ಶೀರ್ಷಿಕೆ : ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ
ಲಿಂಕ್ : ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ
ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ
ಕೊಪ್ಪಳ, ಜೂ. 16 (ಕರ್ನಾಟಕ ವಾರ್ತೆ): ಪ್ರಸಕ್ತ ಸಾಲಿಗಾಗಿ ಒಂದನೇ ತರಗತಿಯಿಂದ ಪದವಿ/ ಡಿಪ್ಲೋಮಾ ವರೆಗೆ ಕರ್ನಾಟಕದಲ್ಲಿರುವ ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಮೂಲ ನಿವಾಸಿ ಮಿಲಿಟರಿ ಪಿಂಚಿಣಿದಾರ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪಿಂಚಿಣಿ ಇಲ್ಲದ ಕರ್ನಾಟಕ ಮಾಜಿ ಸೈನಿಕರು ಹಾಗೂ ಕರ್ನಾಟಕದಲ್ಲಿ ನೆಲೆಸಿರುವ ಹೊರ ರಾಜ್ಯದ ಮಾಜಿ ಸೈನಿಕರ ಮಕ್ಕಳಿಗೂ ಸಹ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಪುಸ್ತಕ ಧನ ಸಹಾಯ ಮತ್ತು ಡಿಗ್ರಿ ಡಿಪ್ಲೋಮಾ, ಜೆಓಸಿ/ ಪ್ರೋಫೇಷನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳ ವಿಶೇಷ ನಿಧಿಯಿಂದ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾಜಿ ಸೈನಿಕರು/ ಅವಲಂಬಿತರು/ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ದಲ್ಲಿ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಬ್ಯಾಂಕ್ ಖಾತೆಯ ರಿಸಿಪೆಂಟ್ ನಂಬರನ್ನು, ಅರ್ಜಿಯ ಜೊತೆಗೆ ಬ್ಯಾಂಕ್ ಖಾತೆ ಪುಸ್ತಕ ಹಾಗೂ ಮಕ್ಕಳ ಆಧಾರ ಕಾರ್ಡ ನೆರಳಚ್ಚು ಪ್ರತಿಯನ್ನು ಲಗತ್ತಿಸಿ ಸೆಪ್ಟೆಂಬರ್. 30 ರೊಳಗಾಗಿ ಸಲ್ಲಿಸಬೇಕು. ನಿಗದಿತ ನಮೂನೆಯ ಅರ್ಜಿ ಫಾರಂಗಳನ್ನು ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಸೆಕ್ಟರ ನಂಬರ 22 ಪೊಲೀಸ್ ಪ್ಯಾಲೇಸ ಹತ್ತಿರ ನವನಗರ ಬಾಗಲಕೋಟ ದೂರವಾಣಿ ಸಂಖ್ಯೆ 08354-235434 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/06/blog-post_44.html
0 Response to "ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯವೇತನ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ