ಶೀರ್ಷಿಕೆ : ಅಡುಗೆ ಸಹಾಯಕರು/ಕಾವಲುಗಾರರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ
ಲಿಂಕ್ : ಅಡುಗೆ ಸಹಾಯಕರು/ಕಾವಲುಗಾರರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ
ಅಡುಗೆ ಸಹಾಯಕರು/ಕಾವಲುಗಾರರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ
ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ಖಾಲಿ ಇರುವ ಗ್ರೂಪ್’ಡಿ’ ವೃಂದದ ಅಡುಗೆ ಸಹಾಯಕರು / ಕಾವಲುಗಾರರ ನೇರ ನೇಮಕಾತಿಗಾಗಿ ಈ ಹಿಂದೆ ಆನ್‍ಲೈಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಇದೀಗ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ, ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆ ಹಾಗೂ ದೇಹದಾಢ್ರ್ಯತೆ ಪರೀಕ್ಷೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ.
ಅಡುಗೆ ಸಹಾಯಕರು - 29 ಹುದ್ದೆ ಮತ್ತು ಕಾವಲುಗಾರರು – 24 ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ ಪೈಕಿ 1:5 ರ ಅನುಪಾತದ ಪ್ರಕಾರ ಅರ್ಹ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು www.koppal.nic.in ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ದಾಖಲಾತಿಗಳ ಪರಿಶೀಲನೆ, ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆ ಹಾಗೂ ದೇಹದಾಢ್ರ್ಯತೆ ಪರೀಕ್ಷೆಗೆ ಹಾಜರಾಗಬೇಕು.
ದಾಖಲೆಗಳ ಪರಿಶೀಲನೆಗಾಗಿ, ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 21 ರಂದು ಮತ್ತು ಕಾವಲುಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದವರು ಜೂನ್. 24 ರಂದು ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.
ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಅಡುಗೆ ತಯಾರಿಕ ಪ್ರಾಯೋಗಿಕ ಪರೀಕ್ಷೆ ಜೂನ್. 30 ರಂದು ಮತ್ತು ಕಾವಲುಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ದೇಹದಾಢ್ರ್ಯತೆ ಪರೀಕ್ಷೆ ಜೂನ್. 29 ರಂದು ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರುಗಡೆ ಇರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಏರ್ಪಡಿಸಲಾಗಿದ್ದು, ನಿಗದಿತ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಹಾಜರಾಗಬೇಕು.
ಜುಲೈ. 03 ರಂದು ಅಡುಗೆ ಸಹಾಯಕರ ಹುದ್ದೆಗಳ ಹಾಗೂ ಜು. 05 ರಂದು ಕಾವಲುಗಾರರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹೊರಡಿಸಲಾಗುವುದು. ಆಕ್ಷೇಪಣೆಗಳಿಗೆ ಸಮಜಾಯಿಷಿ ನೀಡಿದ ನಂತರ ಅಡುಗೆ ಸಹಾಯಕರ ಹುದ್ದೆಗೆ ಜುಲೈ. 20 ರಂದು ಹಾಗೂ ಕಾವಲುಗಾರರ ಹುದ್ದೆಗೆ ಜು. 25 ರಂದು ಅಂತಿಮ ಆಯ್ಕೆ ಪಟ್ಟಿ ಹೊರಡಿಸಲಾಗುವುದು ಎಂದು ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಗ್ರೂಪ್-ಡಿ ನೌಕರರ ನೇರ ನೇಮಕಾತಿ ಸಮಿತಿಯ ಅಧ್ಯಕ್ಷರಾದ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಅಡುಗೆ ಸಹಾಯಕರು/ಕಾವಲುಗಾರರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ
ಎಲ್ಲಾ ಲೇಖನಗಳು ಆಗಿದೆ ಅಡುಗೆ ಸಹಾಯಕರು/ಕಾವಲುಗಾರರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಡುಗೆ ಸಹಾಯಕರು/ಕಾವಲುಗಾರರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/06/blog-post_69.html
0 Response to "ಅಡುಗೆ ಸಹಾಯಕರು/ಕಾವಲುಗಾರರ ನೇಮಕಾತಿ : ದಾಖಲೆ ಪರಿಶೀಲನೆಗೆ ಹಾಜರಾಗಲು ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ