ಶೀರ್ಷಿಕೆ : ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರುಗಳ ಅವಿರೋಧ ಆಯ್ಕೆ
ಲಿಂಕ್ : ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರುಗಳ ಅವಿರೋಧ ಆಯ್ಕೆ
ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರುಗಳ ಅವಿರೋಧ ಆಯ್ಕೆ
ಕೊಪ್ಪಳ, ಜೂ. 05 (ಕರ್ನಾಟಕ ವಾರ್ತೆ): ಕೊಪ್ಪಳ ಯೋಜನಾ ಸಮಿತಿಗೆ ಪಂಚಾಯತಿ ಮತಕ್ಷೇತ್ರದಿಂದ 33 ಸದಸ್ಯರುಗಳು ಹಾಗೂ ಪುರಸಭಾ ಮತಕ್ಷೇತ್ರದಿಂದ 07 ಸದಸ್ಯರು ಸೇರಿದಂತೆ ಒಟ್ಟು 40 ಸದಸ್ಯರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತಿಳಿಸಿದ್ದಾರೆ.
ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರುಗಳನ್ನು ಆಯ್ಕೆ ಮಾಡುವ ಸಲುವಾಗಿ ಇತ್ತೀಚೆಗಷ್ಟೇ ಚುನಾವಣೆ ನಡೆಸಲಾಯಿತು. ಪಂಚಾಯತಿ ಮತಕ್ಷೇತ್ರದಿಂದ 33 ಸದಸ್ಯರುಗಳು ಹಾಗೂ ಪುರಸಭಾ ಮತಕ್ಷೇತ್ರದಿಂದ 07 ಸದಸ್ಯರು ಸೇರಿದಂತೆ ಒಟ್ಟು 40 ಸದಸ್ಯರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಯೋಜನಾ ಸಮಿತಿಗೆ ಪಂಚಾಯತಿ ಮತಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ 33 ಸದಸ್ಯರುಗಳ ವಿವರ ಇಂತಿದೆ. ಬಂಡಿಹರ್ಲಾಪುರ ಕ್ಷೇತ್ರ ತಾ.ಪಂ. ಸದಸ್ಯ ಅಬ್ಬುಲಿಂಗಪ್ಪ ಭೀಮಪ್ಪ, ಹೇರೂರು ಕ್ಷೇತ್ರ ಜಿ.ಪಂ. ಸದಸ್ಯ ಅಮರೇಶಪ್ಪ ಗೋನಾಳ, ಹುಲಿಹೈದರ ತಾ.ಪಂ. ಸದಸ್ಯ ಕನಕಪ್ಪ ಶ್ಯಾಮಪ್ಪ, ಬೆಣಕಲ್ ಕ್ಷೇತ್ರ ತಾ.ಪಂ. ಸದಸ್ಯ ಗವಿಸಿದ್ದಪ್ಪ ಜಂತ್ಲಿ, ಕಂದಕೂರ ಕ್ಷೇತ್ರ ತಾ.ಪಂ. ಸದಸ್ಯ ಗುರುವಿನ ಸಿದ್ದಯ್ಯ, ಗೊಂಡಬಾಳ ಕ್ಷೇತ್ರ ಜಿ.ಪಂ. ಸದಸ್ಯ ಗೂಳಪ್ಪ ಹಲಗೇರಿ, ಗೆದಿಗೇರಿ ಕ್ಷೇತ್ರ ತಾ.ಪಂ. ಸದಸ್ಯೆ ಗೊಲ್ಲರ ಸಾವಿತ್ರಿ ಶರಣಪ್ಪ, ಇಟಗಿ ಕ್ಷೇತ್ರ ಜಿ.ಪಂ. ಸದಸ್ಯೆ ಗಂಗಮ್ಮ ಈಶಣ್ಣ ಗುಳಗಣ್ಣವರ, ತಳುವಗೇರಾ ಕ್ಷೇತ್ರ ತಾ.ಪಂ. ಸದಸ್ಯ ಚನ್ನಪ್ಪ ಮಹಾಂತಪ್ಪ ಮೇಟಿ, ಮರಳಿ ಕ್ಷೇತ್ರ ಜಿ.ಪಂ. ಸದಸ್ಯೆ ಚೆನ್ನುಪಾಟಿ ವಿಜಯಲಕ್ಷ್ಮಿ ಪ್ರಭಾಕರ, ಇರಕಲ್ಲಗಡ ಕ್ಷೇತ್ರ ಜಿ.ಪಂ. ಸದಸ್ಯ ಚೌಡ್ಕಿ ರಾಮಪ್ಪ, ತಳಕಲ್ ಕ್ಷೇತ್ರ ಜಿ.ಪಂ. ಸದಸ್ಯ ಚಂಡೂರು ಹನುಮಂತಗೌಡ ಪಾಟೀಲ, ಕುಣಿಕೇರಿ ಕ್ಷೇತ್ರ ತಾ.ಪಂ. ಸದಸ್ಯ ಚಂದ್ರಕಾಂತ ನಾಯಕ, ಹಿರೇಸಿಂದೋಗಿ ಕ್ಷೇತ್ರ ತಾ.ಪಂ. ಸದಸ್ಯ ನಿಂಗಪ್ಪ ಯತ್ನಟ್ಟಿ, ಹನುಮನಾಳ ಕ್ಷೇತ್ರ ಜಿ.ಪಂ. ಸದಸ್ಯ ನೇಮಣ್ಣ ಮೇಲಸಕ್ರಿ, ಸುಳೇಕಲ್ ಕ್ಷೇತ್ರ ತಾ.ಪಂ. ಸದಸ್ಯ ಬಿ. ಮಲ್ಲಿಕಾರ್ಜುನಗೌಡ ಪೋ.ಪಾಟೀಲ, ಸಿದ್ದಾಪುರ ಕ್ಷೇತ್ರ ತಾ.ಪಂ. ಸದಸ್ಯ ಭಾವಿಪ್ರಕಾಶ ಮಹಾಬಳೇಶ್ವರಪ್ಪ, ಚಳಗೇರಾ ಕ್ಷೇತ್ರ ತಾ.ಪಂ. ಸದಸ್ಯ ಮಲ್ಲಪ್ಪ ಗುಳಗೌಡರ, ಶ್ರೀರಾಮನಗರ ತಾ.ಪಂ. ಸದಸ್ಯ ಮಹ್ಮದ್‍ರಫಿ ಮರ್ದಾನಸಾಬ, ದೋಟಿಹಾಳ ಕ್ಷೇತ್ರ ತಾ.ಪಂ. ಸದಸ್ಯ ಮಹಾಂತಪ್ಪ ಬದಾಮಿ, ಹಿಟ್ನಾಳ ಕ್ಷೇತ್ರ ತಾ.ಪಂ. ಸದಸ್ಯ ಮೂರ್ತೆಪ್ಪ ಯಮನಪ್ಪ ಗಿಣಿಗೇರಿ, ಕ್ಯಾದಿಗುಪ್ಪ ಕ್ಷೇತ್ರ ತಾ.ಪಂ. ಸದಸ್ಯ ಯಂಕಪ್ಪ ಚವ್ಹಾಣ, ಬಳಗೇರಿ ಕ್ಷೇತ್ರ ತಾ.ಪಂ. ಸದಸ್ಯ ರಾಮಪ್ಪ ಹೊಸಮನಿ, ಹಿರೇವಂಕಲಕುಂಟಾ ಕ್ಷೇತ್ರ ತಾ.ಪಂ. ಸದಸ್ಯ ರುದ್ರಪ್ಪ ಹನುಮಪ್ಪ, ಚಳಗೇರಾ ಕ್ಷೇತ್ರ ಜಿ.ಪಂ. ಸದಸ್ಯ ವಿಜಯ ನಾಯಕ ಲಮಾಣಿ, ಹೊಸಲಿಂಗಾಪುರ ಕ್ಷೇತ್ರ ತಾ.ಪಂ. ಸದಸ್ಯ ವೆಂಕಪ್ಪ ಮುದಿಯಪ್ಪ ಹೊಸಳ್ಳಿ, ಬಂಡಿ ಕ್ಷೇತ್ರ ತಾ.ಪಂ. ಸದಸ್ಯ ಶರಣಪ್ಪ ಈಳಿಗೇರ, ಗೌರಿಪುರ ಕ್ಷೇತ್ರ ತಾ.ಪಂ. ಸದಸ್ಯೆ ಶಿವವ್ವ ಚವ್ಹಾಣ, ಮೈಲಾಪುರ ಕ್ಷೇತ್ರ ತಾ.ಪಂ. ಸದಸ್ಯೆ ಶೋಭಾ ಬಸವರಾಜ, ಜುಮ್ಲಾಪುರ ಕ್ಷೇತ್ರ ತಾ.ಪಂ. ಸದಸ್ಯೆ ಸರಸ್ವತಿ ಗಂಗನಾಳ, ಮೆಣೆದಾಳ ಕ್ಷೇತ್ರ ಜಿ.ಪಂ. ಸದಸ್ಯ ಹನುಮನಗೌಡ, ಸಿದ್ದಾಪುರ ಕ್ಷೇತ್ರ ಜಿ.ಪಂ. ಸದಸ್ಯ ಎಚ್. ವಿಶ್ವನಾಥರೆಡ್ಡಿ ಹೊಸಮನಿ ಹಾಗೂ ಹಿರೇವಂಕಲಕುಂಟಾ ಕ್ಷೇತ್ರ ಜಿ.ಪಂ. ಸದಸ್ಯೆ ಹೊಳೆಯಮ್ಮ ಪೊಲೀಸ್ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರಸಭಾ/ಪ.ಪಂ. ಮತಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ 07 ಸದಸ್ಯರುಗಳ ವಿವರ ಇಂತಿದೆ. ಕಾರಟಗಿ ಪುರಸಭೆ ಸದಸ್ಯರುಗಳಾದ ಕೆ.ಹೆಚ್. ಸಂಗನಗೌಡ ಮತ್ತು ಜಿ. ತಿಮ್ಮಣ್ಣಗೌಡ ಬಸವಂತಪ್ಪ. ಕುಕನೂರು ಪ.ಪಂ. ಸದಸ್ಯೆ ನೇತ್ರಾವತಿ ಬಂಡಿ, ಕನಕಗಿರಿ ಪ.ಪಂ. ಸದಸ್ಯ ಮಂಜುನಾಥ ಗಡಾದ, ಭಾಗ್ಯನಗರ ಪ.ಪಂ. ಸದಸ್ಯರುಗಳಾದ ರಮೇಶ ಲಕ್ಷ್ಮಪ್ಪ ಹ್ಯಾಟಿ ಹಾಗೂ ವಿಜಯಕುಮಾರ ಪಾಟೀಲ ಮತ್ತು ಕುಕನೂರು ಪ.ಪಂ. ಸದಸ್ಯ ಸಿರಾಜುದ್ದೀನ್ ಕರಮುಡಿ.
ಹೀಗಾಗಿ ಲೇಖನಗಳು ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರುಗಳ ಅವಿರೋಧ ಆಯ್ಕೆ
ಎಲ್ಲಾ ಲೇಖನಗಳು ಆಗಿದೆ ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರುಗಳ ಅವಿರೋಧ ಆಯ್ಕೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರುಗಳ ಅವಿರೋಧ ಆಯ್ಕೆ ಲಿಂಕ್ ವಿಳಾಸ https://dekalungi.blogspot.com/2017/06/blog-post_90.html
0 Response to "ಜಿಲ್ಲಾ ಯೋಜನಾ ಸಮಿತಿಗೆ ಸದಸ್ಯರುಗಳ ಅವಿರೋಧ ಆಯ್ಕೆ"
ಕಾಮೆಂಟ್ ಪೋಸ್ಟ್ ಮಾಡಿ