ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ

ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ
ಲಿಂಕ್ : ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ

ಓದಿ


ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ

ಕೊಪ್ಪಳ, ಜೂ.22 (ಕರ್ನಾಟಕ ವಾರ್ತೆ) : ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹ ವಿಧಾನದಲ್ಲಿ ಸಾಕಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಇಲಾಖೆಯು ಈಗಾಗಲೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ನಿರ್ದೇಶಕ ಯಾಲಕ್ಕಿ ಗೌಡ ಅವರು ಹೇಳಿದರು.

     ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ದರ ಮತ್ತು ಶುಲ್ಕಗಳನ್ನು ಪರಿಷ್ಕರಿಸುವ ಕುರಿತು ಜಿಲ್ಲಾಡಳಿತ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಅಧಿಕಾರಿಗಳು, ಪಿಡಿಓ, ಕರ ವಸೂಲಿಗಾರರು, ಕಂಪ್ಯೂಟರ್ ಆಪರೇಟರ್ಸ್, ಕಾರ್ಯದರ್ಶಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

     ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಯೋಜನೆಗಳ ಅನುಷ್ಟಾನಗೊಳಿಸುವ ಹೊಣೆಗಾರಿಕೆಯನ್ನು ಬಹುತೇಕವಾಗಿ ಗ್ರಾಮ ಪಂಚಾಯತಿಗಳಿಗೇ ನೀಡಲಾಗುತ್ತಿದ್ದು, ಇದರಿಂದಾಗಿ ಗ್ರಾಮ ಪಂಚಾಯತಿಗಳಿಗೆ ಜವಾಬ್ದಾರಿ ಹೆಚ್ಚಾಗುತ್ತಿದೆ.  ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡುವುದರಿಂದ, ಗ್ರಾಮ ಮಟ್ಟದಲ್ಲಿ ಸುಲಲಿತ ಆಡಳಿತ ನಡೆಯುವುದರ ಜೊತೆಗೆ ಗ್ರಾಮೀಣ ಜನಪ್ರತಿನಿಧಿಗಳಿಗೆ ಹೆಚ್ಚಿನ ಹೊಣೆ ನೀಡುವ ಮೂಲಕ ಅಧಿಕಾರ ವಿಕೇಂದ್ರೀಕರಣಗೊಳಿಸುವುದು ಸರ್ಕಾರದ ಆಶಯವಾಗಿದೆ.  ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ, ವಿವಿಧ ಸೇವೆಗಳ ಶುಲ್ಕ ನಿಗದಿ ಕುರಿತಂತೆ ಹಲವು ಸುಧಾರಣೆಗಳನ್ನು ಕೈಗೊಳ್ಳಲು ಇಲಾಖೆ ಮುಂದಾಗಿದೆ.  ಇದರಿಂದ, ತೆರಿಗೆಯನ್ನು ಸರಿಯಾಗಿ ನೀಡದೆ, ವಂಚಿಸುವವರನ್ನು ಗುರುತಿಸಿ, ವಸೂಲಾತಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದರ ಜೊತೆಗೆ ಸ್ಥಳೀಯ ಆಡಳಿತಕ್ಕೆ ಸಂಪನ್ಮೂಲ ಕ್ರೋಢೀಕರಿಸುವ ಸಾಮಥ್ರ್ಯ ಹೆಚ್ಚಿಸಲು ಸಾಧ್ಯವಾಗಲಿದೆ.  ಗ್ರಾಮ ಪಂಚಾಯತಿಗಳಲ್ಲಿ ಸಿಬ್ಬಂದಿಗಳ ಕೊರತೆಯೂ ಸಹ ಇದ್ದು, ಬರುವ ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿ ನೀಡಲು ಚಿಂತನೆ ನಡೆಸಲಾಗುತ್ತಿದೆ.  ಸ್ವಚ್ಛಭಾರತ ಮಿಷನ್ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ನಿರ್ಮಾಣ ಬಾಕಿ ಇರುವ ಶೌಚಾಲಯಗಳಿಗೆ ಅನುಗುಣವಾಗಿ, ಗುರಿ ನಿಗದಿಪಡಿಸಲು ಉದ್ದೇಶಿಸಲಾಗಿದ್ದು, ಪ್ರತಿ ಕುಟುಂಬಕ್ಕೂ ಮೊಬೈಲ್ ಹೇಗೆ ಅನಿವಾರ್ಯವೋ, ಶೌಚಾಲಯವೂ ಅಷ್ಟೇ ಅನಿವಾರ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ.  ಶೌಚಾಲಯಗಳ ನಿರ್ಮಾಣ ಹಾಗೂ ಬಳಕೆಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು.  ಬಯಲು ಶೌಚ ವ್ಯವಸ್ಥೆ ತೊಲಗಬೇಕು.  ಆಗ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಸಧ್ಯವಾಗಲಿದೆ.  ಪಿಎಂಜಿಎಸ್‍ವೈ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಯೋಜನೆ, ರೆವಲ್ಯೂಷನರಿ ಇಂಡೆಕ್ಸ್ ಸೇರಿದಂತೆ ಹಲವು ವಿಭಾಗಗಳಲ್ಲಿ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದು, ಈ ಎಲ್ಲ ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ನಮ್ಮ ರಾಜ್ಯ ಪಡೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆ ನಿರ್ದೇಶಕ ಯಾಲಕ್ಕಿ ಗೌಡ ಅವರು ಹೇಳಿದರು.
     ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣವನ್ನು ಹೆಚ್ಚಿಸಬೇಕು.  ತೆರಿಗೆ ಸಂಗ್ರಹ ಹೆಚ್ಚಳದಿಂದ ಅಧಿಕಾರಿ, ಸಿಬ್ಬಂದಿಗಳ ವೇತನದ ಮೇಲೆ ನೇರ ಪರಿಣಾಮ ಉಂಟಾಗಲಿದೆ.  ತೆರಿಗೆ ಹಣವನ್ನು ಗ್ರಾಮ ಪಂಚಾಯತಿಗಳು ಸಮರ್ಪಕವಾಗಿ ವಿನಿಯೋಗಿಸಬೇಕು.  ಪಂಚಾಯತಿಗಳಿಗೆ ಶಾಶ್ವತ ಆಸ್ತಿ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.  ಪಂಚಾಯತಿ ಮಟ್ಟದಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ಬಾಹ್ಯ ಒತ್ತಡಗಳು ಬರುವುದು ಸಹಜ.  ಆದರೂ, ನಿಯಮಗಳ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.
     ತೆರಿಗೆ ದರ ಮತ್ತು ಶುಲ್ಕ ಪರಿಷ್ಕರಣೆ ಕುರಿತು ವಿಶೇಷ ಉಪನ್ಯಾಸ ನೀಡಿದ, ಬೆಂಗಳೂರು ನಗರ ಜಿ.ಪಂ.ನ ಸಹಾಯಕ ಯೋಜನಾಧಿಕಾರಿ ಕೆ.ಜಿ. ಜಗದೀಶ್ ಅವರು, ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿ ಸಮರ್ಪಕವಾಗಿ ಆಗುತ್ತಿಲ್ಲ.  ಕರ ವಸೂಲಿಗಾರರು ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ.  ಸಂಪನ್ಮೂಲ ಕ್ರೋಢೀಕರಣದಲ್ಲಿ ಹಿನ್ನಡೆಯಾಗುತ್ತಿದ್ದು, ಹೀಗಾಗಿ ಗ್ರಾಮ ಪಂಚಾಯತಿಗಳು ಸ್ಥಳೀಯ ಸರ್ಕಾರ ಎಂಬ ಮಾತಿಗೆ ಅರ್ಥವಿಲ್ಲದಂತಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯತಿಗಳಿದ್ದು, 18. 30 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಗೆ ಕೇವಲ 1. 15 ಕೋಟಿ ಅಂದರೆ ಶೇ. 6. 31 ರಷ್ಟು ಮಾತ್ರ ತೆರಿಗೆ ವಸೂಲಿ ಮಾಡಲಾಗಿದೆ.  ಬರುವ ದಿನಗಳಲ್ಲಿ ಆಸ್ತಿ ಸಮೀಕ್ಷೆ ಮತ್ತು ಸ್ವಯಂಚಾಲಿತ ತೆರಿಗೆ ಗಣಕೀಕರಣ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದ್ದು, ಸಂಪೂರ್ಣ ಗಣಕೀಕೃತ ಆಸ್ತಿ ನಕ್ಷೆ ತಯಾರಿಸುವುದರ ಜೊತೆಗೆ ಆಸ್ತಿ ಮಾಹಿತಿ ಸಂಪೂರ್ಣವಾಗಿ ಗಣಕೀಕೃತವಾಗಲಿದೆ ಎಂದರು.
     ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಸಹಾಯಕ ನಿರ್ದೇಶಕ ಶರಣಪ್ಪ ಮುಂತಾದವರಿದ್ದರು.  ಕಾರ್ಯಗಾರದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲೆಯ ಗ್ರಾಮ ಪಂಚಾಯತಿಗಳ ಪಿಡಿಒ ಗಳು, ಕರ ವಸೂಲಿಗಾರರು, ಕಂಪ್ಯೂಟರ್ ಆಪರೇಟರ್ಸ್, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ

ಎಲ್ಲಾ ಲೇಖನಗಳು ಆಗಿದೆ ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ ಲಿಂಕ್ ವಿಳಾಸ https://dekalungi.blogspot.com/2017/06/blog-post_684.html

Subscribe to receive free email updates:

0 Response to "ಗ್ರಾ.ಪಂ. ಗಳ ತೆರಿಗೆ ಸಂಗ್ರಹ ವಿಧಾನದಲ್ಲಿ ಸುಧಾರಣೆಗೆ ಕ್ರಮ- ಯಾಲಕ್ಕಿ ಗೌಡ"

ಕಾಮೆಂಟ್‌‌ ಪೋಸ್ಟ್‌ ಮಾಡಿ