ಶೀರ್ಷಿಕೆ : ಕೃಷಿಹೊಂಡಗಳಲ್ಲಿ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು ಕ್ರಮಕ್ಕೆ ಮನವಿ
ಲಿಂಕ್ : ಕೃಷಿಹೊಂಡಗಳಲ್ಲಿ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು ಕ್ರಮಕ್ಕೆ ಮನವಿ
ಕೃಷಿಹೊಂಡಗಳಲ್ಲಿ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು ಕ್ರಮಕ್ಕೆ ಮನವಿ
ಕೊಪ್ಪಳ, ಜೂ. 21 (ಕರ್ನಾಟಕ ವಾರ್ತೆ): ಕೃಷಿ ಭಾಗ್ಯ ಯೋಜನೆಯಡಿ ಈಗಾಲೇ ನಿರ್ಮಿಸಲಾಗಿರುವ ಕೃಷಿಹೊಂಡಗಳು ಮಳೆ ನೀರಿನಿಂದ ತುಂಬಿದ್ದು, ಆಕಸ್ಮಿಕವಾಗಿ ಜನರು ಹಾಗೂ ಜಾನುವಾರುಗಳು ಬಿದ್ದು, ಪ್ರಾಣ ಹಾನಿಯಾಗುವ ಪ್ರಕರಣಗಳನ್ನು ತಪ್ಪಿಸಲು ರೈತರು ಕೆಲವು ಕ್ರಮಗಳನ್ನು ಅನುಸರಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.
ಕೃಷಿ ಹೊಂಡಗಳಲ್ಲಿನ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು, ಕೃಷಿಹೊಂಡದ ಸುತ್ತಲೂ ತಂತಿಬೇಲಿ ನಿರ್ಮಿಸಿಕೊಳ್ಳುವುದು ಸೂಕ್ತ. ಕೃಷಿಹೊಂಡದ ಹತ್ತಿರ ಪ್ರಾಣಾಹಾನಿಯಾಗದಂತೆ ನಿಗಾವಹಿಸಲು ಎಚ್ಚರಿಕೆ ಫಲಕ ಅಳವಡಿಸಬೇಕು. ಕೃಷಿಹೊಂಡದಲ್ಲಿ ಹಗ್ಗಗಳನ್ನು ಇಳಿ ಬಿಡಬೇಕು. ಇದರಿಂದ ಜನರ ಪ್ರಾಣಾಹಾನಿ ತಪ್ಪಿಸಲು ನೆರವಾಗಲಿದೆ. ಪಾಲಿಥೀನ್ ಹೊದಿಕೆ ಅಳವಡಿಸಿರುವ ಕೃಷಿಹೊಂಡದ ಸುತ್ತಲೂ ಇಲಾಖೆಯ ಶೇ.50 ರ ಸಹಾಯಧನದಲ್ಲಿ ಪೂರೈಸುವ ನೆರಳು ಪರದೆ ಅಳವಡಿಸುವುದು. ಮಕ್ಕಳು ಕೃಷಿಹೊಂಡದ ಸಮೀಪ ಬರದಂತೆ ಕಾಳಜಿ ವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ/ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಕೃಷಿಹೊಂಡಗಳಲ್ಲಿ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು ಕ್ರಮಕ್ಕೆ ಮನವಿ
ಎಲ್ಲಾ ಲೇಖನಗಳು ಆಗಿದೆ ಕೃಷಿಹೊಂಡಗಳಲ್ಲಿ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು ಕ್ರಮಕ್ಕೆ ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೃಷಿಹೊಂಡಗಳಲ್ಲಿ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು ಕ್ರಮಕ್ಕೆ ಮನವಿ ಲಿಂಕ್ ವಿಳಾಸ https://dekalungi.blogspot.com/2017/06/blog-post_636.html
0 Response to "ಕೃಷಿಹೊಂಡಗಳಲ್ಲಿ ಆಕಸ್ಮಿಕ ಪ್ರಾಣ ಹಾನಿ ತಪ್ಪಿಸಲು ಕ್ರಮಕ್ಕೆ ಮನವಿ"
ಕಾಮೆಂಟ್ ಪೋಸ್ಟ್ ಮಾಡಿ