ಶೀರ್ಷಿಕೆ : ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಇಲಾಖೆ ಮನವಿ
ಲಿಂಕ್ : ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಇಲಾಖೆ ಮನವಿ
ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಇಲಾಖೆ ಮನವಿ
ಕೊಪ್ಪಳ, ಜೂ. 17 (ಕರ್ನಾಟಕ ವಾರ್ತೆ): ಕಳೆದ ಕೆಲವು ತಿಂಗಳುಗಳಿಂದಲೂ ಕೃತಕವಾಗಿ ಪ್ಲಾಸ್ಟಿಕ್‍ನಿಂದ ತಯಾರಿಸಿದ ಅಕ್ಕಿ, ಸಕ್ಕರೆ ಮತ್ತು ಮೊಟ್ಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಎನ್ನುವ ಸುಳ್ಳು ಸುದ್ದಿಯು ವ್ಯಾಪಕವಾಗಿ ಮಾಧ್ಯಮಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಪ್ರಕಟವಾಗುತ್ತಿದೆ. ಇಂತಹ ಪದಾರ್ಥಗಳನ್ನು ಪ್ರದರ್ಶಿಸಿದ ವರದಿಗಳು ಸಹಾ ಪ್ರಸಾರವಾಗುತ್ತಿದ್ದು, ಇಂತಹ ಸತ್ಯಕ್ಕೆ ದೂರವಾದ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ಲಾಸ್ಟಿಕ್ ಮೊಟ್ಟೆ : ಮೊಟ್ಟೆಯನ್ನು ಕೃತಕವಾಗಿ ಚೀನಾ ದೇಶದಲ್ಲಿ ತಯಾರಿಸಲಾಗುತ್ತಿದ್ದು, ಭಾರತಕ್ಕೆ ರಫ್ತು ಆಗುತ್ತಿದೆ, ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತಿದೆ ಎಂಬುದು ವಂದತಿಯೇ ಹೊರತು ನಿಜವಲ್ಲ. ನೈಸರ್ಗಿಕ ಮೊಟ್ಟೆಗೆ ಸರಿಸಮನಾದ ಕೃತಕ ಮೊಟ್ಟೆ ತಯಾರಿಸಲು ಸಾಧ್ಯವೇ ಇಲ್ಲ. ಕೃತಕ ಮೊಟ್ಟೆ ತಯಾರಿಸಲು ಒಂದು ಮೊಟ್ಟೆಗೆ ಕನಿಷ್ಟ 250 ರೂ. ವೆಚ್ಚವಾಗಲಿದ್ದು, ಇದೂ ಕೂಡ ನೈಸರ್ಗಿಕ ಮೊಟ್ಟೆಯನ್ನು ಹೋಲುವುದಿಲ್ಲ ಹಾಗೂ ವ್ಯವಹಾರಿಕವಾಗಿಯೂ ಸಾಧ್ಯವಿಲ್ಲ. ರಾಜ್ಯದ ಆಹಾರ ತಜ್ಞರು ಈ ಕುರಿತು ಪರಿಶೀಲಿಸಿದ್ದು, ರಾಜ್ಯದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಮೊಟ್ಟೆ ಬಳಕೆ ಮಾಡಿರುವುದು ಧೃಢಪಟ್ಟಿರುವುದಿಲ್ಲ.
ಪ್ಲಾಸ್ಟಿಕ್ ಅಕ್ಕಿ : ಚೀನಾ ದೇಶದಲ್ಲಿ ತಯಾರಾಗುತ್ತಿದ್ದ ಅಕ್ಕಿಯನ್ನು ಹೋಲುವ ಯಾವುದೋ ಪದಾರ್ಥವನ್ನೇ ಕೃತಕ ಅಕ್ಕಿಯೆಂದು ಬಿಂಬಿಸಿ ಭಾರತದ ಮಾರುಕಟ್ಟೆಗೆ ಸರಬರಾಜಾಗುತ್ತಿದೆ ಎಂದು ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಆದರೆ ಕೃತಕವಾಗಿ 1 ಕೆ.ಜಿ ಅಕ್ಕಿ ತಯಾರಿಸಲು ಅಂದಾಜು 200 ರೂ. ವೆಚ್ಚ ತಗಲುತ್ತದೆ. ಆದರೂ ನೈಸರ್ಗಿಕ ಅಕ್ಕಿಗೆ ಸರಿಸಮಾನಾಗಿ ಭೌದ್ಧಿಕವಾಗಿ ಹಾಗೂ ರಚನಾತ್ಮಕವಾಗಿ ಇರಲು ಸಾಧ್ಯವೆ ಇಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಅಕ್ಕಿ ರೂ. 20-00 ರಿಂದ 40-00 ರೂ. ಗಳಿಗೆ ಸಿಗುತ್ತದೆ. ಆದ್ದರಿಂದ ಇದು ಕೇವಲ ವಂದತಿಯೇ ಹೊರತು ಸತ್ಯವಲ್ಲ. ಈಗಾಗಲೇ ಆಹಾರ ತಜ್ಞರಾದ ಕೆ.ಸಿ. ರಘು ಅವರು ಇದನ್ನು ಸಾರಿ ಸಾರಿ ಸ್ಪಷ್ಟಪಡಿಸಿದ್ದಾರೆ. ಯಾರೂ ಗೊಂದಲಕ್ಕೆ ಈಡಾಗದೇ ಇಂತಹ ವರದಿಗಳನ್ನು ನಂಬಬಾರದು. ಹಾಗೂ ಈ ವಿಷಯದ ಕುರಿತು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಹ ವ್ಯಾಪಕವಾಗಿ ವಿಶ್ಲೇಷಣೆ ಮಾಡಿ ಇದು ಕೇವಲ ಕಳಪೆ ಗುಣಮಟ್ಟದ ಅಕ್ಕಿಯೇ ಹೊರತು ಕೃತಕ ಪ್ಲಾಸ್ಟಿಕ್ ಅಕ್ಕಿ ಅಲ್ಲವೆಂದು ಧೃಢಪಡಿಸಿದ್ದಾರೆ.
ಪ್ಲಾಸ್ಟಿಕ್ ಅಕ್ಕಿ ಪತ್ತೆ ಹಚ್ಚುವಿಕೆ :
************* * ಒಂದು ಚಮಚ ಪ್ಲಾಸ್ಟಿಕ್ ಅಕ್ಕಿಯನ್ನು ಎಣ್ಣೆ ಬಾಣಲಿಗೆ ಹಾಕಿ ಬಿಸಿ ಮಾಡಿದರೆ, ಈ ಅಕ್ಕಿ ಮೆಲ್ಟ್ ಆಗಿ ತಳಕ್ಕೆ ಅಂಟಿಕೊಳ್ಳುತ್ತದೆ. * ಅನ್ನ ಮಾಡುವಾಗ, ಅಕ್ಕಿ ಪ್ಲಾಸ್ಟಿಕ್ ನಿರ್ಮಿತವಾಗಿದ್ದರೆ, ಅನ್ನ ಪಾತ್ರೆಯ ಮೇಲ್ಬಾಗದಲ್ಲಿ ದಪ್ಪ ಪೊರೆಯ ರೀತಿ ಕಟ್ಟಿಕೊಂಡಿರುತ್ತದೆ. * ಅಕ್ಕಿ ನೀರಿನಲ್ಲಿ ತೇಲುವುದಿಲ್ಲ, ಮುಳುಗುತ್ತದೆ. ಆದರೆ ಪ್ಲಾಸ್ಟಿಕ್ ಅಕ್ಕಿ ತೇಲುತ್ತದೆ.
ಸಕ್ಕರೆ :
****** ಸಕ್ಕರೆ ವಿಷಯದಲ್ಲಿಯೂ ಇದೆ ರೀತಿ ಗೊಂದಲ ಮೂಡಿಸಲಾಗುತ್ತಿದ್ದು, ನೈಸರ್ಗಿಕ ಸಕ್ಕರೆ 1 ಕೆ.ಜಿಗೆ ರೂ. 40-00 ಇರುತ್ತದೆ. ಆದರೆ ಸಾಧಾರಣ ಗುಣಮಟ್ಟದ ಒಂದು ಕೆ.ಜಿ ಪ್ಲಾಸ್ಟಿಕ್‍ಗೆ ರೂ. 65 ಆಗುತ್ತದೆ. ಇದನ್ನು ಕೃತಕವಾಗಿ ಸಕ್ಕರೆಯನ್ನಾಗಿ ಪರಿವರ್ತಿಸಲು ಹೆಚ್ಚಿನ ಖರ್ಚು ವೆಚ್ಚ ತಗಲುವುದರಿಂದ ಪ್ಲಾಸ್ಟಿಕ್ ಮಿಶ್ರಿತ ಸಕ್ಕರೆಯನ್ನು ತಯಾರಿಸಿ ಮಾರಾಟ ಮಾಡಲು ಸಾಧ್ಯವಿಲ್ಲ. ಸಕ್ಕರೆಯನ್ನು ದಾಸ್ತಾನು ಮಾಡುವಾಗ ಹಾಳಗದಂತೆ ರಕ್ಷಿಸಲು ಸರ್ಕಾರದ ಆಹಾರ ಇಲಾಖೆ ಮಾರ್ಗಸೂಚಿಯಂತೆ ಸೋಡಿಯಂ ಸಿಲಿಕೇಟ್ ಮತ್ತು ಕ್ಯಾಲ್ಸಿಯಂ ಸಿಲಿಕೇಟ್ ಎನ್ನುವ ರಾಸಾಯನಿಕಗಳನ್ನು ಬಳಸಬಹುದಾಗಿದೆ. ಈ ಎರಡೂ ರಾಸಾಯನಿಕಗಳು ನೀರಿನಲ್ಲಿ ಕರಗುವುದಿಲ್ಲ. ಇದನ್ನೇ ಕೆಲವರು ಕೃತಕ ಸಕ್ಕರೆ ಯೆಂದು ಬಿಂಬಿಸಿರುತ್ತಾರೆ. ಇಂತಹ ವಿಷಯಗಳು ಸುಳ್ಳು ವಂದತಿಗಳಾಗಿರುವುದರಿಂದ ಸಾರ್ವಜನಿಕರು ನಂಬಬಾರದು.
ಈ ಎಲ್ಲ ಅಂಶಗಳ ಕುರಿತು ಕಲಬೆರಕೆಯ ಅತಿರೇಕವೇ ಇಂತಹ ಸುದ್ದಿಗಳಿಗೆ ಹಾಗೂ ಗೊಂದಲಗಳಿಗೆ ಮೂಲವೆಂದು ತಿಳಿಸುತ್ತಾ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಸಕ್ಕರೆ ಮತ್ತು ಪ್ಲಾಸ್ಟಿಕ್ ಮೊಟ್ಟೆ ಎನ್ನುವುದು ಸುಳ್ಳು ವಂದತಿಗಳು. ಇದನ್ನು ಸಾರ್ವಜನಿಕರು ನಂಬಕೂಡದು ಹಾಗೂ ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಆಹಾತ ತಜ್ಞರು ದೃಢಪಡಿಸಿರುವುದರಿಂದ ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ಇಂತಹ ಊಹಾಪೋಹಗಳು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಆಹಾರ ಸುರಕ್ಷಾ ಇಲಾಖೆ ಗಮನಕ್ಕೆ ತರಲು ಕೊಪ್ಪಳ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಸಿ.ಡಿ. ಗೀತಾ ಅವರು ಪ್ರಕಟಣೆ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹೀಗಾಗಿ ಲೇಖನಗಳು ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಇಲಾಖೆ ಮನವಿ
ಎಲ್ಲಾ ಲೇಖನಗಳು ಆಗಿದೆ ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಇಲಾಖೆ ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಇಲಾಖೆ ಮನವಿ ಲಿಂಕ್ ವಿಳಾಸ https://dekalungi.blogspot.com/2017/06/blog-post_338.html
0 Response to "ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ ಹಾಗೂ ಮೊಟ್ಟೆ ವದಂತಿಗಳಿಗೆ ಕಿವಿಗೊಡದಂತೆ ಆಹಾರ ಇಲಾಖೆ ಮನವಿ"
ಕಾಮೆಂಟ್ ಪೋಸ್ಟ್ ಮಾಡಿ