ಶೀರ್ಷಿಕೆ : ಗಂಗಾವತಿ: ಬೀದಿ ವ್ಯಾಪಾರಸ್ಥರಿಗೆ ವಿವಿಧ ತರಬೇತಿಗಳ ಕಾರ್ಯಗಾರ
ಲಿಂಕ್ : ಗಂಗಾವತಿ: ಬೀದಿ ವ್ಯಾಪಾರಸ್ಥರಿಗೆ ವಿವಿಧ ತರಬೇತಿಗಳ ಕಾರ್ಯಗಾರ
ಗಂಗಾವತಿ: ಬೀದಿ ವ್ಯಾಪಾರಸ್ಥರಿಗೆ ವಿವಿಧ ತರಬೇತಿಗಳ ಕಾರ್ಯಗಾರ
ಕೊಪ್ಪಳ, ಜೂ. 15 (ಕರ್ನಾಟಕ ವಾರ್ತೆ): ದೀನ ದಯಾಳ ಅಂತ್ಯೋದಯ ರಾಷ್ಟ್ರೀಯ ನಗರ, ಜೀವನೋಪಾಯ ಅಭಿಯಾನ ಯೋಜನೆ, ನಗರಸಭೆ ಗಂಗಾವತಿಯ ಡೇ-ನಲ್ಮ್ ಯೋಜನೆಯಡಿಯಲ್ಲಿ ಸಮೀಕ್ಷೆ ಮೂಲಕ ಗುರುತಿಸಿರುವ ನಗರದ ಬೀದಿ ವ್ಯಾಪಾರಸ್ಥರಿಗೆ ವಿವಿಧ ತರಬೇತಿಗಳ ಕಾರ್ಯಗಾರವನ್ನು ಜೂ. 15 ರಂದು ಬೆಳೆಗ್ಗೆ 10-00 ಗಂಟೆಗೆ ಗಂಗಾವತಿಯ ಐ.ಎಂ.ಎ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಡೇ-ನಲ್ಮ್ ಯೋಜನೆಯಲ್ಲಿ ನಗರದ ಬೀದಿ ವ್ಯಾಪಾರಸ್ಥರಿಗೆ ಬೆಂಬಲ ಉಪಘಟಕದಡಿಯಲ್ಲಿ ಅನುಷ್ಠಾನಗೊಳಿಸುವುದು, ವಿವಿಧ ತರಬೇತಿಗಳನ್ನು ಆಯೋಜಿಸಲಾಗುವುದು, ಬೀದಿ ವ್ಯಾಪಾರಿಗಳ ಜೀವನೋಪಾಯ, ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ-2014, ಬೀದಿ ವ್ಯಾಪಾರಸ್ಥರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಅರಿವು ಮೂಡಿಸುವುದು, ಸಂಚಾರಿ ಪೊಲೀಸ್, ಯೋಜನಾ ಪ್ರಾಧಿಕಾರದ ನೀತಿ ನಿಯಮಗಳು, ಬ್ಯಾಂಕಿನಲ್ಲಿ ಉಳಿತಾಯ ಮಾಡುವ ಹಾಗೂ ವಿಮೆ ಇವುಗಳ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಮುದಾಯ ಅಭಿವೃದ್ಧಿ ತಜ್ಞ ಸಂಜಯ ಡಿ.ಕೋರೆ ದೂ. ಸಂಖ್ಯೆ 9880652783 ಗೆ ಸಂಪರ್ಕಿಸಬಹುದು ಎಂದು ಗಂಗಾವತಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಗಂಗಾವತಿ: ಬೀದಿ ವ್ಯಾಪಾರಸ್ಥರಿಗೆ ವಿವಿಧ ತರಬೇತಿಗಳ ಕಾರ್ಯಗಾರ
ಎಲ್ಲಾ ಲೇಖನಗಳು ಆಗಿದೆ ಗಂಗಾವತಿ: ಬೀದಿ ವ್ಯಾಪಾರಸ್ಥರಿಗೆ ವಿವಿಧ ತರಬೇತಿಗಳ ಕಾರ್ಯಗಾರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಗಂಗಾವತಿ: ಬೀದಿ ವ್ಯಾಪಾರಸ್ಥರಿಗೆ ವಿವಿಧ ತರಬೇತಿಗಳ ಕಾರ್ಯಗಾರ ಲಿಂಕ್ ವಿಳಾಸ https://dekalungi.blogspot.com/2017/06/blog-post_85.html
0 Response to "ಗಂಗಾವತಿ: ಬೀದಿ ವ್ಯಾಪಾರಸ್ಥರಿಗೆ ವಿವಿಧ ತರಬೇತಿಗಳ ಕಾರ್ಯಗಾರ"
ಕಾಮೆಂಟ್ ಪೋಸ್ಟ್ ಮಾಡಿ