ಶೀರ್ಷಿಕೆ : ತುಂಗಭದ್ರಾ: ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಗಳ ನೇಮಕ
ಲಿಂಕ್ : ತುಂಗಭದ್ರಾ: ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಗಳ ನೇಮಕ
ತುಂಗಭದ್ರಾ: ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಗಳ ನೇಮಕ
ಕೊಪ್ಪಳ, ಜು. 20(ಕರ್ನಾಟಕ ವಾರ್ತೆ): ತಂಗಭದ್ರಾ ಜಲಾಶಯದ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್, ಕಂದಾಯ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿ/ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಉಪವಿಭಾಗಾಧಿಕಾರಿಗಳು, ಕೊಪ್ಪಳ ತಹಸಿಲ್ದಾರರು ಹಾಗೂ ಗಂಗಾವತಿ ತಹಸಿಲ್ದಾರರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.
ತುಂಗಭದ್ರಾ ಜಲಾಶಯದಿಂದ ರಾಯಚೂರು ಜಿಲ್ಲೆಗೆ ಜನ/ ಜಾನುವಾರುಗಳಿಗೆ ಕುಡಿಯುವ ಸಲುವಾಗಿ ತಂಗಭದ್ರಾ ಎಡದಂಡೆ ನಾಲೆಗೆ ಜುಲೈ. 17 ರಿಂದ 27 ರವರೆಗೆ ಸುಮಾರು 1000 ಕ್ಯೂಸೆಕ್ಸ್ ನಂತೆ 10 ದಿನಗಳವರೆಗೆ ಮಾತ್ರ, ನೀರು ಹರಿಸಬೇಕಾಗಿರುತ್ತದೆ. ಈ ಹಿನ್ನಲೆಯಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ತುಂಗಭದ್ರಾ ಎಡದಂಡೆ ನಾಲೆಯಲ್ಲಿ ನೀರನ್ನು ರೈತರು ಅನಧಿಕೃತವಾಗಿ ಬಳಸದಂತೆ ಮತ್ತು ವಿತರಣಾ ಕಾಲುವೆಗಳ ಗೇಟಗಳನ್ನು ಆಪರೇಟ ಮಾಡದಂತೆ ಕಾರ್ಯ ನಿರ್ವಹಿಸಲು ಪೊಲೀಸ್ ಸಿಬ್ಬಂದಿಯನ್ನು ಹಾಗೂ ಕಂದಾಯ ಅಧಿಕಾರಿಗಳನ್ನು ತಂಗಭದ್ರಾ ಎಡದಂಡೆ ನಾಲೆಯ 0 ಮೈಲು ನಿಂದ 47 ರ ಮೈಲಿಗೆ ನಿಯೋಜಿಸಲು ಕೋರಿದ್ದು, ಈ ನಿಟ್ಟಿನಲ್ಲಿ ನೀರು ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ತುಂಗಭದ್ರಾ ಎಡದಂಡೆ ನಾಲೆಯ 0 ಮೈಲು ನಿಂದ 47 ರವರೆಗೆ ಪೊಲೀಸ್, ಕಂದಾಯ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿ/ ಅಧಿಕಾರಿಗಳನ್ನು ನೇಮಿಸಲಾಗಿದೆ. ಮೈಲ್ 0 ರಿಂದ 16 ರವರೆಗೆ ಕೊಪ್ಪಳ ತಹಸಿಲ್ದಾರರ ನೇತೃತ್ವದ ತಂಡ. ಮೈಲ್ 17 ರಿಂದ 25 ರವರೆಗೆ ಗಂಗಾವತಿ ತಹಸಿಲ್ದಾರರ ನೇತೃತ್ವದ ತಂಡ ಹಾಗೂ ಮೈಲ್ 26 ರಿಂದ 32 ರವರೆಗೆ ಉಪವಿಭಾಗಾಧಿಕಾರಿಗಳ ನೇತೃತ್ವದ ತಂಡ ಕಾರ್ಯ ನಿರ್ವಹಿಸಲಿದೆ.
ನಿಯೋಜಿಸಲಾಗಿರುವ ಅಧಿಕಾರಿ, ಸಿಬ್ಬಂದಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಜೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರತಿದಿನ ಕಾಲುವೆಯ ಎಡಭಾಗದಲ್ಲಿ ತಪ್ಪದೇ ಗಸ್ತು ಹಾಕಬೇಕು. ಅನಧಿಕೃತವಾಗಿ ನೀರಿನ ಪೈಪುಗಳನ್ನು ಮತ್ತು ಪಂಪ್‍ಸೆಟ್‍ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕು. ತುಂಗಭದ್ರಾ ಎಡದಂಡೆ ಕಾಲುವೆಯ ಎಡಭಾಗದಿಂದ ಸುಮಾರು 100 ಮೀಟರ್ ಅಂತರದಲ್ಲಿರುವ ಎಲ್ಲಾ ಮೊಟರ್ ಹಾಗೂ ಪಂಪಸೆಟ್‍ಗಳ ವಿದ್ಯುತ್ ಸರಬರಾಜುನ್ನು ಜೆಸ್ಕಾಂ ಇಲಾಖೆಯವರು ತಕ್ಷಣವೇ ಕಡಿತಗೊಳಿಸಬೇಕು. ತುಂಗಭದ್ರಾ ಎಡದಂಡೆ ಕಾಲುವೆಯ ನೀರನ್ನು ಅನಧಿಕೃತವಾಗಿ ಸಂಗ್ರಹಿಸಿ ಆ ನೀರನ್ನು ಪಂಪ್‍ಸೆಟ್‍ಗಳ ಮೂಲಕ ಸರಬರಾಜು ಮಾಡುತ್ತಿರುವುದನ್ನು ತೆರವುಗೊಳಿಸಬೇಕು. ಪ್ರಥಮವಾಗಿ ಮುಖ್ಯ ಕಾಲುವೆಯಲ್ಲಿ ಹಾಗೂ ಉಪ ಕಾಲುವೆಯಲ್ಲಿ ಅನಧೀಕೃತವಾಗಿ ಉಪಯೋಗಿಸುತ್ತಿರುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಬೇಕು.
ತಂಗಭದ್ರಾ ಜಲಾಶದ ಎಡದಂಡೆ ನಾಲೆಯಲ್ಲಿ ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಪೊಲೀಸ್, ಕಂದಾಯ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿ/ ಅಧಿಕಾರಿಗಳನ್ನು ನಿಯೋಜಿಸಿದ ತಂಡದವರು ತಮಗೆ ವಹಿಸಲಾದ ಸರಹದ್ದಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಲು ಹಾಗೂ ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷತನವನ್ನು ತೋರಿದಲ್ಲಿ ಅಂತಹವರ ವಿರುದ್ಧ ಶಿಸ್ತಿನ ಕ್ರಮಕ್ಕಾಗಿ ಸರಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ತುಂಗಭದ್ರಾ: ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಗಳ ನೇಮಕ
ಎಲ್ಲಾ ಲೇಖನಗಳು ಆಗಿದೆ ತುಂಗಭದ್ರಾ: ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಗಳ ನೇಮಕ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ತುಂಗಭದ್ರಾ: ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಗಳ ನೇಮಕ ಲಿಂಕ್ ವಿಳಾಸ https://dekalungi.blogspot.com/2017/07/blog-post_396.html
0 Response to "ತುಂಗಭದ್ರಾ: ಕುಡಿಯುವ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಅಧಿಕಾರಗಳ ನೇಮಕ"
ಕಾಮೆಂಟ್ ಪೋಸ್ಟ್ ಮಾಡಿ