NEWS DATE: 07--06--2017

NEWS DATE: 07--06--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS DATE: 07--06--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS DATE: 07--06--2017
ಲಿಂಕ್ : NEWS DATE: 07--06--2017

ಓದಿ


NEWS DATE: 07--06--2017

ಡಿ.ಎಲ್.ಇಡಿ.-ಡಿ.ಪಿ.ಇಡಿ. ಕೋರ್ಸಿಗಾಗಿ ಆನ್‍ಲೈನ್ ಅರ್ಜಿ ಆಹ್ವಾನ
****************************************************************
ಕಲಬುರಗಿ,ಜೂ.07.(ಕ.ವಾ.)-ಡಿ.ಎಲ್.ಇಡಿ. ಕೋರ್ಸಿನ ವಿವಿಧ ಮಾಧ್ಯಮಗಳು ಹಾಗೂ ಡಿ.ಪಿ.ಇಡಿ. ಕೋರ್ಸಿನ ಪ್ರಥಮ ವರ್ಷದ ವ್ಯಾಸಂಗಕ್ಕಾಗಿ 2017-18ನೇ ಸಾಲಿನ ರಾಜ್ಯದ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮರತೋಳೆ ಶಶಿಕಾಂತ ತಿಳಿಸಿದ್ದಾರೆ.
ಅಭ್ಯರ್ಥಿಗಳು ಇಲಾಖೆಯ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟಿನಲ್ಲಿ ಆನ್‍ಲೈನ್ ಅಪ್ಲಿಕೇಶನ್ ಫಾರ್ ಡಿ.ಇಎಲ್.ಇಡಿ./ಡಿಪಿ.ಇಡಿ. ಅಡ್ಮಿಶನ್ ಫಾರ್ ಗೌರ್ನಮೆಂಟ್ ಕೋಟಾ ಸೀಟ್ಸ್ 2017-18 ಲಿಂಕನ್ನು ಕ್ಲಿಕ್ ಮಾಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮುನ್ನ ವೆಬ್‍ಸೈಟಿನಲ್ಲಿ ನೀಡಿರುವ ಸೂಚನೆಗಳನ್ನು ತಪ್ಪದೇ ಓದಿಕೊಂಡು ಜಾಗರೂಕತೆಯಿಂದ ಭರ್ತಿ ಮಾಡಬೇಕು.
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಜೂನ್ 18ರ ರಾತ್ರಿ 12 ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಕೊನೆಯ ದಿನಾಂಕವನ್ನು ಕಾಯದೆ ಮುಂಚಿತವಾಗಿ ಅರ್ಜಿ ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08478-221346ನ್ನು ಸಂಪರ್ಕಿಸಲು ಕೋರಿದೆ.
ದೃಶ್ಯಕಲಾ ಕೋರ್ಸುಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*****************************************************
ಕಲಬುರಗಿ,ಜೂ.07.(ಕ.ವಾ.)-ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕೇಂದ್ರದಲ್ಲಿ 2017-18ನೇ ಸಾಲಿಗೆ ಚಿತ್ರಕಲೆ ಹಾಗೂ ಶಿಲ್ಪಕಲೆಗಳ ತರಗತಿಗಳಾದ ದೃಶ್ಯಕಲಾ ಮೂಲ ಪ್ರಥಮ, ದ್ವಿತೀಯ ಹಾಗೂ ಪದವಿ ಕೋರ್ಸುಗಳ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ಆಸಕ್ತ ಎಸ್.ಎಸ್.ಎಲ್.ಸಿ. ಅಥವಾ ಪಿ.ಯು.ಸಿ. ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಬಾದಾಮಿ ಕೇಂದ್ರದ ಆಡಳಿತಾಧಿಕಾರಿ ತಿಳಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರವಾದ ಬಾದಾಮಿ-ಬನಶಂಕರಿಯಲ್ಲಿ ಕಳೆದ ಹದಿನೈದು ವರ್ಷಗಳಿಂದ ಚಿತ್ರಕಲೆ ಮತ್ತು ಶಿಲ್ಪಕಲೆಗಳ ದೃಶ್ಯಕಲಾ ಮೂಲ ತರಗತಿಗಳ ಹಾಗೂ ಪದವಿ ತರಬೇತಿಗಳನ್ನು ನಡೆಸಲಾಗುತ್ತಿದೆ. ಎಸ್.ಎಸ್.ಎಲ್.ಸಿ. ಪಾಸಾದವರು ದೃಶ್ಯಕಲಾ ಮೂಲ ಪ್ರಥಮ ವರ್ಷಕ್ಕೆ ಹಾಗೂ ಪಿ.ಯು.ಸಿ. ಪಾಸಾದವರು ನಾಲ್ಕು ವರ್ಷಗಳ ಪದವಿ ತರಗತಿಗೆ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 9449256814, 9448580056ಗಳನ್ನು ಸಂಪರ್ಕಿಸಲು ಕೋರಿದೆ.
ಕಿವುಡ ಮಕ್ಕಳ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಜೂ.07.(ಕ.ವಾ.)-ಕಲಬುರಗಿ ನಗರದ ಆಳಂದ ಕಾಲೋನಿ ಕಿವುಡ ಮಕ್ಕಳ ಸರ್ಕಾರಿ ಶಾಲೆಯಲ್ಲಿ 2017-18ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಕಿವುಡ ಬಾಲಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಿವುಡ ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕಿ ಮೀನಾಕ್ಷಿ ಪಾಟೀಲ ತಿಳಿಸಿದ್ದಾರೆ.
ಈ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ 7ನೇ ತರಗತಿವರೆಗೆ ಪ್ರವೇಶಾವಕಾಶ ನೀಡಲಾಗುತ್ತಿದೆ. ಈ ಸಂಸ್ಥೆಯಲ್ಲಿ ಕಿವುಡ ಬಾಲಕರಿಗೆ ಉಚಿತ ವಸತಿಯುತ ಹಾಗೂ ಬಾಹ್ಯ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ಶಾಲೆಯಲ್ಲಿ 2017-18ನೇ ಸಾಲಿನ ಒಂದನೇ ತರಗತಿಗೆ 6 ರಿಂದ 9 ವರ್ಷದೊಳಗಿನ ಕಿವುಡ ಬಾಲಕರನ್ನು ದಾಖಲು ಮಾಡಿಕೊಳ್ಳಲು ಈಗಾಗಲೇ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕಿವುಡ ಮಕ್ಕಳು ಬಯಸಿದಲ್ಲಿ ಅವರನ್ನೂ ಸಹ ದಾಖಲು ಮಾಡಿಕೊಳ್ಳಲಾಗುವುದು. ಶೈಕ್ಷಣಿಕ ಅವಧಿಯಲ್ಲಿ ಕಿವುಡ ಬಾಲಕರಿಗೆ ಉಚಿತ ಊಟ, ವಸತಿ, ಹಾಸಿಗೆ ಹೊದಿಕೆ, ಪಠ್ಯ ಪುಸ್ತಕಗಳು ಹಾಗೂ ವೈದ್ಯಕೀಯ ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು.
ಪೂರ್ವ ಪ್ರಾಥಮಿಕ ತರಗತಿಯಿಂದ 7ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಬೋಧನಾ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ ಹಾಗೂ ಸಂಸ್ಥೆಯಲ್ಲಿ ಬಾಲಕರಿಗೆ ವಿಶಾಲವಾದ ಆಟದ ಮೈದಾನವಿದ್ದು, ಎಲ್ಲಾ ವಿಧವಾದ ಆಟೋಪಕರಣಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಸ್ಮಾರ್ಟ್‍ಕ್ಲಾಸ್ ವಿಧಾನದ ಮೂಲಕ ಪಠ್ಯವನ್ನು ಉತ್ತಮವಾಗಿ ಬೋಧಿಸಲಾಗುತ್ತದೆ ಹಾಗೂ ಗಣಕಯಂತ್ರ ಶಿಕ್ಷಣವನ್ನು ಸಹ ನೀಡಲಾಗುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಕಿವುಡ ಬಾಲಕರಿಗೆ ಉಚಿತವಾಗಿ ನೀಡಲಾಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಾಗಿರುವದಿಲ್ಲ.
ಸದರಿ ಶಾಲೆಗೆ ಕಿವುಡ ಬಾಲಕರನ್ನು ಸೇರಿಸಲಿಚ್ಛಿಸುವ ತಂದೆ-ತಾಯಿ/ಪೋಷಕರು ಪ್ರವೇಶದ ಅರ್ಜಿಯನ್ನು ಶಾಲಾ ಕಚೇರಿಯಲ್ಲಿ ಜುಲೈ 29ರೊಳಗಾಗಿ ಉಚಿತವಾಗಿ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ವೈದ್ಯಕೀಯ ಮಂಡಳಿಯಿಂದ ಪಡೆದ ಅಂಗವಿಕಲರ ಗುರುತಿನ ಚೀಟಿ ಜಿರಾಕ್ಸ್ ಪ್ರತಿ, ಪಾಸ್‍ಪೋರ್ಟ್ ಆಳತೆಯ ಇತ್ತೀಚಿನ 08 ಭಾವಚಿತ್ರ, ಜನ್ಮ ದಿನಾಂಕದ ದೃಢೀಕರಣ ಪತ್ರ (ವರ್ಗಾವಣೆ ಪ್ರಮಾಣಪತ್ರ ಇದ್ದಲ್ಲಿ ಅವಶ್ಯಕತೆ ಇರುವದಿಲ್ಲ), ಬೇರೆ ಶಾಲೆ/ಸಂಸ್ಥೆಯಿಂದ ಪ್ರವೇಶ ಬಯಸಿ ಬಂದಲ್ಲಿ ಶಾಲಾ ವರ್ಗಾವಣೆ ಮತ್ತು ಜಾತಿ ಪ್ರಮಾಣಪತ್ರ ಹಾಗೂ ಆಧಾರ್ ಪ್ರಮಾಣಪತ್ರದ ಜಿರಾಕ್ಸ್ ಪ್ರತಿ ಲಗತ್ತಿಸಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಳಂದ ಕಾಲೋನಿ ಕಿವುಡ ಮಕ್ಕಳ ಸರಕಾರಿ ಪಾಠ ಶಾಲೆ ಅಧೀಕ್ಷಕರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 08472-274963, 9880161533ಗಳನ್ನು ಸಂಪರ್ಕಿಸಲು ಕೋರಿದೆ.
ರೈತರಿಗೆ ಸಾವಯವ ಕೃಷಿ ತರಬೇತಿ ಶಿಬಿರ
 ****************************************
ಕಲಬುರಗಿ,ಜೂ.07.(ಕ.ವಾ.)-ಬಾಗಲಕೋಟೆಯ ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರವು ಮೂರು ದಿನಗಳ ಉಚಿತ “ಸಾವಯವ ಕೃಷಿ ಬಗ್ಗೆÀ” ತರಬೇತಿ ಶಿಬಿರವನ್ನು ಬಾಗಲಕೋಟೆಯಲ್ಲಿ 2017ರ ಜೂನ್ ತಿಂಗಳಿನಲ್ಲಿ ಏರ್ಪಡಿಸಲಿದೆ. ಶಿಬಿರದಲ್ಲಿ ಸಾವಯವ ಕೃಷಿಯ ಮಹತ್ವ, ಅವಶ್ಯಕತೆ, ಇತಿಹಾಸ, ಆಹಾರ ಮತ್ತು ತರಕಾರಿ ಬೆಳೆಗಳಲ್ಲಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಸಾವಯವ ಕೃಷಿ ಪದ್ಧತಿ, ಈ ಪದ್ಧತಿಯಡಿ ಕೀಟ ಹಾಗೂ ರೋಗಗಳ ನಿರ್ವಹಣೆ, ಸಾವಯವ ಉತ್ಪನ್ನಗಳ ಪ್ರಮಾಣೀಕರಣ ಹಾಗೂ ಮಾರುಕಟ್ಟೆ ವ್ಯವಸ್ಥೆ, ಹಣಕಾಸಿನ ನಿರ್ವಹಣೆ ಇತ್ಯಾದಿ ವಿಷಯಗಳ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುವುದು.
ಆಸಕ್ತ ರೈತರು, ಸ್ವಸಹಾಯ ಸಂಘದ ಸದಸ್ಯರು, ಯುವಕರು ಮುಂತಾದವರು ತಮ್ಮ ಹಸರು, ವಿಳಾಸ, ದೂರವಾಣಿ/ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು 2017ರ ಜೂನ್ 15ರೊಳಗಾಗಿ ನೋಂದಾಯಿಸಲು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಕೃಷಿಕರ ಸಂಪನ್ಮೂಲ ಕೇಂದ್ರ, ಬಿ.ವಿ.ವಿ.ಸಂಘದ ಸ್ಪಿನ್ನಿಂಗ್ ಮಿಲ್ ಆವರಣ, ಗದ್ದನಕೇರಿ ರೋಡ್, ಬಾಗಲಕೋಟೆ-587103 ಕಚೇರಿ ಹಾಗೂ ಮೊಬೈಲ್ ಸಂಖ್ಯೆ 9482630790ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ರೈತರಿಗೆ ಕೃಷಿ ಉಪಕರಣ ಒದಗಿಸಲು 43.90 ಕೋಟಿ ರೂ. ಸಹಾಯಧನ
**********************************************************************
ಕಲಬುರಗಿ,ಜೂ.07.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣೆ ಯೋಜನೆಯಡಿ 50386 ರೈತರಿಗೆ ವಿವಿಧ ಕೃಷಿ ಉಪಕರಣಗಳನ್ನು ಒದಗಿಸಲಾಗಿದೆ. ಇದಕ್ಕಾಗಿ 43.90 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ. ಭೂ ಚೇತನ ಮತ್ತು ಇತರೆ ಯೋಜನೆಗಳಡಿ ಜಿಲ್ಲೆಯಲ್ಲಿ ಖುಷ್ಕಿ ಮತ್ತು ನೀರಾವರಿ ಪ್ರದೇಶಗಳ ರೈತರಿಗೆ ಸಾವಯವ ಗೊಬ್ಬರ, ಲಘು ಫೊಷಕಾಂಶ ಮತ್ತು ಉತ್ತಮ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಉತ್ಪಾದಕತೆ ಹೆಚ್ಚಿಸಿಕೊಳ್ಳಲು ಅನುವಾಗುವಂತೆ ಸುಮಾರು 465250 ರೈತರಿಗೆ ಜಿಪ್ಸಂ, ಝಿಂಕ ಸಲ್ಪೇಟ್, ಬೋರಾಕ್ಸ್, ಡೋಲೋಮೈಟ, ಲೈಮ ಇತ್ಯಾದಿ ಪರಿಕರಗಳನ್ನು ವಿತರಿಸಲು 18.42 ಕೋಟಿ ರೂ.ಸಹಾಯಧನ ಒದಗಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ ತಿಳಿಸಿದ್ದಾರೆ.
ಬೀಜ ವಿತರಣಾ ಕಾರ್ಯಕ್ರಮದಡಿ 22.90 ಕೋಟಿ ರೂ.ಸಹಾಯಧನದಲ್ಲಿ 1.92 ಲಕ್ಷ ರೈತರಿಗೆ ಸಕಾಲದಲ್ಲಿ 95650 ಕ್ವಿಂಟಾಲ್ ಪ್ರಮಾಣಿತ ಮತ್ತು ಗುಣಮಟ್ಟದ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. ಸಾವಯವ ಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಆಯ್ಕೆಯಾದ 25 ಹೋಬಳಿಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಮೂಲಕ 2540 ಹೆಕ್ಟೇರ್ ಪ್ರದೇಶವನ್ನು ಸಾವಯವ ಕೃಷಿಗೆ ಒಳಪಡಿಸಲಾಗಿದೆ. ಇದಕ್ಕಾಗಿ 3.84 ಕೋಟಿ ರೂ. ಸಹಾಯಧನ ನೀಡಲಾಗಿದೆ. ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಯೋಜನೆಯಡಿ ಕೃಷಿಯಲ್ಲಿ ನೀರಿನ ಮಿತ ಬಳಕೆಗೆ 19584 ಹೆಕ್ಟೇರ್ ಪ್ರದೇಶದಲ್ಲಿನ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಘಟಕಗಳನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ 46.58 ಕೋಟಿ ರೂ. ಸಹಾಯಧನ ನೀಡಲಾಗಿದೆ.
ಕೃಷಿ ಯಂತ್ರಧಾರೆ ಯೋಜನೆಯಡಿ ಜಿಲ್ಲೆಯ 15 ಹೋಬಳಿಗಳಲ್ಲಿ ಕೃಷಿ ಯಂತ್ರ ಬಾಡಿಗೆ ಆಧಾರಿತ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಎಲ್ಲಾ ವರ್ಗದ ರೈತರಿಗೆ ಕಡಿಮೆ ಬಾಡಿಗೆ ದರದಲ್ಲಿ ವಿವಿಧ 50 ಹೆಚ್‍ಪಿ ಟ್ರ್ಯಾಕ್ಟರ್ ಟ್ರಾಲಿ, ಡಬಲ್ ಬಾಟಮ್ ಫಿಕ್ಸ್ ಮಾಡಿದ ನೇಗಿಲು, ರಿವಸಿಬಲ್ ಎಂ.ಬಿ. ನೆಗಿಲು, ರೋಟೋವೆಟರ್ ಮುಂತಾದ ಕೃಷಿ ಉಪಕರಣಗಳನ್ನು ಬಾಡಿಗೆ ಆಧಾರದಲ್ಲಿ ನೀಡಲಾಗುತ್ತಿದೆ. ಕೆ-ಕಿಸಾನ್ ಯೋಜನೆಯಡಿ ಮುಂಬರುವ ದಿನಗಳಲ್ಲಿ ಕೃಷಿ ಇಲಾಖೆ ಸೌಲಭ್ಯ ಪಡೆಯಲು ನೋಂದಣಿಯಾಗುವುದು ಕಡ್ಡಾಯವಾಗಿದ್ದು, 1.85 ಲಕ್ಷ ರೈತರ ನೋಂದಣಿಯಾಗಿದ್ದಾರೆ. ಉಳಿದ ರೈತರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ರಾಷ್ಟ್ರೀಯ ಸುಸ್ಥಿರ ಮಣ್ಣು ಆರೋಗ್ಯ ಅಭಿಯಾನ ಯೋಜನೆಯಡಿ ಒಟ್ಟು 98850 ಮಣ್ಣು ಮಾದರಿಗಳನ್ನು ಸಂಗ್ರಹಿಸಲಾಗಿದೆ ಮತ್ತು ಮಣ್ಣು ಆರೋಗ್ಯ ಚೀಟಿ ವಿತರಣೆ ಕಾರ್ಯ ಪ್ರಗತಿಯಲ್ಲಿದೆ.
ಮಾಲೀಕರು ಉದ್ದಿಮೆಗಳ ಪರವಾನಿಗೆ ಪಡೆಯುವುದು ಕಡ್ಡಾಯ
************************************************************
ಕಲಬುರಗಿ,ಜೂನ್.07.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಉದ್ದಿಮೆಗಳು ಪರವಾನಿಗೆ ಇಲ್ಲದೆ/ಪರವಾನಿಗೆ ನವೀಕರಿಸದೇ ನಡೆಸುತ್ತಿರುವುದು ಕಂಡು ಬಂದಿದೆ. ಪರವಾನಿಗೆ ಇಲ್ಲದೇ ಮತ್ತು ಪರವಾನಿಗೆ ನವೀಕರಿಸದೇ ಉದ್ದಿಮೆ ನಡೆಸುವುದು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976ರ ಪ್ರಕಾರ ನೇರ ಕಾನೂನು ಉಲ್ಲಂಘನೆಯಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈಗಾಗಲೇ ಮಹಾನಗರ ಪಾಲಿಕೆಯಿಂದ ನೋಟೀಸುಗಳನ್ನು ಜಾರಿ ಮಾಡಲಾಗಿದೆ ಮತ್ತು ಸದರಿ ಕಾರ್ಯ ಪ್ರಗತಿಯಲ್ಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಕಾನೂನು ಉಲ್ಲಂಘಿಸಿ ಉದ್ದಿಮೆ ನಡೆಸುತ್ತಿರುವ ಮಾಲೀಕರಿಗೆ ಈಗಾಗಲೇ ಜಾರಿ ಮಾಡಿರುವ ನೋಟೀಸ್ ಪ್ರಕಾರ 7 ದಿವಸಗಳ ಅವಧಿ ನೀಡಲಾಗಿದೆ. ಪರವಾನಿಗೆ/ನವೀಕರಣಕ್ಕೆ ಬೇಕಾದ ದಾಖಲೆಗಳನ್ನು ಸಲ್ಲಿಸಿ, ಪರವಾನಿಗೆ/ನವೀಕರಣ ಮಾಡಲು ಸೂಚಿಸಿದೆ. ತಪ್ಪಿದ್ದಲ್ಲಿ ಪರವಾನಿಗೆ/ನವೀಕರಣ ಇಲ್ಲದೆ ನಡೆಸುತ್ತಿರುವ ಉದ್ದಿಮೆ ಮಾಲೀಕರ ವಿರುದ್ಧ ನಿಯಮಾನುಸಾರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಲು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಸದರಿ ಉದ್ದಿಮೆಗಳ ಮಾಲೀಕರು ಇಂತಹ ಕಠಿಣ ಕ್ರಮಕ್ಕೆ ಮತ್ತು ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅವಕಾಶ ನೀಡದೆ, ತಮ್ಮ ಉದ್ದಿಮೆಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ, ಉದ್ದಿಮೆ ಪರವಾನಿಗೆ/ನವೀಕರಣ ಪಡೆಯಬೇಕು. ಈ ವಿಷಯ ಕುರಿತು ಏನಾದರೂ ಸಮಸ್ಯೆಗಳಿದ್ದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಆಡಳಿತ) ಅವರನ್ನು ಸಂಪರ್ಕಿಸಲು ಕೋರಿದೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಅರ್ಜಿ ಆಹ್ವಾನ
*****************************************************************
ಕಲಬುರಗಿ,ಜೂ.07.(ಕ.ವಾ.)-ಕಲಬುರಗಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2017-18ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಡಾ. ಕರಬಸಮ್ಮ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಆನ್‍ಲೈನ್ ಮೂಲಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ವಿದ್ಯಾರ್ಥಿಯ ಹೆಸರಿನಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕುಗಳಲ್ಲಿ ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು, ಬ್ಯಾಂಕಿನ ಐ.ಎಫ್.ಎಸ್.ಸಿ. ಕೋಡ್ ಸಂಖ್ಯೆ ಮತ್ತು ಖಾತೆ ಸಂಖ್ಯೆ ಇರುವ, ಪಾಸ್ ಪುಸ್ತಕದ ಮೊದಲ ಪುಟದ ಸ್ಪಷ್ಟ ಜಿರಾಕ್ಸ್ ಪ್ರತಿ, ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಥಿ/ಪೋಷಕರ ಜಾತಿ ಆದಾಯ ಪ್ರಮಾಣಪತ್ರದ ಜಿರಾಕ್ಸ್ ಪ್ರತಿಗಳನ್ನು ಶಾಲೆಗೆ ಪ್ರವೇಶ ಹೊಂದುವ ಸಮಯದಲ್ಲಿಯೇ ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ನೀಡತಕ್ಕದ್ದು.
ಸಂಬಂಧಪಟ್ಟ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಈ ಕುರಿತು ಎಲ್ಲ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯವನ್ನು ಹಾಗೂ ಮೊಬೈಲ್ ಸಂಖ್ಯೆ 7619133351 ಮತ್ತು 9148548523ಗಳನ್ನು ಸಂಪರ್ಕಿಸಲು ಕೋರಿದೆ.


ಹೀಗಾಗಿ ಲೇಖನಗಳು NEWS DATE: 07--06--2017

ಎಲ್ಲಾ ಲೇಖನಗಳು ಆಗಿದೆ NEWS DATE: 07--06--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS DATE: 07--06--2017 ಲಿಂಕ್ ವಿಳಾಸ https://dekalungi.blogspot.com/2017/06/news-date-07-06-2017.html

Subscribe to receive free email updates:

0 Response to "NEWS DATE: 07--06--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ