ಶೀರ್ಷಿಕೆ :
ಲಿಂಕ್ :
ನಾಟಕಗಳು ಮಾನವೀಯತೆಯ ಪ್ರತೀಕ
ಕಲಬುರಗಿ,ಜು.15.(ಕ.ವಾ.)-ನಾಟಕಗಳು ಮನುಷ್ಯರನ್ನು ಮನುಷ್ಯರನ್ನಾಗಿಸುವ ಅತ್ಯದ್ಭುತ ಕಾರ್ಯ ಮಾಡಲಿದ್ದು, ಇವು ಜನಸಾಮಾನ್ಯರ ಮನದಾಳದಲ್ಲಿ ಬೇರೂರುವ ಮತ್ತು ಮನಸ್ಸಿಗೆ ಮುದ ನೀಡುವ ಹಾಗೂ ಅವರ ಮೇಲೆ ಹೆಚ್ಚು ಪ್ರಭಾವ ಬೀರುವ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದೆ ಎಂದು ಹಿರಿಯ ಸಾಹಿತಿ ಚನ್ನಣ್ಣ ವಾಲೀಕಾರ್ ಹೇಳಿದರು.
ಅವರು ಶನಿವಾರ ಕಲಬುರಗಿ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ರಂಗಾಯಣದಿಂದ ಆಯೋಜಿಸಿದ ರಂಗಾರಂಗಿನ ಕಾರ್ಯಕ್ರಮ ಮತ್ತು ತಮಾಶಾ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಕಲಬುರಗಿ ರಂಗಾಯಣ ಈಗ ಮರುಜೀವ ಪಡೆದಿದ್ದು, ದು:ಖಿತ ಹಾಗೂ ಶೋಷಿತರ ಸ್ನೇಹ ಪರವಾಗಿ ರೂಪುಗೊಳ್ಳಲಿದೆ ಎಂದರು.
ಕಲಬುರಗಿ ರಂಗಾಯಣ ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಲಿ. ರಾಜಕಾರಣದಿಂದ ದೂರವಿರಬೇಕು. ಗುಂಪುಗಾರಿಕೆ ಸಲ್ಲದು. ಸ್ಥಳೀಯ ತಂಡಗಳಿಗೆ ಆದ್ಯತೆ ನೀಡಬೇಕು. ಜನಸ್ನೇಹಿಯಾಗಬೇಕು. ಹೊಸ ನಾಟಕಗಳ ರಚನೆಯೊಂದಿಗೆ ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹಿಸಬೇಕು. ವೈಯಕ್ತಿಕ ಮತ್ತು ಸ್ವಾರ್ಥ ಬದಿಗಿಡಬೇಕು. ರಂಗಾಯಣ ಕಾರ್ಯಕ್ರಮಗಳು ಶಾಲಾ ಕಾಲೇಜುಗಳಿಗೆ ತಲುಪುವಂತಾಗಬೇಕಲ್ಲದೇ ಈ ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸಬೇಕು. ಪ್ರಾದೇಶಿಕ ಕಲೆಗಳ ಸದ್ಬಳಕೆಯೊಂದಿಗೆ ಕಾಲೇಜು ರಂಗೋತ್ಸವ, ನಾಟಕ ರಚನೆ ಕಮ್ಮಟ ರಂಗಭೂಮಿ ರಸಗ್ರಹಣ ಶಿಬಿರ ಆಯೋಜಿಸಬೇಕು. ಬಯಲು ರಂಗ ಮಂದಿರ ವ್ಯವಸ್ಥೆಯೊಂದಿಗೆ ಹೈದ್ರಾಬಾದ್ ಕರ್ನಾಟಕ ಭಾಗದ ತಂಡಗಳನ್ನು ಗುರುತಿಸಿ ನಾಟಕೋತ್ಸವ ಏರ್ಪಡಿಸಬೇಕು. ರಂಗಾಯಣ ಹಳ್ಳಿಗಳಿಗೆ ಹೋಗಬೇಕು ಎಂದು ಅನೇಕ ರಂಗಾಸಕ್ತರು, ರಂಗ ಕಲಾವಿದರು ಹಾಗೂ ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಿದರು.
ಬೆಂಗಳೂರಿನ ರಂಗ ಸಮಾಜದ ಸದಸ್ಯೆ ಡಾ. ಸುಜತಾ ಜಂಗಮಶೆಟ್ಟಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ.ಚಂದ್ರಕಾಂತ, ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಬೀದರ ಹಿರಿಯ ನಟರು ಹಾಗೂ ಸಂಘಟಕ ಚಂದ್ರಗುಪ್ತ ಚಾಂದಕವಠೆ, ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಕಾಂತ ಕರದಳ್ಳಿ, ರಾಯಚೂರ ರಂಗ ಕರ್ಮಿ ಶಾಂತಾ ಕುಲಕರ್ಣಿ ಮತ್ತಿತರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಲಬುರಗಿ ಖ್ಯಾತ ಸಾಹಿತಿಗಳು ಹಾಗೂ ಸ್ವಾಮಿ ರಮಾನಂದತೀರ್ಥ ಸಂಶೋಧನಾ ಸಂಸ್ಥೆ ಅಧ್ಯಕ್ಷ ಪ್ರೊ. ವಸಂತ ಕುಷ್ಟಗಿ ಅಧ್ಯಕ್ಷತೆ ನುಡಿಗಳನ್ನಾಡಿದರು.
ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ವಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಮಿರಾವ್ ಕುಲಕರ್ಣಿ ರಚಸಿರುವ “ರಂಗಾ ರಂಗಿನ” ಕಾರ್ಯಕ್ರಮ ಹಾಗೂ ಧಾರವಾಡ ರಂಗಾಯಣ ಪ್ರಸ್ತುಪಡಿಸುವ ಹಾಗೂ ಪ್ರೊ. ಗಣೇಶ ಚೆಂದನಶಿವೆ ರಚಿಸಿ ನಿರ್ದೇಶಿಸಿದ ಮತ್ತು ಡಾ. ಡಿ.ಎಸ್. ಚೌಗಲೆ ಕನ್ನಡಕ್ಕೆ ಅನುವಾದಿಸಿದ “ತಮಾಶಾ” ನಾಟಕ ಪ್ರದರ್ಶನ ಎಲ್ಲ ಮನಸೊರೆಗೊಂಡಿತು. ಶಶಿಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು.

ಹೀಗಾಗಿ ಲೇಖನಗಳು
ಎಲ್ಲಾ ಲೇಖನಗಳು ಆಗಿದೆ
ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಲಿಂಕ್ ವಿಳಾಸ https://dekalungi.blogspot.com/2017/07/blog-post_15.html
0 Response to " "
ಕಾಮೆಂಟ್ ಪೋಸ್ಟ್ ಮಾಡಿ