ಶೀರ್ಷಿಕೆ : NEWS AND PHOTO DATE; 13--06--2017
ಲಿಂಕ್ : NEWS AND PHOTO DATE; 13--06--2017
NEWS AND PHOTO DATE; 13--06--2017
ಜೂನ್ 15ರಂದು ಯೋಗ ನಡಿಗೆ
*******************************
ಕಲಬುರಗಿ,ಜೂ.13.(ಕ.ವಾ.)-ಅಂತರರಾಷ್ಟ್ರೀಯ ಮೂರನೇ ಯೋಗ ದಿನಾಚರಣೆಯನ್ನು 2017ರ ಜೂನ್ 21ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯೋಗ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಜೂನ್ 15ರಂದು ಗುರುವಾರ ಯೋಗ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಗ ನಡಿಗೆಯು ಅಂದು ಬೆಳಿಗ್ಗೆ 8.30 ಗಂಟೆಗೆ ಕಲಬುರಗಿ ನಗರದ ಜಗತ್ ವೃತ್ತದಿಂದ ಆರಂಭವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊನೆಗೊಳ್ಳಲಿದೆ ಎಂದು ಜಿಲ್ಲಾ ಆಯುಷ್ ಆಧಿಕಾರಿ ಡಾ|| ನಾಗರತ್ನ ಚಿಮ್ಮಲಗಿ ತಿಳಿಸಿದ್ದಾರೆ.

ಜಿಲ್ಲೆಯ 6163 ರೈತರಿಗೆ ಕೃಷಿ ಭಾಗ್ಯ ನೆರವು
*******************************************
ಕೃಷಿ ಹೊಂಡ ಕೊಳವೆ ಬಾವಿ ಪುನಶ್ಚೇತನಕ್ಕೆ ಆಸರೆ
**************************************************
ಕಲಬುರಗಿ,ಜೂ.13.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್ ರಹಿತ ಘಟಕದಡಿ 49.80 ಕೋಟಿ ರೂ. ಅನುದಾನದಲ್ಲಿ 6163 ರೈತರಿಗೆ ಕೃಷಿ ಹೊಂಡ, ಟಾರ್ಪಲಿನ, ಲಘು ನೀರಾವರಿ ಘಟಕ ಮತ್ತು ಡಿಜೆಲ್ ಪಂಪಸೆಟ್‍ಗಳನ್ನು ಒದಗಿಸಲಾಗಿದೆ. ಪಾಲಿಹೌಸ್ ಸಹಿತ ಘಟಕದಡಿ 16 ಕೋಟಿ ರೂ. ಅನುದಾನದಲ್ಲಿ 136 ರೈತ ಫಲಾನುಭವಿಗಳಿಗೆ ನೆರಳು ಪರದೆ/ಪಾಲಿಹೌಸ್ ಸಹಿತ ಮನೆ, ತೋಟಗಾರಿಕೆ ಬೆಳೆ ಪದ್ಧತಿಯಡಿ ಸಹಾಯಧನ ಒದಗಿಸಲಾಗಿದೆ. ಯುವಕರನ್ನು ಕೃಷಿಯತ್ತ ಆಕರ್ಷಿಸಲು, ಕೃಷಿಯನ್ನು ತೊರೆಯದಂತೆ ಪ್ರೋತ್ಸಾಹಿಸಲು ಕಳೆದ ನಾಲ್ಕು ವರ್ಷದಿಂದ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ “ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ” ಕಾರ್ಯಕ್ರಮದ ಮೂಲಕ ಇಲಾಖಾ ಯೋಜನೆಗಳನ್ನು ತಲುಪಿಸಲು ಕೃಷಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ ತಿಳಿಸಿದ್ದಾರೆ.
“ಕೃಷಿ ಹೊಂಡದಿಂದ ನಮ್ಗ್ ಭಾಳ ಅನುಕೂಲ್ ಆಗ್ಯಾದ್. ಪಕ್ಕದಲ್ಲೇ ನಮ್ಮ ತಂದೆಯ 4 ಎಕರೆ ಜಮೀನಿದ್ದು, ಪ್ರತಿ ವರ್ಷ ಬೇಸಿಗೆಯಲ್ಲಿ ನೀರಾವರಿ ಕೊಳವೆ ಬಾವಿ ಬತ್ತಿ ಹೋಗುತ್ತಿತ್ತು. ಈ ವರ್ಷ ಕೃಷಿ ಹೊಂಡ ಪೂರ್ಣ ಭರ್ತಿಯಾಗಿದ್ದ ಪ್ರಯುಕ್ತ ಈ ಕೊಳವೆ ಬಾವಿ ಪೂರ್ಣ ರೀಚಾರ್ಜ್ ಆಗಿ 24 ಗಂಟೆ ಕಾಲ ನೀರು ಬರುವಂತಾಗಿದೆ. ಇದರಿಂದ ಈ ವರ್ಷ 120 ಚೀಲ ಭತ್ತ ಬೆಳೆದು ಲಾಭ ಪಡೆಯಲಾಗಿದೆ. ಸರ್ಕಾರದ ಈ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳು ಚೆನ್ನಾಗಿಯೇ ಇವೆ. ಕೃಷಿಕರ ಪಾಲಿಗೆ ಕೃಷಿ ಭಾಗ್ಯ ಯೋಜನೆ ವರದಾನವಾಗಿದೆ. ಸಮಗ್ರ ಕೃಷಿ ಕೈಗೊಳ್ಳಲು ಹೆಚ್ಚು ಅನುಕೂಲವಾಗಿದೆ. ಮಳೆ ಮತ್ತು ವಿದ್ಯುತ್ ಕೈಕೊಟ್ಟರೂ ಕೃಷಿ ಹೊಂಡ ನೀರನ್ನು ಬಳಸಿ ಬೆಳೆಗಳನ್ನು ಕಾಪಾಡಬಹುದು” ಎಂದು ಸೇಡಂ ತಾಲೂಕಿನ ಕೋನಾಪುರ ಗ್ರಾಮದ ವೆಂಕಟರೆಡ್ಡಿ ಹೇಮರೆಡ್ಡಿ ಹೇಳುತ್ತಾರೆ. ಇವರು ಒಟ್ಟು 12 ಎಕರೆ ಜಮೀನು ಹೊಂದಿದ್ದು, ತಮ್ಮ ಹೊಲದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ.
ಅದೇ ರೀತಿ ಚಿತ್ತಾಪುರ ತಾಲೂಕಿನ ಗುಂಡುಗುರ್ತಿ ಗ್ರಾಮದ ಚೆನ್ನಬಸಪ್ಪ ಭಂಡಪ್ಪ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ಚಂದ್ರಕಾಂತ ಭೀಮಸೇನರಾವ ಕೃಷಿ ಭಾಗ್ಯ ಯೋಜನೆಯ ಫಲಾನುಭವಿ. ತಮ್ಮ ಹೊಲದಲ್ಲಿ ಅವರು 21ಘಿ21ಘಿ3 ಮೀ. ಅಳತೆಯ ಕೃಷಿ ಹೊಂಡ ನಿರ್ಮಿಸಿಕೊಂಡಿರುತ್ತಾರೆ. ಇದಕ್ಕಾಗಿ 49823 ರೂ. ಸಹಾಯಧನ ನೀಡಲಾಗಿದೆ. ಸದರಿ ರೈತ ಫಲಾನುಭವಿಯ ಡಿಸೇಲ್ ಪಂಪಸೆಟ್ ಮತ್ತು ತುಂತುರು ನೀರಾವರಿ ಘಟಕ ಹೊಂದಿದ್ದರಿಂದ, ಕ್ಷೇತ್ರ ಬದು, ಪಾಲಿಥಿನ್ ಹಾಳೆ ಹೊದಿಕೆ, ಬೆಳೆ ಪ್ರಾತ್ಯಕ್ಷಿಕೆಗಾಗಿ ಈಗಾಗಲೇ ಸಹಾಯಧನ ಪಾವತಿಸಲಾಗಿದೆ. ಕಳೆದ ವರ್ಷ ತೊಗರಿಯನ್ನು ಬೆಳೆದಿದ್ದು ಪ್ರತಿ ಎಕರೆಗೆ 6 ಕ್ವಿಂಟಲ್ ಇಳುವರಿ ಪಡೆದಿದ್ದಾರೆ. “ಸದರಿ ಯೋಜನೆಯಿಂದ ಹೊಲದಲ್ಲಿ ಬೆಳೆದ ಬೆಳೆಗಳಿಗೆ ನೀರೊದಗಿಸಲು ಅನುಕೂಲವಾಗಿದೆ. ರೈತರು ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಲು ಸಹಾಯಕರವಾಗಿದೆ” ಎನ್ನುತ್ತಾರೆ.

ಮಳೆಯಾಶ್ರಿತ ರೈತರನ್ನು ಗಮನದಲ್ಲಿಟ್ಟುಕೊಂಡು ಮಳೆ ನೀರು ಸಂಗ್ರಹಣೆ ಮತ್ತು ಪುನರ್ ಬಳಕೆಗೆ ಆದ್ಯತೆ ನೀಡಿ ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಿಸುವುದು, ಬದುಗಳ ಮೂಲಕ ಮಳೆ ನೀರಿನ ಸಂರಕ್ಷಣೆ ಮತ್ತು ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ, ಲಾಭದಾಯಕ ಬೆಳೆ ಪದ್ಧತಿಗಳ ಅಳವಡಿಕೆ, ಉತ್ತಮ ಆದಾಯ ತರುವ ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ, ಪಶು ಸಂಗೋಪನಾ ಚಟುವಟಿಕೆಗಳು, ಸಂಸ್ಕರಣಾ ಉದ್ದಿಮೆಗಳು ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು ಈ ಯೋಜನೆಯ ಪ್ರಮುಖ ಆಶಯವಾಗಿದೆ. ಯೋಜನೆಯನ್ನು ಮಿಷನ್ ಮೋಡ್ ಮಾದರಿಯಲ್ಲಿ ಹಂತಹಂತವಾಗಿ ಅನುಷ್ಠಾನಗೊಳಿಸಲಾಗುವುದು.
ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
*********************************************
ಕಲಬುರಗಿ,ಜೂ.13.(ಕ.ವಾ.)-ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ (ಪ.ಜಾ.) ಕಿತ್ತೂರು ರಾಣಿ ಚೆನ್ನಮ್ಮ ಆಂಗ್ಲ ಮಾಧ್ಯಮದ ವಸತಿ ಶಾಲೆಯಲ್ಲಿ 2017-18ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಇಂಗ್ಲೀಷ್ ಹಾಗೂ ವಿಜ್ಞಾನ ವಿಷಯಗಳ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಇಂಗ್ಲೀಷ್ ಶಿಕ್ಷಕರ ಹುದ್ದೆಗೆ ಬಿ.ಎ., ಬಿ.ಎಡ್. ಮತ್ತು ವಿಜ್ಞಾನ ಶಿಕ್ಷಕರ ಹುದ್ದೆಗೆ ಬಿ.ಎಸ್‍ಸಿ., ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ಪ್ರತಿ ಮಾಹೆ 6000 ರೂ. ಗೌರವಧನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಜೂನ್ 15ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನರಿಬೋಳ (ಪ.ಜಾ.) ಕಿತ್ತೂರು ರಾಣಿ ಚೆನ್ನಮ್ಮ ಆಂಗ್ಲ ಮಾಧ್ಯಮದ ವಸತಿ ಶಾಲೆಯ ಪ್ರಾಚಾರ್ಯರನ್ನು ಹಾಗೂ ಮೊಬೈಲ್ ಸಂಖ್ಯೆ 9242998065/ 9945434428ಗಳನ್ನು ಸಂಪರ್ಕಿಸಲು ಕೋರಿದೆ.

ಕೃತಕ ಅಕ್ಕಿ, ಸಕ್ಕರೆ ಮತ್ತು ಮೊಟ್ಟೆ ಕೇವಲ ವದಂತಿಯೇ ಹೊರತು ನಿಜವಲ್ಲ
***********************************************************************
ಕಲಬುರಗಿ,ಜೂ.13.(ಕ.ವಾ.)-ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಸುಮಾರು ಮಾರುಕಟ್ಟೆಯ ಮಾರಾಟಗಾರರು, ವಿತರಣೆ, ದಾಸ್ತಾನು ಮಾಡುವ ಘಟಕಗಳಿಗೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರದ ಅಂಕಿತ ಅಧಿಕಾರಿಗಳು ಭೇಟಿ ನೀಡಿ. ಮೊಟ್ಟೆ, ಅಕ್ಕಿ, ಮತ್ತು ಸಕ್ಕರೆಗಳು ಪರಿಶೀಲನೆ ಮಾಡಿ ಆಹಾರ ಮಾದರಿಯಾಗಿ ಪಡೆದು ಪ್ರಯೊಗಾಲಯಕ್ಕೆ ಸಲ್ಲಿಸಿದ್ದು, ಕೃತಕ ಅಕ್ಕಿ, ಸಕ್ಕರೆ ಮತ್ತು ಮೊಟ್ಟೆ ಕೇವಲ ವದಂತಿಯೇ ಹೊರತು ನಿಜವಲ್ಲ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರದ ಅಂಕಿತ ಅಧಿಕಾರಿ ಆರ್.ಎಸ್.ಬಿರಾದಾರ ತಿಳಿಸಿದ್ದಾರೆ.
ಸಾರ್ವಜನಿಕರು ಕೃತಕ ಮೊಟ್ಟೆ, ಅಕ್ಕಿ, ಮತ್ತು ಸಕ್ಕರೆ ಕಂಡುಬಂದಲ್ಲಿ ಹಳೆ ಎಸ್.ಪಿ. ಕಚೇರಿ ಹಿಂಭಾಗದಲ್ಲಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರದ ಆಹಾರ ಸುರಕ್ಷಾತಾ ಅಧಿಕಾರಿಗಳು/ಜಿಲ್ಲಾ ಅಂಕಿತ ಅಧಿಕಾರಿಗಳ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದು. ಕಲಬುರಗಿ ಗ್ರಾಮೀಣ, ಅಳಂದ, ಅಫಜಲಪುರ, ಚಿತ್ತಾಪುರ, ಚಿಂಚೋಳಿ, ಜೇವರ್ಗಿ, ಸೇಡಂ ತಾಲೂಕು ಆರೋಗ್ಯ ಅಧಿಕಾರಿಗಳಿಗೂ ಸಹ ದೂರು ಸಲ್ಲಿಸಬಹುದು. ಈಗಾಗಲೇ ನಗರದಲ್ಲಿ ಮೊಟ್ಟೆ. ಅಕ್ಕಿ, ಸಕ್ಕರೆಗಳ ಪರಿಶೀಲನೆ ಮಾಡಿದ್ದು, ಪ್ಲಾಸ್ಟಿಕ್ (ಕೃತಕ) ಮೊಟ್ಟೆ, ಅಕ್ಕಿ, ಸಕ್ಕರೆಗಳು ಕಂಡು ಬಂದಿರುವುದಿಲ್ಲ. ಸಾರ್ವಜನಿಕರು ಈ ಕುರಿತು ಭಯ ಪಡುವಂತಿಲ್ಲ ಎಂದು ಹೇಳಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದಲೂ ಕೃತಕವಾಗಿ ಪ್ಲಾಸ್ಟಿಕ್‍ದಿಂದ ತಯಾರಿಸಿದ ಅಕ್ಕಿ, ಸಕ್ಕರೆ ಮತ್ತು ಮುಟ್ಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ವ್ಯಾಪಕವಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಕೆಲವರು ಇಂತಹ ಪದಾರ್ಥಗಳನ್ನು ಪ್ರದರ್ಶಿಸಿದ ಸಚಿತ್ರ ವರದಿಗಳು ಸಹ ಪ್ರಸಾರವಾಗುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದೆ.
ಮೊಟ್ಟೆಯನ್ನು ಕೃತಕವಾಗಿ ಚೀನಾದಲ್ಲಿ ತಯಾರಿಸಲಾಗುತ್ತಿದ್ದು, ಭಾರತಕ್ಕೆ ರಫ್ತು ಮಾಡಲಾಗುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ ಎಂಬುದು ವದಂತಿಯೇ ಹೊರತು ನಿಜವಲ್ಲ. ನೈಸರ್ಗಿಕ ಮೊಟ್ಟೆಗೆ ಸರಿಸಮಾನವಾದ ಕೃತಕ ಮೊಟ್ಟ ತಯಾರಿಸಲು ಸಾಧ್ಯವೇ ಇಲ್ಲ. ತಯಾರಿಕೆ ವೆಚ್ಚ ಒಂದು ಮೊಟ್ಟೆಗೆ 250 ರೂ. ಆಗಬಹುದು. ಆದರೂ ನೈಸರ್ಗಿಕ ಮೊಟ್ಟೆಯನ್ನು ಹೋಲುವುದಿಲ್ಲ. ಇದು ವ್ಯವಹಾರಿಕವಾಗಿಯೂ ಸಾಧ್ಯವಿಲ್ಲ.
ಕೃತಕ ಅಕ್ಕಿ ಚೀನಾದಲ್ಲಿ ತಯಾರಾಗುತ್ತಿದ್ದು, ಅಕ್ಕಿಯನ್ನು ಹೋಲುವ ಯಾವುದೋ ಪದಾರ್ಥವÉೀ ಕೃತಕ ಅಕ್ಕಿಯೆಂದು ಬಿಂಬಿಸಿ ಭಾರತದ ಮಾರುಕಟ್ಟೆಗೆ ಸರಬರಾಜಾಗುತ್ತಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ. ಕೃತಕವಾಗಿ 1ಕೆ.ಜಿ. ಅಕ್ಕಿ ತಯಾರಿಸಲು 200 ರೂ. ಆಗಬಹುದು. ಆದರೂ ಅದು ನೈಸರ್ಗಿಕ ಅಕ್ಕಿಗೆ ಅರಿಸಮಾನಾಗಿ ಭೌತಿಕವಾಗಿ ಮತ್ತು ರಸಾಯನಿಕ ರಚನಾತ್ಮಕವಾಗಿ (ಅhemiಛಿಚಿಟ Sಣಡಿuಛಿಣuಡಿe) ಇರಲು ಸಾಧ್ಯವೇ ಇಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಅಕ್ಕಿ 20ರೂ.ಗೆ ಸಿಗುತ್ತಿದೆ. ಆದ್ದರಿಂದ ಇದು ಕೇವಲ ವದಂತಿಯೇ ವಿನಃ ಸತ್ಯವಲ್ಲ. ಆಹಾರ ತಜ್ಞ ಕೆ.ಸಿ.ರಘು ಅವರು ಇದನ್ನೇ ಸಾರಿ ಸಾರಿ ಹೇಳುತ್ತಿದ್ದಾರೆ. ಯಾರೂ ಗೊಂದಲಕ್ಕೆ ಈಡಾಗದೇ ಇಂತಹ ವರದಿಗಳನ್ನು ನಂಬಬಾರದು. ಈ ಬಗ್ಗೆ ಬೆಂಗಳೂರು ಕೃಷಿ ವಿಜ್ಷಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ವ್ಯಾಪಕವಾದ ವಿಶ್ಲೇಷಣೆ ಮಾಡಿ ಇದು ಕೇವಲ ಕಳಪೆ ಗುಣಮಟ್ಟದ ಅಕ್ಕಿಯೇ ಹೊರತು ಕೃತಕ ಪ್ಲಾಸ್ಟಿಕ್ ಅಕ್ಕಿ ಅಲ್ಲವೆಂದು ದೃಢಪಡಿಸಿದ್ದಾರೆ.
ಸಕ್ಕರೆ ವಿಷಯದಲ್ಲಿಯೂ ಇದೇ ರೀತಿಯ ಗೊಂದಲ ಮೂಡಿಸಲಾಗುತ್ತಿದೆ. ನೈಸರ್ಗಿಕ ಸಕ್ಕರೆಗೆ ಕೆ.ಜಿ. 1ಕ್ಕೆ 40ರೂ. ಆಸುಪಾಸಿನಲ್ಲಿದೆ. ಸಾಧಾರಣ ಗುಣಮಟ್ಟದ ಒಂದು ಕೆ.ಜಿ. ಪ್ಲಾಸ್ಟಿಕಿಗೆ 65ರೂ. ದರವಿದೆ. ಇದನ್ನು ಕೃತಕವಾಗಿ ಸಕ್ಕರೆಯನ್ನಾಗಿ ಪರಿವÀರ್ತಿಸಲು ಖರ್ಚು ಸೇರಿ ಇಷ್ಟು ಕಡಿಮೆ ದರದಲ್ಲಿ ಮಾರಲು ಸಾಧ್ಯವಿಲ್ಲ. ಸಕ್ಕರೆಯನ್ನು ದಾಸ್ತಾನು ಮಾಡುವಾಗ ಹಾಳಾಗದಂತೆ ರಕ್ಷಿಸಲು ಸರ್ಕಾರದ ಆಹಾರ ಇಲಾಖೆ ಮಾರ್ಗಸೂಚಿಯಂತೆ ಸೋಡಿಯಂ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ ಸಿಲಿಕೇಟ್ ರಾಸಾಯನಿಕಗಳನ್ನು ಬಳಸಬಹುದಾಗಿದೆ. ಈ ಎರಡೂ ರಾಸಾಯನಿಕಗಳು ನೀರಿನಲ್ಲಿ ಕರಗುವುದಿಲ್ಲ. ಇದನ್ನೇ ಕೆಲವರು ಕೃತಕ ಸಕ್ಕರೆಯೆಂದು ಬಿಂಬಿಸಿರಬಹುದೆಂದು ಅವರು ತಿಳಿಸಿದ್ದಾರೆ.

ಜೇವರ್ಗಿ: ಮೆಟ್ರಿಕ್ ನಂತರ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
***************************************************************
ಕಲಬುರಗಿ,ಜೂ.13.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಜೇವರ್ಗಿ ತಾಲೂಕಿನಲ್ಲಿ ನಡೆಯುತ್ತಿರುವ ಕೆಳಕಂಡ ಮೆಟ್ರಿಕ್ ನಂತರ ಬಾಲಕ/ಬಾಲಕಿಯರ ಹಾಸ್ಟೆಲ್‍ಗಳಲ್ಲಿ 2017-18ನೇ ಸಾಲಿನ ಪ್ರವೇಶಕ್ಕಾಗಿ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು ಪ್ರವರ್ಗ 2ಎ, 2ಬಿ, 3ಎ, 3ಬಿಗೆ ಸೇರಿದವರಿಗೆ 1 ಲಕ್ಷ ರೂ. ಹಾಗೂ ಪ್ರವರ್ಗ-1, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ 2.50 ಲಕ್ಷ ರೂ. ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 12 ಕೊನೆಯ ದಿನವಾಗಿದೆ.
ವಸತಿ ನಿಲಯಗಳ ವಿವರ ಇಂತಿವೆ: ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಬಸವೇಶ್ವರ ನಗರ ಜೇವರ್ಗಿ, ಬುಟ್ನಾಳ ರೋಡ ಜೇವರ್ಗಿ. ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ವಿದ್ಯಾನಗರ ಜೇವರ್ಗಿ ಮತ್ತು ಶಾಂತನಗರ ಜೇವರ್ಗಿ. ಹೆಚ್ಚಿನ ಮಾಹಿತಿಗಾಗಿ ಜೇವರ್ಗಿ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ.

ಐ.ಟಿ.ಐ. ಪ್ರವೇಶದ ಅವಧಿ ವಿಸ್ತರಣೆ
**********************************
ಕಲಬುರಗಿ,ಜೂ.13.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿನ 12 ಸರ್ಕಾರಿ ಮತ್ತು 09 ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2017-18ನೇ ಸಾಲಿನ ಶೈಕ್ಷಣಿಕ ಸಾಲಿನ ಕುಶಲಕರ್ಮಿ ತರಬೇತಿ ಯೋಜನೆಯಡಿ ಡಿ.ಜಿ.ಇ.ಟಿ. ನವದೆಹಲಿಯಿಂದ ಸಂಯೋಜನೆ ಪಡೆದ (ಎನ್.ಸಿ.ವಿ.ಟಿ.) ಹಾಗೂ ರಾಜ್ಯ ವೃತ್ತಿ ಪರಿಷತ್ತಿನಿಂದ (ಎಸ್.ಸಿ.ವಿ.ಟಿ.) ಸಂಯೋಜನೆ ಪಡೆದ ವಿವಿಧ ವೃತ್ತಿ ಹಾಗೂ ಘಟಕಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು 2017ರ ಜೂನ್ 17ರವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರಿ (ಪುರುಷ) ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಎಸ್.ಎನ್. ಪಾಂಚಾಳ ತಿಳಿಸಿದ್ದಾರೆ.
ಅಭ್ಯರ್ಥಿಗಳು ರಾಜ್ಯದ ಯಾವುದೇ ಭಾಗದಿಂದ ಇಲಾಖೆಯ ವೆಬ್‍ಸೈಟ್ ತಿತಿತಿ.emಠಿಣಡಿg.ಞಚಿಡಿ.ಟಿiಛಿ.iಟಿ ಮತ್ತು ತಿತಿತಿ.ಜeಣಞಚಿಡಿಟಿಚಿಣಚಿಞಚಿ.oಡಿg.iಟಿರ ಮೂಲಕ ಯಾವುದೇ ಸೈಬರ್ ಕೇಂದ್ರದಿಂದ ಅಥವಾ ಹತ್ತಿರದ ಸರ್ಕಾರಿ/ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2017ರ ಜೂನ್ 17ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರನ್ನು ಹಾಗೂ ಸಂಸ್ಥೆಯ ದೂರವಾಣಿ ಸಂಖ್ಯೆ 08472-278611ನ್ನು ಸಂಪರ್ಕಿಸಲು ಕೋರಿದೆ. ಈ ಮೊದಲು ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2017ರ ಜೂನ್ 12 ರಂದು ನಿಗದಿಪಡಿಸಲಾಗಿತ್ತೆಂದು ಅವರು ತಿಳಿಸಿದ್ದಾರೆ.

ಜೂನ್ 14ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
**************************************************
ಕಲಬುರಗಿ,ಜೂ.13.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಮಹಾವೀರ ನಗರ ವ್ಯಾಪ್ತಿಯಲ್ಲಿ ಮೋಹನ ಲಾಜಿನಿಂದ ಅಂಡರ್ ಬ್ರಿಡ್ಜ್‍ವರೆಗಿನ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸ ಕೈಗೊಳ್ಳುವ ಪ್ರಯುಕ್ತ ಜೂನ್ 14ರಂದು ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ. ಮಹಾವೀರ ನಗರ: ಮಹಾವೀರ ನಗರ, ಶಾಸ್ತ್ರೀ ನಗರ, ಹನುಮಾನ ನಗರ, ಪಂಚಶೀಲ ನಗರ, ವೆಂಕಟೇಶ ನಗರ. ಕೆ.ಇ.ಬಿ. ಸ್ಟೋರ್, ಕೆ.ಇ.ಬಿ. ಕ್ವಾರ್ಟರ್ಸ್, ಪಿ.ಡಬ್ಲ್ಯೂ.ಡಿ. ಕಚೇರಿ, ಅಮಲ್‍ವಾಡಿ ಸ್ಟೇಶನ್ ಬಜಾರ್ ಅಪ್ಪÀರಲೇನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಆಹಾರ ಸುರಕ್ಷತೆ ತರಬೇತಿ
**************************
ಕಲಬುರಗಿ,ಜೂ.13.(ಕ.ವಾ.)-ರಾಷ್ಟ್ರೀಯ ಆಹಾರ ಸುರಕ್ಷತೆ ಮತ್ತು ಮಾಪನ ಉದ್ಯಮ ಸಂಸ್ಥೆ ಇಡೀ ರಾಷ್ಟ್ರಾದ್ಯಂತ ಆಹಾರ ಸುರಕ್ಷತೆ ತರಬೇತಿ ಮತ್ತು ಪ್ರಮಾಣೀಕರಣ ತರಬೇತಿದಾರರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಅದರಂತೆ ಕಲಬುರಗಿಯಲ್ಲಿಯೂ ಮಧ್ಯಮ ಮತ್ತು ಸಣ್ಣ ಕೈಗಾರಿಕೋದ್ಯಮಿಗಳಿಗೆ ಸುರಕ್ಷಿತ ಆಹಾರ ಅಭಿಯಾನದಡಿ ಕೈಗಾರಿಕೆ, ದಾಲಮಿಲ್, ಅಕ್ಕಿ ಗಿರಣಿ ಮುಂತಾದ ಕೈಗಾರಿಕಾ ಉದ್ದಿಮೆಗಳಿಗೆ ಆಹಾರ ಸುರಕ್ಷತೆ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ತಿಳುವಳಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟದ ಪ್ರಾಧಿಕಾರದ ಅಂಕಿತ ಅಧಿಕಾರಿ ಆರ್.ಎಸ್.ಬಿರಾದಾರ ಹೇಳಿದರು.
ಅವರು ಮಂಗಳವಾರ ಕಲಬುರಗಿಯಲ್ಲಿ ಆಹಾರ ತಯಾರಿಕರಿಗಾಗಿ ಆಯೋಜಿಸಿದ ಒಂದು ದಿನದ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮವು ಉನ್ನತ ಜ್ಞಾನ ಮತ್ತು ಕುಶಲತೆ ಹಾಗೂ ಪಾರದರ್ಶಕತೆಯಿಂದ ಕಲಿಯುವ ಒಂದು ಸಾಧನವಾಗಿದೆ. ಉನ್ನತ ತರಬೇತಿ ಪಡೆದವರಿಗೆ ಎಫ್.ಎಸ್.ಎಸ್.ಎ.ಐ. ನ ಆಹಾರ ಸುರಕ್ಷತೆ ತರಬೇತಿ ಪ್ರಮಾಣಪತ್ರ ನೀಡಲಾಗುವುದು. ಆಹಾರ ಉತ್ಪಾದನೆಯಲ್ಲಿ ಕಳಪೆ, ಅನೈರ್ಮಲ್ಯ ಮತ್ತು ಕಳಪೆ ಆಹಾರ ಸಾಮಗ್ರಿಗಳಿಂದ ವಿವಿಧ ಕಾಯಿಲೆಗಳು ತಲೆದೋರುವವು. ಇದಕ್ಕಾಗಿ ಸುರಕ್ಷಿತ ಆಹಾರ ತಯಾರಿಕೆ ಅತ್ಯಗತ್ಯವಾಗಿದೆ ಎಂದರು.
ಸಿ.ಐ.ಐ. ಸಂಸ್ಥೆಯ ಡಾ|| ಶಶಿಕಾಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ಭಾರತೀಯ ಕೈಗಾರಿಕೋದ್ಯಮ ಸಂಸ್ಥೆಯ ಕು. ಸ್ವಾತಿ ವಂದಿಸಿದರು. ಆಹಾರ ಪದಾರ್ಥಗಳ ತಯಾರಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹೀಗಾಗಿ ಲೇಖನಗಳು NEWS AND PHOTO DATE; 13--06--2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE; 13--06--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE; 13--06--2017 ಲಿಂಕ್ ವಿಳಾಸ https://dekalungi.blogspot.com/2017/06/news-and-photo-date-13-06-2017.html
0 Response to "NEWS AND PHOTO DATE; 13--06--2017"
ಕಾಮೆಂಟ್ ಪೋಸ್ಟ್ ಮಾಡಿ