ಶೀರ್ಷಿಕೆ : NEWS AND PHOTO DATE; 15-06-2017
ಲಿಂಕ್ : NEWS AND PHOTO DATE; 15-06-2017
NEWS AND PHOTO DATE; 15-06-2017
ಯುವಕರಲ್ಲಿ ಒತ್ತಡ ನಿವಾರಣೆಗೆ ಯೋಗ ಮದ್ದು
********************************************
ಕಲಬುರಗಿ,ಜೂ.15.(ಕ.ವಾ.)-ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳು ಯೋಗಕ್ಕೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಒತ್ತಡದಿಂದ ಮುಕ್ತರಾಗಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು
ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 3ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಹಮ್ಮಿಕೊಂಡಿದ್ದ ಯೋಗ ನಡಿಗೆ-ಆರೋಗ್ಯದ ಕಡೆಗೆ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದಿನಂಪ್ರತಿ ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಮಾನಸಿಕ ಹಾಗೂ ಶಾರೀರಿಕ ವೃದ್ಧಿಯಾಗುತ್ತದೆ. ಯೋಗಾಭ್ಯಾಸ ಮಾಡಿ ಆರೋಗ್ಯಯುತ ಭಾರತ ನಿರ್ಮಾಣಕ್ಕೆ ಎಲ್ಲರೂ ಪ್ರಯತ್ನಿಸಬೇಕು. ಯೋಗಕ್ಕೆ ವಿಶ್ವಮಟ್ಟದಲ್ಲಿ ಮಾನ್ಯತೆ ದೊರೆತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಗಕ್ಕೆ ಪ್ರೋತ್ಸಾಹಿಸುತ್ತಿವೆ. ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಯೋಗದ ಅರಿವು ಮೂಡಿಸಲು ಒಂದು ವಾರಗಳ ಕಾಲ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ|| ನಾಗರತ್ನ ಚಿಮ್ಮಲಗಿ ಮಾತನಾಡಿ, ಯೋಗವು ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುತ್ತದೆ. ದೇಹವನ್ನು ಮನಸ್ಸು ಮತ್ತು ಆತ್ಮದ ಜೊತೆಗೆ ಬೆರೆಯುವುದೇ ಯೋಗವಾಗಿದೆ. ಯೋಗದಿಂದ ಖಿನ್ನತೆ ದೂರವಾಗಿ ಆತ್ಮಹತ್ಯೆಗಳಂಥಹ ಘಟನೆಗಳು ಕಡಿಮೆಯಾಗುತ್ತವೆ. ಮನೋ ದೌರ್ಬಲ್ಯ ದೂರವಾಗುತ್ತದೆ ಎಂದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಜಾಥಾ ಉದ್ಘಾಟಿಸಿದರು. ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಕಲಬುರಗಿ ಮತ್ತು ವಿಕಾರಾಬಾದ ಬ್ರಹ್ಮ ಕುಮಾರೀಸ್ ನಿರ್ದೇಶಕಿ ರಾಜಯೋಗಿನಿ ಡಿ.ಕೆ.ರತ್ನಾ, ಆಯುಷ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಾಥಾದಲ್ಲಿ ಹಿಂಗುಲಾಂಬಿಕಾ ಆಯುರ್ವೇದ ಕಾಲೇಜು ಮತ್ತು ಬಿ.ಇಡಿ. ಕಾಲೇಜು ವಿದ್ಯಾರ್ಥಿಗಳು, ಡಾ|| ಮಲಕರೆಡ್ಡಿ ಹೋಮಿಯೋಪಥಿ ಕಾಲೇಜಿನ ವಿದ್ಯಾರ್ಥಿಗಳು, ಆಯುಷ್ ವೈದ್ಯರು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ನವೆಂಬರ್ ಅಂತ್ಯದೊಳಗೆ ಫಲಾನುಭವಿಗಳ ಆಯ್ಕೆಗೆ ಸೂಚನೆ
************************************************************
ಕಲಬುರಗಿ,ಜೂ.15.(ಕ.ವಾ.)-ಸರ್ಕಾರವು ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ (ಎಸ್‍ಸಿಪಿ-ಟಿಎಸ್‍ಪಿ) ಕಾರ್ಯಕ್ರಮಗಳ ಅನುಷ್ಠಾನಕ್ಕೆ ಇಲಾಖಾವಾರು ಅನುದಾನ ನಿಗದಿಪಡಿಸಿದೆ. ಈ ಯೋಜನೆಯ ಫಲಾನುಭವಿಗಳನ್ನು ನವೆಂಬರ್ ಅಂತ್ಯದೊಳಗಾಗಿ ಆಯ್ಕೆ ಮಾಡಿ ಯೋಜನೆಯ ಲಾಭ ದೊರಕಿಸಬೇಕೆಂದು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಸೂಚಿಸಿದರು.
ಅವರು ಗುರುವಾರ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಅಧಿನಿಯಮ-2013 ಸೆಕ್ಷನ್-11ರ ಪ್ರಕಾರ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷ ಅಥವಾ ಈ ಹಿಂದಿನ ವರ್ಷಗಳಲ್ಲಿ ಎಸ್‍ಸಿಪಿ-ಟಿಎಸ್‍ಪಿ ಕಾರ್ಯಕ್ರಮಗಳಿಗಾಗಿ ಇಲಾಖೆಗಳಿಗೆ ನಿಗದಿಪಡಿಸಿರುವ ಅನುದಾನ ಲ್ಯಾಪ್ಸ್ ಆಗುವುದಿಲ್ಲ. ಕಾರಣ ಅಧಿಕಾರಿಗಳು ಎಸ್‍ಸಿಪಿ-ಟಿಎಸ್‍ಪಿ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಲೊಕೋಪಯೋಗಿ ಇಲಾಖೆಯವರು ಪರಿಶಿಷ್ಟ ಜಾತಿ, ಜನಾಂಗ ಮತ್ತು ಗಿರಿಜನರಿರುವ ತಾಂಡಾ, ದೊಡ್ಡಿ, ಕೊಳಚೆ ಪ್ರದೇಶಗಳನ್ನು ಗುರುತಿಸಿ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕು. ಕಲಬುರಗಿ ಜಿಲ್ಲೆಯಲ್ಲಿರುವ ವಸತಿ ಮತ್ತು ಮನೆ ರಹಿತ ಪರಿಶಿಷ್ಟ ಜಾತಿ ಮತ್ತು ಜನಾಂಗದವರನ್ನು ಗುರುತಿಸಿ ಅವರಿಗೆ ಮನೆಗಳನ್ನು ಮಂಜೂರು ಮಾಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಗಿರಿಜನರು ತೋಟಗಾರಿಕೆಯಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿರುವ ಜಲಾಶಯಗಳ ಅಚ್ಟುಕಟ್ಟು ಪ್ರದೇಶ ಮತ್ತು ನೀರಾವರಿ ಪ್ರದೇಶಗಳಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳನ್ನು ಗುರುತಿಸಿ ಅವರು ನೂತನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ಹಾಗೆ ಮನ ಪರಿವರ್ತನೆ ಮಾಡಬೇಕು. ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲು ಅವಕಾಶವಿರುವ ತೋಟಗಾರಿಕೆ ಬೆಳೆಗಳ ಬಗ್ಗೆ ಅಧ್ಯಯನ ಮಾಡಬೇಕು. ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳಿಂದ ಲಾಭ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ಕೃಷಿ ಮತ್ತು ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ನಿಗಾವಹಿಸಬೇಕೆಂದು ತಿಳಿಸಿದರು.
ಪ್ರತಿ ವರ್ಷ ಬೇಸಿಗೆಯಲ್ಲಿ ತಾಂಡಾ ಮತ್ತು ಕೇರಿಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗುತ್ತದೆ. ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಕಾರ್ಯಕ್ರಮಗಳಲ್ಲಿ ಈ ಪ್ರದೇಶಗಳಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ದೊಡ್ಡ ಪ್ರಮಾಣದ ಕುಡಿಯುವ ನೀರಿನ ಯೋಜನೆ ಕೈಗೊಂಡಾಗ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸವಾಗಿರುವ ಪ್ರದೇಶಗಳಿಗೂ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳಬೇಕೆಂದರು.
ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿರುವ ಅಪೌಷ್ಠಿಕ ಮಕ್ಕಳ ಪೋಷಕರು ಸ್ವಯಂ ಪ್ರೇರಿತರಾಗಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಅಪೌಷ್ಠಿಕತೆ ನಿವಾರಣಾ ಕೇಂದ್ರಕ್ಕೆ ದಾಖಲಾಗುತ್ತಿಲ್ಲ. ಅಪೌಷ್ಠಿಕ ಮಕ್ಕಳ ಪಾಲಕರೊಂದಿಗೆ ಅಧಿಕಾರಿಗಳು ಸಮಾಲೋಚಿಸಿ ಮಕ್ಕಳ ಅಪೌಷ್ಠಿಕತೆಯನ್ನು ತೊಡಗಿಸಬೇಕು. ಜಿಲ್ಲೆಯಲ್ಲಿ ಸೇಡಂ, ಜೇವರ್ಗಿ, ವಾಡಿ, ಚಿಂಚೋಳಿ ಮತ್ತು ಚಿತ್ತಾಪುರಗಳಲ್ಲಿ ಅಪೌಷ್ಠಿಕ ನಿವಾರಣಾ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಬೇಕು. ಜಿಲ್ಲೆಯಲ್ಲಿ 947 ಅಂಗನವಾಡಿ ಕೇಂದ್ರಗಳ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿದ್ದು, ಇಲ್ಲಿನ ಅಂಗನವಾಡಿ ಮಕ್ಕಳಿಗೆ ಪೌಷ್ಠಿಕರನ್ನಾಗಿಸಲು ಒಳ್ಳೆಯ ಆಹಾರ ನೀಡಬೇಕೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್. ರಾಜಪ್ಪ, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷರ ಪ್ರವಾಸ
****************************************
ಕಲಬುರಗಿ,ಜು.26.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರು ಬೆಂಗಳೂರಿನಿಂದ ಕಾರಿನ ಮೂಲಕ ಜುಲೈ 17ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಕಲಬುರಗಿಯಿಂದ ಯಾದಗಿರಿ ಜಿಲ್ಲೆಯ ಬೆಳಗುಂದಿಗೆ ಗ್ರಾಮಕ್ಕೆ ಪ್ರಯಾಣಿಸಿ, ಓವರ್‍ಹೆಡ್ ಟ್ಯಾಂಕಿನ ಶಿಲಾನ್ಯಾಸ ಕಾರ್ಯಕ್ರಮ, ಅಂಬಿಗರ ಚೌಡಯ್ಯ ಪುತ್ಥಳಿ ಅನಾವರಣ ಹಾಗೂ ಗಡಿ ಗ್ರಾಮಗಳ ಸಾರ್ವಜನಿಕರನ್ನು ಭೇಟಿ ಮಾಡುವರು. ರಾತ್ರಿ ಬೆಳಗುಂದದಿಂದ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಜೂನ್ 18ರಂದು ಕಲಬುರಗಿಯಿಂದ ಯಾದಗಿರಿಗೆ ಪ್ರಯಾಣಿಸಿ, ಗಡಿ ಗ್ರಾಮಗಳ ಹಾಗೂ ಸಾರ್ವಜನಿಕರನ್ನು ಭೇಟಿ ಮಾಡಿ ಅದೇ ದಿನ ಮಧ್ಯಾಹ್ನ 3 ಗಂಟೆಗೆ ಯಾದಗಿರಿಯಿಂದ ಬೆಂಗಳೂರಿಗೆ ಪ್ರಯಾಣಿಸುವರು.
ವಸತಿ ನಿಲಯ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ
***************************************************************
ಕಲಬುರಗಿ,ಜೂ.15.(ಕ.ವಾ.)-ಕಲಬುರಗಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಸತಿ ನಿಲಯಗಳ 2017-18ನೇ ಸಾಲಿನ ಪ್ರವೇಶಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅರ್ಹ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ತಿತಿತಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟಿನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಸತಿ ನಿಲಯಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಊಟ, ವಸತಿ ವ್ಯವಸ್ಥೆ ಮತ್ತು ಇತರೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು 2017-18ನೇ ಸಾಲಿನಿಂದ ವಸತಿ ನಿಲಯಗಳ ಆಯ್ಕೆ ಪ್ರಕ್ರಿಯೆಯನ್ನು ಗಣಕೀಕರಣಗೊಳಿಸಿರುವ ಪ್ರಯುಕ್ತ 2017ರ ಮೇ 19ರ ಪ್ರಕಟಣೆಯನ್ನು ಹಿಂಪಡೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ವಸತಿ ನಿಲಯಗಳ ವಿವರ ಇಂತಿವೆ: ಸರ್ಕಾರಿ ಡಾ. ಅಂಬೇಡ್ಕರ ಕಾಲೇಜು ವಸತಿ ನಿಲಯ ರಾಜಾಪುರ ರಸ್ತೆ ಕಲಬುರಗಿ, ಸರ್ಕಾರಿ ಡಾ.ಬಾಬು ಜಗಜೀವನರಾಮ ಕಾಲೇಜು ವಸತಿ ನಿಲಯ ರಾಜಾಪುರ ರಸ್ತೆ ಕಲಬುರಗಿ, ಸರ್ಕಾರಿ ಪದವಿ ಬಾಲಕರ ಕಾಲೇಜು ವಸತಿ ನಿಲಯ ಕಲಬುರಗಿ ಟೌನ್ ಸೆಂಟ್ರಲ್ ಬಸ್ ಸ್ಟ್ಯಾಂಡ್ ಹಿಂದುಗಡೆ (ಎಲ್.ಐ.ಸಿ. ಆಫೀಸ್ ಎದುರುಗಡೆ) ಕಲಬುರಗಿ, ಸರ್ಕಾರಿ ಪದವಿ ಬಾಲಕರ ಕಾಲೇಜು ವಸತಿ ನಿಲಯ (ಸರ್ಕಾರಿ ಮಹಾವಿದ್ಯಾಲಯದ ಹಿಂದುಗಡೆ) ಕುಸನೂರ ರಸ್ತೆ ಕಲಬುರಗಿ, ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜು ವಸತಿ ನಿಲಯ ಆರ್.ಟಿ.ಓ.ಕ್ರಾಸ್ ಕಲಬುರಗಿ, ಸರ್ಕಾರಿ ಸ್ನಾತಕೋತ್ತರ ಬಾಲಕರ ಕಾಲೇಜು ವಸತಿ ನಿಲಯ ಕಲಬುರಗಿ, ಸರ್ಕಾರಿ ಬಾಲಕರ ಕಾಲೇಜು ವಸತಿ ನಿಲಯ ಕಮಲಾಪುರ, ಸರ್ಕಾರಿ ಕಾನೂನು ಕಾಲೇಜು ವಸತಿ ನಿಲಯ ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಸತಿ ನಿಲಯ ರಾಮಮಂದಿರ ರಿಂಗ್ ರೋಡ ದರಿಯಾಪುರ ಬಡಾವಣೆ ಕಲಬುರಗಿ, ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಲಬುರಗಿ ಟೌನ್ ಕಲಬುರಗಿ, ಸರ್ಕಾರಿ ಬಾಲಕರ ಕಾಲೇಜು ವಸತಿ ನಿಲಯ (ಪ.ಪಂ.) ಜಿಡಿಎ ಬಡಾವಣೆ, ಕೇಂದ್ರ ಬಸ್ ನಿಲ್ದಾಣ ಹಿಂದುಗಡೆ, ಎಲ್.ಐ.ಸಿ. ಆಫೀಸ್ ಹತ್ತಿರ ಕಲಬುರಗಿ, ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಲಬುರಗಿ ಟೌನ್ (ಹೊಸ).
ಅದರಂತೆ ಸರ್ಕಾರಿ ಬಾಲಕಿಯರ ಕಾಲೇಜು ವಸತಿ ನಿಲಯ ವಿದ್ಯಾನಗರ ಹನುಮಾನ ಗುಡಿ ಹತ್ತಿರ ಕಲಬುರಗಿ, ಸರ್ಕಾರಿ ಬಾಲಕಿಯರ ಕಾಲೇಜು ವಸತಿ ನಿಲಯ ತಾರಫೈಲ್ ಕಲಬುರಗಿ, ಸರ್ಕಾರಿ ಸ್ನಾತಕೋತ್ತರ ಮಹಿಳಾ ಕಾಲೇಜು ವಸತಿ ನಿಲಯ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ, ಸರ್ಕಾರಿ ಬಾಲಕಿಯರ ಕಾಲೇಜು ವಸತಿ ನಿಲಯ (ಪ.ಪಂ.) ಸರ್ವೋದಯ ನಗರ ಕಲಬುರಗಿ, ಸರ್ಕಾರಿ ವೃತ್ತಿಪರ ಮಹಿಳಾ ಕಾಲೇಜು ವಸತಿ ನಿಲಯ ಐವಾನ್-ಎ-ಶಾಹಿ ಕಾಲೋನಿ ಕಲಬುರಗಿ, ಸರ್ಕಾರಿ ವೃತ್ತಿಪರ ಮಹಿಳಾ ಕಾಲೇಜು ವಸತಿ ನಿಲಯ ಐವಾನ್-ಎ-ಶಾಹಿ ಕಾಲೋನಿ ಕಲಬುರಗಿ, 2017-18ನೇ ಸಾಲಿಗೆ ಮಂಜೂರಾದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಲಬರಗಿ ಟೌನ್ (ಹೊಸ) (ಪಿಯುಸಿ ಪ್ರಥಮ ಮತ್ತು ದ್ವಿತೀಯ ವಿದ್ಯಾರ್ಥಿಗಳಿಗೆ), ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಕಲಬರಗಿ ಟೌನ್ (ಹೊಸ) (ವೃತ್ತಿಪರ ಕೋರ್ಸ್‍ಗಳಿಗೆ ಮಾತ್ರ) ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಲಬರಗಿ ಟೌನ್ (ಹೊಸ) ಡಿ.ಎಡ್ ಮತ್ತು ಬಿ.ಎಡ್. ವಿದ್ಯಾರ್ಥಿಗಳಿಗೆ)
ಜೂನ್ 17ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಜೂ.15.(ಕ.ವಾ.)-ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಬೃಹತ್ ಕಾಮಗಾರಿ ವಿಭಾಗದ ಕಲಬುರಗಿಯ ಕಾರ್ಯನಿರ್ವಾಹಕ ಇಂಜಿನಿಯರರ ಕಚೇರಿಯಿಂದ ಹೊಸದಾಗಿ ನಿರ್ಮಿಸಲಿರುವ 110 ಕೆ.ವಿ. ಘತ್ತರಗಾ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಅನುಕೂಲವಾಗುವಂತೆ 2017ರ ಜೂನ್ 17 ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಪ್ರಯುಕ್ತ 110 ಕೆ.ವಿ. ಮೋರಟಗಿ, 110ಕೆ.ವಿ. ಕರಜಗಿ ಮತ್ತು 110 ಕೆ.ವಿ. ಅಫಜಲಪುರ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಅಫಜಲಪುರ ತಾಲೂಕು ಹಾಗೂ ದೇವಣಗಾಂವ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಗ್ರಾಮಗಳ ವಿವರ ಇಂತಿದೆ.
ಅಫಜಲಪುರ ನಗರ ಮತ್ತು ಗ್ರಾಮೀಣ ಪ್ರದೇಶ, ಘತ್ತರಗಾ, ಶಿರವಾಳ, ಹಳಿಯಾಳ, ಬಳ್ಳೂರಗಿ, ಅಳಗಿ(ಬಿ), ಕುಲಾಲಿ, ಕಲ್ಲೂರ, ಬಂದರವಾಡ, ಧನ್ನೂರು, ರೇವೂರ, ಅತನೂರ, ಮಲ್ಲಾಬಾದ, ಬಡದಾಳ, ಕರಜಗಿ, ಮಣ್ಣೂರ, ಮಾಶ್ಯಾಳ, ಉಡಚಣ, ಗೌರ(ಬಿ), ಭೋಸಗಾ, ನಂದರಗಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ಎಲ್ಲ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು ವಾರ್ಷಿಕ ಲೆಕ್ಕಪತ್ರ ಸಲ್ಲಿಸಲು ಸೂಚನೆ
************************************************************************
ಕಲಬುರಗಿ,ಜೂ.15.(ಕ.ವಾ.)-ಕಲಬುರಗಿ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಮುತವಲ್ಲಿ, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ತಮ್ಮ ವಕ್ಫ್ ಸಂಸ್ಥೆಯ 2016-17ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ವಕ್ಫ್ ಕಾಯ್ದೆ-1995 (ತಿದ್ದುಪಡಿ-2013)ರ ಕಾಯ್ದೆ 46ರ ಪ್ರಕಾರ ನಮೂನೆ-50ರಲ್ಲಿ, ಕಾಯ್ದೆ 44ರ ಪ್ರಕಾರ ಬಜೆಟ್ ಎಸ್ಟಿಮೆಟ್‍ನ್ನು ನಮೂನೆ-33ರಲ್ಲಿ ಮತ್ತು ಕಾಯ್ದೆ-72ರ ಪ್ರಕಾರ ವಾರ್ಷಿಕ ವಂತಿಗೆಯನ್ನು ತಕ್ಷಣವಾಗಿ ಕಲಬುರಗಿ ಜಿಲ್ಲಾ ವಕ್ಫ್ ಕಾರ್ಯಾಲಯಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ ವಕ್ಫ್ ಕಾಯ್ದೆ-1995 (ತಿದ್ದುಪಡಿ-2013)ರ ಸೆಕ್ಷನ್-61ರ ಪ್ರಕಾರ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಸಂಸ್ಥೆಗಳು ಸುಮಾರು ವರ್ಷಗಳಿಂದ ಬಜೆಟ್ ಎಸ್ಟಿಮೆಟ್, ವಾರ್ಷಿಕ ಲೆಕ್ಕಪತ್ರ ಮತ್ತು ವಾರ್ಷಿಕ ವಂತಿಗೆಯನ್ನು ವಕ್ಫ್ ಮಂಡಳಿಗೆ ಸಲ್ಲಿಸಿರುವುದಿಲ್ಲ. ಇದು ವಕ್ಫ್ ಕಾಯ್ದೆ-1995ರ ಕಾಯ್ದೆ44, 46, 72 ಮತ್ತು 50ರ ಪ್ರಕಾರ ಸ್ಪಷ್ಟವಾಗಿ ಉಲ್ಲಂಘನೆಯಾಗಿರುತ್ತದೆ. ಸಂಸ್ಥೆಯ ವಾರ್ಷಿಕ ಲೆಕ್ಕಪತ್ರವನ್ನು ವಕ್ಫ್ ಕಾಯ್ದೆ-1995ರ ಕಾಯ್ದೆ 46ರ ಪ್ರಕಾರ ನಮೂನೆ-50ರಲ್ಲಿ ವಕ್ಪ್ ಸಂಸ್ಥೆಯ ಪ್ರಕಾರ ವಾರ್ಷಿಕ ಬಜೆಟ್ ಅಂದಾಜು ನಮೂನೆ-33ರಲ್ಲಿ ಮತ್ತು ಕಾಯ್ದೆ72ರ ಪ್ರಕಾರ ವಾರ್ಷಿಕ ವಂತಿಗೆಯನ್ನು ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸುವುದು ಸಂಸ್ಥೆಯ ಮುತವಲ್ಲಿ, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳ ಕರ್ತವ್ಯವಾಗಿರುತ್ತದೆ.
ಜಿಲ್ಲೆಯ ಎಲ್ಲ ವಕ್ಫ್ ಸಂಸ್ಥೆಗಳು, 2016-17ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ನಮೂನೆ-50ರಲ್ಲಿ, ಬಜೆಟ್ ಎಸ್ಟಿಮೆಟ್ ನಮೂನೆ-33ರಲ್ಲಿ ಮತ್ತು ವಾರ್ಷಿಕ ವಕ್ಫ್ ವಂತಿಗೆಯನ್ನು ಈ ಕೂಡಲೇ ಕಲಬುರಗಿ ಜಿಲ್ಲಾ ವಕ್ಫ್ ಕಾರ್ಯಾಲಯಕ್ಕೆ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ತೋಟಗಾರಿಕೆ ಕ್ಷೇತ್ರ/ನರ್ಸರಿಗಳಲ್ಲಿ
*********************************
ಹಣ್ಣು ಹಾಗೂ ಅಲಂಕಾರಿಕ ಗಿಡಗಳು ಮಾರಾಟಕ್ಕೆ ಲಭ್ಯ
******************************************************
ಕಲಬುರಗಿ,ಜೂ.15.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರ/ನರ್ಸರಿಗಳಲ್ಲಿ ಹಣ್ಣು ಮತ್ತು ಅಲಂಕಾರಿ ಗಿಡಗಳು ಮಾರಾಟಕ್ಕೆ ಲಭ್ಯವಿದ್ದು, ಖರೀದಿಸಲು ಇಚ್ಛಿಸುವ ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ (ರಾಜ್ಯ ವಲಯದ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಮಾರಾಟಕ್ಕೆ ಲಭ್ಯವಿರುವ ತೋಟಗಾರಿಕೆ ಕ್ಷೇತ್ರದ ಹೆಸರು, ಹಣ್ಣು ಮತ್ತು ಅಲಂಕಾರಿಕ ಗಿಡ ಮತ್ತು ತಳಿಗಳ ವಿವರ ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ ಇಂತಿದೆ. ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ತೋಟಗಾರಿಕೆ ಕ್ಷೇತ್ರ/ನರ್ಸರಿ: ದಶೇರಿ ಮಾವು, ಲೋಕಲ್ ನಿಂಬೆ, ಲೋಕಲ್ ಕರಿಬೇವು, ಲೋಕಲ್ ನುಗ್ಗೆ, ಎಲ್-49 ಸೀಬೆ, ಬಳ್ಳಾರಿ ಅಂಜೂರ ಮತ್ತು ಮಿಲಿಂದರ್ ಅವರ ಮೊಬೈಲ್ 7259434517. ಐವಾನ್-ಎ-ಶಾಹಿ ತೋಟಗಾರಿಕೆ ಕ್ಷೇತ್ರ/ನರ್ಸರಿ: ಲೋಕಲ್ ಅಲಂಕಾರಿಕ ಸಸಿಗಳು, ಲೋಕಲ್ ಕರಿಬೇವು ಮತ್ತು ಲೋಕಲ್ ದುರಂತ ಮತ್ತು ಸುರೇಶ ಮೇದಿ ಮೊಬೈಲ್ ಸಂ. 9591032423. ಕಲಬುರಗಿ ತಾಲೂಕಿನ ಕಲ್ಲಹಂಗರಗಾ ತೋಟಗಾರಿಕೆ ಕ್ಷೇತ್ರ/ನರ್ಸರಿ: ದಶೇರಿ ಮಾವು ಮತ್ತು ಮಲ್ಲಿಕಾರ್ಜುನ ಮೊಬೈಲ್ ಸಂ. 8197255548.
ಕಲಬುರಗಿ ತಾಲೂಕಿನ ಕೆಸರಟಗಿ ತೋಟಗಾರಿಕೆ ಕ್ಷೇತ್ರ/ನರ್ಸರಿ: ಸುವಾಸಿನಿ ಕರಿಬೇವು, ಮಿಕ್ಸ್ ಅಲಂಕಾರಿಕ ಸಸಿಗಳು, ಪಿಕೆಎಂ-1 ನುಗ್ಗೆ, ಲೋಕಲ್ ಪಪ್ಪಾಯ, ದುಪದಾಳ ನೆರಳೆ ಮತ್ತು ವೈಶಾಲಿ ಮೊಬೈಲ್ ಸಂ. 7353694199. ಬಡೇಪುರ ತೋಟಗಾರಿಕೆ ಕ್ಷೇತ್ರ/ನರ್ಸರಿ: ಲೋಕಲ್ ಕರಿಬೇವು, ಕಾಲಿಪಟ್ಟಿ ಸಪೋಟಾ, ಲೋಕಲ್ ನಿಂಬೆ, ಮಿಕ್ಸ್ ಅಲಂಕಾರಿಕ ಸಸಿಗಳು, ಲೋಕಲ್ ನುಗ್ಗೆ, ಲೋಕಲ್ ತುಳಸಿ, ಲೋಕಲ್ ದುರಂತ ಮತ್ತು ಮಲ್ಲಿಕಾರ್ಜುನ ಮೊಬೈಲ್ ಸಂ. 8197255548.
ಕರಡು ಅಧಿಸೂಚನೆಗೆ ಸಾರ್ವಜನಿಕರಿಂದ ಆಕ್ಷೇಪಣೆ ಅವಕಾಶ
************************************************************
ಕಲಬುರಗಿ,ಜೂ.15.(ಕ.ವಾ.)-ಸರ್ಕಾರವು 2011ರ ಜನಗಣತಿ ಆಧರಿಸಿ ಕಲಬುರಗಿ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡಗಳ ಕ್ಷೇತ್ರ ಪುನರವಿಂಗಡಣೆಯ ಕರಡು ಅಧಿಸೂಚನೆಯನ್ನು 2017ರ ಮೇ 19ರಂದು ಹೊರಡಿಸಿದ್ದು, ಸದರಿ ಕರಡು ಅಧಿಸೂಚನೆಯನ್ನು ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯ, ಸಹಾಯಕ ಆಯುಕ್ತರ ಕಾರ್ಯಾಲಯ, ತಹಸೀಲ್ದಾರರ ಕಾರ್ಯಾಲಯ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ ಕಾರ್ಯಾಲಯದ ನೋಟೀಸು ಬೋರ್ಡಿಗೆ ಸಾರ್ವಜನಿಕರ ಗಮನಕ್ಕಾಗಿ ಲಗತ್ತಿಸಲಾಗಿದೆ. ಇದಲ್ಲದೇ ಕಲಬುರಗಿ ಜಿಲ್ಲೆಯ ತಿತಿತಿ.guಟbಚಿಡಿgಚಿ.ಟಿiಛಿ.iಟಿ ಹಾಗೂ ತಿತಿತಿ.guಟbಚಿಡಿgಚಿಛಿiಣಥಿಛಿoಡಿಠಿ.oಡಿg ವೆಬ್‍ಸೈಟಿನಲ್ಲಿಯೂ ಸಹ ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ತಿಳಿಸಿದ್ದಾರೆ.
ಸದರಿ ಕ್ಷೇತ್ರ ಪುನರವಿಂಗಡಣೆಯ ಕರಡು ಅಧಿಸೂಚನೆಗೆ ಆಕ್ಷೇಪಣೆ
ಸಲ್ಲಿಸಬಯಸುವವರು 2017ರ ಜುಲೈ 5ರೊಳಗಾಗಿ ಕಚೇರಿ ಸಮಯದಲ್ಲಿ (ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ) ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣಾ ಶಾಖೆಗೆ ತಮ್ಮ ಲಿಖಿತ ಆಕ್ಷೇಪಣೆಯನ್ನು ಸಮರ್ಥನೀಯವಾಗಿರುವಂತಹ ದಾಖಲೆಗಳೊಂದಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಂಧ ಮಕ್ಕಳ ಶಾಲೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
************************************************
ಕಲಬುರಗಿ,ಜೂ.15.(ಕ.ವಾ.)-ಕಲಬುರಗಿ ಅಂಧ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ 1 ರಿಂದ 10 ತರಗತಿಯವರೆಗೆ ಪ್ರವೇಶ ಹಾಗೂ ವಸತಿ ಸೌಲಭ್ಯಕ್ಕಾಗಿ ಅಂಧ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಾಲೆಯ ಅಧೀಕ್ಷಕಿ ನಿಂಗಮ್ಮ ಮುಕುಂದೆ ಅವರು ತಿಳಿಸಿದ್ದಾರೆ.
ಆಸಕ್ತ ಪಾಲಕರು ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಅಂಧ ಮಕ್ಕಳ ಶಾಲೆಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-220641 ಹಾಗೂ ದೈಹಿಕ ಶಿಕ್ಷಕ ಪ್ರಕಾಶ ಭಜಂತ್ರಿ ಮೊಬೈಲ್ ಸಂಖ್ಯೆ 9686363287ನ್ನು ಸಂಪರ್ಕಿಸಲು ಕೋರಿದೆ.
ಉದ್ಯೋಗ ಸೃಜನಾ ಯೋಜನೆ: ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ಕಲಬುರಗಿ,ಜೂ.15.(ಕ.ವಾ.)-ಮುಖ್ಯಮಂತ್ರಿಗಳ ಉದ್ಯೋಗ ಸೃಜನಾ ಯೋಜನೆಯಡಿ 2017-18ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆದು ಗ್ರಾಮೀಣ ಪ್ರದೇಶದಲ್ಲಿ ಅತೀ ಸಣ್ಣ ಕೈಗಾರಿಕೆ ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕ-ಯುವತಿಯರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು 2017ರ ಜುಲೈ 3ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ ತಿಳಿಸಿದ್ದಾರೆ.
ಬ್ಯಾಂಕುಗಳಿಂದ ಸಾಲ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿ ಹೊಂದಿದ ಗ್ರಾಮೀಣ ನಿರುದ್ಯೋಗಿ ಅಭ್ಯರ್ಥಿಗಳು ಕಲಬುರಗಿ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಕಚೇರಿಯಲ್ಲಿ ಛಿmegಠಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್ ಮೂಲಕ ಜುಲೈ 3ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಷರತ್ತು ಮತ್ತು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಅಧೀಕ್ಷಕ ಲಕ್ಷ್ಮೀಕಾಂತ ಕುಲಕರ್ಣಿ ಮೊಬೈಲ್ ಸಂಖ್ಯೆ 8861241093 ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-221637, 223988ಗಳನ್ನು ಸಂಪರ್ಕಿಸಲು ಕೋರಿದೆ. ಈ ಹಿಂದೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜೂನ್ 12 ನಿಗದಿಪಡಿಸಲಾಗಿತ್ತೆಂದು ಅವರು ತಿಳಿಸಿದ್ದಾರೆ.
ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ
*****************************************
ಕಲಬುರಗಿ,ಜೂ.15.(ಕ.ವಾ.)-ಚಿತ್ತಾಪುರ ತಾಲೂಕಿನ ಜಂಕ್ಷನ್ ವಾಡಿ ರೈಲು ನಿಲ್ದಾಣದಲ್ಲಿ 2017ರ ಜೂನ್ 5ರಂದು ಪತ್ತೆಯಾದ 06 ತಿಂಗಳ ಗಂಡು ಮಗುವನ್ನು 2017ರ ಜೂನ್ 07ರಂದು ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ.
ಬಿಳಿ ಬಣ್ಣ, ಮೈಕಟ್ಟು ಮತ್ತು ಗುಂಡಾಗಿರುವ ಈ ಗಂಡು ಶಿಶುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶು ಗೃಹದ ಅಧೀಕ್ಷಕ ಶ್ರೀಕಾಂತ ಮೆಂಗಜಿ ತಿಳಿಸಿದ್ದಾರೆ.
ಮೇಲ್ಕಂಡ ಗಂಡು ಶಿಶುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 60 ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಲು ಕೋರಿದೆ. ತಪ್ಪಿದಲ್ಲಿ ಕಾನೂನು ಪ್ರಕಾರ ಈ ಗಂಡು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ಹಾಗೂ ಮೊಬೈಲ್ ಸಂಖ್ಯೆ 9449728576, ದೂರವಾಣಿ ಸಂ.08472-265588ನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.
ಹೀಗಾಗಿ ಲೇಖನಗಳು NEWS AND PHOTO DATE; 15-06-2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE; 15-06-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE; 15-06-2017 ಲಿಂಕ್ ವಿಳಾಸ https://dekalungi.blogspot.com/2017/06/news-and-photo-date-15-06-2017.html
0 Response to "NEWS AND PHOTO DATE; 15-06-2017"
ಕಾಮೆಂಟ್ ಪೋಸ್ಟ್ ಮಾಡಿ