ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ

ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ
ಲಿಂಕ್ : ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ

ಓದಿ


ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ


ಕೊಪ್ಪಳ ಜು. 10 (ಕರ್ನಾಟಕ ವಾರ್ತೆ): ಕಲಬುರಗಿ ರಂಗಾಯಣಕ್ಕೆ ತಾತ್ಕಾಲಿಕವಾಗಿ 3 ವರ್ಷಗಳ ಅವಧಿಗೆ ಒಬ್ಬರು ನಟಿಯರನ್ನು ಆಯ್ಕ್ಕೆ ಮಾಡಿಕೊಂಡು ರೆಪರ್ಟರಿ ಪ್ರಾರಂಭಿಸಲಾಗುತ್ತಿದೆ.  ಅರ್ಹ ಆಸಕ್ತರು  ಅರ್ಜಿ ಸಲ್ಲಿಸಬಹುದು.
       ನಟಿಯರನ್ನು ನೇಮಕಗೊಳಿಸಲು ನಿಗದಿಪಡಿಸಿರುವ ನಿಬಂಧನೆಗಳು ಇಂತಿವೆ. ಕಲಬುರಗಿ ರಂಗಾಯಣಕ್ಕೆ ಒಬ್ಬರು ನಟಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.  ಈ ನೇಮಕಗಳಲ್ಲಿ ಕನಿಷ್ಠ 50% ಹುದ್ದೆಗಳನ್ನು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಿಡಲಾಗಿದೆ. ರಂಗ ಪರಿಣತಿಯೇ ಪ್ರಥಮ ಅರ್ಹತೆ ಹಾಗೂ ರಂಗ ಶಿಕ್ಷಣದ ಅರ್ಹತೆಗಳು ಅಪೇಕ್ಷೇಣೀಯ ಹೊರತು ಕಡ್ಡಾಯವಲ್ಲ.  ರಂಗ ಪ್ರಯೋಗಗಳಲ್ಲಿ ಭಾಗವಹಿಸುವವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಗೊಂಡ ಕಲಾವಿದರು ರೆಪರ್ಟಿಯ ಭಾಗವಾಗಿದ್ದು, ರಂಗ ಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಭಿನಯದ ಜವಾಬ್ದಾರಿಯನ್ನು ನಿಭಾಯಿಸಬೇಕು. ಆಯ್ಕೆಯಾದ ಕಲಾವಿದರಿಗೆ ಮೊದಲ ವರ್ಷದಲ್ಲಿ ಸಂಚಿತ ವೇತನವನ್ನು ಮಾಸಿಕ ರೂ. 12,000/- ಎರಡನೇ ವರ್ಷದಲ್ಲಿ ಮಾಸಿಕ ರೂ. 14,000/- ಹಾಗೂ ಮೂರನೇ ವರ್ಷದಲ್ಲಿ ಮಾಸಿಕ ರೂ. 16,000/- ಗಳನ್ನು ಕ್ರೂಢೀಕೃತ ಸಂಬಳವಾಗಿ ನೀಡಲಾಗುವುದು. ಇತರೆ ಯಾವುದೇ ಭತ್ಯೆಗಳನ್ನು ನೀಡುವುದಿಲ್ಲ. ಕಲಾವಿದರ ವಯಸ್ಸು ಗರಿಷ್ಟ 25 ವರ್ಷ ಮೀರಬಾರದು.  ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಹಾಗೂ ರಂಗ ಶಿಕ್ಷಣದ ಪದವಿ ಪಡೆದು ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇಂತಹ ಪ್ರಕರಣದಲ್ಲಿ ವಯೋಮಿತಿಯನ್ನು 5 ವರ್ಷ ಸಡಿಲಿಸಬಹುದು. ಕಲಾವಿದರ ಆಯ್ಕೆಯನ್ನು ಪಾರದರ್ಶಕವಾಗಿ ರಂಗ ಸಮಾಜವು ಆಯಾ ರಂಗಾಯಣಗಳ ಅಧ್ಯಕ್ಷತೆಯಲ್ಲಿ ರಚಿಸುವ ಉಪ ಸಮಿತಿಯು ಮಾಡುತ್ತದೆ.  ತರಬೇತಿಯ ಅವಧಿಯಲ್ಲಿ ಯಾವುದೆ ಕಲಾವಿದರ ನಡವಳಿಕೆ ಅನಪೇಕ್ಷಿತವೆಂದು ಕಂಡು ಬಂದಲ್ಲಿ ಅಂತಹ ಕಲಾವಿದರನ್ನು ತಕ್ಷಣದಲ್ಲಿ ತೆಗೆದು ಹಾಕುವ ಅಧಿಕಾರರಂಗ ಸಮಾಜಕ್ಕೆ ಇರುತ್ತದೆ.  ಮೇಲ್ಕಂಡ ತಂತ್ರಜ್ಞರು ಹಾಗೂ ಕಲಾವಿದರು ಆಯಾ ರಂಗಾಯಣದ ನಿರ್ದೇಶಕರ / ಆಡಳಿತಾಧಿಕಾರಿಯವರ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ. ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯು ರಂಗಾಯಣದ ಚಟುವಟಿಕೆಗಳ ಅಗತ್ಯದ ಹಿನ್ನಲೆಯಲ್ಲಿ ಗೌರವ ಸಂಭಾವನೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವು ಸರ್ಕಾರದ ಖಾಯಂ ಹುದ್ದೆಗಳಾಗಿರುವುದಿಲ್ಲ. ಆಯ್ಕೆಯಾದ ಕಲಾವಿದರು ತಂತ್ರಜ್ಞರು ರಂಗಸಮಾಜವು ವಿಧಿಸುವ ಷರತ್ತುಗಳಿಗೆ ಬದ್ಧರಾಗಿರಬೇಕು.  ಈಗಾಗಲೇ ಆಯ್ಕೆಯಾಗಿರುವ ನಟ-ನಟಿಯರು  ಪುನ: ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಆಸಕ್ತ ಕಲಾವಿದರು ಬಿಳಿ ಹಾಳೆಯ ಮೇಲೆ ಸಂಪೂರ್ಣ ಸ್ವವಿವರದೊಂದಿಗೆ ತಮಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಜು. 22 ರ ಮದ್ಯಾಹ್ನ 05 ಗಂಟೆಯೊಳಗಾಗಿ ಇ-ಮೇಲ್ ವಿಳಾಸ  rangayanakalaburgi@gmail.comಕ್ಕೆ ಅಥವಾ ಅಂಚೆ ಮೂಲಕ, ಖುದ್ದಾಗಿ ಅರ್ಜಿಯನ್ನು ಆಡಳಿತಾಧಿಕಾರಿಗಳು, ರಂಗಾಯಣ, ಡಾ. ಸಿದ್ಧಯ್ಯ ಪುರಾಣಿಕ ಸುವರ್ಣ ಸಾಂಸ್ಕøತಿಕ ಸಮುಚ್ಛಯ, ಸೇಡಂ-ಶಹಾಬಾದ ವರ್ತುಲ ರಸ್ತೆ, ಕಲಬುರಗಿ ಜಿಲ್ಲೆ ಕಲಬುರಗಿ– 585105 ವಿಳಾಸಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08472-227735 ಕ್ಕೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.


ಹೀಗಾಗಿ ಲೇಖನಗಳು ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/07/blog-post_21.html

Subscribe to receive free email updates:

0 Response to "ಕಲಬುರಗಿ ರಂಗಾಯಣಕ್ಕೆ ನಟಿಯರ ಆಯ್ಕೆಗಾಗಿ ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ