳನ್ನು ಹೇಳುತ್ತಲೇ ಕೃಷಿಯಲ್ಲಿ ಮಾಡುತ್ತಿರುವ ತಪ್ಪುಗಳನ್ನು ತೋರಿಸುತ್ತಾ ಮಣ್ಣು,ನೀರು,ಗೊಬ್ಬರಗಳ ಬಗ್ಗೆ ಸರಳವಾಗಿ ರೈತರಿಗೆ ತಿಳಿಸಿ ವಾಸ್ತವದ ಚಚರ್ೆಗೆ ಅನುಕೂಲಕರವಾದ ಸಾಮಗ್ರಿಗಳನ್ನು ಒದಗಿಸಿಕೊಟ್ಟಿದೆ.
ವಿಜಯ ಕನರ್ಾಟಕ ಪತ್ರಿಕೆಯ ಜ್ಞಾನ ವಿಜ್ಞಾನ ಕಾಲಂನಲ್ಲಿ ಪ್ರಕಟವಾದ ಈ ಲೇಖನಗಳು ಈಗ ಪುಸ್ತಕ ರೂಪದಲ್ಲಿ ಹೊರಬಂದಿವೆ. ಕೃಷಿಯಲ್ಲಿ ನಾವು ಹಿಡಬೇಕಾದ ಹೆಜ್ಜೆಗಳ ಬಗ್ಗೆ ಎಚ್ಚರಿಕೆಯನ್ನು ನೀಡುವಂತಿವೆ.
ಮಣ್ಣಿನ ಮಗ, ರೈತ ದೇಶದ ಬೆನ್ನೆಲುಬು,ಕಾಯಕ ಯೋಗಿ, ಅನ್ನದಾತ ಹೀಗೆ ಹತ್ತೆಂಟು ಪದಗಳಿಂದ ರೈತ ಸಮುದಾಯವನ್ನು ಹೊಗಳಿ ಅಟ್ಟಕೇರಿಸಲಾಗುತ್ತಿದೆ. ಇವುಗಳೆಲ್ಲದ್ದರ ಹಿಂದೆ ನಮ್ಮ ಊಟದ ಭದ್ರತೆಯನ್ನು ಖಾತ್ರಿಗೊಳಿಸಿಕೊಳ್ಳುವ ಆಶಯವಿದಿರಬಹುದೇ?. ಈ ಮಾತನ್ನು ಅಷ್ಟು ಸುಲಭವಾಗಿ ತಳ್ಳಿಹಾಕುವಂತಿಲ್ಲ.ಯಾಕೆಂದರೆ ಬೇರಾವುದೇ ವೃತ್ತಿಯನ್ನು ಇಷ್ಟೊಂದು ಹೊಗಳಿದ್ದಿಲ್ಲ ಎನ್ನುತ್ತಲೇ ಕೃಷಿಯ ವಿಕಾಸವನ್ನು ಹೇಳುತ್ತಾ ಮಾರುಕಟ್ಟೆ ವ್ಯವಸ್ಥೆ ಹೇಗೆ ರೈತರನ್ನು ಶೋಷಣೆ ಮಾಡುತ್ತಿದೆ ಎನ್ನುವುದನ್ನು ಚನ್ನೇಶ್ ವಿವರಿಸಿದ್ದಾರೆ.
ರೈತ ಪರವಾದ ಈ ವಕಾಲತ್ತು ಡೈರಿಯಲ್ಲಿ ಮೊದಲ ಭಾಗ ಅಹವಾಲು, ಎರಡನೇಯದು ಸಾಕ್ಷಿ ಒಂದು ಮಣ್ಣು, ಎರಡು ನೀರು, ಮೂರು ಸಮಾಜ ನಂತರ ವಿಚಾರಣೆ : ತಂತ್ರಜ್ಞಾನದ ಸಮಾಧಾನಗಳು ಕೊನೆಗೆ ತೀಮರ್ಾನ ಎಂಬ ಭಾಗದಲ್ಲಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಅಹವಾಲನ್ನು ಬೆಳೆಸುವ,ಸಾಕ್ಷಿಗಳನ್ನು ಪುನರ್ ವಿಚಾರಕ್ಕೊಳಪಡಿಸಿ ಪುಷ್ಠಿಕರಿಸುವ,ವಿಚಾರಣೆಯನ್ನು ಹಿಗ್ಗಿಸುವ ಎಲ್ಲಾ ಹಕ್ಕುಗಳನ್ನು ಓದುಗರಿಗೆ ಬಿಡಲಾಗಿದೆ.
ಕೃಷಿಯು ಆಯ್ಕೆಯೇ? ಅನಿವಾರ್ಯವೇ? : ಹೌದು ಯಾರು ಬಯಸಿ ಕೃಷಿಕರಾಗಲೂ ಇಷ್ಟಪಡುವುದಿಲ್ಲ. ಕೃಷಿ ಎಂದೂ ಆಯ್ಕೆಯ ವೃತ್ತಿಯಾಗಿಲ್ಲ.ತಮ್ಮ ಮಕ್ಕಳು ಓದಿ ಎಂಜಿನೀಯರೊ,ವೈದ್ಯರೊ,ಸರಕಾರಿ ನೌಕರನೊ ಇನ್ನೂ ಹೆಚ್ಚೆಂದರೆ ರಾಜಕೀಯ ವ್ಯಕ್ತಿಯೋ ಆಗಲಿ ಎಂದು ಬಯಸುವ ಸಮಾಜ ನಮ್ಮದು. ಕೃಷಿಗೆ ನಾವು ಮಾಡುತ್ತಿರುವ ಅನ್ಯಾಯವನ್ನು ಈ ದಿಕ್ಕಿನಲ್ಲಿ ನಾವು ನೋಡಬೇಕಾಗುತ್ತದೆ. ಕಡಿಮೆ ಓದಿದವರ, ಅವಿದ್ಯಾವಂತರ ವೃತ್ತಿಯಾಗಿ ಕೃಷಿಯನ್ನು ನೋಡಲಾಗುತ್ತದೆ.
ಶ್ರಮವೇ ಮೂಲ ಬಂಡವಾಳವಾಗಿರುವ ಕೃಷಿಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರುವುದರಿಂದ ಹೀಗಾಗಿರಲೂಬಹುದು. ಆದರೆ ಇತ್ತೀಚೆಗೆ ಕೃಷಿಯಲ್ಲೂ ಆಶಾದಾಯಕ ಬೆಳವಣಿಗೆಗಳು ಕಾಣಿಸಿಕೊಳ್ಳುತ್ತಿವೆ. ಹೆಚ್ಚು ಓದಿದವರು,ಸಾಫ್ಟವೇರ್ ಎಂಜಿನೀಯರುಗಳು ಇಚ್ಛೆಪಟ್ಟು ಕೃಷಿಮಾಡಲು ಬರುತ್ತಿದ್ದಾರೆ. ತಮ್ಮ ಅನ್ನವನ್ನು ತಾವೇ ಬೆಳೆದುಕೊಳ್ಳುವ ಕಾಲ ಸನ್ನಿಹಿತನಾಗುತ್ತಿದೆ.
ಅಹವಾಲು ಎಂಬ ಮೊದಲ ಭಾಗದಲ್ಲಿ ಚನ್ನೇಶ್ ಬೆಳೆದೇ ಉಣ್ಣುವವರ ಸಂಕಟಗಳಿಗೆ ದನಿಯಾಗಿದ್ದಾರೆ.
ಆಧುನಿಕತೆಯ ಒಲವಿನಲ್ಲಿ ನಲುಗಿದ ಕೃಷಿ ಪರಂಪರೆ ಎನ್ನುವ ಲೇಖನದಲ್ಲಿ ಪಾರಂಪರಿಕ ಕೃಷಿ ಹಿಂದೆ ಸರಿಯಲು ಸಕರ್ಾರಗಳು,ವಿಜ್ಞಾನಿಗಳು,ಅಧಿಕಾರಶಾಯಿ ನಡೆಸಿದ ಹುನ್ನಾರವನ್ನು ಬಯಲು ಮಾಡುತ್ತಾರೆ.1978 ರಲ್ಲಿ ಜಪಾನಿನ ನೈಸಗರ್ಿಕ ಕೃಷಿಕ ಮಸನೊಬ ಪೊಕವಕ ಪ್ರಕಟಿಸಿದ "ಒನ್ ಸ್ಟ್ರಾ ರೇವಲ್ಯೂಷನ್" ಕೃತಿ ಕನ್ನಡಕ್ಕ ಬಂದದ್ದು 1989 ರಲ್ಲಿ. ಇದಕ್ಕಿಂತ ಮೊದಲೇ 1940 ರಲ್ಲಿ ಆಲ್ಬರ್ಟ್ ಹೊವೆರ್ಡ್ ಎಂಬ ವಿಜ್ಞಾನಿ ಸಾವಯವ ಕೃಷಿಯ ಕುರಿತು ಬರೆದ "ಅಗ್ರಿಕಲ್ಚರಲ್ ಟೇಸ್ಟ್ಮೆಂಟ್" (ಕನ್ನಡದಲ್ಲಿ "ಹೀಗೊಂದು ಕೃಷಿ ಸಂಹಿತೆ" ಹೆಸರಿನಲ್ಲಿ ಬಂದಿದೆ) ಎಂಬ ಕೃತಿ ಹೆಚ್ಚು ಚಚರ್ೆಗೆ ಒಳಗಾಗಲೇ ಇಲ್ಲ.ಇವು ಕಾಖರ್ಾನೆಗಳ ಪರವಾದ ಅಧಿಕಾರಶಾಯಿಯ ದೋರಣೆಗೆ ಸಾಕ್ಷಿ ಎಂದು ಚನ್ನೇಶ್ ಗುರುತಿಸುತ್ತಾರೆ. ದೇಸಿ ಬೀಜಗಳನ್ನು ನಾಶ ಮಾಡುವ,ಪಾರಂಪರಿಕ ಕೃಷಿಯನ್ನು ಮುಗಿಸಿ ರೈತರನ್ನು ಪರಾವಲಂಭಿಗಳನ್ನಾಗಿ ಮಾಡುವ ಸಂಚು ಎಂದು ಇದರಿಂದ ಅರ್ಥವಾಗುತ್ತದೆ.
ಸಾವಯವ ಕೃಷಿಯು ಒಂದು ಪಯರ್ಾಯ ಸಾಧನವಾಗಿ ಬೆಳೆಯಲೇ ಇಲ್ಲ.ಸಾವಯವ ಪರಿಕರಗಳನ್ನು ಬಳಸುವ ಕೃಷಿಯಾಗಿ ಮತ್ತು ಅವುಗಳ ಉತ್ಪನ್ನಗಳ ಮಾರಾಟದ ವಹಿವಾಟಾಗಿದೆ.ಸೆಮಿನಾರುಗಳು,ರೈತ ಮೇಳಗಳು,ರೈತ ಶಿಬಿರಗಳು ಸಾವಯದ ಆಶ್ರಯ ಪಡೆದವು. ಇಂತಹ ಅನ್ಯಾಯಗಳಿಂದಲೇ ಗ್ರಾಹಕರು ಮತ್ತು ಸಹಜ ಕೃಷಿಕರ ನಡುವೆ ಅಂತರ ಏಪರ್ಾಟ್ಟು ಇಂದು ಸಾವಯವ ಉತ್ಪನ್ನಗಳು ದುಬಾರಿ ಎಂಬ ಸುಳ್ಳುಗಳಿಗೆ ಎಡೆಮಾಡಿಕೊಟ್ಟಿದೆ.
ಜೀವಂತ ಮಣ್ಣು : "ಒಂದು ದೇಶದ ಜನ ಮಣ್ಣನ್ನು ರಕ್ಷಿಸದಿದ್ದರೆ,ಬಡತನವನ್ನೂ ಬರಗಾಲವನ್ನೂ ನಿರಂತರವಾಗಿ ಎದುರಿಸಬೇಕಾಗುತ್ತದೆ." ಎಂದು ಹೇಳಿದ ಕೃಷಿ ದಾರ್ಶನಿಕ ಪುಕೊವಕನ ಮಾತುಗಳಿಂದ ಆರಂಭವಾಗುವ ಲೇಖನ ಮಣ್ಣಿನ ನಿಮರ್ಾಣದಿಂದ ಹಿಡಿದು ಅದು ಸಕಲವನ್ನು ಪೊರೆಯುವ ಭೂಮಿತಾಯಿಯಾಗಿ ಆಕಾರಪಡದ ಬಗೆಯನ್ನು ವಿವರಿಸಲಾಗಿದೆ.
ಮಣ್ಣಿನ ಪರೀಕ್ಷೆಯಲ್ಲಿ ಫೇಲಾದ ರೈತ ಅವನ ಬೈಕಿನ ಸಾರ್ಮಥ್ಯದ ಬಗ್ಗೆ ಕೇಳಿದರೆ ಥಟ್ ಅಂತ ಉತ್ತರಕೊಡುತ್ತಾನೆ. ಮೊಬೈಲು,ಕಾರು,ಯಂತ್ರಗಳ ಬಗ್ಗೆ ಸಕಲವನ್ನು ಅರಿತಿರುತ್ತಾನೆ. ಆದರೆ ಅನ್ನ ನೀಡುವ ಮಣ್ಣಿನ ಬಗ್ಗೆ ಮಾತ್ರ ಅರಿವು ಇರುವುದಿಲ್ಲ. ಮಣ್ಣಿನಲ್ಲಿ ಇರಬೇಕಾದ ರಸಸಾರ,ಸೂಕ್ಷ್ಮಾಣು ಜೀವಿಗಳ ಬಗ್ಗೆ ತಿಳಿಸುತ್ತಲೇ ಈ ವಿಷಯದಲ್ಲಿ ರೈತರು ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ಹೇಳುತ್ತಾರೆ.
ಸಾರಜನಕ (ಯೂರಿಯಾ),ರಂಜಕ ,ಪೋಟ್ಯಾಶ್,ಡಿಎಪಿ (ಡೈ ಅಮೋನಿಯಾ ಪಾಸ್ಫೇಟ್) ಇದಲ್ಲದೆ ಇತ್ತೀಚಿಗೆ ಬಂದ ಜಿಂಕ್,ಜಿಪ್ಸಂ (ಗಂಧಕ)ಗಳು ತಯಾರುಗುವ ಬಗೆಯಿಂದ ಹಿಡಿದು ಮಣ್ಣಿನಲ್ಲಿ ಬೆರೆತಾಗ ಅವು ಉಂಟುಮಾಡುವ ಪರಿಣಾಮಗಳನ್ನು ವಿವರಿಸಿದ್ದಾರೆ.
ಆಧುನಿಕ ಕೃಷಿಯಲ್ಲಿ ರಸಾಯನಿಕ ಗೊಬ್ಬರಗಳು ಮಹತ್ವ ಪಡೆದುಕೊಂಡ ಬಗೆಯನ್ನು ಹೇಳುತ್ತಾ 1972 ರಲ್ಲಿ ಹೈದರಾಬಾದ್ನಲ್ಲಿ ಆರಂಭವಾದ ಇಕ್ರಿಸ್ಯಾಟ್ ಎಂಬ ಸರಕಾರಿ ಸಂಸ್ಥೆಕೂಡ ಹೇಗೆ ಕಾಖರ್ಾನೆಗಳ ಪರವಾಗಿ ನಿಂತಿದೆ ಎಂದು ತೋರಿಸುತ್ತಾರೆ. 40 ವರ್ಷಗಳಲ್ಲಿ ಎಂದೂ ರೈತನ ಬಗ್ಗೆ, ನಮ್ಮ ಜಮೀನಿನ ಬಗ್ಗೆ ಮಾತನಾಡದ ಇಕ್ರಿಸ್ಯಾಟ್ ಎಂಬ ಅಂತರಾಷ್ಟ್ರೀಯ ಸಂಸ್ಥೆ ಈಗ ತನ್ನ ಲೋಗೋದಲ್ಲಿ ಮಾನವ ಪ್ರೀತಿಯನ್ನು ಸೇರಿಸಿಕೊಂಡು ರೈತರ ಬಾಗಿಲಿಗೆ ಬಂದಿರುವುದನ್ನು ಸಾಕ್ಷಿ ಸಮೇತ ತೋರಿಸಿಕೊಟ್ಟಿದ್ದಾರೆ ಚನ್ನೇಶ್.
ನೀರಿನ ಅರಿವಿನ ಹೆಜ್ಜೆ ಗುರುತುಗಳು : ಭೂಮಿಯ ಮೇಲಿರುವ ಒಟ್ಟು ನೀರಿನ ಶೇಕಡ 96.5 ರಷ್ಟು ಉಪ್ಪು ನೀರು.ಶೇ.1 ನೀರು ಉಪ್ಪು ನೀರಿನ ಅಂತರ್ಜಲ ಹಾಗೂ ಸರೋವರದಲ್ಲಿದೆ. ಉಳಿದ ಬಳಸಬಹುದಾದ ಸಿಹಿ ನೀರು ಕೇವಲ 2.5 ರಷ್ಟು ಮಾತ್ರ. ಭೂ ಮೇಲ್ಮೈಯಲ್ಲಿನ ಬಳಸಬಹುದಾದ ಸಿಹಿನೀರು ಕೇವಲ ಶೇ. 1.3 ಮಾತ್ರ. ಹೀಗೆ ನಿಸರ್ಗದಲ್ಲಿ ಘನ,ದ್ರವ,ಆವಿ ಈ ಮೂರು ರೂಪದಲ್ಲಿ ಕಂಡು ಬರುವ ಏಕೈಕ ವಸ್ತು ನೀರಿನ ಬಳಕೆಯ ಬಗ್ಗೆ ರೈತರು ವಹಿಸಬೇಕಾದ ಎಚ್ಚರಿಕೆಯ ಮಾತುಗಳು ಇಲ್ಲಿವೆ.
10 ರಿಂದ 32 ವರ್ಷಕ್ಕೆ ಒಮ್ಮೆ ಬರ ಬರುತ್ತದೆ ಎಂದು ಅಂದಾಜಿಸಲಾಗಿದೆ. 1987 ರಲ್ಲಿ ದೇಶ ಕಂಡ ಬರ ಕಳೆದ ಶತಮಾನದ ಭೀಕರವಾದ ಬರ. 1877,1899,1918,1972,1987 ಮತ್ತು 2002 ರಲ್ಲಿ ದೇಶ ಅತ್ಯಂತ ಭೀಕರವಾದ ಬರವನ್ನು ಎದುರಿಸಿದೆ.
ಬರದಲ್ಲೂ ಬದುಕಿ ಉಳಿಯಬಹುದಾದ ತಂತ್ರಜ್ಞಾನವನ್ನು ನಮ್ಮ ದೇಸಿ ಕೃಷಿಕರೂ ಕಂಡು ಕೊಂಡಿದ್ದರು. ಆಧುನಿಕತೆಯ ಅಭಿವೃದ್ಧಿ ಹೆಸರಿನಲ್ಲಿ ಈಗ ನಾವು ಹಾದಿ ತಪ್ಪಿದ್ದು ಬರವನ್ನು ತಾಳಿಕೊಳ್ಳಲಾರದ ಸ್ಥತಿಗೆ ತಲುಪಿದ್ದೇವೆ. ಮಣ್ಣು, ನೀರು,ಗಾಳಿಯ ಬಗ್ಗೆ ಅರಿವು ಮೂಡಿಸಿಕೊಳ್ಳುವ ಮೂಲಕ ಮತ್ತೆ ಬರಸಹಿಷ್ಣುಗಳಾಗಿ ರೈತರು ಸ್ವಾವಲಂಭಿ ಸಾವಯವ ಕೃಷಿಯನ್ನು ತಮ್ಮದಾಗಿಸಿಕೊಳ್ಳಬೇಕಿದೆ.
ಸಮಾಜ ಎಂಬ ಭಾಗದಲ್ಲಿ ರೈತರ ಕುರಿತು ಬಂದ ಪುಸ್ತಕಗಳ ಅವಲೋಕನವಿದೆ. ಕೃಷಿಕರನ್ನೇ ನೇರವಾಗಿ ಆಲೋಚಿಸಿ ಗಮನಿಸಿ ಬರೆದಂತಹ ಪುಸ್ತಕಗಳೇ ತೀರ ಇತ್ತೀಚಿನವರೆಗೂ ಬರಲಿಲ್ಲ. ಬೆಳೆಗಾರನ ಅವಶ್ಯಕತೆಗಳನ್ನೇ ಪ್ರಮುಖವಾಗಿ ಚಚರ್ಿಸುವ ಪುಸ್ತಕಗಳು ಉಪದೇಶ ನೀಡುತ್ತವೆ.ತಂತ್ರಜ್ಞಾನವನ್ನು ಹಂಚುವ ನೆಪದಲ್ಲಿ ಪ್ರಕಟವಾದವು.ಇವು ರೈತರ ನೆಮ್ಮದಿಯ ಕನಸುಗಳನ್ನು ಬಿತ್ತಬಲ್ಲ ಪುಸ್ತಕಗಳಾಗಿಲ್ಲ ಎನ್ನುತ್ತಾರೆ.
ಆದರೆ ಇತ್ತೀಚಿಗೆ ಪರಿಸ್ಥಿತಿ ಬದಲಾಗಿದ್ದು ನವಕನರ್ಾಟಕ ಪ್ರಕಟಿಸಿದ ಡಾ.ಎಲ್.ನಾರಾಯಣರೆಡ್ಡಿ ಅವರ "ನೆಲದೊಡಲ ಚಿಗುರು". ಶಿವನಂಜಯ್ಯ ಎಸ್.ಬಾಳೇಕಾಯಿ ಅವರ ಸಾವಯವ ಕೃಷಿ : ಮೂರು ದಶಕಗಳ ಅನುಭವ ಕಥನ ಹಾಗೂ ಸಹಜ ಸಮೃದ್ಧ ಬಳಗಗ ಇಕ್ರಾ ಪ್ರಕಟಿಸಿರುವ ನೂರಾರು ಪುಸ್ತಕಗಳು ಸಹಜ ಕೃಷಿಕರಿಗೆ ಸೂಕ್ತ ಕೈಪಿಡಿಗಳಾಗಿದ್ದು ಕೃಷಿಕರಾಗಲು ಪ್ರೇರಣೆ ನೀಡುವಂತಿವೆ.
ಸಾವಯವ ಕೃಷಿಯ ವೈಭವೀಕರಣ ಅಥವಾ ವಿರೋಧಗಳ ನಡುವೆಯೂ ಎಲ್ಲರಿಗೂ ವಿಷಮುಕ್ತ ಆಹಾರ ಬೇಕು ಎಂಬ ಬಗ್ಗೆ ಯಾರೂ ಮಾತ್ತೆತಲಾರರು. ಹಾಗಾಗಿ ಇಂದು ತುಂಡು ಭೂಮಿ ಬೇಸಾಯ ಮಹತ್ವ ಪಡೆದುಕೊಳ್ಳುತ್ತಿದೆ.
ನಮ್ಮ ಹಿತ್ತಲಿನಲ್ಲಿ ಜಾಗ ಪಡೆದುಕೊಳ್ಳುತ್ತಿದ್ದ ಬಹುಪಾಲು ತರಕಾರಿ ಹಣ್ಣಿನ ಗಿಡಗಳು ಸಾವಯವ ರೂಪದಲ್ಲೇ ಇರುತ್ತಿದ್ದವು. ಈಗ ಅದು ನಗರದಲ್ಲಿ ರೂಫ್ ಗಾರ್ಡನ್,ಕಿಚನ್ ಗಾರ್ಡನ್ ಹೆಸರಿನಲ್ಲಿ ಪ್ರಸಿದ್ಧಿಗೆ ಬರುತ್ತಿದೆ.
1935 ರಲ್ಲೇ ಅಮೇರಿಕಾದ ರೈತ ವಿಜ್ಞಾನಿ ಎಂ.ಜೆ.ಕೈನ್ಸ್ ಸಣ್ಣ ರೈತರ ಹಿತಾಸಕ್ತಿಯಿಂದ "ಐದು ಎಕರೆ ಮತ್ತು ಸ್ವಾತಂತ್ರ್ಯ" (ಫೈವ್ ಏಕರ್ಸ್ ಅಂಡ್ ಇಂಡಿಪೆಂಡೆನ್ಸ್) ಎಂಬ ಪುಸ್ತಕ ಬರೆದು ನಮ್ಮ ಆಹಾರ ನಮ್ಮ ಹಕ್ಕು ಎನ್ನುವುದರ ಮಹತ್ವವನ್ನು ಹೇಳಿದ್ದರು.
ನೂರು ವರ್ಷಗಳಿಗೂ ಮೊದಲೇ ಪಾಶ್ಚಾತ್ಯರಲ್ಲಿ ಈ ಬಗೆಯ ಚಿಂತನೆಗಳು ಹುಟ್ಟಿಕೊಂಡಿದ್ದವು.ಇಂತಹ ಸಾಧ್ಯತೆಗಳನ್ನು ನಾವಿನ್ನೂ ನಮ್ಮ ರೈತರಿಗೆ ಹೇಳಬೇಕಿದೆ. ತಿನ್ನುವ ಪ್ರತಿ ಅಗುಳು ವಿಷವಾಗುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಅನ್ನವನ್ನು ನಾವೇ ಬೆಳೆದುಕೊಳ್ಳುವ ಅನಿವಾರ್ಯತೆ ಬರುವ ಕಾಲ ಸನ್ನಿಹಿತವಾಗುತ್ತಿದೆ.
ಈಗಾಗಲೇ ಹಲವಾರು ವರ್ಷಗಳಿಂದ ನಮ್ಮ ಫಲವತ್ತಾದ ಹೊಲದ ಮಣ್ಣಿನಿಂದ ಬೆಳೆ ತೆಗೆದು ದೂರದ ಊರಿನ ಸಂತೆಗೆ ಸಾಗಿಸಿ ಮಾರಿದ್ದರಿಂದ ನಮ್ಮೂರಿನ ಫಲವತ್ತತೆಯೆಲ್ಲ ಬೇರೊಂದು ಊರಿನ ಸಂತೆಯಲ್ಲಿ ಮಾರಾಟವಾಗಿವೆ. ಅದನ್ನೆಲ್ಲ ಒಂದೆರಡು ವರ್ಷದಲ್ಲಿ ಮರಳಿ ಪಡೆಯಲು ಸಾಧ್ಯವಿಲ್ಲ.
ಭೂಮಿಯನ್ನು ಕೊಂದು,ನಾವೂ ಆತ್ಮಹತ್ಯೆ ಮಾಡಿಕೊಳ್ಳಬೇಕೋ ಅಥವಾ ಆಕೆಯೊಡನೆ ಸಹಕರಿಸಿ ಸೌಹಾರ್ದತೆಯಿಂದ ಬಾಳಬೇಕೋ ಆಯ್ಕೆ ನಮ್ಮದೆ. "ಸ್ವರ್ಗವನ್ನು ಎಂದೂ ಬೆನ್ನು ಹತ್ತದವರು ಕೃಷಿಕರು" ಎಂದು ಹೇಳುತ್ತಲೇ ಉಳುವವರ ಪರ ವಕಲತ್ತು ವಹಿಸಿ ಹಲವಾರು ಸತ್ಯಗಳನ್ನು ಕಾಣಿಸಿರುವ ಈ ಪುಸ್ತಕ ಕೃಷಿಯನ್ನು ಪ್ರೀತಿಸುವವರಿಗೆ, ಅದೊಂದು ಜೀವನ ಕ್ರಮ ಎಂದು ಅರಿತು ಧ್ಯಾನಸ್ಥರಾದ ಕೃಷಿಕರಿಗೆ ಅನ್ನದಾತರ ಪರವಾಗಿ ವಕಲತ್ತುವಹಿಸಲು ದಾರಿ ದೀಪವಾಗಬಲ್ಲದು. ಪುಸ್ತಕ ಬೇಕಾದವರು ರೂಪ ಪ್ರಕಾಶನ ಮಹೇಶ್ 9342274331 ಅವರನ್ನು ಸಂಪಕರ್ಿಸಬಹುದು.
ಹೀಗಾಗಿ ಲೇಖನಗಳು
ಎಲ್ಲಾ ಲೇಖನಗಳು ಆಗಿದೆ
ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಕ್ ವಿಳಾಸ https://dekalungi.blogspot.com/2017/07/blog-post_7.html
0 Response to " "
ಕಾಮೆಂಟ್ ಪೋಸ್ಟ್ ಮಾಡಿ