ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ

ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ
ಲಿಂಕ್ : ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ

ಓದಿ


ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ


ಕೊಪ್ಪಳ ಜು. 12 (ಕರ್ನಾಟಕ ವಾರ್ತೆ): ‘ನಾ ಕಲಿತ ಶಾಲೆಗೆ ತೀರಿಸುವ ಋಣವ’ ಘೋಷ ವಾಕ್ಯದಡಿ, ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ಜು. 30 ರೊಳಗಾಗಿ ರಚಿಸಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸರ್ಕಾರಿ ಶಾಲೆಗಳ ಉನ್ನತೀಕರಣ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಹಾಗೂ ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು.  ಈ ನಿಟ್ಟಿನಲ್ಲಿ ಆಯೋಗವು ಈ ಬಾರಿ ಸರ್ಕಾರಿ ಶಾಲೆಗಳ ಉನ್ನತೀಕರಣ ಕೈಗೊಳ್ಳಲು ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.  ಕೊಪ್ಪಳ ಜಿಲ್ಲೆಯಲ್ಲಿ 155 ಸರ್ಕಾರಿ ಪ್ರೌಢಶಾಲೆಗಳು ಹಾಗೂ 962 ಪ್ರಾಥಮಿಕ ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, ಕೆಲವರು ಜನಪ್ರತಿನಿಧಿಗಳಾಗಿದ್ದರೆ, ಇನ್ನು ಹಲವರು ವಿವಿಧ ಹುದ್ದೆಗಳಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ.  ಇಂತಹ ಸಾಧಕರನ್ನು ಆಯಾ ಶಾಲೆಯ ವಿದ್ಯಾರ್ಥಿಗಳೊಂದಿಗೆ ಬೆರೆತು, ತಮ್ಮ ಸಾಧನೆಯ ವಿವರವನ್ನು ಹಂಚಿಕೊಂಡರೆ, ಮಕ್ಕಳಿಗೆ ತಾವೂ ಕೂಡ ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಣೆ ದೊರೆಯಲಿದೆ.  ಅದರ ಜೊತೆಗೆ ಸಾಧಕರು ತಾವು ಓದಿದ ಶಾಲೆಗಳನ್ನು ದತ್ತು ತೆಗೆದುಕೊಂಡು, ಶಾಲೆಯ ಅಭಿವೃದ್ಧಿಗೆ ಹಾಗೂ ಮಕ್ಕಳ ಜ್ಞಾನಾರ್ಜನೆಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಳ್ಳಲು ಸಹಕಾರಿಯಾಗಲಿದೆ.  ಈ ದಿಸೆಯಲ್ಲಿ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವನ್ನು ರಚಿಸಬೇಕು.  ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದ ನೆರವನ್ನೂ ಸಹ ಪಡೆಯಬಹುದಾಗಿದೆ.  ಜು. 30 ರ ಒಳಗಾಗಿ ಈ ಕಾರ್ಯ ಪೂರ್ಣಗೊಳಿಸಿ, ಆಯೋಗಕ್ಕೆ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‍ಸಿ, ಸಿಆರ್‍ಪಿ ಗಳಿಗೆ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಅವರು ಸೂಚನೆ ನೀಡಿದರು.
        ಇಲ್ಲಿನ ಎಷ್ಟು ಅಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಓದಿದ್ದೀರಿ ಎಂದು ಕೃಪಾ ಆಳ್ವ ಅವರು ಕೇಳಿದ ಪ್ರಶ್ನೆಗೆ ಶೇ. 80 ಕ್ಕಿಂತ ಹೆಚ್ಚು ಅಧಿಕಾರಿಗಳು ಕೈ ಎತ್ತಿದರು.  ನಂತರ, ಇಲ್ಲಿನ ಎಷ್ಟು ಅಧಿಕಾರಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳು ಕೈ ಎತ್ತಿದರು.  ಇದಕ್ಕೆ ಪ್ರತಿಕ್ರಿಯಿಸಿದ ಕೃಪಾ ಆಳ್ವಾ ಅವರು, ಸರ್ಕಾರಿ ಶಾಲೆಗಳಲ್ಲಿ ಓದಿ, ನೀವೆಲ್ಲಾ ಈಗ ಅಧಿಕಾರಿಗಳಾಗಿದ್ದೀರಿ.  ಅಂತಹ ಶಾಲೆಗಳ ಶಿಕ್ಷಣದ ಮೇಲೆ ನಿಮಗೆ ನಂಬಿಕೆ ಇಲ್ಲವೆ, ಹೀಗಾಗಿ ನೀವು ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದೀರಿ.  ನೀವು ಓದಿರುವ ಶಾಲೆಯ ದಿನಗಳನ್ನೊಮ್ಮೆ ಜ್ಞಾಪಿಸಿಕೊಳ್ಳಿ, ಅಂತಹ ಶಾಲೆಗಳು ಇನ್ನಷ್ಟು ಅಭಿವೃದ್ಧಿಯಾಗಬೇಕೆಂದು ನಿಮಗೆ ಅನಿಸಬೇಕಲ್ಲವೆ, ಮಕ್ಕಳ ಕನಸುಗಳನ್ನು ನನಸಾಗಿಸುವ ಜವಾಬ್ದಾರಿ, ಸಾಮಥ್ರ್ಯ ಶಿಕ್ಷಕರು ಮತ್ತು ಅಧಿಕಾರಿಗಳಲ್ಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ ಅವರು ಅಧಿಕಾರಿಗಳಿಗೆ ಮಾರ್ಮಿಕವಾಗಿ ಹೇಳಿದರು.

ಶಾಲೆಗಳ ಸೌಲಭ್ಯ ಉತ್ತಮಪಡಿಸಿ :
*************ಸರ್ಕಾರ ಎಲ್ಲ ಇಲಾಖೆಗಳಿಗಿಂತ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ.  ಸರ್ಕಾರದ ಕಾಳಜಿಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.  ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಎರಡು ತಿಂಗಳ ಒಳಗಾಗಿ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು.  ಎಲ್ಲ ಶಾಲೆಗಳಿಗೆ ಕಂಪೌಂಡ್ ನಿರ್ಮಾಣ, ಕಿರು ಉದ್ಯಾನ, ಗ್ರಂಥಾಲಯದ ಸದ್ಬಳಕೆ, ಸಮವಸ್ತ್ರ, ನೋಟ್‍ಬುಕ್, ಪಠ್ಯಪುಸ್ತಕ ವಿತರಣೆ, ಶೌಚಾಲಯ ನಿರ್ಮಾಣ ಕಾರ್ಯಗಳು ಆಗಬೇಕು.  ಇದರ ಜೊತೆಗೆ ಮಕ್ಕಳಿಗೆ ಒಳಾಂಗಣ ಮತ್ತು ಹೊರಾಂಗಣದ ಕ್ರೀಡಾ ಸಾಮಗ್ರಿಗಳು ಲಭ್ಯವಾಗಬೇಕು.  ಎಲ್ಲ ಶಾಲೆಗಳ ಮಕ್ಕಳು ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆಯಾಗಬೇಕು.  ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಂಪ್ಯೂಟರ್‍ಗಳು ಪೂರೈಕೆಯಾಗಬೇಕು.  ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಿದ್ದು, ಇದಕ್ಕೆ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಮಕ್ಕಳಿಗೆ ಇಂಗ್ಲೀಷ್ ಭಾಷೆಯ ಶಿಕ್ಷಣಕ್ಕೂ ಆದ್ಯತೆ ನೀಡಬೇಕಿದೆ.  ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇರಬಾರದು.  ಈ ಎಲ್ಲ ವಿವರಗಳ ವರದಿಯನ್ನು ಸಿದ್ಧಪಡಿಸಿ ಆಯೋಗಕ್ಕೆ ಸಲ್ಲಿಸಿದಲ್ಲಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯತೆಗಾಗಿ ಈ ಸೌಲಭ್ಯಗಳು ಒದಗಿಸುವಂತೆ ಆಯೋಗವು ಸರ್ಕಾರಕ್ಕೆ ಶಿಫಾರಸು ಸಲ್ಲಿಸಲಿದೆ ಎಂದು ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಅವರು ಹೇಳಿದರು.
ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು :
***************ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ಕಳಕಳಿಯಿಂದ, ಕಳೆದ ವರ್ಷ ಮಕ್ಕಳ ಶಾಲಾ ದಾಖಲಾತಿ ಆಂದೋಲನವನ್ನು ರಾಜ್ಯಾದ್ಯಂತ ಕೈಗೊಂಡಿತು.  ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯ ವರದಿಯನ್ನು ಪಡೆದು, ಪುನಃ ಶಾಲೆಗೆ ಆ ಮಕ್ಕಳನ್ನು ಕರೆತರಲು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ 341 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದಾಗಿ ಶಿಕ್ಷಣ ಇಲಾಖೆ ವರದಿ ನೀಡಿದೆ.  ಆದರೆ ವಾಸ್ತವವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಗಳಿವೆ.  ಯಾವುದೇ ಮಗು ಶಾಲೆಯಿಂದ ಹೊರಗುಳಿದರೆ, ಆ ಮಗುವಿಗೆ ಅಧಿಕಾರಿಗಳು ಅನ್ಯಾಯವೆಸಗಿದಂತೆ ಆಗಲಿದೆ.  ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ಹೆಚ್ಚಿದೆ ಎನ್ನಲಾಗುತ್ತಿದ್ದು, ಅಧಿಕಾರಿಗಳು ಈ ಎರಡೂ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆಗೊಳಿಸಲು ಪ್ರಾಮಾಣಿಕವಾಗಿ ಯತ್ನಿಸಬೇಕು ಎಂದರು.  
     ಸಭೆಯಲ್ಲಿ ಭಾಗವಹಿಸಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಶಿಕ್ಷಣ ಎಂದರೆ, ಬರೀ ಓದು, ಬರಹ ಅಲ್ಲ.  ಮಕ್ಕಳಿಗೆ ಜೀವನ ಕೌಶಲ್ಯ, ಸಾಮಾಜಿಕ ಹೊಣೆಗಾರಿಕೆ, ನಾಯಕತ್ವ ಗುಣ, ಮಾನವೀಯ ಮೌಲ್ಯಗಳನ್ನು ಕಲಿಸುವುದೂ ಕೂಡ ಶಿಕ್ಷಣದ ಭಾಗವೇ ಆಗಿದೆ.  ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಇಂತಹ ಸಮಗ್ರ ಶಿಕ್ಷಣ ನೀಡುವಂತಾಗಬೇಕು.  ಕ್ರೀಡಾ ಚಟುವಟಿಕೆಗಳು ಶಾಲೆಯಲ್ಲಿ ಉತ್ತಮವಾಗಿ ಆಗಬೇಕೆಂಬ ಆಶಯವನ್ನಿಟ್ಟುಕೊಂಡ, ಜಿಲ್ಲಾ ಪಂಚಾಯತಿಯಿಂದ ಈ ವರ್ಷ ಶಾಲೆಗಳಿಗೆ ಕ್ರೀಡಾ ಸಾಮಗ್ರಿಯ ಕಿಟ್ ಒದಗಿಸಲು ಉದ್ದೇಶಿಸಲಾಗಿದೆ ಎಂದರು.
     ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ತೊರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀದೇವಿ ಗದ್ದಿನಕೇರಿ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‍ಸಿ, ಸಿಆರ್‍ಪಿಗಳು ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ

ಎಲ್ಲಾ ಲೇಖನಗಳು ಆಗಿದೆ ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/07/30.html

Subscribe to receive free email updates:

0 Response to "ನಾ ಕಲಿತ ಶಾಲೆಗೆ ತೀರಿಸುವ ಋಣವ : ಸರ್ಕಾರಿ ಶಾಲೆಗಳಲ್ಲಿ ಜು. 30 ರೊಳಗೆ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ- ಕೃಪಾ ಆಳ್ವ ಸೂಚನೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ