NI 19-06-2017

NI 19-06-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NI 19-06-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NI 19-06-2017
ಲಿಂಕ್ : NI 19-06-2017

ಓದಿ


NI 19-06-2017



ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳಾ ನಿವಾಸಿ

ಕಲಬುರಗಿ,ಜೂ.19.(ಕ.ವಾ.)-ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದ ನಿವಾಸಿ ಊರ್ಮಿಳಾಳ ವಿವಾಹವನ್ನು ಶಿವಲಿಂಗಯ್ಯ ಮಠಪತಿ ಅವರೊಂದಿಗೆ ಹಿಂದೂ ಸಂಪ್ರದಾಯದಂತೆ ವಿಧಿವತ್ತಾಗಿ ಮತ್ತು ಶಾಸ್ತ್ರೋಕ್ತವಾಗಿ ನಡೆಸಲು ಸಜ್ಜುಗೊಳಿಸಿರುವ ಪ್ರಯುಕ್ತ ನಿಲಯವು ಸೋಮವಾರ ಸಿಬ್ಬಂದಿ ಮತ್ತು ಮದುವೆ ಸಂಬಂಧಿಕರಿಂದ ತುಂಬಿ ತುಳುಕುತಿತ್ತು. ಊರ್ಮಿಳಾಳ ಮುಖದಲ್ಲಿ ಎಂದಿಲ್ಲದ ಖುಷಿ ಸಂಭ್ರಮ. ಈ ಮದುವೆಯ ಸಂಭ್ರಮ ಸಡಗರದಲ್ಲಿ ಬಂಧು ಬಳಗಕ್ಕೇನು ಕೊರತೆಯಿರಲಿಲ್ಲ. ಊರ್ಮಿಳಾಳನ್ನು ಬಾಳಸಂಗಾತಿಯಾಗಿ ಮಾಡಿಕೊಳ್ಳಲು ಕಲಬುರಗಿ ಬ್ರಹ್ಮಪುರದ ಶಿವಲಿಂಗಯ್ಯ ವಿರುಪಾಕ್ಷಯ್ಯ ಮಠಪತಿ ಸ್ವ-ಇಚ್ಛೆಯಿಂದ ಮುಂದೆ ಬಂದು ಇಬ್ಬರೂ ಮಧ್ಯಾಹ್ನ 12.30 ಗಂಟೆಯ ಅಭಿಜಿತ ಲಗ್ನದ ಶುಭ ಮುಹೂರ್ತದಲ್ಲಿ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಸುಖ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಾ ಗ್ರಾಮದವಳಿದ್ದು, 2002ರಲ್ಲಿ ಇವಳ ತಾಯಿಯು ಜಿಲ್ಲಾ ಆಸ್ಪತ್ರೆಯಲ್ಲಿ ನಿಧನರಾದ ಪ್ರಯುಕ್ತ 2002ರಲ್ಲಿಯೇ ಕಲಬುರಗಿಯ ಬಾಲಕಿಯರ ಸರ್ಕಾರಿ ಬಾಲಮಂದಿರಕ್ಕೆ ಸೇರ್ಪಡೆಯಾದಳು. ನಂತರ 2013ರ ಮಾರ್ಚ್ 30ರಂದು ರಾಜ್ಯ ಮಹಿಳಾ ನಿಲಯಕ್ಕೆ ಸೇರಿಕೊಂಡಿರುವ ಊರ್ಮಿಳಾ 23 ವರ್ಷದವಳಿದ್ದಾಳೆ. ಪ್ರಸ್ತುತ ತಂದೆ-ತಾಯಿ ಹಾಗೂ ಇತರ ಯಾವುದೇ ಸಂಬಂಧಿಕರಿಲ್ಲದ ಹಾಗೂ ಚಿಕ್ಕಂದಿನಿಂದ ಸಂಸ್ಥೆಯಲ್ಲಿಯೇ ಬೆಳೆದಿರುವ ಊರ್ಮಿಳಾ ಬಿ.ಎ. ತರಗತಿಯವರೆಗೆ ಓದಿದ್ದು, ಉತ್ತಮ ವ್ಯಕ್ತಿತ್ವ ಮತ್ತು ನಡತೆ ಹೊಂದಿದ್ದಾಳೆÉ. ಸ್ವ-ಇಚ್ಛೆಯಿಂದ ಶಿವಲಿಂಗಯ್ಯ ಮಠಪತಿಯನ್ನು ವಿವಾಹಕ್ಕೆ ಒಪ್ಪಿಕೊಂಡಿದ್ದರಿಂದಲೇ ಅವಳ ಮುಂದಿನ ಭವಿಷ್ಯ ಹಾಗೂ ಪುನರ್ವಸತಿ ಹಿತದೃಷ್ಟಿಯಿಂದ ಈ ಮದುವೆ ಜರುಗಿಸಲಾಯಿತು.
ಕಲಬುರಗಿ ನಗರದ ಬ್ರಹ್ಮಪುರದ ಹಿಂದು ಲಿಂಗಾಯತ ಕುಟುಂಬದ ವಿರುಪಾಕ್ಷಯ್ಯ ಅವರ ಮಗ
ಶಿವಲಿಂಗಯ್ಯ 27 ವರ್ಷ ವಯೋಮಿತಿ ಹೊಂದಿದ್ದಾನೆ. ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದಾನೆ. ಕಲಬುರಗಿ ಸುಪರಮಾರ್ಕೆಟ್ಟಿನ ಸಂಗಮ ಕಾಂಪ್ಲೆಕ್ಸಿನಲ್ಲಿ ಶಿವಲಿಂಗ ಬುಕ್ ಡಿಪೋ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಾರ್ಷಿಕ 1.50 ಲಕ್ಷ ರೂ. ವೇತನ ಪಡೆಯುತ್ತಿದ್ದಾನೆ.
ಇದು 15ನೇ ಮದುವೆ: ರಾಜ್ಯದ ಎಂಟು ರಾಜ್ಯ ಮಹಿಳಾ ನಿಲಯಗಳ ಪೈಕಿ ಕಲಬುರಗಿ ಒಂದಾಗಿದ್ದು, ಕಲಬುರಗಿ ರಾಜ್ಯ ಮಹಿಳಾ ನಿಲಯದಿಂದ 2005-06ರಿಂದ ಈವರೆಗೆ ಒಟ್ಟು 14 ಮದುವೆಗಳನ್ನು ಮಾಡಿದ್ದು, ಇದು ಹದಿನೈದÀನೇ ಮದುವೆಯಾಗಿದೆ. ಮದುವೆಯಾದವರೆಲ್ಲ ಹೆಚ್ಚಾಗಿ ತಂದೆ ತಾಯಿಯಿಲ್ಲದವರೇ ಆಗಿದ್ದು, ಮದುವೆ ಬಂಧನಕ್ಕೊಳಗಾದ ಬಳಿಕ ನಿಲಯದ ಎಲ್ಲ ನಿವಾಸಿಗಳು ಸುಖ ಸಂತೋಷದಿಂದ ಬಾಳÀುತ್ತಿದ್ದಾರೆ. ನಿಲಯದ ನಿವಾಸಿಗಳ ಮದುವೆಯ ಬಳಿಕ ಮೂರು ವರ್ಷದವರೆಗೆ ನಿರಂತರ ನಿಕಟ ಸಂಪರ್ಕ ಸುಖಕರ ದಾಂಪತ್ಯ ಜೀವನದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆಯಲಾಗುವುದು. ಶಿಲ್ಪಾ ಮದುವೆಗಾಗಿ ಇಲಾಖೆಯಿಂದ ಒಟ್ಟು 25000ರೂ. ಒದಗಿಸಲಾಗಿದ್ದು, ಈ ಪೈಕಿ 5000 ರೂ. ಮದುವೆಗಾಗಿ ಖರ್ಚು ಮಾಡಲಾಗುತ್ತದೆ. ಉಳಿದ 20000 ರೂ. ಹಣವನ್ನು ದಂಪತಿಗಳ ಹೆಸರಿನಲ್ಲಿ ಮೂರು ವರ್ಷಕ್ಕಾಗಿ ಫಿಕ್ಸ್ ಡಿಪಾಜಿಟ್ ಮಾಡಲಾಗುವುದು ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಶಿಲ್ಪಾ ತಿಳಿಸಿದರು.
ಮದುವೆ ಸಮಾರಂಭಕ್ಕೆ ಬಂದಿರುವ ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಮಾತನಾಡಿ, ಜಾತಿ ಮತ ಪಂಥಗಳನ್ನು ಹೊರತುಪಡಿಸಿ ವಿವಾಹವಾದ ನವ ದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರಲ್ಲದೆ ಸಮಾಜಕ್ಕೆ ಮಾನವೀಯತೆಯ ಸಂದೇಶ ನೀಡಿದ್ದಾರೆ ಎಂದರು. ಅಪರೂಪದ ಈ ಮದುವೆ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಧುತ್ತರಗಾಂವ, ಸದಸ್ಯರಾದ ಶಿವಾನಂದ ಅಣಜಗಿ, ವಿಠ್ಠಲ ಚಿಕಣಿ, ಜಿಲ್ಲಾ ಮಕ್ಕಳ ಹಕ್ಕುಗಳ ಸಂರಕ್ಷಣಾಧಿಕಾರಿ ಸಿ.ವಿ.ರಾಮನ್, ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ್, ಜೇವರ್ಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಾಪಮ್ಮ ಹಾಬಾಳಕರ್, ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರಗಳ ಅಧೀಕ್ಷಕರು ಮತ್ತಿತರ ಅಧಿಕಾರಿಗಳು ಮತ್ತು ನಿಲಯದ ಸಿಬ್ಬಂದಿಗಳು, ಶಿವಲಿಂಗಯ್ಯ ಮಠಪತಿ ಅವರ ಸಂಬಂಧಿಕರು ಈ ಸಂದರ್ಭದಲ್ಲಿ ಹಾಜರಿದ್ದು, ನವ ದಂಪತಿಗಳನ್ನು ಶುಭ ಹಾರೈಸಿದರು.
ರಕ್ತದಾನದಿಂದ ದೇಹದಲ್ಲಿ ಚೈತನ್ಯ
ಕಲಬುರಗಿ,ಜೂ.19.(ಕ.ವಾ.)-ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ದೇಹ ಚೈತನ್ಯದಿಂದ ಕೂಡಿರುತ್ತದೆ. ರಕ್ತ ದಾನದಿಂದ ಅನಾರೋಗ್ಯ ಅಥವಾ ನಿಶ್ಯಕ್ತಿ ಮತ್ತು ನಿತ್ರಾಣ ಉಂಟಾಗುವುದಿಲ್ಲ. ರಕ್ತ ದಾನಕ್ಕೆ ವಿನಾಕಾರಣ ಹೆದರುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಶಿವರಾಜ ಸಜ್ಜನಶೆಟ್ಟಿ ಅವರು ತಿಳಿಸಿದರು.
ಅವರು ಸೋಮವಾರ ಕಲಬುರಗಿ ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಸರ್ಕಾರಿ ನರ್ಸಿಂಗ್ ಶಾಲೆ ಮತ್ತು ಕಾಲೇಜು, ರೆಡ್ ಕ್ರಾಸ್ ಸಂಸ್ಥೆ ಮತ್ತು ರೆಡ್ ರಿಬ್ಬನ್ ಕ್ಲಬ್ ಹಾಗೂ ಬೆಂಗಳೂರಿನ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಬುರಗಿ ಜಿಲ್ಲೆಯ 27 ಲಕ್ಷ ಜನಸಂಖ್ಯೆಗೆ ಪ್ರತಿ ವರ್ಷ ಸುಮಾರು 25 ಸಾವಿರ ಯೂನಿಟ್ ರಕ್ತದ ಬೇಡಿಕೆ ಇದೆ. 10 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕೇವಲ 10 ರಿಂದ 12 ಸಾವಿರ ಯೂನಿಟ್ ರಕ್ತ ದೊರೆಯುತ್ತಿತ್ತು. ಕಳೆದ ವರ್ಷ 21 ಸಾವಿರ ಯೂನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ರಕ್ತ ಬಾಂಕುಗಳ ಸಂಖ್ಯೆಯನ್ನು 5ಕ್ಕೆ ಹೆಚ್ಚಿಸಲಾಗಿದೆ ಹಾಗೂ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ರಕ್ತ ಸಂಗ್ರಹಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಯುವಕರು ರಕ್ತ ದಾನ ಮಾಡಲು ಮುಂದಕ್ಕೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾದರೂ ಸಹ ದಿನೇ ದಿನೇ ರಕ್ತದ ಅವಶ್ಯಕತೆ ಹೆಚ್ಚಾಗುತ್ತಿದೆ. ವಿಜ್ಞಾನ ಬೆಳೆದಂತೆ ಶಸ್ತ್ರಚಿಕಿತ್ಸೆಗಳು ಹೆಚ್ಚುತ್ತಿವೆ ಹಾಗೂ ಮಾನವನ ಜೀವಿತಾವಧಿ ಹೆಚ್ಚುತ್ತಿದೆ. ಹೆಚ್.ಐ.ವಿ., ಕ್ಯಾನ್ಸರ್, ಹಿಮೋಫಿಲಿಯಾ ರೋಗಿಗಳಿಗೆ, ಗರ್ಭಿಣಿಯರಿಗೆ ಹಾಗೂ ಹೆರಿಗೆ ಸಮಯದಲ್ಲಾಗುವ ಸಿಜೆರಿಯನ್ ಶಸ್ತ್ರ ಚಿಕಿತ್ಸೆಗಳಿಗೆ ಹೆಚ್ಚಿನ ರಕ್ತದ ಅವಶ್ಯಕತೆ ಇದೆ. ರಕ್ತದಾನಕ್ಕೆ ಭಯಪಡದೇ ಸ್ವಯಂಪ್ರೇರಿತರಾಗಿ ಮುಂದಕ್ಕೆ ಬಂದು ರಕ್ತ ದಾನ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಆಸ್ಪತ್ರೆ ಶಸ್ತ್ರಜ್ಞ ಡಾ|| ಬಾಲಚಂದ್ರ ಜೋಶಿ ಮಾತನಾಡಿ, ರಕ್ತದಾನ ಮಾಡಿದಷ್ಟು ರಕ್ತವು ದೇಹದಲ್ಲಿ ಉತ್ಪತ್ತಿಯಾಗುತ್ತದೆ. ರಕ್ತದಾನ ಮಾಡಿದವರು ತಮಗರಿಯದಂತೆ ಸುಮಾರು ಜನರ ಜೀವದಾನ ಮಾಡುವರು. ಅಪಘಾತದಲ್ಲಿ ರಕ್ತಸ್ರಾವವಾದಾಗ 12 ಗಂಟೆಗಳಲ್ಲಿ ಅವಶ್ಯಕ ರಕ್ತ ರೋಗಿಗೆ ನೀಡದಿದ್ದರೆ ಜೀವ ಹಾನಿಯಾಗುವ ಸಂಭವ ಹೆಚ್ಚಾಗಿರುತ್ತದೆ. ಆರೋಗ್ಯವಂತರಾಗಿರುವ ಎಲ್ಲ ಜನರು ವಿಶೇಷವಾಗಿ ಯುವ ವಿದ್ಯಾರ್ಥಿ ಸಮುದಾಯ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜೀವಗಳನ್ನು ಉಳಿಸಬೇಕು. ರಕ್ತದಾನದ ಬಗ್ಗೆ ಇರುವ ಮಾಢನಂಬಿಕೆಗಳನ್ನು ಹೋಗಲಾಡಿಸಬೇಕು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ||ಶರಣಬಸಪ್ಪ ಗಣಜಲಖೇಡ ಮಾತನಾಡಿ, ಒಬ್ಬರ ರಕ್ತದಿಂದ ಸುಮಾರು ನಾಲ್ಕು ಜನರ ಜೀವ ಉಳಿಸಬಹುದು. ರಕ್ತದಲ್ಲಿರುವ ಅಂಶಗಳನ್ನು ವಿಭಜಿಸುವುದರಿಂದ ನಾಲ್ಕು ಜನರಿಗೆ ಉಪಯುಕ್ತವಾಗುವುದು. ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತ ವಿಭಜಿಸುವ ಘಟಕ ಪ್ರಾರಂಭಿಸಲಾಗುತ್ತಿದೆ. ಎಲ್ಲರೂ ರಕ್ತದಾನ ಮಾಡುವ ನಿಟ್ಟಿನಲ್ಲಿ ಮನ ಪರಿವರ್ತಿಸಬೇಕು. ಯಾವುದೇ ವ್ಯಕ್ತಿಯು 18 ವರ್ಷಗಳ ನಂತರ ಎಷ್ಟು ಬಾರಿಯಾದರೂ ರಕ್ತದಾನ ಮಾಡಬಹುದು. ರಕ್ತ ದಾನದಿಂದ ದೇಹದಲ್ಲಿರುವ ಕೊಬ್ಬು ಕಡಿಮೆಯಾಗಿ ಹೃದಯ ರೋಗದ ಸಂಭವ ಕಡಿಮೆಯಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಲಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚನ್ನಮಲ್ಲಯ್ಯ ಹಿರೇಮಠ ಅವರು ಅತಿ ಹೆಚ್ಚು ರಕ್ತ ದಾನ ಮಾಡಿದ ಸರ್ಕಾರಿ ಡಿಗ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಶಿಕಾಂತ ಮಜ್ಜಿಗೆ, ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಬಸವರಾಜ ಅಂಬಾರಾಯ ಹಾಗೂ ಸರ್ಕಾರಿ ಡಿಗ್ರಿ ಕಾಲೇಜಿನ ವಿದ್ಯಾರ್ಥಿ ಸಚಿನ ಮಲ್ಲಪ್ಪ ಅವರನ್ನು ಸನ್ಮಾನಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಅವರು ಜಿಲ್ಲಾ ಆಸ್ಪತ್ರೆಯಿಂದ ಜಗತ್ ವೃತ್ತದ ಮಾರ್ಗವಾಗಿ ಸರ್ಕಾರಿ ನರ್ಸಿಂಗ್ ಕಾಲೇಜಿನವರೆಗೆ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿದರು.


ಹೀಗಾಗಿ ಲೇಖನಗಳು NI 19-06-2017

ಎಲ್ಲಾ ಲೇಖನಗಳು ಆಗಿದೆ NI 19-06-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NI 19-06-2017 ಲಿಂಕ್ ವಿಳಾಸ https://dekalungi.blogspot.com/2017/06/ni-19-06-2017.html

Subscribe to receive free email updates:

0 Response to "NI 19-06-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ