NI 20-06-2017 & PHOTOS

NI 20-06-2017 & PHOTOS - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NI 20-06-2017 & PHOTOS, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NI 20-06-2017 & PHOTOS
ಲಿಂಕ್ : NI 20-06-2017 & PHOTOS

ಓದಿ


NI 20-06-2017 & PHOTOS



ಕ್ಷೀರ ಭಾಗ್ಯ ಯೋಜನೆಗಾಗಿ 71.81ಕೋಟಿ ರೂ. ಖರ್ಚು
ಕಲಬುರಗಿ,ಜೂ.20.(ಕ.ವಾ.)-ರಾಜ್ಯ ಸರ್ಕಾರ 2013ರ ಆಗಸ್ಟ್ ಒಂದರಿಂದ ಜಾರಿಗೊಳಿಸಿದ “ಕ್ಷೀರ ಭಾಗ್ಯ” ಯೋಜನೆಯಡಿ ಕಳೆದ ನಾಲ್ಕು ವರ್ಷದಲ್ಲಿ ಕಲಬುರಗಿ ಜಿಲ್ಲೆಯ 2380 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಓದುತ್ತಿರುವ ಒಟ್ಟು 1281340 ಮಕ್ಕಳಿಗೆ ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ ಮತ್ತು ಶನಿವಾರಗಳಂದು ಪ್ರತಿ ಮಗುವಿಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ 150 ಮಿ.ಲೀ. ಬಿಸಿ ಹಾಲು ತಯಾರಿಸಿ ಕಾಯಿಸಿ ಮಕ್ಕಳಿಗೆ ಪೂರೈಸಲಾಗುತ್ತಿದೆ. ಇದಲ್ಲದೆ ಜಿಲ್ಲೆಯ 3034 ಅಂಗನನಾಡಿ ಕೇಂದ್ರಗಳಿಗೆ ಬರುವ ಆರು ವರ್ಷದೊಳಗಿನ ಮಕ್ಕಳಿಗೂ ವಾರದಲ್ಲಿ ಮೂರು ದಿನ ಹಾಲು ಪೂರೈಸಲಾಗಿದೆ. ಇದಕ್ಕಾಗಿ 71.81 ಕೋಟಿ ರೂ. ಖರ್ಚು ಮಾಡಲಾಗಿದೆ. ಅಕ್ಷರ ದಾಸೋಹ ಯೋಜನೆಯಡಿ ಕಳೆದ ನಾಲ್ಕು ವರ್ಷದಲ್ಲಿ ಕಲಬುರಗಿ ಜಿಲ್ಲೆಯ 1311310 ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಸೌಲಭ್ಯ ಕಲ್ಪಿಸಿದ್ದು, ಇದಕ್ಕಾಗಿ 194.55 ಕೋಟಿ ರೂ. ಖರ್ಚು ಮಾಡಲಾಗಿದೆ.

ಕಳೆದ ವರ್ಷ 10 ತರಗತಿ ಓದಿ ಪರೀಕ್ಷೆಗೆ ಹಾಜರಾದ ಶ್ರೀನಿವಾಸ ಸರಡಗಿ ಗ್ರಾಮದ ಭೀಮಸಿಂಗ್ ಗುರುನಾಥ ರಾಠೋಡ ಹಾಗೂ ಚಿತ್ತಾಪುರ ತಾಲೂಕಿನ ಮುಗುಳನಾಗಾಂವಿ ಗ್ರಾಮದ 9ನೇ ತರಗತಿ ಓದುತ್ತಿರುವ ಸತೀಶ, ಸಂತೋಷ “ಕ್ಷೀರಭಾಗ್ಯ ಹಾಲು ಸೇವಿಸಿದ್ದರಿಂದ ಮಾನಸಿಕ ಮತ್ತು ದೈಹಿಕ ಶಕ್ತಿ ಉತ್ತಮಗೊಂಡಿದೆ. ಮೈಂಡ್ ಫ್ರೆಶ್ ಆಗುವುದರೊಂದಿಗೆ ಸ್ಟಡಿ ಮಾಡುವಾಗ ಕಾನ್ಸೆಂಟ್ರೇಟ್ ಮಾಡಲು ಸಹಾಯಕವಾಗಿದೆ ಇದರಿಂದ ಆರೋಗ್ಯ ಸುಧಾರಣೆಗೆ ಮತ್ತು ಹೆಚ್ಚು ಸಕ್ರಿಯ ಕಾರ್ಯಚಟುವಟಿಕೆ ಕೈಗೊಳ್ಳಲು ಸಹಾಯಕವಾಗಿದೆ” ಎಂದು ಹೇಳುತ್ತಾರೆ. ಈಗ ಕ್ಷೀರಭಾಗ್ಯ ಯೋಜನೆಯಡಿ ಜುಲೈ 1ರಿಂದ ವಾರದಲ್ಲಿ 5 ದಿನ ನೀಡುವ ಬಗ್ಗೆ ಈ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು. ಇವರ ಪೋಷಕರೂ ಸಹ “ಮೂರು ವರ್ಷದಿಂದ ಹಾಲು ಸೇವಿಸಿ ಮಕ್ಕಳು ಓದು ಬರಹದಲ್ಲಿ ಮುಂದೆ ಬಂದಿದ್ದಾರಲ್ಲದೆ ಆರೋಗ್ಯವೂ ಸುಧಾರಿಸಿದೆ” ಎನ್ನುವರು.
ಮಕ್ಕಳನ್ನು ದೇವರು ಎನ್ನುತ್ತೇವೆ. ಆರೋಗ್ಯವಂತ ಮಕ್ಕಳು ನಮ್ಮ ಭವಿಷ್ಯದ ಆಸ್ತಿಯಾಗಿದ್ದು, ಶಾಲೆಗೆ ಬರುವ ಮಕ್ಕಳ ಅಪೌಷ್ಟಿಕತೆ ಮತ್ತು ರಕ್ತಹೀನತೆ ದೂರಮಾಡಿ ಅವರ ಶಾರೀರಿಕ ಬೆಳವಣಿಗೆಗೆ ಪೂರಕವಾಗಲು ಈ ಯೋಜನೆ ಸಹಕಾರಿಯಾಗಿದೆ. ಇದರಿಂದ ವರ್ಷದಲ್ಲಿ ಮಧ್ಯೆ ಮಧ್ಯೆ ಮಕ್ಕಳು ಶಾಲೆ ತೊರೆಯವುದು ತಪ್ಪಿದ್ದು, ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದು ಹಾಗೂ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುತ್ತಿರುವುದು ಮತ್ತು ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೆಚ್ಚಾಗುತ್ತಿದೆ. ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಾಗಿ ಆರೋಗ್ಯದಲ್ಲಿ ಗಣನೀಯ ಸುಧಾರಣೆಯಾಗುತ್ತಿದೆ.
ಕ್ಷೀರಧಾರೆ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ 2 ರೂ.ಗಳ ಪ್ರೋತ್ಸಾಹಧನವನ್ನು 2013ರಿಂದ 4 ರೂ.ಗಳಿಗೆ ಹೆಚ್ಚಳ ಮಾಡಿ ಜಾರಿಗೊಳಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 205.94 ಲಕ್ಷ ಲೀಟರ್ ಹಾಲು ಶೇಖರಿಸಿದ್ದು, ಹಾಲು ಉತ್ಪಾದಕರ ಸಂಘಗಳ 167153 ಸದಸ್ಯರಿಗೆ 6.79 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ. ಈ ಪೈಕಿ 2013-14ನೇ ಸಾಲಿನಲ್ಲಿ 54.81 ಲಕ್ಷ ಲೀ. ಹಾಲು ಸಂಗ್ರಹಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ 45379 ಸದಸ್ಯರಿಗೆ 2.08 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ. ಅದೇರೀತಿ 2014-15ನೇ ಸಾಲಿನಲ್ಲಿ 53.01 ಲಕ್ಷ ಲೀ. ಹಾಲು ಸಂಗ್ರಹಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ 41772 ಸದಸ್ಯರಿಗೆ 2.12 ಕೋಟಿ ರೂ. ಪ್ರೋತ್ಸಾಹಧನ ಮತ್ತು 2015-16ನೇ ಸಾಲಿನಲ್ಲಿ 46.94 ಲಕ್ಷ ಲೀ. ಹಾಲು ಸಂಗ್ರಹಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ 42073 ಸದಸ್ಯರಿಗೆ 1.87 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ. ರಾಜ್ಯ ಸರ್ಕಾರ 2016-17ನೇ ಸಾಲಿನಿಂದ ಪ್ರತಿ ಲೀಟರ್ ಹಾಲಿಗೆ 5ರೂ. ಪ್ರೋತ್ಸಾಹಧನ ಘೋಷಿಸಿದೆ. ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ 51.18 ಲಕ್ಷ ಲೀಟರ್ ಹಾಲು ಸಂಗ್ರಹಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳ 37929 ಸದಸ್ಯರಿಗೆ 72.65 ಲಕ್ಷ ರೂ. ಪ್ರೋತ್ಸಾಹಧನ ವಿತರಿಸಲಾಗಿದೆ.

ಹೆಣ್ಣು ಮಕ್ಕಳ ಪೋಷಕರ ಪತ್ತೆಗೆ ಮನವಿ

ಕಲಬುರಗಿ,ಆ.09.(ಕ.ವಾ.)-ಕಲಬುರಗಿ ನಗರದ ರೈಲು ನಿಲ್ದಾಣದಲ್ಲಿ 2017ರ ಮೇ 17ರಂದು ಒಂದು ವರ್ಷದ ಹಾಗೂ 7 ವರ್ಷದ ಎರಡು ಹೆಣ್ಣು ಮಕ್ಕಳ ತಂದೆ ತೀರಿಕೊಂಡಿದ್ದು, ತಾಯಿ ಮಾನಸಿಕ ಅಸ್ವಸ್ಥಳಾಗಿದ್ದಾಳೆ. ಈ ಎರಡೂ ಮಕ್ಕಳ ರಕ್ಷಣೆಗಾಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ಮೇ 17ರಂದು ದಾಖಲಿಸಲಾಗಿದೆ ಎಂದು ಕಲಬುರಗಿ ಅಮೂಲ್ಯ ಶಿಶು ಗೃಹದ ಅಧೀಕ್ಷಕರು ತಿಳಿಸಿದ್ದಾರೆ.
ಮೇಲ್ಕಂಡ ಹೆಣ್ಣು ಮಕ್ಕಳನ್ನು ಕೇಳಿಕೊಂಡು ಈವರೆಗೆ ಯಾರೂ ಬಂದಿರುವುದಿಲ್ಲ. ಈ ಮಕ್ಕಳ ಪಾಲಕರು ಮತ್ತು ಪೋಷಕರು ಹೆಚ್ಚಿನ ಮಾಹಿತಿಗಾಗಿ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿಯಾಗಲು ಹಾಗೂ ದೂರವಾಣಿ ಸಂ.08472-233756/244756ನ್ನು ಸಂಪರ್ಕಿಸಲು ಕೋರಿದೆ.

ಕೋಟ್ಪಾ ಕಾಯ್ದೆ ಉಲ್ಲಂಘನೆಯ 17 ಪ್ರಕರಣಗಳಿಗೆ 2360 ರೂ.ದಂಡ
ಕಲಬುರಗಿ,ಆ.09.(ಕ.ವಾ.)-ಬೆಂಗಳೂರಿನ ಆಹಾರ ಸಂರಕ್ಷಣ ಆಯುಕ್ತರ ಹಾಗೂ ಕಲಬುರಗಿ ಜಿಲ್ಲಾಧಿಕಾರಿಗಳ ಆದೇಶದನ್ವಯ ಕಲಬುರಗಿ ಜಿಲ್ಲೆಯಲ್ಲಿ ಜಗಿಯುವ ತಂಬಾಕು ಪೊಟ್ಟಣಗಳ ಮಾರಾಟ ನಿಷೇಧಿಸಿರುವ ಪ್ರಯುಕ್ತ ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ತಂಬಾಕು ನಿಷೇಧ ಕೋಶದ ಜಿಲ್ಲಾ ಹಾಗೂ ತಾಲೂಕು ತನಿಖಾ ದಳದ ತಂಡವು ಜೇವರ್ಗಿ ಮಾರ್ಕೆಟ್ ಪ್ರದೇಶದಲ್ಲಿನ ಪ್ರಮುಖ ಪಾನ್ ಶಾಪ್, ಹೋಟೇಲ್ ಹಾಗೂ ಸಾರ್ವಜನಿಕ ಪ್ರದೇಶಗಳಗೆ ಭೇಟಿ ನೀಡಿ ಧೂಮಪಾನ ಮಾಡುತ್ತಿರುವ ಹಾಗೂ ಕೋಟ್ಪಾ ಕಾಯ್ದೆ-2003ರ ಅಡಿಯಲ್ಲಿ ನಿಯಮ ಬಾಹಿರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಲಾಯಿತು.
ಕೋಟ್ಪಾ ಕಾಯ್ದೆ-2003 ರ ಸೆಕ್ಷನ್ 04ಕ್ಕೆ ಸಂಬಂಧಿಸಿದಂತೆ ಒಟ್ಟು 17 ಪ್ರಕರಣಗಳು ಹಾಗೂ 2360 ರೂ. ದಂಡ ವಿಧಿಸಲಾಯಿತು. ಈ ಕಾಯ್ದೆಯ ಬಗ್ಗೆ ಜನ ಸಾಮಾನ್ಯರಲ್ಲಿ ತಿಳುವಳಿಕೆ ಮತ್ತು ಜನ ಸಾಮಾನ್ಯರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಕಾಯ್ದೆಯ ನಿಯಮ ಪಾಲನೆ ಮಾಡುವಂತೆ ಮತ್ತು ಕೋಟ್ಪಾ ಕಾಯ್ದೆ-2003 ರ ಸೇಕ್ಷನ್-04 ರ ಪ್ರಕಾರ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಲಾಗಿದ್ದು, 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್‍ಗಳನ್ನು ಮಾರಾಟ ಮಾಡುವಂತಿಲ್ಲ. ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲೀಕರಿಗೆ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯ ನಾಮಫಲಕಗಳನ್ನು ಎಲ್ಲಾ ಪಾನ್‍ಶಾಪ್, ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಕಡ್ಡಾಯವಾಗಿ ಹಾಕಲೇಬೇಕೆಂದು ಮಾರಾಟಗಾರರಿಗೆ ತಿಳುವಳಿಕೆ ನಿಡಲಾಯಿತು.
ಜಿಲ್ಲಾ ಮಟ್ಟದ ಈ ತನಿಖಾ ದಳದಲ್ಲಿ ಜಿಲ್ಲಾ ತಂಬಾಕು ನಿಷೇಧ ಕೋಶದ ಎಸ್.ಜೆ. ಪಾಟೀಲ್, ಆರೋಗ್ಯ ಇಲಾಖೆಯ ಗಣೇಶ ಚಿನ್ನಾಕರ,
ಮಲ್ಲಿಕಾರ್ಜುನ್, ಎಚ್.ಐ., ಪ್ರಕಾಶ ಪುರಸಭೆ ಹಾಗೂ ಇತರೆ ಸಿಬ್ಬಂದಿ ವರ್ಗದವರು ಹಾಗೂ ಪೋಲಿಸ್ ಠಾಣೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ
ಕಲಬುರಗಿ,ಜೂ.20.(ಕ.ವಾ.)-ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಹೊಂದಿದ ರಟಕಲ್ ಗ್ರಾಮದ ಆರೋಪಿ ಸೈಬಣ್ಣ ರೇವಣಸಿದ್ದಪ್ಪ ಆರಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಎರಡÀನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ವಿಶೇಷ ನಾಯಾಲಯದ ನ್ಯಾಯಾಧೀಶೆ ಎಂ.ಪ್ರೇಮಾವತಿ ಅವರು ಆದೇಶ ಹೊರಡಿಸಿದ್ದಾರೆ.
ರಟಕಲ್ ಗ್ರಾಮದ ನಿವಾಸಿ ಲಕ್ಷ್ಮೀ ಚನ್ನಪ್ಪ ಬುಳ್ಳಾ ಅವರ ಮೂರು ವರ್ಷದ ಪುತ್ರಿ ಅಮೂಲ್ಯ 2015ರ ನವೆಂಬರ್ 24ರಂದು ತಮ್ಮ ಮನೆಯ ಮುಂದೆ ಆಟವಾಡುತ್ತಿದ್ದಾಗ ಸದರಿ ಆರೋಪಿಯು ಈ ಮಗುವಿಗೆ ಚಾಕಲೇಟ್ ಕೊಡಿಸುತ್ತೇನೆ ಬಾ ಎಂದು ನಂಬಿಸಿ ಎತ್ತಿಕೊಂಡು ತನ್ನ ಮನೆಯಲ್ಲಿ ಬಲವಂತವಾಗಿ ಅತ್ಯಾಚಾರವೆಸಗಿರುತ್ತಾನೆ
ಆರೋಪಿ ಅಪರಾಧವೆಸಗಿರುವುದು ತನಿಖೆ ಮತ್ತು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದ್ದು, ಸದರಿ ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಸುಲೆಪೇಟ್ ಸರ್ಕಲ್ ಪೊಲೀಸ್ ಇನ್ಸ್‍ಪೆಕ್ಟರ್ ಆರ್.ಪಂಚಾಕ್ಷರಯ್ಯ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರಗಳನ್ನು ಸಲ್ಲಿಸಿರುತ್ತಾರೆ.
ಪ್ರಕರಣದ ವಿಚಾರಣೆ ನಡೆಸಿದ ಎರಡÀನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ವಾದ ವಿವಾದಗಳನ್ನು ಆಲಿಸಿದ ನಂತರ ಆರೋಪಿ ಸೈಬಣ್ಣ ಐಪಿಸಿ ಕಲಂ 376(2)(i)(ಟಿ), ಕಲಂ 6 ಪೋಕ್ಸೋ ಕಾಯ್ದೆಯಡಿ ಆರೋಪಿಯ ಅಪರಾಧ ಸಾಬೀತಾಗಿರುತ್ತದೆಂದು ನಿರ್ಧರಿಸಿ ಆರೋಪಿಗೆ ಐಪಿಸಿ ಕಲಂ 376(2)(i)(ಟಿ) ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 50000ರೂ. ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ. ಎರಡನೇ ಅಪರ ವಿಶೇಷ ಸರ್ಕಾರಿ ಅಭಿಯೋಜಕ(ಪೋಕ್ಸೋ) ಎಲ್.ವಿ.ಚಟ್ನಾಳಕರ್ ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.

ಹೌಸಿಂಗ್ ಫಾರ್ ಆಲ್:ಲಿಖಿತ ಆಕ್ಷೇಪಣೆ ಆಹ್ವಾನ
ಕಲಬುರಗಿ,ಜೂ.20.(ಕ.ವಾ.)-“ಹೌಸಿಂಗ್ ಫಾರ್ ಆಲ್” ಯೋಜನೆಯಡಿ ಪ್ರತಿಯೊಬ್ಬರಿಗೂ ಸೂರು ಒದಗಿಸುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ನಗರ ಪ್ರದೇಶದಲ್ಲಿ ಸಮೀಕಾ ಕಾರ್ಯ ಕೈಗೊಂಡಿದ್ದು, ಈ ಸಮೀಕ್ಷೆಯಲ್ಲಿ ಸ್ವೀಕರಿಸಿದ ಅರ್ಜಿಗಳ ತಾತ್ಕಾಲಿಕ ಪಟ್ಟಿಯನ್ನು ಸಿದ್ಧಪಡಿಸಿ ಜೇವರ್ಗಿಯ ಪುರಸಭೆ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಸದರಿ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಹಾಗೂ ಸದರಿ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋದಲ್ಲಿ ಲಿಖಿತ ಆಕ್ಷೇಪಣೆ ಸಲ್ಲಿಸಲು 2017ರ ಜೂನ್ 22ರಿಂದ 28ರವರೆಗೆ ಕಾಲಾವಕಾಶ ನೀಡಲಾಗಿದೆ. ಜೇವರ್ಗಿಯ ಸಾರ್ವಜನಿಕರು ಸದರಿ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋದಲ್ಲಿ ಮೇಲೆ ತಿಳಿಸಿದ ಕಾಲಾವಕಾಶದ ಅವಧಿಯಲ್ಲಿ ಲಿಖಿತ ಆಕ್ಷೇಪಣೆ ಸಲ್ಲಿಸಬೇಕೆಂದು ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.


*************




ಹೀಗಾಗಿ ಲೇಖನಗಳು NI 20-06-2017 & PHOTOS

ಎಲ್ಲಾ ಲೇಖನಗಳು ಆಗಿದೆ NI 20-06-2017 & PHOTOS ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NI 20-06-2017 & PHOTOS ಲಿಂಕ್ ವಿಳಾಸ https://dekalungi.blogspot.com/2017/06/ni-20-06-2017-photos.html

Subscribe to receive free email updates:

0 Response to "NI 20-06-2017 & PHOTOS"

ಕಾಮೆಂಟ್‌‌ ಪೋಸ್ಟ್‌ ಮಾಡಿ