News and photo 02-06-2017

News and photo 02-06-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo 02-06-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo 02-06-2017
ಲಿಂಕ್ : News and photo 02-06-2017

ಓದಿ


News and photo 02-06-2017

ಜಿಲ್ಲೆಯಲ್ಲಿ 34 ತೊಗರಿ ಖರೀದಿ ಕೇಂದ್ರಗಳ ಪ್ರಾರಂಭಕ್ಕೆ ಕ್ರಮ
**********************************************************
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಖರೀದಿಸಲು ಪ್ರಾರಂಭಿಸಬೇಕಾಗಿರುವ 34 ತೊಗರಿ ಖರೀದಿ ಕೇಂದ್ರಗಳು ಪ್ರಾರಂಭವಾಗುವ ಹಾಗೆ ತುರ್ತು ಕ್ರಮ ಜರುಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ರೈತರಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಕೇವಲ 8 ದಿನಗಳ ಅವಕಾಶವಿದ್ದು, ತೊಗರಿ ಖರೀದಿ ಕೇಂದ್ರಗಳಲ್ಲಿ ಪ್ರತಿದಿನ ಕನಿಷ್ಠ ಸುಮಾರು 1000 ಕ್ವಿಂಟಲ್ ತೊಗರಿ ಖರೀದಿಯಾಗುವಂತೆ ಕ್ರಮ ಜರುಗಿಸಬೇಕು. ಬೆಳಗಿನ 8 ರಿಂದ ರಾತ್ರಿ 8 ಗಂಟೆಯವರೆಗೆ ತೊಗರಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಬೇಕೆಂದರು.
ಜಿಲ್ಲೆಯಲ್ಲಿ ಈಗಾಗಲೇ 27 ತೊಗರಿ ಖರೀದಿ ಕೇಂದ್ರಗಳು ಪ್ರಾರಂಭವಾಗಿವೆ. ಪ್ರತಿ ತೊಗರಿ ಖರೀದಿ ಕೇಂದ್ರಕ್ಕೆ ಸುಮಾರು 2000 ಚೀಲಗಳನ್ನು ವಿತರಿಸಲಾಗಿದೆ. ಇಂದು 10 ಕೇಂದ್ರಗಳಲ್ಲಿ ತೊಗರಿ ಖರೀದಿ ಪ್ರಾರಂಭವಾಗಿದ್ದು, ಪ್ರತಿ ಕೇಂದ್ರದಲ್ಲಿ ಸುಮಾರು 2000 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ ಸಭೆಗೆ ಮಾಹಿತಿ ನೀಡಿದರು.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕೆರೆ ಹೂಳೆತ್ತುವುದು, ಕೃಷಿ ಹೊಂಡ, ಕ್ಷೇತ್ರ ಬದು ನಿರ್ಮಾಣ, ಗೋ ಕಟ್ಟಾ ನಿರ್ಮಾಣ, ಅರಣ್ಯೀಕರಣದಂತಹ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು. ಇವುಗಳಿಂದ ಮಳೆಗಾಲದಲ್ಲಿ ಬಿದ್ದ ನೀರು ಸಂಗ್ರಹವಾಗಲು ಸಹಾಯವಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳುವ ಕುಡಿಯುವ ನೀರಿನ ಕಾಮಗಾರಿ ಪ್ರಾರಂಭಿಸುವಾಗ ಮೊದಲು ಜಲಮೂಲಗಳನ್ನು ನಿರ್ಧರಿಸಬೇಕು. ಬೋರವೇಲ್‍ನಲ್ಲಿ ಒಂದು ವೇಳೆ ನೀರು ಬೀಳದಿದ್ದರೆ ಮತ್ತೊಂದು ಬೋರವೇಲ್ ಕೊರೆಯಲು ಅವಕಾಶ ಕಲ್ಪಿಸಿಕೊಳ್ಳಬೇಕು. ನೀರಿನ ಮೂಲ ಇಲ್ಲದೆ ಕಾಮಗಾರಿ ಕೈಗೊಂಡಲ್ಲಿ ಪೂರ್ತಿ ಯೋಜನೆ ನಿಷ್ಕ್ರೀಯವಾಗುವುದು. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಾಳಮಂದರಗಿ, ನಾಗೂರ, ಭೀಮನಾಳ, ಅಷ್ಟಗಾ, ಗಣಜಲಖೇಡ, ಹರಸೂರ ವಾರ್ಡ ನಂ. 1 ಮತ್ತು 2, ಜೇವಣಗಿ, ಬೇಲೂರ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಇರುವುದಾಗಿ ಗಮನಕ್ಕೆ ಬಂದಿದ್ದು, ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 2014-15ರಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಕಾಮಗಾರಿಗಳು ಇಂದಿಗೂ ಪೂರ್ಣಗೊಂಡಿಲ್ಲ. ಇದಕ್ಕೆ ದಿಗ್ಭ್ರಮೆವ್ಯಕ್ತಪಡಿಸಿದ ಸಚಿವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು 15 ದಿನಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳು ಕೈಗೊಂಡಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಇದರಿಂದ ಯೋಜನೆ ಅನುಷ್ಠಾನಗೊಳ್ಳುವಲ್ಲಿ ತೊಂದರೆಗಳೇನಾದರೂ ಇದ್ದಲ್ಲಿ ನಿವಾರಣೆಯಾಗುವವು. ಕುಡಿಯುವ ನೀರಿನ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ನೋಟೀಸುಗಳನ್ನು ನೀಡಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ಇಲ್ಲಿಯವರೆಗೆ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 4.6 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ 61 ಸಾವಿರ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಏಪ್ರಿಲ್‍ನಲ್ಲಿ ಮಾನವ
ದಿನಗಳನ್ನು ಸೃಷ್ಟಿಸದೇ ಇರುವ ಪಂಚಾಯಿತಿಗಳಿಗೆ ನೋಟೀಸು ಜಾರಿ ಮಾಡಲಾಗಿದೆ ಎಂದು ತಿಳಿಸಿದ ಅವರು ಜಿಲ್ಲೆಯಲ್ಲಿ ಮೇ 1ರಿಂದ 10ವರೆಗೆ ಶೌಚಾಲಯ ನಿರ್ಮಿಸುವ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿತ್ತು. ಸುಮಾರು ಶೇ. 91ರಷ್ಟು ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳಾವಕಾಶದ ಲಭ್ಯತೆ ಇರುವುದು ಕಂಡು ಬಂದಿದೆ. ಎಲ್ಲ ಗ್ರಾಮಗಳಲ್ಲಿ ಗರ್ಭಿಣಿಯರಿಗಾಗಿ ಕನಿಷ್ಠ 40 ಶೌಚಾಲಯಗಳನ್ನು ನಿರ್ಮಿಸಲು ಗುರಿ ನೀಡಲಾಗಿದೆ ಎಂದರು.
ಸಭೆಯಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಜಿ. ರಾಮಕೃಷ್ಣ, ಕಲಬುರಗಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ ಸಜ್ಜನ್, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ಚಿತ್ತಾಪೂರ ತಾಲೂಕು ಶೈಕ್ಷಣಿಕವಾಗಿ ಜಿಲ್ಲೆಗೆ ಪ್ರಥಮ ಸ್ಥಾನಕ್ಕೆ ಪ್ರಯತ್ನಿಸಲು ಕರೆ
*****************************************************************************
ಕಲಬುರಗಿ,ಜೂ.02.(ಕ.ವಾ.)-ಪ್ರಸಕ್ತ ವರ್ಷ ಚಿತ್ತಾಪುರ ತಾಲೂಕು 10ನೇ ತರಗತಿಯ ಫಲಿತಾಂಶದಲ್ಲಿ ಜಿಲ್ಲೆಗೆ 2ನೇ ಸ್ಥಾನದಲ್ಲಿದೆ. ಮುಂದಿನ ವರ್ಷ ಒಂದನೇ ಸ್ಥಾನದಲ್ಲಿ ಹಾಗೂ ರಾಜ್ಯಕ್ಕೆ 15ನೇ ಸ್ಥಾನದಲ್ಲಿ ತರಲು ಪ್ರಯತ್ನಿಸಬೇಕು. ಇದು ಕಷ್ಟಸಾಧ್ಯವಾದರೂ ಸಹ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ಪ್ರಯತ್ನಿಸಬೇಕೆಂದು ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ಕರೆ ನೀಡಿದರು.
ಅವರು ಶುಕ್ರವಾರ ಚಿತ್ತಾಪುರ ಸರ್ಕಾರಿ ಪಿ.ಯು. ಕಾಲೇಜಿನ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಕೊಂಡಿದ್ದ 2017-18ನೇ ಸಾಲಿನ ಶಾಸಕರ ವಿಶ್ವಾಸ ಕಿರಣ ಕಾರ್ಯಕ್ರಮದಡಿ ಚಿತ್ತಾಪುರ ತಾಲೂಕಿನ ಶಾಲಾ ಮಕ್ಕಳಿಗೆ ಉಚಿತ ಪ್ರೋತ್ಸಾಹದಾಯಕ ಸೌಲಭ್ಯಗಳ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಭವಿಷ್ಯ ರೂಪಿಸುವ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಬೆಳೆಸಿ ಉತ್ತಮ ನಾಗರಿಕರನ್ನಾಗಿಸುವಲ್ಲಿ ಶಿಕ್ಷಣ ಇಲಾಖೆಯ ಮೇಲೆ ಮಹತ್ವದ ಜವಾಬ್ದಾರಿ ಇದೆ. ಚಿತ್ತಾಪುರದಲ್ಲಿ ಶಿಕ್ಷಣ ಇಲಾಖೆಗೆ ಒಟ್ಟು 45 ಕೋಟಿ ರೂ.ಗಳನ್ನು ನೀಡುವ ಮೂಲಕ ನೂತನ ಶಾಲೆ, ಹೆಚ್ಚುವರಿ ತರಗತಿಗಳ ಕಟ್ಟಡ, ಡಿಜಿಟಲ್ ಲ್ಯಾಬ್, ಸ್ಮಾರ್ಟ್ ಕ್ಲಾಸೆಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಆಸ್ತಿಗಳನ್ನಾಗಿಸಬೇಕೆಂದರು.
ಪೋಷಕರು ಮಕ್ಕಳ ಮೇಲೆ ಒತ್ತಡ ಹೇರದೇ ಮಕ್ಕಳ ಕ್ರಿಯಾಶೀಲತೆಯನ್ನು ಗುರುತಿಸಿ ಅವರ ಅಭಿರುಚಿಗೆ ತಕ್ಕಂತೆ ಶಿಕ್ಷಣ ಕೊಡಿಸಬೇಕು. ಚಿತ್ತಾಪುರ ತಾಲೂಕಿನಲ್ಲಿ 48000 ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ, ಪಠ್ಯಪುಸ್ತಕ, 4700 ಮಕ್ಕಳಿಗೆ ಬೈಸಿಕಲ್ ಹಾಗೂ ಸ್ಕಾಲರ್‍ಶಿಪ್ ನೀಡಲಾಗಿದೆ ಎಂದು ತಿಳಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಶಿಕ್ಷಕರಿಗೆ ತರಬೇತಿ ಹಾಗೂ ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವುದು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ತರಬೇತಿ ಪಡೆಯಲು ಮನವಿ ಸಲ್ಲಿಸಬೇಕು. ಮಕ್ಕಳು ಪ್ರಶ್ನೆ ಕೇಳುವ ವಾತಾವರಣ ಹಾಗೂ ಕುತುಹಲದ ವಾತಾವರಣ ನಿರ್ಮಾಣವಾಗಬೇಕು. ಸರ್ಕಾರ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಲು ಎಲ್ಲ ರೀತಿಯ ಸಹಕಾರ ನೀಡಿ ಒಳ್ಳೆಯ ವಾತಾವರಣ ನಿರ್ಮಿಸಿದೆ ಎಂದರು.
ಚಿತ್ತಾಪುರ ಪಟ್ಟಣದಲ್ಲಿ 1920ರಲ್ಲಿ ನಿರ್ಮಾಣವಾದ ಹಳೆಯ ಪೊಲೀಸ್ ಠಾಣೆ ಇದೆ. ಇದಕ್ಕೆ ಪಾರಂಪರಿಕ ಮಹತ್ವ ನೀಡಿ, ಅದನ್ನು ಹಾಳು ಗೆಡವದೇ 2 ಕೋಟಿ ರೂ. ವೆಚ್ಚದಲ್ಲಿ ನೂತನ ಪೊಲೀಸ್ ಹಾಗೂ ಕಟ್ಟಡ ಮತ್ತು ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ. ಮಾಡಬೂಳ, ವಾಡಿ ಮತ್ತು ಚಿತ್ತಾಪುರ ಪೊಲೀಸ್ ಸಿಬ್ಬಂದಿಗಳಿಗೆ ವಸತಿ ನಿಲಯ ನಿರ್ಮಿಸಿದ ಏಕೈಕ ತಾಲೂಕು ಚಿತ್ತಾಪುರ ಆಗಿದೆ ಎಂದರು.
ಚಿತ್ತಾಪುರ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಭೀಮರಾವ ಹೊತಿನಮಡಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್ ಪಾಟೀಲ್, ಪುರಸಭೆ ಉಪಾಧ್ಯಕ್ಷ ಮಹ್ಮದ್ ರಸೂಲಸಾಬ್ ಮೌಲಾನಸಾಬ್ ಮುಸ್ತಾಫಾ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಶಿವಾನಂದ ಪಾಟೀಲ, ನೆಮಿಬಾಯಿ ಚೌವ್ಹಾಣ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಹರಿನಾಥ ಚೌವ್ಹಾಣ, ಗಣ್ಯರಾದ ಭೀಮಣ್ಣ ಸಾಲಿ, ಪರಸರೆಡ್ಡಿ ಪಾಟೀಲ, ಶಿವರಾಜ ಪಾಟೀಲ ಬೆಳಗುಂಪಾ, ಸೋಮಶೇಖರ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಸಚಿವರ ವಿಶೇಷ ಅಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕ ವೈಜಗೊಂಡ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಭೀಮಾಶಂಕರ ಹೊರಕೆರಿ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಚಿವರು ಚಿತ್ತಾಪುರ ತಾಲೂಕಿನಲ್ಲಿ ಹತ್ತನೆ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ 100 ಪ್ರತಿಶತ ಫಲಿತಾಂಶ ದಾಖಲಿಸಿದ ಶಾಲೆಯ ಮುಖ್ಯಸ್ಥರನ್ನು ಸನ್ಮಾನಿಸಿದರು. ಎಂಟನೇ ತರಗತಿಯ ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಿಸಿದರು. ಕ್ಷೀರಭಾಗ್ಯ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಶೂ ವಿತರಿಸಿದರು. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಚಿತ್ತಾಪುರ ಪಟ್ಟಣದಲ್ಲಿ 1.48 ಕೋಟಿ ರೂ.ಗಳಲ್ಲಿ ನಿರ್ಮಿಸಲಿರುವ ಪೊಲೀಸ್ ಠಾಣೆ ಕಚೇರಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ. ನಬಾರ್ಡ್ ಯೋಜನೆಯಡಿಯಲ್ಲಿ ಚಿತ್ತಾಪುರ ಪಟ್ಟಣದಲ್ಲಿ 2 ಕೋಟಿ ರೂ.ಗಳಲ್ಲಿ ನಿರ್ಮಿಸಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ 2 ಕೋಟಿ ರೂ.ಗಳ ವೆಚ್ಚದಲ್ಲಿ ಅಳ್ಳೊಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಜೂನ್ 5ರಿಂದ ಸಿಇಟಿ ಮೂಲ ದಾಖಲೆಗಳ ಪರಿಶೀಲನೆ
ಕಲಬುರಗಿ,ಜೂ.02.(ಕ.ವಾ.)-ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಇತ್ತೀಚೆಗೆ ನಡೆದ 2017ನೇ ಸಾಲಿನ ಸಿ.ಇ.ಟಿ. ಪರೀಕ್ಷೆ ಬರೆದು ರ್ಯಾಂಕ್ ಪಡೆದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ವಿದ್ಯಾರ್ಥಿಗಳ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಸೀಟುಗಳ ಆಯ್ಕೆ ಹಾಗೂ ಮೂಲ ದಾಖಲಾತಿಗಳ ಪರಿಶೀಲನಾ ಪ್ರಕ್ರಿಯೆಯು ಕಲಬುರಗಿಯ ನಗರದ ಐವಾನ್-ಎ-ಶಾಹಿ ರಸ್ತೆಯಲ್ಲಿರುವ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ 2017ರ ಜೂನ್ 5 ರಿಂದ 21ರವರೆಗೆ ನಡೆಯಲಿದೆ ಎಂದು ಕಲಬುರಗಿ ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಲಬುರಗಿ ಹೆಲ್ಪ್‍ಲೈನ್ ಸೆಂಟರಿನ ಮುಖ್ಯ ನೋಡಲ್ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ವಿದ್ಯಾರ್ಥಿಗಳು ತಮಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೀಡಿದ ರ್ಯಾಂಕ್ ಅನುಸಾರ ಆಯಾ ದಿನಗಳಂದು ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು. ಬ್ರೋಚರ್ ಪುಟ ಸಂಖ್ಯೆ 9ರಲ್ಲಿ ನಮೂದಿಸಿದಂತೆ ಜರುಗುತ್ತದೆ. ವಿದ್ಯಾರ್ಥಿಗಳು ಆನ್‍ಲೈನ್ ಅರ್ಜಿಯಲ್ಲಿ ಸಲ್ಲಿಸಿರುವಂತೆ ತಮ್ಮ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿದ ಸಹಿ ಮತ್ತು ಸಿಲ್‍ಯಿರುವ ಒಂದು ಸೆಟ್ ಜಿರಾಕ್ಸ್ ಪ್ರತಿ ಮತ್ತು ಎರಡು ಪಾಸ್‍ಪೋರ್ಟ್ ಸೈಜಿನ ಭಾವಚಿತ್ರಗಳೊಂದಿಗೆ ನಿಗದಿಪಡಿಸಿದ ಸಮಯಕ್ಕೆ ಸಹಾಯಕ ಕೇಂದ್ರದಲ್ಲಿ ಹಾಜರಿರÀಬೇಕು. ಸಿ.ಇ.ಟಿ. ಬ್ರೋಚರ್‍ನ ಪುಟ ಸಂ. 36 ಮತ್ತು 37 ರಲ್ಲಿ ತಿಳಿಸಿದಂತೆ ಎಲ್ಲ ದಾಖಲಾತಿಗಳನ್ನು ಹೊಂದಿಸಿಕೊಂಡು ಬರಬೇಕು.
ದಾಖಲಾತಿಯ ಪರಿಶೀಲನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಪಾರದರ್ಶಕದ ದೃಷ್ಟಿಕೋನದಿಂದ ಕೆ.ಇ.ಎ. ರವರು ಸಹಾಯಕ ಕೇಂದ್ರದಲ್ಲಿ ಎರಡು ಮಾನಿಟರ್‍ಗಳನ್ನು ವ್ಯವಸ್ಥೆ ಮಾಡಿದ್ದು, ಪ್ರತಿಯೊಂದು ವಿದ್ಯಾರ್ಥಿಗಳು ಕೂಲಂಕುಷವಾಗಿ ಗಮನಿಸಬೇಕು. ತಮಗೆ ಪರಿಶೀಲನೆಯು ತೃಪ್ತಿಯಾದಲ್ಲಿ ವಿದ್ಯಾರ್ಥಿಗಳಿಗೆ ಒಂದು ಪರಿಶೀಲನಾ ಸ್ಲಿಪ್‍ನ್ನು ನೀಡಲಾಗುವುದು. ಅದರಲ್ಲಿ ರಹಸ್ಯ ಸಂಕೇತಾಕ್ಷರ (ಸೀಕ್ರೆಟ್ ಕೀ) ನೀಡಲಾಗುವುದು. ಸೀಟ್ ಮಾಟ್ರಿಕ್ಸ್ ಬಿಡುಗಡೆಯ ನಂತರ ಈ ರಹಸ್ಯ ಸಂಕೇತಾಕ್ಷರ (ಸೀಕ್ರೆಟ್ ಕೀ) ಮತ್ತು ವಿದ್ಯಾರ್ಥಿಗಳು ಸೃಷ್ಟಿ ಮಾಡಿಕೊಳ್ಳುವ ಪಾಸ್‍ವರ್ಡ್ ಉಪಯೋಗಿಸಿಕೊಂಡು ತಮ್ಮ ಆದ್ಯತೆಯ ಮೇರೆಗೆ ಎಷ್ಟಾದರೂ ಸಂಖ್ಯೆಯಲ್ಲಿ ಕಾಲೇಜುಗಳ ಹೆಸರನ್ನು(ಆಫ್ಶನ್ ಎಂಟ್ರಿ) ನಮೂದಿಸಬಹುದಾಗಿದೆ.
ಅತ್ಯುನ್ನತ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ನಿಗದಿಪಡಿಸಿದ ದಿನದಂದು ಪರಿಶೀಲನೆಗೆ ಬರುವುದು. ಒಬ್ಬ ವಿದ್ಯಾರ್ಥಿಗೆ ಒಂದು ಸಲ ಮಾತ್ರ ದಾಖಲೆಗಳ ಪರಿಶೀಲನೆ ಮಾಡಲಾಗುವುದು. ಅಪೂರ್ಣ ಹಾಗೂ ದೋಷಯುಕ್ತ ದಾಖಲೆಗಳಿದ್ದಲ್ಲಿ ತಿರಸ್ಕರಿಸಲಾಗುವುದು. ವಿದ್ಯಾರ್ಥಿಗಳಿಗೆ ನೀಡಲಾಗುವ ರಹಸ್ಯ ಸಂಕೇತಾಕ್ಷರ ಮತ್ತು ಪಾಸ್‍ವರ್ಡ್ ಗೌಪ್ಯತೆಯನ್ನು ಕಾಪಾಡಬೇಕು. ಈ ಕುರಿತು ಯಾವುದೇ ಸಹಾಯ ಬೇಕಾದಲ್ಲಿ ಸಹಾಯಕ ಕೇಂದ್ರದ ಮುಖ್ಯ ನೋಡಲ್ ಅಧಿಕಾರಿ ಬಸವರಾಜ ದೊಡ್ಡಪ್ಪ ಅವರ ಮೊಬೈಲ್ ಸಂ. 9901860491ನ್ನು ಸಂಪರ್ಕಿಸಲು ಕೋರಿದೆ.
ಹೈಕೋರ್ಟ್ ಪೀಠದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಹೈಕೋರ್ಟ ಪೀಠದ ಕಾನೂನು ಸೇವಾ ಸಮಿತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು 2017ರ ಜೂನ್ 5ರಂದು ಬೆಳಗಿನ 9.15 ಗಂಟೆಗೆ ಕಲಬುರಗಿ ಹೈಕೋರ್ಟ ಪೀಠದ ಆವರಣದಲ್ಲಿ ಜರುಗಲಿದೆ ಎಂದು ಹೈಕೋರ್ಟ ಪೀಠದ ಕಾನೂನು ಸೇವಾ ಸಮಿತಿಯ ಸೆಕ್ಷನ್ ಆಫೀಸರ್ ಸುಲೋಚನಾ ತಿಳಿಸಿದ್ದಾರೆ.

ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ
****************************************************
ಕಲಬುರಗಿ,ಜೂ.02.(ಕ.ವಾ.)-ಮುಂಗಾರು ಹಂಗಾಮಿಗಾಗಿ ರೈತರಿಗಾಗಿ 2017-18ನೇ ಸಾಲಿನ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆಸರು, ಉದ್ದು, ಸೋಯಾಬಿನ್, ಭತ್ತ, ತೊಗರಿ, ಜೋಳ, ಮೆಕ್ಕೆ ಜೋಳ, ಸಜ್ಜೆ, ಸೂರ್ಯಕಾಂತಿ ಮುಂತಾದ ಮುಂಗಾರು ಬೆಳೆಗಳ ಬೀಜಗಳನ್ನು ರಿಯಾಯಿತಿ ದರದಲ್ಲಿ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ ತಿಳಿಸಿದ್ದಾರೆ. ಬಿತ್ತನೆ ಬೀಜವಾರು ನಿಗದಿಪಡಿಸಲಾದ ರಿಯಾಯಿತಿ (ಪ್ರತಿ ಕಿ.ಗ್ರಾಂ. ದರ ರೂ.ಗಳಲ್ಲಿ) ದರದ ವಿವರ ಕೆಳಕಂಡಂತೆ ಇರುತ್ತದೆ.
ಪ್ರಮಾಣಿತ ಸಾರ್ವಜನಿಕ ತಳಿಯ ಹೆಸರು ಬೆಳೆ ಬಿತ್ತನೆ ಬೀಜ ಸಾಮಾನ್ಯ ವರ್ಗದವರಿಗೆ-25ರೂ, ಪ.ಜಾತಿ./ಪ.ಪಂ. ದವವರಿಗೆ 37.5ರೂ ಮತ್ತು ನಿಜಚೀಟಿ ವಿಧ ಸಾಮಾನ್ಯ ವರ್ಗದವರಿಗೆ-24ರೂ, ಪ.ಜಾತಿ./ಪ.ಪಂ.ದವರಿಗೆ ರೂ. 36ರೂ. ಪ್ರಮಾಣಿತ ಸಾರ್ವಜನಿಕ ತಳಿಯ ಉದ್ದು ಬೆಳೆ ಬಿತ್ತನೆ ಬೀಜ ಸಾಮಾನ್ಯ ವರ್ಗದವರಿಗೆ-25ರೂ, ಪ.ಜಾತಿ./ಪ.ಪಂ. ದವರಿಗೆ 37.5ರೂ. ಮತ್ತು ನಿಜಚೀಟಿ ವಿಧ ಸಾಮಾನ್ಯ ವರ್ಗದವರಿಗೆ-24ರೂ, ಪ.ಜಾತಿ./ಪ.ಪಂ.ದವರಿಗೆ ರೂ. 36ರೂ. ಪ್ರಮಾಣಿತ ಸಾರ್ವಜನಿಕ ತಳಿಯ ಸೋಯಾಬಿನ್ ಬಿತ್ತನೆ ಬೀಜ ಸಾಮಾನ್ಯ ವರ್ಗದವರಿಗೆ-20ರೂ, ಪ.ಜಾತಿ./ಪ.ಪಂ. ದವರಿಗೆ ರೂ. 30ರೂ. ಪ್ರಮಾಣಿತ ಸಾರ್ವಜನಿಕ ತಳಿಯ ಭತ್ತ ಬೆಳೆ ಬಿತ್ತನೆ ಬೀಜ ಸಾಮಾನ್ಯ ವರ್ಗದವರಿಗೆ-8ರೂ, ಪ.ಜಾತಿ./ಪ.ಪಂ.ದವರಿಗೆ ರೂ. 12ರೂ.,ಪ್ರಮಾಣಿತ ಸಾರ್ವಜನಿಕ ತಳಿಯ ತೊಗರಿ ಬೆಳೆ ಬಿತ್ತನೆಬೀಜ ಸಾಮಾನ್ಯ ವರ್ಗದವರಿಗೆ-25ರೂ, ಪ.ಜಾತಿ./ಪ.ಪಂ.ದವರಿಗೆ ರೂ. 37.5ರೂ. ಮತ್ತು ನಿಜಚೀಟಿ ವಿಧ ಸಾಮಾನ್ಯ ವರ್ಗದವರಿಗೆ-24ರೂ, ಪ.ಜಾತಿ./ಪ.ಪಂ. ದವರಿಗೆ ರೂ. 36ರೂ.
ಸಂಕರ ನಿಜಚೀಟಿ ವಿಧ ಜೋಳ ಬೆಳೆ ಬಿತ್ತನೆ ಬೀಜ ಸಾಮಾನ್ಯ ವರ್ಗದವರಿಗೆ-30ರೂ, ಪ.ಜಾತಿ./ಪ.ಪಂ.ದವರಿಗೆ ರೂ. 45ರೂ., ಸಂಕರ ನಿಜಚೀಟಿ ವಿಧ ಮೆಕ್ಕೆಜೋಳ ಬಿತ್ತನೆ ಬೀಜ ಸಾಮಾನ್ಯ ವರ್ಗದವರಿಗೆ-20ರೂ, ಪ.ಜಾತಿ./ಪ.ಪಂ.ದವರಿಗೆ ರೂ. 30ರೂ., ಸಂಕರ ನಿಜಚೀಟಿ ವಿಧದ ಸಜ್ಜೆ ಬಿತ್ತನೆ ಬೀಜ ಸಾಮಾನ್ಯ ವರ್ಗದವರಿಗೆ-25ರೂ, ಪ.ಜಾತಿ./ಪ.ಪಂ. ದವರಿಗೆ ರೂ. 37.5ರೂ. ಸಂಕರ ನಿಜಚೀಟಿ ತಳಿಯ ಸೂರ್ಯಕಾಂತಿ ಬಿತ್ತನೆ ಬೀಜ ಸಾಮಾನ್ಯ ವರ್ಗದವರಿಗೆ-80ರೂ, ಪ.ಜಾತಿ./ಪ.ಪಂ. ರೂ. 120ರೂ.ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಬೀಜ ದಾಸ್ತಾನು ಮಾಡಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಕೋರಿದೆ.

ಜಾಹೀರಾತು ಅಳವಡಿಕೆಗೆ ಪರವಾನಿಗೆ ಕಡ್ಡಾಯ
*********************************************
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಾಹೀರಾತುಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ 1976ರ ನಿಯಮ 134 ಮತ್ತು 135ರ ಪ್ರಕಾರ ಪ್ರತಿಯೊಂದು ಜಾಹೀರಾತು ಫಲಕಗಳನ್ನು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಲು ಮಹಾನಗರಪಾಲಿಕೆಯಿಂದ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಈಗಾಗಲೇ ಜಾಹೀರಾತು ತೆರವುಗೊಳಿಸಲು ಪತ್ರಿಕಾ ಪ್ರಕಟಣೆ ಮೂಲಕ ಜಾಹೀರಾತುದಾರರ, ಮಾಲೀಕರ ಮತ್ತು ಸಂಬಂಧಪಟ್ಟವರ ಗಮನಕ್ಕೆ ತರಲಾಗಿತ್ತು. ಅದರಂತೆ ಪರವಾನಿಗೆ ಪಡೆದಿರುವವರು ಮತ್ತು ಕೆಲವು ಫಲಕಗಳನ್ನು ತೆರವುಗೊಳಿಸಿದ್ದು, ಅದರಂತೆ ಇನ್ನು ಕೆಲವು ಕಲಬುರಗಿ ನಗರದ ರಸ್ತೆ ಬದಿ, ಪಾದಚಾರಿಗಳ ರಸ್ತೆ ಮತ್ತು ಸರ್ಕಾರದ ಬಯಲು ಪ್ರದೇಶ ಹಾಗೂ ಖಾಸಗಿ ಪ್ರದೇಶಗಳಲ್ಲಿ ಸಾಕಷ್ಟು ಜಾಹೀರಾತು ಫಲಕಗಳನ್ನು ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಬಾಕಿ ಉಳಿದಿರುವುದು ಕಂಡು ಬಂದಿದ್ದು, ಇದು ಕಾನೂನು ಬಾಹಿರವಾಗಿದೆ.
ಇಂತಹ ಸದರಿ ಅನಧಿಕೃತ ಜಾಹೀರಾತುಗಳಿಗೆ ಮಹಾನಗರ ಪಾಲಿಕೆಗೆ ಅರ್ಜಿಯೊಂದಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಸಲ್ಲಿಸಿ 7 ದಿನದೊಳಗಾಗಿ ಪರವಾನಿಗೆ ಪಡೆಯಬೇಕು. ಇಲ್ಲದಿದ್ದಲ್ಲಿ ಅಂತಹ ಅನಧಿಕೃತ ಜಾಹೀರಾತು ಫಲಕಗಳನ್ನು ಮಹಾನಗರಪಾಲಿಕೆಯಿಂದಲೇ ತೆರವುಗೊಳಿಸಿ ಇದಕ್ಕೆ ತಗುಲಿದ ವೆಚ್ಚವನ್ನು ಮತ್ತು ದಂಡವನ್ನು ಸಂಬಂಧಪಟ್ಟವರಿಂದ ನಿಯಮಾನುಸಾರ ವಸೂಲಿ ಮಾಡಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

ಜೂನ್ ಮಾಹೆಗೆ ಆಹಾರ ಧಾನ್ಯ ಬಿಡುಗಡೆ
****************************************
ಕಲಬುರಗಿ,ಜೂ.02.(ಕ.ವಾ.)-ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಕಲಬುರಗಿ ಜಿಲ್ಲೆಯಲ್ಲಿ 2017ರ ಜೂನ್ ಮಾಹೆಯಲ್ಲಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ಆಹಾರ ಧಾನ್ಯ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್ ತಿಳಿಸಿದ್ದಾರೆ.
ಆದ್ಯತಾ ಕಾರ್ಡಿನ ಪ್ರತಿ ಸದಸ್ಯರಿಗೆ 7 ಕೆ.ಜಿ. ಮತ್ತು ಅಂತ್ಯೋದಯ ಕಾಡಿಗೆ 35 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ. ಅಂತ್ಯೋದಯ ಮತ್ತು ಆದ್ಯತಾ ಕಾರ್ಡಿಗೆ ಪ್ರತಿ ಕೆ.ಜಿ.ಗೆ 38 ರೂ. ರಂತೆ 1 ಕೆ.ಜಿ. ತೊಗರಿ ಬೆಳೆಯನ್ನು ವಿತರಿಸಲಾಗುತ್ತದೆ.
ಪ್ರತಿ ಪಡಿತರ ಚೀಟಿದಾರರು ಮೇಲಿನ ಹಂಚಿಕೆಯಂತೆ ಬಿಲ್ಲಿನಲ್ಲಿ ಪಡಿತರ ಪದಾರ್ಥಗಳ ದರ ಹಾಗೂ ಪ್ರಮಾಣ ಸದರಿಯಾಗಿದೆಯೇ ಎಂದು ಖಾತರಿಪಡಿಸಿಕೊಂಡು ಬಿಲ್ಲನ್ನು ಕಡ್ಡಾಯವಾಗಿ ಪಡೆಯಬೇಕು. ಮೇಲಿನ ಹಂಚಿಕೆಯಂತೆ ವಿತರಣೆಯಾಗದೇ ನಿರಾಕರಣೆ ಆಗಿದ್ದಲ್ಲಿ ಈ ಕುರಿತು ಬಿಲ್ಲಿನ ಪ್ರತಿಯೊಂದಿಗೆ ದೂರನ್ನು ಸಲ್ಲಿಸಬಹುದು.
ದೂರನ್ನು ಇಲಾಖೆಯ ಸೇವಾ ಕೇಂದ್ರಗಳಾದ ಗುಲಬರ್ಗಾ ಒನ್, ಜನಸ್ನೇಹಿ ಕೇಂದ್ರ ಗ್ರಾಮ ಪಂಚಾಯಿತಿಗಳಲ್ಲಿ, ತಾಲೂಕು ಕಚೇರಿಗಳು, ಖಾಸಗಿ ಪ್ರಾಂಚೈಸಿಗಳಲ್ಲಿ ಹಾಗೂ ಕಂಪ್ಯೂಟರ್ ವ್ಯವಸ್ಥೆ ಇರುವ ನ್ಯಾಯಬೆಲೆ ಅಂಗಡಿಗಳಲ್ಲಿ ಅಥವಾ ಆಧಾರ ಸಂಖ್ಯೆಗೆ ನೋಂದಣಿಯಾದ ಮೊಬೈಲ್ ಸಂಖ್ಯೆಯಿಂದ *161#ನ್ನು ಡಯಲ್ ಮಾಡಿ ಸಲ್ಲಿಸಬಹುದು. ಪಡಿತರ ಚೀಟಿಗೆ ಆಧಾರ ಸಂಖ್ಯೆ ಜೋಡಣೆಯಾಗಿರಬೇಕೆಂದು ಅವರು ತಿಳಿಸಿದ್ದಾರೆ.
ರೈತರಿಗಾಗಿ ಅಲ್ಪಾವಧಿ ಕೋಳಿ ಸಾಕಾಣಿಕೆ ತರಬೇತಿ
ಕಲಬುರಗಿ,ಜೂನ್.02.(ಕ.ವಾ.)-ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ(ನಿ) ಕಲಬುರಗಿ ಪ್ರಾದೇಶಿಕ ಕೇಂದ್ರದಿಂದ ಕಲಬುರಗಿ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಹಾಗೂ ರೈತರಿಗಾಗಿ 2017ರ ಜೂನ್ ಮಾಹೆಯಲ್ಲಿ 5 ದಿನಗಳ ಅಲ್ಪಾವಧಿ ಕೋಳಿ ಸಾಕಾಣಿಕೆ ತರಬೇತಿಯನ್ನು ಕಲಬುರಗಿ ಪಶು ಆಸ್ಪತ್ರೆ ಆವರಣದಲ್ಲಿನ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ(ನಿ) ಪ್ರಾದೇಶಿಕ ಕೇಂದ್ರದ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಮಹಾಮಂಡಳಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕನಿಷ್ಠ 7ನೇ ತರಗತಿ ಪಾಸಾದ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟ ವಯೋಮಿತಿ ಹೊಂದಿರಬೇಕು. ವಿದ್ಯಾರ್ಹತೆ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರದ, ಆಧಾರ ಕಾರ್ಡ ಜಿರಾಕ್ಸ್ ಪ್ರತಿ ಹಾಗೂ ಸಹಾಯಕ ನಿರ್ದೇಶಕರು/ ಪಶು ವೈದ್ಯಾಧಿಕಾರಿಗಳು ನೀಡಿರುವ ಶಿಫಾರಸ್ಸು ಪತ್ರ ಅಥವಾ ಗ್ರಾಮ ಪಂಚಾಯಿತಿಯಿಂದ ವಾಸಸ್ಥಳದ ಪ್ರಮಾಣಪತ್ರ ಹಾಗೂ ಇತ್ತೀಚಿನ 2 ಭಾವಚಿತ್ರದೊಂದಿಗೆ ಜೂನ್ 5 ರಿಂದ 15ರೊಳಗಾಗಿ ಮೇಲ್ಕಂಡ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಮೀಸಲಾತಿ ಹಾಗೂ ಮೊದಲು ಹೆಸರು ನೋಂದಾವಣೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತರಬೇತಿ ದಿನಾಂಕವನ್ನು ನಾಲ್ಕು ದಿನ ಮುಂಚಿತವಾಗಿ ದೂರವಾಣಿ ಮೂಲಕ ತಿಳಿಸಲಾಗುತ್ತದೆ. ಒಬ್ಬರಿಗೆ ಒಂದು ಬಾರಿಗೆ ತರಬೇತಿ ಪಡೆಯಲು ಅವಕಾಶವಿರುತ್ತದೆ. ತರಬೇತಿ ಅವಧಿಯಲ್ಲಿ 150ರೂ. ದಿನ ಭತ್ಯೆ ನೀಡಲಾಗುವುದು. ಪ್ರತಿ ತಿಂಗಳು 25 ಜನರಿಗೆ ಮಾತ್ರ ತರಬೇತಿ ನೀಡಲಾಗುವುದು. ಗ್ರಾಮೀಣ ಅಭ್ಯರ್ಥಿಗಳಿಗೆ ಮೊದಲು ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಹಾಗೂ ದೂರವಾಣಿ ಸಂ. 08472-241256ನ್ನು ಸಂಪರ್ಕಿಸಲು ಕೋರಿದೆ.
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಪಡಿತರ ಚೀಟಿದಾರರ ಗಮನಕ್ಕೆ
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಜಿದಾರರು ಕೆಳಕಂಡ ಮಾನದಂಡಗಳನ್ನು ಹೊಂದಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವೇತನವನ್ನು ಗಣನೆಗೆ ತೆಗೆದುಕೊಂಡು ಎಲ್ಲ ಖಾಯಂ ನೌಕರರು ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಮಂಡಳಿಗಳು/ ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ; ಒಳಗೊಂಡಂತೆ ಆದಾಯ ತೆರಿಗೆ/ಸೇವಾ ತೆರಿಗೆ ವ್ಯಾಟ್/ವೃತಿ ತೆರಿಗೆ ಪಾವತಿಸುವ ಎಲ್ಲ ಕುಟುಂಬಗಳು.
ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು.
ಜೀವನೋಪಾಯಕ್ಕಾಗಿ ಸ್ವತ: ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನವನ್ನು ಹೊಂದಿರುವ ಎಲ್ಲಾ ಕುಟುಂಬಗಳು ಹಾಗೂ ಕುಟುಂಬದ ವಾರ್ಷಿಕ ಆದಾಯವು ರೂ.1.20 ಲಕ್ಷಗಳಿಂತಲೂ ಹೆಚ್ಚು ಇರುವ ಕುಟುಂಬಗಳು.
ಮೇಲ್ಕಂಡಂತೆ ಗುರುತಿಸಲಾದ ಅದ್ಯತೇತರ ಕುಟುಂಬಗಳನ್ನು ಹೊರತುಪಡಿಸಿ, ಉಳಿದ ಕುಟುಂಬಗಳು ಆದ್ಯತಾ ಪಡಿತರ ಚೀಟಿಯನ್ನು ಪಡೆಯಲು ಅರ್ಹ ಕುಟುಂಬವೆಂದು ಪರಿಗಣಿಸಲಾಗಿ ಹಾಗೂ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರು ಸ್ವಯಂ ಘೋಷಿತ ಪ್ರಮಾಣ ಪತ್ರ ಅಥವಾ ಆದಾಯ ಪ್ರಮಾಣ ಪತ್ರವನ್ನು ಗ್ರಾಮಾಂತರ ಪ್ರದೇಶಕ್ಕೆ ಸಂಬಂಧಪಟ್ಟವರು ತಹಶೀಲದಾರರ ಕಾರ್ಯಾಲಯ (ಆಹಾರ ಶಾಖೆಗೆ) ಹಾಗೂ ಕಲಬುರಗಿ ಪಡಿತರ ಪ್ರದೇಶಕ್ಕೆ ಸಂಬಂಧಪಟ್ಟವರು ಸಹಾಯಕ ನಿರ್ದೇಶಕರು ಪಡಿತರ ಪ್ರದೇಶ ಕಲಬುರಗಿ ಕಚೇರಿಗೆ ಸಲ್ಲಿಸಿದ ನಂತರ ಪಡಿತರ ಚೀಟಿಯ ವಿತರಣೆಗೆ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜೂನ್ 3ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಜೂ.02.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಶಕ್ತಿನಗರ, 11ಕೆ.ವಿ. ದೇವಿನಗರ, 11ಕೆ.ವಿ. ಶಾಂತಿ ನಗರ, 11 ಕೆ.ವಿ. ಗಣೇಶ ನಗರ ಫೀಡರುಗಳ ವ್ಯಾಪ್ತಿಯ ನಿರ್ವಹಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಜೂನ್ 3ರಂದು ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ. ಶಕ್ತಿ ನಗರ: ಗೋದುತಾಯಿ ನಗರ, ಭಗವತಿ ನಗರ, ಕೋತಂಬರಿ ಲೇಔಟ್, ಸಿದ್ದಾರ್ಥ ನಗರ, ಕಾಂತಾ ಕಾಲೋನಿ, ಘಾಟ್ಗೆ ಲೇಔಟ್, ಕೊತಂಬರಿ ಲೇಔಟ್, ಶಕ್ತಿ ನಗರ, ಸಿ.ಐ.ಬಿ. ಕಾಲೋನಿ, ಕೇಡೆಕರ ಲೇಔಟ್ , ಎಂ.ಎಸ್.ಕೆ. ಮಿಲ್ ಜಿ.ಡಿ.ಎ, ಎಂ.ಎಸ್.ಕೆ. ಮಿಲ್ ರೆಸಿಡೆನ್ಸ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ದೇವಿನಗರ: ದೇವಿನಗರ, ಸಂತೋಷ ಕಾಲೋನಿ, ಖಾದ್ರಿ ಚೌಕ್, ನಬಿ ಕಾಲೋನಿ, ಚಿಂಚೋಳಿ ಲೇಔಟ್, ಜಾಫರಾಬಾದ್, ಪ್ರಭುದೇವ ನಗರ, ಮಾಳೇವಾಡಿ, ಜೆ.ಆರ್. ನಗರ, ಶೇಖ್ ನಗರ, ವಿಶ್ವರಾಥÀ್ಯ ಕಾಲೋನಿ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಶಾಂತಿ ನಗರ: ಎಂ.ಎಸ್.ಕೆ. ಮಿಲ್ ಗೇಟ್, ಖಾದ್ರಿ ಚೌಕ್, ಮಹ್ಮದಿ ಚೌಕ್, ಗಲಿಬ್ ಕಾಲೋನಿ, ವೆಂಕಟೇಶ್ವರ್ ಗುಡಿ (ಎನ್.ಆರ್. ಕಾಲೋನಿ), ಅಫಜಲಪುರ ಕ್ರಾಸ್ ಪ್ರದೇಶ, ಶಾಂತಿನಗರ, ವಿದ್ಯಾನಗರ, ವಡ್ಡರ ಗಲ್ಲಿ, ಬೋರಾಬಾಯಿ ನಗರ, ಬಸವನಗರ, ಹೀರಾಪುರ, ಮಿಸಬಾ ನಗರ, ಕೆ.ಎಸ್.ಆರ್.ಸಿ. ಕ್ಯಾರ್ಟರ್ರ್ಸ್, ಹೀರಾನಗರ, ಭೀಮನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಗಣೇಶ ನಗರ: ಎಂ.ಬಿ.ನಗರ, ಬಾಕರ್ ಪಂಕ್ಷನ್ ಹಾಲ್, ಆದರ್ಶ ನಗರ ಮತ್ತು ಬಂದೇ ನವಾಜ್ ಕಾಲೋನಿ, ಕೆ.ಹೆಚ್.ಬಿ. ಲೇಔಟ್, ಗಣೇಶ ನಗರ, ಮನಸೂಬ್‍ದಾರ ಲೇಔಟ್, ಆದರ್ಶ ನಗರ ನ್ಯೂ ಜಿ.ಡಿ.ಎ. ಮೇಹತಾ ಲೇಔಟ್ ಮತ್ತು ವೀರೆಂದ್ರ ಪಾಟೀಲ್ ಬಡವಾಣೆ.
ಕೌಶಲ್ಯಾಧಾರಿತ ತರಬೇತಿಗಾಗಿ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹೆಸರು ನೋಂದಣಿ
ಕಲಬುರಗಿ,ಜೂ.02.(ಕ.ವಾ.)-ಕಲಬುರಗಿ ಜಿಲ್ಲೆಯ 18ರಿಂದ 35ವರ್ಷದೊಳಗಿನ ನಿರುದ್ಯೋಗಿ ಯುವಕ ಯುವತಿಯರಿಗೆ ಕೌಶಲ್ಯಾಧಾರಿತ ತರಬೇತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಣಿ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ರಾಜ್ಯದಲ್ಲಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳ ಕೌಶಲ್ಯ ಅಭಿವೃದ್ಧಿ ಇಲಾಖೆ ಸ್ಥಾಪಿಸಲಾಗಿದೆ. ಇದರ ಮೂಲಕ ವಿವಿಧ ಯೋಜನೆಗಳಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡಲಾಗುವುದು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಆಗಮಿಸಿ ಸದರಿ ತಿತಿತಿ.ಞಚಿushಟಞಚಿಡಿ.ಛಿom ವೆಬ್‍ಸೈಟಿನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.












ಹೀಗಾಗಿ ಲೇಖನಗಳು News and photo 02-06-2017

ಎಲ್ಲಾ ಲೇಖನಗಳು ಆಗಿದೆ News and photo 02-06-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo 02-06-2017 ಲಿಂಕ್ ವಿಳಾಸ https://dekalungi.blogspot.com/2017/06/news-and-photo-02-06-2017.html

Subscribe to receive free email updates:

0 Response to "News and photo 02-06-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ