ಶೀರ್ಷಿಕೆ : ಹಂಪಿ ಕನ್ನಡ ವಿವಿ : ವಿವಿಧ ಕೋರ್ಸ್‍ಗಳ ಪ್ರವೇಶ ಪ್ರಾರಂಭ
ಲಿಂಕ್ : ಹಂಪಿ ಕನ್ನಡ ವಿವಿ : ವಿವಿಧ ಕೋರ್ಸ್‍ಗಳ ಪ್ರವೇಶ ಪ್ರಾರಂಭ
ಹಂಪಿ ಕನ್ನಡ ವಿವಿ : ವಿವಿಧ ಕೋರ್ಸ್‍ಗಳ ಪ್ರವೇಶ ಪ್ರಾರಂಭ
ಕೊಪ್ಪಳ, ಜೂ. 03 (ಕರ್ನಾಟಕ ವಾರ್ತೆ): ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬಾದಾಮಿ ಕೇಂದ್ರದಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆಗಳ ದೃಶ್ಯ ಕಲಾಮೂಲ ಪ್ರಥಮ (ಆರ್ಟ್ ಫೌಂಡೇಶನ ಪ್ರಥಮ ವರ್ಷ), ದೃಶ್ಯ ಕಲಾಮೂಲ ದ್ವಿತೀಯ (ಆರ್ಟ್ ಫೌಂಡೇಶನ ದ್ವಿತೀಯ ವರ್ಷ) ಹಾಗೂ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ ಪ್ರಸಕ್ತ ಸಾಲಿಗೆ ಪ್ರವೇಶಗಳು ಪ್ರಾರಂಭವಾಗಿವೆ ಎಂದು ಕನ್ನಡ ವಿಶ್ವವಿದ್ಯಾಲಯ, ಹಂಪಿ ಬಾದಾಮಿ ಕೇಂದ್ರ, ಆಡಳಿತಾಧಿಕಾರಿ ತಿಳಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರವಾದ ಬಾದಾಮಿ ಬನಶಂಕರಿಯಲ್ಲಿ ಕಳೆದ 15 ವರ್ಷಗಳಿಂದ ಚಿತ್ರಕಲೆ ಮತ್ತು ಶಿಲ್ಪಕಲೆಗಳ ದೃಶ್ಯ ಕಲಾಮೂಲ ಹಾಗೂ ಪದವಿ ತರಗತಿಗಳನ್ನು ನಡೆಸಲಾಗುತ್ತಿದೆ. ಎಸ್.ಎಸ್.ಎಲ್.ಸಿ ಪಾಸಾದವರಿಗೆ ದೃಶ್ಯ ಕಲಾಮೂಲ ಪ್ರಥಮ ವರ್ಷಕ್ಕೆ ಹಾಗೂ ಪಿ.ಯು.ಸಿ ಪಾಸಾದವರಿಗೆ ನಾಲ್ಕು ವರ್ಷಗಳ ಪದವಿ ತರಗತಿಗೆ ಪ್ರವೇಶ ಪಡೆಯವಬುದು.
ಬಾದಾಮಿ ಕೇಂದ್ರದಲ್ಲಿ ಶಿಲ್ಪಕಲೆಯಲ್ಲಿ ಪ್ರಾದೇಶಿಕವಾಗಿ ದೊರೆಯುವ ಚಾಲುಕ್ಯರ ವಾಸ್ತುಶಿಲ್ಪ ಮತ್ತು ಮೂರ್ತಿ ಶಿಲ್ಪಗಳನ್ನು ಅಭ್ಯಾಸ ಮಾಡಲಾಗುತ್ತಿದೆ. ಅಲ್ಲದೇ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರ, ಹೊಯ್ಸಳರ ಹಾಗೂ ಮೈಸೂರು ಸಂಪ್ರದಾಯ ಶೈಲಿಯ ಶಿಲ್ಪಿಗಳನ್ನು ಅಧ್ಯಯನ ಮಾಡಲಾಗುತ್ತಿದೆ. ಶಿಲ್ಪಿಗಳನ್ನು ಶಿಲೆ, ಕಾಷ್ಠ, ಮಣ್ಣು, ಪಿ.ಓ.ಪಿ ಮಾಧ್ಯಮಗಳಲ್ಲಿ ರಚಿಸಲು ಕಲ್ಪಿಸಲಾಗುತ್ತದೆ. ಶಿಲ್ಪಕಲೆ ಮಾತ್ರವಲ್ಲದೇ ಚಿತ್ರಕಲೆಯನ್ನು ಸಾಂಪ್ರದಾಯಿಕ, ಜನಪದ, ಆಧುನಿಕ ಹಾಗೂ ಸಮಕಾಲಿನ ಪದ್ಧತಿಯಲ್ಲಿ ಭಾವಚಿತ್ರ, ಸಂಯೋಜನಾ ಚಿತ್ರಣ ಹಾಗೂ ಅಲಂಕಾರಿಕ ಚಿತ್ರಗಳನ್ನು ಅಭ್ಯಾಸ ಮಾಡಿಸಲಾಗುತ್ತದೆ. ಕೇಂದ್ರವು ನಾಡೋಜ ಡಾ. ಆರ್.ಎಂ. ಹಡಪದ ಅವರ ಹೆಸರಿನಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆಯ ಸುಸಜ್ಜಿತ ಆರ್ಟ್ ಗ್ಯಾಲರಿಯನ್ನು (ಕಲಾ ಸಂಗ್ರಹಾಲಯ) ಹೊಂದಿದೆ. ಇಲ್ಲಿ ಸಂಪ್ರದಾಯ ಶಿಲ್ಪ ಮತ್ತು ಚಿತ್ರಗಳನ್ನು ಸಂಗ್ರಹಿಸಿದ್ದು, ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ಬಯಸುವ ಆಸಕ್ತ ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ ಪಾಸಾದ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 9449256814 ಹಾಗೂ 9448580056 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಹಂಪಿ ಕನ್ನಡ ವಿವಿ : ವಿವಿಧ ಕೋರ್ಸ್‍ಗಳ ಪ್ರವೇಶ ಪ್ರಾರಂಭ
ಎಲ್ಲಾ ಲೇಖನಗಳು ಆಗಿದೆ ಹಂಪಿ ಕನ್ನಡ ವಿವಿ : ವಿವಿಧ ಕೋರ್ಸ್‍ಗಳ ಪ್ರವೇಶ ಪ್ರಾರಂಭ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಹಂಪಿ ಕನ್ನಡ ವಿವಿ : ವಿವಿಧ ಕೋರ್ಸ್‍ಗಳ ಪ್ರವೇಶ ಪ್ರಾರಂಭ ಲಿಂಕ್ ವಿಳಾಸ https://dekalungi.blogspot.com/2017/06/blog-post_47.html
0 Response to "ಹಂಪಿ ಕನ್ನಡ ವಿವಿ : ವಿವಿಧ ಕೋರ್ಸ್‍ಗಳ ಪ್ರವೇಶ ಪ್ರಾರಂಭ"
ಕಾಮೆಂಟ್ ಪೋಸ್ಟ್ ಮಾಡಿ