News Date: 22--06--2017

News Date: 22--06--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News Date: 22--06--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News Date: 22--06--2017
ಲಿಂಕ್ : News Date: 22--06--2017

ಓದಿ


News Date: 22--06--2017

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
*************************************************
ಕಲಬುರಗಿ,ಜೂ.22.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಸೋಲಾಪುರ-ಯಶವಂತಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಜೂನ್ 23ರಂದು ಬೆಳಿಗ್ಗೆ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿರುವ ಜಿಲ್ಲಾ ಮಟ್ಟದ ಕೆ.ಡಿ.ಪಿ. ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸುವರು. ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜೂನ್ 24ರಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಜೂನ್ 25ರಂದು ಕಲಬುರಗಿ ಕೃಷ್ಣ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಿಂದ ಏರ್ಪಡಿಸುವ ಕಾರ್ಯಕ್ರಮದಲ್ಲಿ ಹಾಗೂ ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸುವರು ಹಾಗೂ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಜೂನ್ 26ರಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಜೂನ್ 27ರಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಅಂದು ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಸಿಬ್ಬಂದಿಗಾಗಿ ಟೆಂಡರ್ ಅರ್ಜಿ ಆಹ್ವಾನ
*************************************
ಕಲಬುರಗಿ,ಜೂ.22.(ಕ.ವಾ.)-ಕಲಬುರಗಿ ಅಬಕಾರಿ ಇಲಾಖೆಯಲ್ಲಿ ಅಬಕಾರಿ ಜಾರಿ ಮತ್ತು ತನಿಖಾ ಕಾರ್ಯಕ್ಕೆ ಸಿಬ್ಬಂದಿಯ ಅವಶ್ಯಕತೆಯಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರ್ಯಾಯ ವ್ಯವಸ್ಥೆಯಾಗಿ ಬಾಹ್ಯ ಮೂಲಗಳಿಂದ ವಾಹನ ಚಾಲಕ/ಕೂಲಿ ಕಾರ್ಮಿಕರನ್ನು ಏಜೆನ್ಸಿ ಮೂಲಕ ದಿನಗೂಲಿ ಗುತ್ತಿಗೆ ಆಧಾರದ ಮೇಲೆ ಪಡೆಯಲು ಅಧಿಕೃತ ಏಜೆನ್ಸಿಯವರಿಂದ ಟೆಂಡರ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
 ದಿನಗೂಲಿ ವಾಹನ ಚಾಲಕರು/ಕೂಲಿ ಕಾರ್ಮಿಕರನ್ನು ಇಲಾಖೆಗೆ ಪೂರೈಸಲು ಆಸಕ್ತಿಯಿರುವ ಏಜೆನ್ಸಿದಾರರು ಕೋಟೇಶನ್‍ಗಳನ್ನು ಮೋಹರು ಮಾಡಿದ ಲಕೋಟೆಯನ್ನು ಸದರಿ ಕಚೇರಿಗೆ 2017ರ ಜೂನ್ 28ರ ಬೆಳಗಿನ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸಲ್ಲಿಸಬೇಕು. ಅದೇ ದಿನ ಸಂಜೆ 4 ಗಂಟೆಗೆ ಟೆಂಡರ್ ತೆರೆಯಲಾಗುವುದು. ಷರತ್ತು ಮತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಅಬಕಾರಿ ಉಪ ಆಯುಕ್ತರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಮಲೇರಿಯಾ ನಿರ್ಮೂಲನೆಗೆ ಸೊಳ್ಳೆ ನಿಯಂತ್ರಿಸಿ
ಕಲಬುರಗಿ,ಜೂ.22.(ಕ.ವಾ.)-ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯ ಹೊರಗಡೆ ಬಿಸಾಕಿದ ಘನತ್ಯಾಜ್ಯ ವಸ್ತುಗಳನ್ನು ಎಸೆಯವುದರಿಂದ ಅಲ್ಲಿ ಮಳೆಯ ನೀರು ನಿಂತು ಸೊಳ್ಳೆಗಳು ಮೊಟ್ಟೆ ಇಡುತ್ತವೆ ಮತ್ತು ತಮ್ಮ ಸಂತಾನೋತ್ಪತ್ತಿ ಮಾಡಿ ಸಂತತಿಯನ್ನು ಬೆಳೆಸಿ ಮಲೇರಿಯಾ, ಡೆಂಗ್ಯೂ ಮತ್ತಿತರ ರೋಗ ಹರಡುವಿಕೆಗೆ ಕಾರಣವಾಗುತ್ತವೆ ಎಂದು ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಿ ಚೆನ್ನಮಲ್ಲಯ್ಯ ಹಿರೇಮಠ ತಿಳಿಸಿದ್ದಾರೆ.
 ಅವರು ಗುರುವಾರ ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ ಮಲೇರಿಯಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಈ ಕುರಿತು ಅರಿವು ಮೂಡಿಸುವುದು ಆರೋಗ್ಯ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಸಾರ್ವಜನಿಕರು ಸಹ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಲೇರಿಯಾ ಹರಡಲು ಕಾರಣವಾಗಿರುವ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಸಂತನೋತ್ಪತ್ತಿ ಮಾಡುವುದರಿಂದ ಮಲೇರಿಯಾ ಜಾಗ್ರೃತಿಯನ್ನು ಸಹ ಮೂಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ಮಲೇರಿಯಾ ಮಾಸವನ್ನು ಆಚರಿಸುವುದು ಸೂಕ್ತವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಮಲೇರಿಯಾ ಮುಂಜಾಗೃತಾ ಮತ್ತು ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದ್ದು, ಕಳೆದ ತಿಂಗಳಿಂದ ಜಿಲ್ಲೆಯ ಎಲ್ಲ ಆರೋಗ್ಯ ಸಿಬ್ಬಂದಿಗಳು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಜನರಲ್ಲಿ ಅರಿವು ಮೂಡಿಸಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳ ನಿರ್ಮೂಲನಾ ಕಾರ್ಯಕ್ರಮ ಜರುಗಿಸಲಾಗುತ್ತಿದೆ. ಮುಂಗಾರು ಮಳೆ ಈಗಾಗಲೇ ಪ್ರಾರಂಭವಾಗಿದ್ದು, ಮನೆಯ ಹೊರಗಡೆ ಘನತ್ಯಾಜ್ಯ ವಸ್ತುಗಳನ್ನು ಎಸೆದರೆ ಅವುಗಳಲ್ಲಿ ನೀರು ನಿಂತು ಸೊಳ್ಳೆ ಸಂತತಿ ಹೆಚ್ಚಾಗುವುರಿಂದ ಸಾರ್ವಜನಿಕರು ಘನ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡಬೇಕೆಂದು ಮನವಿ ಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ|| ಬಾಲಚಂದ್ರ ಜೋಷಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ|| ಶಿವಶರಣಪ್ಪಾ, ತಾಲೂಕಾ ಆರೋಗ್ಯಾಧಿಕಾರಿ ಡಾ|| ರಾಜಕುಮಾರ, ಜಿಲ್ಲೆಯ ಆರೋಗ್ಯ ಇಲಾಖೆ ಎಲ್ಲ ಕಾರ್ಯಕ್ರಮಾಧಿಕಾರಿಗಳು, ಜಿಲ್ಲಾ ಕೀಟ ಶಾಸ್ತ್ರಜ್ಞ ಚಾಮರಾಜ ದೊಡ್ಮನಿ, ಗಂಗೋತ್ರಿ, ಜಿಲ್ಲಾ ವಿಬಿಡಿ ಸಮಾಲೋಚಕ ಕಾರ್ಣಿಕ ಕೋರೆ ಉಪಸ್ಥಿತರಿದ್ದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ|| ಬಸವರಾಜ ಗುಳಗಿ ಅಧ್ಯಕ್ಷತೆ ವಹಿಸಿದ್ದರು. ನರ್ಸಿಂಗ ಶಾಲೆಯ ವಿದ್ಯಾರ್ಥಿಗಳು ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರಲ್ಲದೇ ವಿವಿಧ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರ ಗಮನ ಸೆಳೆದರು.
ಜೂನ್ 24ರಂದು ಫರಹತಾಬಾದಿನಲ್ಲಿ ಸೀಮಂತ ಕಾರ್ಯಕ್ರಮ
************************************************************
ಕಲಬುರಗಿ,ಜೂ.22.(ಕ.ವಾ.)-ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕಲಬುರಗಿ ಹಾಗೂ ಗ್ರಾಮ ಪಂಚಾಯಿತಿ ಫರಹತಾಬಾದ ಹಾಗೂ ಹೊನ್ನಕಿರಣಗಿ ಇವುಗಳ ಸಂಯುಕ್ತಾಶ್ರಯದಲ್ಲಿ 2017-18ನೇ ಸಾಲಿನ ಕೂಸು ಕಾರ್ಯಕ್ರಮದಡಿಯಲ್ಲಿ ಸೀಮಂತ ಕಾರ್ಯಕ್ರಮವನ್ನು ಜೂನ್ 24ರಂದು ಬೆಳಿಗ್ಗೆ 11 ಗಂಟೆಗೆ ಫರಹತಾಬಾದಿನ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಜರುಗಲಿದೆ. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅಫಜಲಪುರ ಶಾಸಕ ಮಾಲೀಕಯ್ಯ ವ್ಹಿ.ಗುತ್ತೇದಾರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಫರಹತಾಬಾದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಧಾನಮ್ಮ ಎಸ್. ಭಜಂತ್ರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹೆಚ್. ಮಲಾಜಿ, ಉಪಾಧ್ಯಕ್ಷೆ ಶೋಭಾ ಎಸ್. ಸಿರಸಗಿ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಫರಹತಾಬಾದ ಜಿಲ್ಲಾ ಪಂಚಾಯಿತಿ ಸದಸ್ಯ ದೀಲಿಪ ಆರ್. ಪಾಟೀಲ, ಖಣದಾಳ ಜಿಲ್ಲಾ ಪಂಚಾಯಿತಿ ಸದಸ್ಯ ಸುಮೀತ ಪಾಟೀಲ, ಕಲಬುರಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ ಕೆ. ಸಜ್ಜನ್, ಖಣದಾಳ ತಾಲೂಕು ಪಂಚಾಯಿತಿ ಸದಸ್ಯ ಆನಂದ ಚವ್ಹಾಣ, ಮಿಣಜಗಿ ತಾಲೂಕು ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕಣ್ಣಿ, ಫಿರೋಜಾಬಾದ ತಾಲೂಕು ಪಂಚಾಯಿತಿ ಸದಸ್ಯೆ ಅಂಬಿಕಾ ಎಸ್. ಪೋ. ಪಾಟೀಲ, ಹೊನ್ನಕಿರಣಗಿ ತಾಲೂಕು ಪಂಚಾಯಿತಿ ಸದಸ್ಯೆ ಅನ್ನಪೂರ್ಣ ಎಸ್. ಹಿರೇಮಠ, ಕೌಲಗಾ(ಬಿ) ತಾಲೂಕು ಪಂಚಾಯಿತಿ ಸದಸ್ಯೆ ಪಾರ್ವತಿ ಡಿ. ಶಕಾಪುರ, ಹೇರೂರ ತಾಲೂಕು ಪಂಚಾಯಿತಿ ಸದಸ್ಯ ಸೈಯ್ಯದ್ ಅಬ್ದುಲ್ ಸಾಬ್, ಸರಡಗಿ(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ಚಂದನಕುಮಾರ ಬುಳ್ಳಾ, ಭಾರತಿ ಆರ್. ಕಾಬಾ, ಅನೀತಾ ಎಸ್. ದೊಡ್ಮನಿ, ನೀಲಮ್ಮ ವಿದ್ಯಾಧರ ಮಾಮನಿ, ಗೀತಾ ಬಿ. ಹಬ್ಬಣ್ಣಾ, ಸೀತಾಬಾಯಿ ಎಸ್. ರಾಠೋಡ, ಅಯ್ಯಮ ಎಚ್. ಸುಬೇದಾರ್, ಲಲೀತಾಬಾಯಿ ಡಿ. ರಾಠೋಡ ಅತಿಥಿಗಳಾಗಿ ಪಾಲ್ಗೊಳ್ಳುವರು.
ಜೂನ್ 30ರಿಂದ ತಾಲೂಕಿನಲ್ಲಿ ವೈದ್ಯಕೀಯ ಮೌಲ್ಯಾಂಕನ ಶಿಬಿರ
**************************************************************
ಕಲಬುರಗಿ,ಜೂ.22.(ಕ.ವಾ.)-ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಸಮನ್ವಯ ಶಿಕ್ಷಣದ ಚಟುವಟಿಕೆಯಡಿಯಲ್ಲಿ ಕಲಬುರಗಿ ಎಲ್ಲ ತಾಲೂಕಿನ ಶಾಲೆಗಳ ವಿಶೇಷ ಅಗತ್ಯತೆಯುಳ್ಳ ವಿಕಲಚೇತನ ಮಕ್ಕಳಿಗೆ ಜೂನ್ 30 ರಿಂದ ಜುಲೈ 8 ರವರೆಗೆ ಕಲಬುರಗಿ ತಾಲೂಕಿನ ಆಯಾ ಶಾಲೆಗಳಲ್ಲಿ ವೈದ್ಯಕೀಯ ಮೌಲ್ಯಾಂಕನ ಶಿಬಿರ ಏರ್ಪಡಿಸಲಾಗಿದೆ. ವಿಕಲಚೇತನ ಮಕ್ಕಳು ಇದರ ಪ್ರಯೋಜನ ಪಡೆಯಬೇಕೆಂದು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ತಿಳಿಸಿದ್ದಾರೆ.
ಈ ಶಿಬಿರದಲ್ಲಿ ಎಲ್ಲ ವಿಕಲಚೇತನ ಮಕ್ಕಳು ಪಾಲ್ಗೊಳ್ಳುವಂತಾಗಲು ಪೋಷಕರು, ಸಮುದಾಯದಲ್ಲಿ ಜಾಗೃತಿ ಮೂಡಿಸುವಲ್ಲಿ ಬ್ಲಾಕ್‍ವಾರು ಭಿತ್ತಿಪತ್ರ ಬ್ಯಾನರ್ಸ್ ಅಳವಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಬಿರದಲ್ಲಿ ಮಕ್ಕಳು ಭಾಗವಹಿಸುವಂತೆ ಅನುಕೂಲವಾಗಲು ಪೋಷಕರು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಭಿತ್ತಿಪತ್ರ, ಬ್ಯಾನರ್ ಅಳವಡಿಸಲಾಗಿದೆ. ಮುಖ್ಯೋಪಾಧ್ಯಾಯರು, ಸಿ.ಆರ್.ಪಿ., ಬಿ.ಆರ್.ಪಿ. ಮತ್ತು ಐ.ಇ.ಆರ್.ಟಿ.ಯವರು ತಮ್ಮ ವ್ಯಾಪ್ತಿಯ ಅಗತ್ಯತೆಯುಳ್ಳ ಮಕ್ಕಳನ್ನು ಶಿಬಿರಕ್ಕೆ ಕರೆ ತಂದು ತಪಾಸಣೆ ಮಾಡಿಸಲು ಹಾಗೂ ಶಿಬಿರದ ಯಶಸ್ವಿಗೆ ಶ್ರಮಿಸುವಂತೆ ತಿಳಿಸಿದ್ದಾರೆ. ತಪಾಸಣಾ ಶಿಬಿರದಲ್ಲಿ ವೈದ್ಯರು ಮತ್ತು ತಂತ್ರಜ್ಞರು ಮಕ್ಕಳ ತಪಾಸಣೆ ನಡೆಸಿ ಸಾಧನ ಸಲಕರಣೆಗಳ ಅಳತೆ ತೆಗೆದುಕೊಳ್ಳುವರು. ಪೋಷಕರು ಮತ್ತು ಶಿಕ್ಷಕರು ವಿಕಲಚೇತನ ಮಕ್ಕಳನ್ನು ಕರೆತಂದು ಶಿಬಿರದ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
ಶಿಬಿರ ನಡೆಯುವ ದಿನಾಂಕ ಮತ್ತು ಸ್ಥಳದ ವಿವರ ಇಂತಿದೆ. ಜೂನ್ 30: ಎಂ.ಜಿ. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಫಜಲಪುರ. ಜುಲೈ 1: ಗುರುಭವನ ಆಳಂದ. ಜುಲೈ 3: ಚಿಂಚೋಳಿ ತಾಲೂಕಿನ ಚಂದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಜುಲೈ 4: ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ(ಕನ್ಯಾ) ಚಿತ್ತಾಪುರ. ಜುಲೈ 5: ಕಲಬುರಗಿ ಉತ್ತರ ವಲಯ-ಆಸೀಫ್ ಗಂಜ್ ಬಿ.ಆರ್.ಸಿ. ಕೇಂದ್ರ. ಜುಲೈ 6: ಕಲಬುರಗಿ ದಕ್ಷಿಣ ವಲಯ-ಸರ್ಕಾರಿ ಪ್ರಾತ್ಯಕ್ಷಿಕ ಪ್ರೌಢಶಾಲೆ. ಜುಲೈ 7: ಬಿ.ಆರ್.ಸಿ. ಕೇಂದ್ರ ಜೇವರ್ಗಿ ಹಾಗೂ ಜುಲೈ 8: ಬಿ.ಆರ್.ಸಿ. ಕೇಂದ್ರ ಸೇಡಂ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9448999397, 9480695438, 9483696328ಗಳನ್ನು ಸಂಪರ್ಕಿಸಲು ಕೋರಿದೆ.
ಜೂನ್ 23ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಜೂ.22.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗ-2ರಿಂದ 110 ಕೆ.ವಿ. ಮಂದೆವಾಲ್ ವಿದ್ಯುತ್ ಉಪಕೇಂದ್ರದಲ್ಲಿನ ಎಲ್ಲ 11 ಕೆ.ವಿ. ಬ್ರೇಕರ್ ದುರಸ್ತಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ ಕೆಳಕಂಡ ಗ್ರಾಮಗಳಲ್ಲಿ ಜೂನ್ 23 ರಂದು ಬೆಳಗಿನ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳ ಎಲ್ಲ ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಜೆಸ್ಕಾಂ ವಿಭಾಗ-2ರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಗ್ರಾಮಗಳ ವಿವರ ಇಂತಿದೆ. ಜೇವರ್ಗಿ ತಾಲೂಕಿನ ಕಲ್ಲೂರ ಕೆ., ಕಲ್ಲೂರ ಬಿ., ಕುಡರಗಿ, ಮಯೂರ, ಮಾವೂರ, ಬಳುಂಡಗಿ, ಬೇಲೂರ, ಮಂದೇವಾಲ, ಕಮ್ಮನಸಿರಸಗಿ, ಕುರನಳ್ಳಿ, ಮುರಗನೂರ, ರಂಜಣಗಿ, ದೇಸಣಗಿ, ಹಾಲಗತ್ತರಗಿ, ಬದನಿಹಾಲ, ಜೇರಟಗಿ, ನೇದಲಿಗಿ, ಗೂಡೂರ ಎಸ್.ಎನ್., ಬಿಲ್ಲಾಡ, ಯಾತನೂರ ಗ್ರಾಮಗಳು ಹಾಗೂ ಇತರೆ ಗ್ರಾಮಗಳು.


ಹೀಗಾಗಿ ಲೇಖನಗಳು News Date: 22--06--2017

ಎಲ್ಲಾ ಲೇಖನಗಳು ಆಗಿದೆ News Date: 22--06--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News Date: 22--06--2017 ಲಿಂಕ್ ವಿಳಾಸ https://dekalungi.blogspot.com/2017/06/news-date-22-06-2017.html

Subscribe to receive free email updates:

0 Response to "News Date: 22--06--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ