NEWS AND PHTOTO DATE; 29--06--2017

NEWS AND PHTOTO DATE; 29--06--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHTOTO DATE; 29--06--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHTOTO DATE; 29--06--2017
ಲಿಂಕ್ : NEWS AND PHTOTO DATE; 29--06--2017

ಓದಿ


NEWS AND PHTOTO DATE; 29--06--2017

ಸ್ಪಷ್ಟ ಗುರಿಯಿಂದ ಅದ್ಭುತ ಸಾಧನೆ ಸಾಧ್ಯ
****************************************
ಕಲಬುರಗಿ,ಜೂ.29.(ಕ.ವಾ.)-ಸ್ಪಷ್ಟವಾದ ಗುರಿಯಿಂದ ಯಾವುದೇ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಲು ಸಾಧ್ಯ. ಈ ಸಾಧನೆ ಮಾಡಬೇಕಾದರೆ ವಿದ್ಯಾರ್ಥಿ ಸಮುದಾಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜರುಗುವ ಎಲ್ಲ ವೈಜ್ಞಾನಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವೈಜ್ಞಾನಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಹೇಳಿದರು.
ಕಲಬುರಗಿ ವಿಜ್ಞಾನ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಆವಿಷ್ಕಾರ ಸ್ಥಳ ಮತ್ತು ಬ್ರಹ್ಮಾಂಡದ ಅರಿವು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ವೈಜ್ಞಾನಿಕ ಪರಿಹಾರವನ್ನು ಸರಳವಾಗಿ ಕಂಡುಕೊಳ್ಳಲು ಹೆಚ್ಚಿನ ಒತ್ತು ನೀಡಬೇಕು. ಸಾರ್ವತ್ರಿಕವಾಗಿರುವ ನಿಗದಿತ ಸಮಸ್ಯೆ ಹಾಗೂ ಪರಿಹಾರಕ್ಕೆ ಪ್ರಥಮಾದ್ಯತೆ ನೀಡಿ ಉಜ್ವಲ ಭಾರತ ನಿರ್ಮಾಣಕ್ಕೆ ನಾಂದಿ ಹಾಡಬೇಕೆಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ವಿದ್ಯಾರ್ಥಿ ಸಮುದಾಯ ವೈಜ್ಞಾನಿಕ ಚಿಂತನೆ, ಆಸಕ್ತಿ ಹಾಗೂ ಉತ್ಸಾಹ ಹೊಂದಿರಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಪ್ರೌಢಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಈ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ಕರೆದುಕೊಂಡು ಬಂದು ಸೂಕ್ತ ವೈಜ್ಞಾನಿಕ ಮಾರ್ಗದರ್ಶನ ನೀಡಬೇಕು. ಈ ಕುರಿತು ಆದೇಶವನ್ನೇ ಹೊರಡಿಸಲಾಗುವುದೆಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಡಾ. ಎ. ವೆಂಕಟರಮಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಕ್ಕಿಂತ ಜ್ಞಾನ ಗಳಿಕೆ ಅತೀ ಮುಖ್ಯ. ಸಾಮಾಜಿಕ ಬೇಡಿಕೆಗನುಗುವಾಗಿ ವಿದ್ಯಾರ್ಥಿಗಳು ವೈಜ್ಞಾನಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕೆಂದರು.
ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದ ನಿರ್ದೇಶಕ ಕೆ.ಜಿ. ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ಈಗ ರಾಷ್ಟ್ರದಲ್ಲಿ 27 ವಿಜ್ಞಾನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರವು ಇಡೀ ರಾಷ್ಟ್ರದಲ್ಲೇ ಪ್ರಾರಂಭವಾದ 2ನೇ ಕೇಂದ್ರವಾಗಿದೆ ಹಾಗೂ 1984ರಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿದೆ. ಕಲಬುರಗಿಯಲ್ಲಿ ಪ್ರಾರಂಭಿಸಲಾದ ರಾಷ್ಟ್ರದ ಇನ್ನೋವೇಶನ್ ಹಬ್ 18ನೇ ಹಾಗೂ ಕರ್ನಾಟಕದ 2ನೆಯದಾಗಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದರು.
ಜಿಲ್ಲಾ ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನ ಅಧಿಕಾರಿ ಸಿ.ಎನ್. ಲಕ್ಷ್ಮೀನಾರಾಯಣ ಸ್ವಾಗತಿಸಿದರು ಹಾಗೂ ಶಿಕ್ಷಣಾಧಿಕಾರಿ ಆರ್. ವೆಂಕಟೇಶ್ವರಲು ವಂದಿಸಿದರು.

ಜುಲೈ 3ರಂದು ಸ್ಥಾಯಿ ಸಮಿತಿಗಳ ಚುನಾವಣೆ
********************************************
ಕಲಬುರಗಿ,ಜೂನ್.29.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಚುನಾಯಿಸುವ ಸಾಮಾನ್ಯ ಸಭೆಯನ್ನು 2017ರ ಜುಲೈ 3ರಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್)ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಚುನಾವಣೆಯ ಅಧ್ಯಕ್ಷಾಧಿಕಾರಿ ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ ತೆರಿಗೆ ಹಣಕಾಸು ಮತ್ತು ಮೇಲ್ಮನವಿಗಳ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಈಗಾಗಲೇ ಚುನಾವಣೆ ನಡೆಸಲಾಗಿದೆ. ಉಳಿದ ಎರಡು ಸ್ಥಾಯಿ ಸಮಿತಿಗಳಾದ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಮುಂದೂಡಲಾಗಿತ್ತು. ಈ ಎರಡೂ ಸಮಿತಿಗಳಿಗೆ ಚುನಾವಣೆ ನಡೆಸುವುದು ಅವಶ್ಯವಾಗಿದ್ದರಿಂದ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಚುನಾಯಿಸುವ ಸಾಮಾನ್ಯ ಸಭೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರು ನಿಗದಿತ ಸಮಯಕ್ಕೆ ಹಾಜರಿರಬೇಕೆಂದು ಪ್ರಾದೇಶಿಕ ಆಯುಕ್ತರು ಕೋರಿದ್ದಾರೆ.
ಜುಲೈ 1ರಂದು ಬಿ.ಎಲ್.ಓ.ಗಳ ಸಭೆ
ಕಲಬುರಗಿ,ಜೂ.29.(ಕ.ವಾ.)-ಕಲಬುರಗಿ ಜಿಲ್ಲೆಯ 43-ಗುಲಬರ್ಗಾ (ಗ್ರಾಮೀಣ), 44-ಗುಲಬರ್ಗಾ (ದಕ್ಷಿಣ) ಹಾಗೂ 45-ಗುಲಬರ್ಗಾ (ಉತ್ತರ) ವಿಧಾಸಭಾ ಕ್ಷೇತ್ರಗಳ ಬಿ.ಎಲ್.ಓ.ಗಳ ಸಭೆಯು 2017ರ ಜುಲೈ 1ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ಡಾ. ಎಸ್.ಎಂ ಪಂಡಿತ ರಂಗಮಂದಿರದಲ್ಲಿ ಜರುಗಲಿದೆ. ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಅವರ ಅಧ್ಯಕ್ಷತೆ ವಹಿಸುವರು ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಮೇಲ್ಕಂಡ ಮೂರು ವಿಧಾನಸಭಾ ಕ್ಷೇತ್ರಗಳ ಬಿ.ಎಲ್.ಓ. ಗಳು ಸದರಿ ದಿನದಂದು ಸರಿಯಾದ ಸಮಯಕ್ಕೆ ಸಭೆಗೆ ಹಾಜರಾಗಬೇಕು. ಒಂದು ವೇಳೆ ಸಭೆಗೆ ಹಾಜರಾಗದಿದ್ದಲ್ಲಿ ಅಂತಹವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಅನಧಿಕೃತ ಮನೆಗಳ ಸಕ್ರಮಕ್ಕೆ ಅವಧಿ ವಿಸ್ತರಣೆ
**********************************************
ಕಲಬುರಗಿ,ಜೂನ್.29.(ಕ.ವಾ.)-ರಾಜ್ಯದ ಸರ್ಕಾರದ 2017ರ ಜೂನ್ 12ರ ಅಧಿಸೂಚನೆಯಂತೆ 2012ರ ಜನವರಿ 1ರ ಪೂರ್ವದಲ್ಲಿ ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ 30x40, 40x60 ಮತ್ತು 50x80 ವಾಸದ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 94ಸಿ ಯನ್ನು ಸೇರ್ಪಡೆ ಮಾಡಿ ಕಲ್ಪಿಸಿರುವ ಅವಕಾಶದಂತೆ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 108-ಕಿ ರಡಿಯಲ್ಲಿ 2017ರ ಜೂನ್ 12 ರಿಂದ ಜಾರಿಗೆ ಬರುವಂತೆ ಅರ್ಜಿ ಸಲ್ಲಿಸುವ ಕಾಲಾವಕಾಶವನ್ನು ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಈವರೆಗೆ ಅರ್ಜಿ ಸಲ್ಲಿಸದೇ ಇರುವವರು ಸಂಬಂಧಪಟ್ಟ ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ (ನೆಮ್ಮದಿ ಕೇಂದ್ರ) ನೋಂದಾಯಿಸಿಕೊಳ್ಳಬೇಕೆಂದು ಕಲಬುರಗಿ ಸಹಾಯಕ ಆಯುಕ್ತ ಎಂ. ರಾಚಪ್ಪ ತಿಳಿಸಿದ್ದಾರೆ.
ಕಾರ್ಪೋರೇಷನ್ ಮತ್ತು ಮುನ್ಸಿಪಾಲಿಟಿಗಳ ಹೊರ ವ್ಯಾಪ್ತಿಯ ಪರಿಮಿತಿಯ ದೂರದಿಂದ 10 ಕಿ.ಮೀ. ಹಾಗೂ ಪಟ್ಟಣ ಪಂಚಾಯತಿ ಹೊರ ವ್ಯಾಪ್ತಿಯ ಪರಿಮಿತಿಯ ದೂರದಿಂದ 3 ಕಿ.ಮೀ.ವರೆಗೆ ಒಳಪಡುವ ಪ್ರದೇಶಗಳಲ್ಲಿ (ಅಂದರೆ ಬಫರ್ ಜೋನ್) ವಾಸದ ಮನೆಗಳನ್ನು ಸಕ್ರಮ ಮಾಡುವಾಗ 30x40 ಚದುರ ಅಡಿವರೆಗೆ ನಿರ್ಮಿಸಿದ ಮನೆಗಳನ್ನು ಸಹ ಪರಿಗಣಿಸಲು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 94-ಸಿಸಿ ಗೆ ಸಹ ತಿದ್ದುಪಡಿಯನ್ನು ತರಲಾಗಿದೆ ಹಾಗೂ ಅದರಂತೆ ನಿಯಮಗಳನ್ನು ಸಹ ರೂಪಿಸಲಾಗಿದೆ. ಸದರಿ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಸಾಂಕೇತಿಕ ದರವನ್ನು ಸಹ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಭೀಮಾಶಂಕರ ಅಧಿಕಾರ ಸ್ವೀಕಾರ
***************************************************************
ಕಲಬುರಗಿ,ಜೂನ್.29.(ಕ.ವಾ.)-ಕಲಬುರಗಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಭೀಮಾಶಂಕರ ತೆಗ್ಗೆಳ್ಳಿ ಗುರುವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗೊಳಸಾರ ಗ್ರಾಮದವರಾದ ಶ್ರೀಯುತರು 2010ನೇ ಸಾಲಿನ ಕೆ.ಎ.ಎಸ್. ಅಧಿಕಾರಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಪ್ರೊಬೇಷನರಿ ಸಹಾಯಕ ಆಯುಕ್ತರಾಗಿದ್ದು, ನಂತರ ಕಲಬುರಗಿಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕರ, ಭೂಸ್ವಾಧೀನ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಸೇಡಂ ಸಹಾಯಕ ಆಯುಕ್ತರಾಗಿದ್ದ ಭೀಮಾಶಂಕರ ನಂತರ ಪ್ರವಾಸೋದ್ಯಮ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಯ ಕಾರ್ಯಾಭಾರ ವಹಿಸಿಕೊಂಡಿದ್ದಾರೆ.

ದ್ವಿತೀಯ ಪಿ.ಯು.ಸಿ. ಪೂರಕ ಪರೀಕ್ಷೆ: ನಿಷೇಧಾಜ್ಞೆ
***********************************************
ಕಲಬುರಗಿ,ಜೂನ್.29.(ಕ.ವಾ.)-ಕಲಬುರಗಿ ಜಿಲ್ಲೆಯಾದ್ಯಂತ ಜುಲೈ 8ರವರೆಗೆ ದ್ವಿತೀಯ ಪಿ.ಯು.ಸಿ. ಪೂರಕ ಪರೀಕ್ಷೆಗಳು ಜಿಲ್ಲೆಯ ಒಟ್ಟು 18 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಪ್ರಯುಕ್ತ 1973ರ ಸಿಆರ್.ಪಿ.ಸಿ. ಕಲಂ 144ರ ಅನ್ವಯ ಸದರಿ ದಿನಗಳಂದು ಕಲಬುರಗಿ ಜಿಲ್ಲೆಯಲ್ಲಿನ ಎಲ್ಲ 18 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಸಮಯದಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗಳು ಸದರಿ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಉಜ್ವಲ್‍ಕುಮಾರ ಘೋಷ್ ಅವರು ಆದೇಶ ಹೊರಡಿಸಿದ್ದಾರೆ.
ಅದೇ ರೀತಿ ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಕಲಂ-35(ಸಿ)ರಡಿ ಈ 18 ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿರುವ ಎಲ್ಲ ಜಿರಾಕ್ಸ್, ಪುಸ್ತಕ ಅಂಗಡಿ ಮುಂತಾದವನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ಪರೀಕ್ಷಾ ಸಮಯದಲ್ಲಿ ಸಂಬಂಧಪಟ್ಟ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಬೇರೇ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಯಾವುದೇ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಮೊಬೈಲ್ ಫೋನ್, ಪೇಜರ್, ಬ್ಲ್ಯೂಟೂತ್ ಹಾಗೂ ವೈರಲೇಸ್ ಸೆಟ್‍ಗಳು ಸೇರಿದಂತೆ ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉಪಯೋಗಿಸುವುದನ್ನು ನಿಷೇಧಿಸಿದ್ದಾರೆ.

ಎ.ಸಿ.ಬಿ. ಅಧಿಕಾರಿಗಳಿಂದ ಕುಂದುಕೊರತೆಗಳ ಅಹವಾಲು ಸ್ವೀಕಾರ
*****************************************************************
ಕಲಬುರಗಿ,ಜೂನ್.29.(ಕ.ವಾ.)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿಗಳು ಕಲಬುರಗಿ ಜಿಲ್ಲೆಯ ಕೆಳಕಂಡ ತಾಲೂಕುಗಳಿಗೆ 2017ರ ಜೂನ್ 30ರಂದು ಶುಕ್ರವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಕಲಬುರಗಿ ಭ್ರಷ್ಟಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಉಪ ಅಧೀಕ್ಷಕ ಸಂತೋಷ ಬನ್ನಟ್ಟಿ ತಿಳಿಸಿದ್ದಾರೆ. ಭೇಟಿ ನೀಡುವ ಅಧಿಕಾರಿಗಳ ಹೆಸರು, ತಾಲೂಕಿನ ಹೆಸರು, ಮೊಬೈಲ್ ಸಂಖ್ಯೆ, ದಿನಾಂಕ, ಸಮಯ ಹಾಗೂ ಅಹವಾಲು ಸ್ವೀಕರಿಸುವ ಸ್ಥಳದ ವಿವರ ಇಂತಿದೆ.
ಕಲಬುರಗಿ ಎ.ಸಿ.ಬಿ. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ ಕಲ್ಲದೇವರ-(ಮೊಬೈಲ್ ಸಂ. 9480803610/9448828787) ಅಂದು ಬೆಳಗಿನ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಚಿತ್ತಾಪುರ ತಾಲೂಕಿ ಕಾಳಗಿ ಪ್ರವಾಸಿ ಮಂದಿರ. ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ಚಿತ್ತಾಪುರ ತಾಲೂಕಿನ ಮಾಡಬೂಳ ಪ್ರವಾಸಿ ಮಂದಿರ. ಕಲಬುರಗಿ ಎ.ಸಿ.ಬಿ. ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನ ಡಪ್ಪಿನ್ (ಮೊಬೈಲ್ ಸಂ. 9480803609/9663548820) ಅಂದು ಬೆಳಗಿನ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಆಳಂದ ತಾಲೂಕು ಪಂಚಾಯಿತಿ ಸಭಾಂಗಣ.

ಬಿದಾಯಿ ಯೋಜನೆಗಾಗಿ 11.64ಕೋಟಿ ರೂ.ಸಹಾಯಧನ ಮಂಜೂರಾತಿ
**********************************************************************
ಕಲಬುರಗಿ,ಜೂ.29.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಬಿದಾಯಿ ಯೋಜನೆಯಡಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 2323 ಫಲಾನುಭವಿಗಳಿಗೆ 11.64 ಕೋಟಿ ರೂ. ಸಹಾಯಧನ ಮಂಜೂರು ಮಾಡಲಾಗಿದೆ. ಈ ಪೈಕಿ ಮುಸ್ಲಿಂ ಸಮುದಾಯದ 2291, ಕ್ರಿಶ್ಚಿಯನ್ ಸಮುದಾಯದ 12 ಮತ್ತು ಜೈನ್ ಸಮುದಾಯದ 20 ಫಲಾನುಭವಿಗಳು ಸದರಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮೆಹಬೂಬ್ ಪಾಷಾ ಕಾರಟಗಿ ತಿಳಿಸಿದ್ದಾರೆ. “ಬಿದಾಯಿ” ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಅಲ್ಪಸಂಖ್ಯಾತರ ಸಮುದಾಯದವರ ಅವಿವಾಹಿತ ಹೆಣ್ಣುಮಕ್ಕಳು, ವಿಧವೆಯರು, ವಿಚ್ಛೇದಿತರ ಮದುವೆ ವಿವಾಹ ಖರ್ಚು ವೆಚ್ಚ ಮತ್ತಿತರ ಅಗತ್ಯ ಸಾಮಗ್ರಿ ಖರೀದಿಸಲು ರಾಜ್ಯ ಸರ್ಕಾರದಿಂದ 50000 ರೂ. ಸಹಾಯಧನ ನೀಡಲಾಗುವುದು.
ಕಲಬುರಗಿ ಎಂ.ಎಸ್.ಕೆ. ಮಿಲ್ ಬಡಾವಣೆಯಲ್ಲಿ ವಾಸಿಸುವ ಇಕ್ಬಾಲ್ ಅಹ್ಮದ್ ಬಾಡಿಗೆ ಮನೆಯಲ್ಲಿ ನಾಲ್ಕು ಮಕ್ಕಳೊಂದಿಗೆ ವಾಸವಾಗಿದ್ದು, ಟೇಲರಿಂಗ್ ಮೂಲಕ ಜೀವನ ನಡೆಸುತ್ತಿದ್ದರು. ಬಿದಾಯಿ ಯೋಜನೆಯಡಿ 50000 ರೂ. ಆರ್ಥಿಕ ನೆರವು ಪಡೆದು ಮೊದಲನೇ ಮಗಳಾದ ಆಲಿಯಾ ಬೇಗಂ ಅವರ ಮದುವೆಯನ್ನು 2015ರ ಮಾರ್ಚ್ 6ರಂದು ಮಾಡಿರುತ್ತಾರೆ. ಏಳನೇ ತರಗತಿಯವರೆಗೆ ಓದಿದ ಆಲಿಯಾ ಬೇಗಂ ಜಫರಾಬಾದ್‍ದಲ್ಲಿ ವಾಸಿಸುವ ಅಖೀಲಮಿಯಾರೊಂದಿಗೆ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾಳೆ. “ಆರ್ಥಿಕವಾಗಿ ಅಲ್ಪಸಂಖ್ಯಾತ ಬಡ ಜನರ ಹೆಣ್ಣು ಮಕ್ಕಳ ಮದುವೆ ಮಾಡಲು ಬಿದಾಯಿ ಯೋಜನೆ ಹೆಚ್ಚು ಲಾಭಕಾರಿಯಾಗಿದೆ” ಎಂದು ಇಕ್ಬಾಲ್ ಅಹ್ಮದ್ ಹೇಳುತ್ತಾರೆ.
ಕಲಬುರಗಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕ್ಷೇಮಾಭ್ಯುದಯದ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರೆಸಲು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರೋತ್ಸಾಹಧನ, ವಿದ್ಯಾಸಿರಿ ಯೋಜನೆ, ಕೌಶಲ್ಯ ತರಬೇತಿ ಮತ್ತು ಸಿ.ಇ.ಟಿ. ಕೋಚಿಂಗ್ ತರಬೇತಿ ಹಮ್ಮಿಕೊಳ್ಳಲಾಗಿದೆ. ಇದಲ್ಲದೇ ಚರ್ಚುಗಳ ನವೀಕರಣಕ್ಕಾಗಿ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಕಳೆದ ನಾಲ್ಕು ವರ್ಷದಲ್ಲಿ 4.38 ಕೋಟಿ ರೂ. ಮಂಜೂರು ಮಾಡಲಾಗಿದೆ. ಇದರಿಂದ ಒಟ್ಟು 366 ಫಲಾನುಭವಿಗಳು ಸದರಿ ಯೋಜನೆಗಳ ಲಾಭ ಪಡೆದಿರುತ್ತಾರೆ. ಮುಸ್ಲಿಂ ಸಮುದಾಯದವರು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅನುವಾಗುವಂತೆ ಶಾದಿಮಹಲ್ ನಿರ್ಮಿಸಲು ಜಿಲ್ಲೆಯ 34 ಸಂಸ್ಥೆಗಳಿಗೆ 6.82 ಕೋಟಿ ರೂ. ಮಂಜೂರು ಮಾಡಲಾಗಿದೆ.
ಇದಲ್ಲದೆ ನಾಲ್ಕು ವರ್ಷದಲ್ಲಿ ಜಿಲ್ಲೆಯಲ್ಲಿ ಏಳನೇ ಮತ್ತು ಹತ್ತನೇ ತರಗತಿಗಳಲ್ಲಿ ಓದುತ್ತಿರುವ 10117 ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅನುವಾಗುವಂತೆ ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯಗಳ ವಿಶೇಷ ಬೋಧನೆಯನ್ನು ಪರಿಹಾರ ಕೇಂದ್ರಗಳ ಮೂಲಕ 13441 ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಇದಕ್ಕಾಗಿ 2.39 ಕೋಟಿ ರೂ. ಖರ್ಚು ಮಾಡಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಾಗೂ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಒಟ್ಟು 40 ವಸತಿ ನಿಲಯ, 7 ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ 01 ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ವಸತಿ ಕಾಲೇಜು ಹಾಗೂ 01 ಸರ್ಕಾರಿ ಮುಸ್ಲಿಂ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿವೆ. 15 ಮೆಟ್ರಿಕ್ ಪೂರ್ವ ಮತ್ತು 12 ಮೆಟ್ರಿಕ್ ನಂತರದ ವಸತಿ ನಿಲಯ, 3 ಮೊರಾರ್ಜಿ ದೇಸಾಯಿ ವಸತಿ ನಿಲಯ, 1 ಮುಸ್ಲಿಂ ಸರ್ಕಾರಿ ವಸತಿ ಶಾಲೆ ಹಾಗೂ 1 ಮೊರಾರ್ಜಿ ದೇಸಾಯಿ ಮಾದರಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲಾಗಿದೆ. ಇವುಗಳಿಂದ ಒಟ್ಟು 3810 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪ್ರಯೋಜನ ಪಡೆದಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ
******************************************************************
ಕಲಬುರಗಿ,ಜೂನ್.29.(ಕ.ವಾ.)-ಕಲಬುರಗಿ ನಗರದ 06 ಪರೀಕ್ಷಾ ಕೇಂದ್ರಗಳಲ್ಲಿ ಸ್ನಾತಕೋತ್ತರ (ಪಿ.ಜಿ.ಸಿ.ಇ.ಟಿ.) ಮತ್ತು ಡಿಪ್ಲೋಮಾ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜುಲೈ 1 ಮತ್ತು 2ರಂದು ಬೆಳಗಿನ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ಗಂಟೆಯವರೆಗೆ ನಡೆಸಲಾಗುತ್ತಿದೆ. ಈ ಪರೀಕ್ಷೆಗಳು ಸುಗಮವಾಗಿ ಮತ್ತು ಸೂಸೂತ್ರವಾಗಿ ಜರುಗಲು ಅನುಕೂಲವಾಗುಂತೆ ಹಾಗೂ ಯಾವುದೇ ಅವ್ಯವಹಾರ, ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 1973ರ ಸಿ.ಆರ್.ಪಿ.ಸಿ. 144 ಕಲಂ ಅನ್ವಯ ಪರೀಕ್ಷಾ ಕೇಂದ್ರಗಳ 200 ಮೀಟರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಆಶೋಕ ಹಿರೋಳ್ಳೆ ಅವರು ಆದೇಶ ಹೊರಡಿಸಿದ್ದಾರೆ.
ಈ ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಸೇರಿದಂತೆ ಪರೀಕ್ಷಾ ಸಿಬ್ಬಂದಿಯವರು ಮೊಬೈಲ್ ಫೋನ್, ಇತರೆ ಚಿಕ್ಕಗಾತ್ರದ ಪುಸ್ತಕ, ಇತರೆ ಎಲೆಕ್ಟ್ರಾನಿಕ್ಸ್ ವಸ್ತುಗಳು ಹೊಂದದಂತೆ ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿರುವ ಎಲ್ಲ ಜಿರಾಕ್ಸ್ ಮತ್ತು ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆ ಸಹ ಅದೇಶ ಹೊರಡಿಸಿದ್ದಾರೆ.

ಜುಲೈ 5ರಂದು ವಾಹನದ ಬಹಿರಂಗ ಹರಾಜು
*********************************************
ಕಲಬುರಗಿ,ಜೂನ್.29.(ಕ.ವಾ.)-ಕಲಬುರಗಿ ರೈಲ್ವೆ ಸ್ಟೇಶನ್ ಹತ್ತಿರದ ವಾಣಿಜ್ಯ ತೆರಿಗೆಗಳ ಪೂರ್ವ ವಲಯದ ವಾಣಿಜ್ಯ ತೆರಿಗಳ ಜಂಟಿ ಆಯುಕ್ತರ ಕಚೇರಿ (ಜಾರಿ)ಯಲ್ಲಿನ ವಾಹನ ಸಂಖ್ಯೆ ಕೆಎ-32 ಜಿ-233 ಟಾಟಾ ಸುಮೋ ವಾಹನವನ್ನು 2017ರ ಜುಲೈ 5ರಂದು ಮಧ್ಯಾಹ್ನ 3 ಗಂಟೆಗೆ ಸದರಿ ಕಚೇರಿಯಲ್ಲಿಯೇ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದೆಂದು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು ತಿಳಿಸಿದ್ದಾರೆ.
ಈ ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು 5000 ರೂ.ಗಳ ಠೇವಣಿ ಇಡಬೇಕು. ಷರತ್ತು ಮತ್ತು ನಿಬಂಧನೆಗಳು ಮತ್ತು ವಾಹನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಜುಲೈ 1ರಂದು ಸಿಂಗಲ್ ವಿಂಡೋ ಸಮಿತಿ ಸಭೆ
**********************************************
ಕಲಬುರಗಿ,ಜೂನ್.29.(ಕ.ವಾ.)-ಕರ್ನಾಟಕ ಖಾಸಗಿ ವೈದ್ಯಕಿಯ ನೋಂದಣಿ/ ನವೀಕರಣ ಕುರಿತು ಈಗಾಗಲೇ ಅರ್ಜಿ ಸಲ್ಲಿಸಿದ್ದು, ಕಾರಣಾಂತರಗಳಿಂದ ನೋಂದಣಿ/ನವೀಕರಣ ಸಿಗದೇ ಇರುವ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅರ್ಜಿದಾರರು ತಮ್ಮ ಎಲ್ಲ ದಾಖಲಾತಿಗಳೊಂದಿಗೆ 2017ರ ಜುಲೈ 1 ರಂದು ಸಂಜೆ 4 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗುವ ಸಿಂಗಲ್ ವಿಂಡೋ ಸಮಿತಿ ಸಭೆಗೆ ಹಾಜರಾಗಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ತಿಳಿಸಿದ್ದಾರೆ.

ಪ್ರವಾಸೋದ್ಯಮ ಸಚಿವರ ಪ್ರವಾಸ
**********************************
ಕಲಬುರಗಿ,ಜೂನ್.29.(ಕ.ವಾ.)-ಪ್ರವಾಸೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ರಾಜ್ಯ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವÀ ಪ್ರಿಯಾಂಕ ಖರ್ಗೆ ಅವರು ಬೆಂಗಳೂರಿನಿಂದ ಸೋಲಾಪುರ-ಯಶವಂತಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಜುಲೈ 1ರಂದು ಬೆಳಗಿನ 6.25 ಗಂಟೆಗೆ ಕಲಬುರಗಿಗೆ ಆಗಮಿಸುವರು. ಕಲಬುರಗಿಯಿಂದ ಚಿತ್ತಾಪುರಕ್ಕೆ ಪ್ರಯಾಣಿಸಿ ಅಂದು ಬೆಳಗಿನ 10.30 ರಿಂದ ಸಂಜೆ 5.30 ಗಂಟೆಯವರೆಗೆ ನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು.










ಜುಲೈ 2ರಂದು ಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸಿ, ಬೆಳಿಗ್ಗೆ 10.30 ಗಂಟೆಗೆ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಯಾದಗಿರಿ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದಿಂದ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸುವರು. ಯಾದಗಿರಿಯಿಂದ ಕಲಬುರಗಿಗೆ ಆಗಮಿಸಿ, ಅಂದು ರಾತ್ರಿ 9.05 ಗಂಟೆಗೆ ಕಲಬುರಗಿಯಿಂದ ಸೋಲಾಪುರ-ಯಶವಂತಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವರು.


ಹೀಗಾಗಿ ಲೇಖನಗಳು NEWS AND PHTOTO DATE; 29--06--2017

ಎಲ್ಲಾ ಲೇಖನಗಳು ಆಗಿದೆ NEWS AND PHTOTO DATE; 29--06--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHTOTO DATE; 29--06--2017 ಲಿಂಕ್ ವಿಳಾಸ https://dekalungi.blogspot.com/2017/06/news-and-phtoto-date-29-06-2017.html

Subscribe to receive free email updates:

0 Response to "NEWS AND PHTOTO DATE; 29--06--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ