ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್

ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್
ಲಿಂಕ್ : ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್

ಓದಿ


ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್


ಕೊಪ್ಪಳ ಜು. 22 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆ ಕೊಪ್ಪಳ ಕಚೇರಿಯ ವತಿಯಿಂದ ಆದಾಯ ತೆರಿಗೆ ದಿನಾಚರಣೆ ಅಂಗವಾಗಿ ವಿಶೇಷ ಜಾಗೃತಿ ಮೂಡಿಸಲು ತೆರಿಗೆ ಪಾವತಿದಾರರಿಗಾಗಿ ಕ್ವಿಜ್ ಕಾರ್ಯಕ್ರಮವನ್ನು ಜು. 24 ರಂದು 10-30 ಗಂಟೆಗೆ ಕೊಪ್ಪಳದ ಆದಾಯ ತೆರಿಗೆ ಅಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದೆ.
     ಆದಾಯ ತೆರಿಗೆ ಇಲಾಖೆಯು ಜು. 24 ರಂದು ಆದಾಯ ತೆರಿಗೆ ದಿನವನ್ನು ಆಚರಿಸುತ್ತಿದ್ದು, ಆದಾಯ ತೆರಿಗೆ ವ್ಯವಸ್ಥೆ ದೇಶದಲ್ಲಿ ಅಸ್ತಿತ್ವಕ್ಕೆ ಬಂದು 157 ನೇ ವರ್ಷ ಪೂರ್ಣಗೊಂಡಿದೆ.  ಆದಾಯ ತೆರಿಗೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ, ಜಿಲ್ಲೆಯ ತೆರಿಗೆ ಪಾವತಿದಾರರಿಗಾಗಿ ಕ್ವಿಜ್ ಕಾರ್ಯಕ್ರಮವನ್ನು ಆಯೋಜಿಸಿದೆ.  ಕ್ವಿಜ್ ಕಾರ್ಯಕ್ರಮ ಅಂದು ಬೆಳಿಗ್ಗೆ 10-30 ಗಂಟೆಯಿಂದ 11-30 ರವರೆಗೆ ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿನ ಶಿವಬೆಳಗು ಬಿಲ್ಡಿಂಗ್‍ನಲ್ಲಿರುವ ಆದಾಯ ತೆರಿಗೆ ಅಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ.  ಜಿಲ್ಲೆಯ ಎಲ್ಲ ತೆರಿಗೆ ಪಾವತಿದಾರರು ಮುಕ್ತವಾಗಿ ಈ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.  ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.  ಅಲ್ಲದೆ, ಆದಾಯ ತೆರಿಗೆ ದಿನದ ಅಂಗವಾಗಿ ಅಂದು ಜಿಲ್ಲೆಯಲ್ಲಿ ಹೆಚ್ಚಿನ ತೆರಿಗೆ ಪಾವತಿಸುವ 10 ಜನ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುವುದು.  ಆದಾಯ ತೆರಿಗೆ ಪಾವತಿ ಮಾಡುವುದನ್ನು ಯಾರೂ ಕೂಡ ಹೊರೆ ಎಂದು ಭಾವಿಸಬಾರದು.   ಆದಾಯ ತೆರಿಗೆ ಪಾವತಿಯಿಂದ, ದೇಶದ ಅಭಿವೃದ್ಧಿಯಲ್ಲಿ ತಮ್ಮದೂ ಒಂದು ಕೊಡುಗೆ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.  ಕಷ್ಟಪಟ್ಟು ದುಡಿದು, ಹಣ ಸಂಪಾದಿಸುವವರಿಗೆ ಸಮಾಜದಲ್ಲಿ ಹೇಗೆ ಗೌರವ ಲಭಿಸುವುದೋ, ಅದೇ ರೀತಿ ಆದಾಯ ತೆರಿಗೆ ಪಾವತಿಸುವವರಿಗೆ ದೇಶ ಗೌರವಿಸಲಿದೆ.  ಅಲ್ಲದೆ ಅಂತಹವರು ನೆಮ್ಮದಿಯುತವಾಗಿ ಜೀವನ ನಡೆಸಲು ಸಹಕಾರಿಯಾಗಲಿದೆ.  ಜಿಲ್ಲೆಯಲ್ಲಿ ಕಳೆದ 2016-17 ರಲ್ಲಿ ವಿವಿಧ ಕಂಪನಿಗಳಿಂದ 15 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯ ಬದಲಿಗೆ 15. 26 ಲಕ್ಷ ರೂ. ತೆರಿಗೆ ಸಂಗ್ರಹಿಸಲಾಗಿದೆ.  ಕಂಪನಿಯೇತರ, ವಯಕ್ತಿಕ ಮತ್ತು ಸಂಸ್ಥೆಗಳ ವತಿಯಿಂದ 1200 ಲಕ್ಷ ರೂ. ತೆರಿಗೆ ಸಂಗ್ರಹದ ಗುರಿಗೆ ಬದಲಿಗೆ 1327. 90 ಲಕ್ಷ ರೂ. ತೆರಿಗೆ ಸಂಗ್ರಹ ಮಾಡಲಾಗಿದ್ದು, ಒಟ್ಟಾರೆ ಕಳೆದ ವರ್ಷ 1343. 16 ಲಕ್ಷ ರೂ. ಆದಾಯ ತೆರಿಗೆ ಸಂಗ್ರಹ ಕೊಪ್ಪಳ ಜಿಲ್ಲೆಯಲ್ಲಾಗಿದೆ.  ಆದಾಯ ತೆರಿಗೆ ಇಲಾಖೆಯನ್ನು ಜನಸ್ನೇಹಿಯನ್ನಾಗಿಸಲು ಇಲಾಖೆ ಶ್ರಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜನಜಾಗೃತಿಗಾಗಿ ಕ್ವಿಜ್ ನಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಜಿಲ್ಲೆಯ ತೆರಿಗೆ ಪಾವತಿದಾರರು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೊಪ್ಪಳ ಆದಾಯ ತೆರಿಗೆ ಇಲಾಖೆಯ ಆದಾಯ ತೆರಿಗೆ ಅಧಿಕಾರಿ ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಹೀಗಾಗಿ ಲೇಖನಗಳು ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್

ಎಲ್ಲಾ ಲೇಖನಗಳು ಆಗಿದೆ ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್ ಲಿಂಕ್ ವಿಳಾಸ https://dekalungi.blogspot.com/2017/07/24.html

Subscribe to receive free email updates:

0 Response to "ಜು. 24 ರಂದು ಆದಾಯ ತೆರಿಗೆ ದಿನಾಚರಣೆ : ತೆರಿಗೆ ಪಾವತಿದಾರರಿಗೆ ಕ್ವಿಜ್"

ಕಾಮೆಂಟ್‌‌ ಪೋಸ್ಟ್‌ ಮಾಡಿ