ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ

ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ
ಲಿಂಕ್ : ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ

ಓದಿ


ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ



ಕೊಪ್ಪಳ, ಜೂ. 14 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ ಕಾರ್ಯಕ್ರಮವನ್ನು ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಪ್ರಾರಂಭವಾಗಿದ್ದು, ಒಳ್ಳೆಯ ಗುಣಮಟ್ಟದ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ವಿವಿಧ ಬಗೆಯ ಹಣ್ಣುಗಳ ಗಿಡಗಳು ಅತಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುತ್ತಿವೆ.  ಸಾರ್ವಜನಿಕರಿಂದ ಸಸ್ಯ ಸಂತೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಿಳಿಸಿದರು.

     ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಸಸ್ಯ ಸಂತೆ ಕಾರ್ಯಕ್ರಮದಡಿ ಸಾರ್ವಜನಿಕರಿಗೆ ಹೂವು ಹಾಗೂ ಹಣ್ಣಿನ ಗಿಡಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

     ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಲ್ಲದೇ ಸರ್ವತೋಮುಖ ಅಬಿsವೃದಿs್ಧಗಾಗಿ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ ಎನ್ನುವ ಕಾರ್ಯಕ್ರಮವನ್ನು ಜೂ.14 ರಿಂದ ಹತ್ತು ದಿನಗಳ  ಕಾಲ  ಕೊಪ್ಪಳದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿದೆ.
     ತೋಟಗಾರಿಕೆ ಅಭಿಯಾನ ಹಾಗೂ ಸಸ್ಯಸಂತೆ ಕಾರ್ಯಕ್ರಮದಡಿ, ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ತಳಿಗಳಲ್ಲದೇ ಅನೇಕ ವಿಧದ ಕಸಿ / ಸಸಿಗಳು, ಅಲಂಕಾರಿಕ ಸಸ್ಯಗಳು, ಹೂವಿನ ಗಿಡಗಳು, ತರಕಾರಿ, ಔಷಧೀಯ ಮತ್ತು ಸಾಂಬಾರು ಸಸ್ಯಗಳನ್ನು ಇಲಾಖೆಯ ವತಿಯಿಂದ ಯೋಗ್ಯ ದರದಲ್ಲಿ ಪೂರೈಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕೊಪ್ಪಳದ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಜೂ. 14 ರಿಂದ ಹತ್ತು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.  ಸಸ್ಯ ಸಂತೆಯಲ್ಲಿ ಮುನಿರಾಬಾದಿನ ತೋಟಗಾರಿಕೆ ಮಹಾ ವಿದ್ಯಾಲಯ ವತಿಯಿಂದ ಮಧುಮೇಹ ರೋಗಿಗಳಿಗಾಗಿ ‘ಸ್ಟಿವಿಯಾ’ ಎಂಬ ಔಷಧೀಯ ಗಿಡದ ಎಲೆಯಿಂದ ತಯಾರಿಸಿದ ಪುಡಿ ಇಲ್ಲಿ ಅತ್ಯಲ್ಪ ಬೆಲೆಗೆ ಲಭ್ಯವಿದ್ದು, ಇದು ಸಕ್ಕರೆಯ ಬದಲಿಗೆ ಬಳಸಬಹುದಾಗಿದೆ.  ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ.  ಸಸ್ಯ ಸಂತೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾದಲ್ಲಿ ಜೂನ್ ತಿಂಗಳಾಂತ್ಯದವರೆಗೂ ವಿಸ್ತರಿಸುವ ಉದ್ದೇಶವನ್ನು ಹೊಂದಲಾಗಿದೆ.  ಈ ಕಾರ್ಯಕ್ರಮದಲ್ಲಿ ಸಸಿಗಳ ಪೂರೈಕೆ ಅಷ್ಟೇ ಅಲ್ಲದೇ, ಇಲಾಖೆಯ ತಜ್ಞರಿಂದ, ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ, ಕೃಷಿ ವಿಜ್ಞಾನ ಕೇಂದ್ರ  ಗಂಗಾವತಿ, ಕೃಷಿ ವಿಸ್ತರಣಾ  ಶಿಕ್ಷಣ ಘಟಕ ಕೊಪ್ಪಳ ಮುಂತಾದ ಸಂಸ್ಥೆಗಳ  ವಿಜ್ಞಾನಿಗಳಿಂದ  ಸಮಗ್ರ ತಾಂತ್ರಿಕ ಮಾಹಿತಿ ನೀಡಲಾಗುವುದಲ್ಲದೆ, ಅಬಿsನವಶ್ರೀ ಮತ್ತು ಕಪಿಲಶ್ರೀ ರೈತ ಉತ್ಪಾದಕ ಸಂಸ್ಥೆಗಳಿಂದ, ತೋಟಗಾರಿಕೆಯಲ್ಲಿ ಬಳಸಲ್ಪಡುವ ವಿವಿಧ ಪರಿಕರಗಳು, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳು, ಯಂತ್ರಗಳ ಪ್ರದರ್ಶನ ಮತ್ತು ಯೋಗ್ಯ ದರದಲ್ಲಿ  ಇದೇ ಆವರಣದಲ್ಲಿ ಲಭ್ಯವಿದೆ.  ಕೈತೋಟ, ಮನೆಗಳಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವುದು ಹಾಗೂ ಎಲ್ಲ ಬಗೆಯ ಗಿಡಗಳನ್ನು ನೆಡಲು ಇದೇ ವೇದಿಕೆಯಲ್ಲಿ ಸಾರ್ವಜನಿಕರಿಗೆ ತಾಂತ್ರಿಕ ನೆರವು ಹಾಗೂ ಮಾಹಿತಿ ನೀಡಲಾಗುತ್ತಿದೆ.
     ಜಿಲ್ಲೆಯ ವಡ್ಡರಹಟ್ಟಿ, ಮುನಿರಾಬಾದ್, ನೀರಲೂಟಿ, ಬಂಡಿ ಮತ್ತು ಗಿಣಿಗೇರಾ ಸೇರಿದಂತೆ ಒಟ್ಟು 07 ಕಡೆಗಳಲ್ಲಿ ಇಲಾಖೆಯ ಸಸ್ಯಾಗಾರಗಳಿದ್ದು, ಇಲ್ಲಿ ಸಾರ್ವಜನಿಕರಿಗೆಂದೇ ಸುಮಾರು 2. 5 ಲಕ್ಷ ವಿವಿಧ ಬಗೆಯ ಹೂವು ಹಾಗೂ ಹಣ್ಣಿನ ಗಿಡಗಳನ್ನು ಮಾರಾಟಕ್ಕಾಗಿ ಸಿದ್ಧವಿರಿಸಲಾಗಿದೆ.  ಗುಲಾಬಿ, ಮಲ್ಲಿಗೆ, ಗೋಲ್ಡನ್ ದುರಂತೋ, ದಾಸವಾಳ, ಬೋಗನ್ ವಿಲಿಯಾ, ತುಕೋನಿಕಾ, ಕ್ರೋಟಾನ್ಸ್, ಅರೇಲಿಯಾ, ಅಕೇಲಿಫಾ, ದೇವಕಣಗಿಲು, ಅಶೋಕ, ನಾಗಲಿಂಗಪುಷ್ಪ, ಕಾಡು ಬದಾಮಿ, ಡೈಫನ್ ಬೇಕಿಯಾ, ಡ್ರೇಸಿನಾ ವೇರಿಗೇಟೆಡ್ ಮರಂಟಾ, ಸಿಂಗೋನಿಯಂ, ಅರೇಕಾ ಫಾಮ್, ರಾಯಲ್ ಫಾಮ್, ಎರಾಂತಮಮ್, ನಂದಿ ಬಟ್ಟಲು, ಪಾರಿಜಾತ, ಮುಸಂಡಾ, ನೈಟ್ ಕ್ವೀನ್, ಕೋಲಿಯಸ್, ಫೈಕಸ್ ಬೆಂಜಾಮಿನಾ ಸೇರಿದಂತೆ ಸುಮಾರು 40 ಬಗೆಯ ಅಲಂಕಾರಿಕ ಗಿಡಗಳು ಅತ್ಯಲ್ಪ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ.
       ಇದೇ ಮೊದಲ ಬಾರಿಗೆ ಕೊಪ್ಪಳದಲ್ಲಿ ಆಯೋಜಿಸಲಾಗಿರುವ ಸಸ್ಯ ಸಂತೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಾರ್ವಜನಿಕರು ಕೈತೋಟಕ್ಕೆ, ಮನೆಗಳ ಬಳಿ ನೆಡಲು ಅಲಂಕಾರಿಕ ಗಿಡಗಳು, ಕರಿಬೇವು ಗಿಡ, ಗುಲಾಬಿ ಹಾಗೂ ಬಗೆಗೆಯ ಹೂವಿನ ಗಿಡಗಳನ್ನು ಖರೀದಿಸಲು ಮುಂದಾಗಿದ್ದು ಕಂಡುಬಂದಿತು.  ರೈತ ಸಮುದಾಯ ವಿವಿಧ ಬಗೆಯ ಹಣ್ಣಿನ ಗಿಡಗಳು ಹಾಗೂ ಇದರ ತಾಂತ್ರಿಕ ವಿವರಗಳನ್ನು ಅಧಿಕಾರಿಗಳಿಂದ ಪಡೆದುಕೊಳ್ಳುವಲ್ಲಿ ನಿರತರಾಗಿದ್ದರು.  ಕೊಪ್ಪಳ ಜಿಲ್ಲೆಯ ರೈತರು, ಸಾರ್ವಜನಿಕರು ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ ಈ ವಿಶೇಷ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು, ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ತೋಟಗಾರಿಕೆ ಇಲಾಖೆ ( ದೂ.ಸಂ: 0859231530), ಹಾರ್ಟಿ ಕ್ಲಿನಿಕ್ (ಮೊ.ಸಂ : 9482672039) ಅಲ್ಲದೇ ಆಯಾ ತಾಲೂಕಾ    ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಿಳಿಸಿದರು.
     ಹಾರ್ಟಿ ಕ್ಲಿನಿಕ್‍ನ ಸಲಹಾ ತಜ್ಞ ವಾಮನ ಮೂರ್ತಿ, ತೋಟಗಾರಿಕೆ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್ ಸೇರಿದಂತೆ ತೋಟಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಹೀಗಾಗಿ ಲೇಖನಗಳು ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ ಲಿಂಕ್ ವಿಳಾಸ https://dekalungi.blogspot.com/2017/06/blog-post_63.html

Subscribe to receive free email updates:

0 Response to "ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಸಸ್ಯ ಸಂತೆ : ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಫಲ-ಪುಷ್ಪ ಹಾಗೂ ತರಕಾರಿ ಗಿಡಗಳು ಲಭ್ಯ"

ಕಾಮೆಂಟ್‌‌ ಪೋಸ್ಟ್‌ ಮಾಡಿ