ಶೀರ್ಷಿಕೆ : ನವಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ : ಆದಾಪೂರ ಕೆರೆಯಲ್ಲಿ ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಪಾಠ
ಲಿಂಕ್ : ನವಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ : ಆದಾಪೂರ ಕೆರೆಯಲ್ಲಿ ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಪಾಠ
ನವಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ : ಆದಾಪೂರ ಕೆರೆಯಲ್ಲಿ ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಪಾಠ
ಕೊಪ್ಪಳ ಜೂ. 14 (ಕರ್ನಾಟಕ ವಾರ್ತೆ): ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಗಂಗಾವತಿ ತಾಲೂಕು ನವಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದಾಪೂರ ಕೆರೆಯಲ್ಲಿ 1100 ಕೂಲಿಕಾರರು ಕೆಲಸದಲ್ಲಿ ತೊಡಗಿಕೊಂಡಿದ್ದು, ಇಲ್ಲಿ ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಪಾಠವನ್ನೂ ಕಲಿಸಲಾಗುತ್ತಿದೆ.
ನವಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆದಾಪುರ ಕೆರೆ ಅಭಿವೃದ್ಧಿ ಕಾರ್ಯವನ್ನು ಉದ್ಯೋಗಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡಿದ್ದು, ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಕೂಲಿಕಾರರ ಮಕ್ಕಳು ಕೆರೆಯ ಅಭಿವೃದ್ಧಿ ಕಾರ್ಯದ ಸ್ಥಳಕ್ಕೆ ಬಂದ ಹಿನ್ನೆಲೆಯಲ್ಲಿ, ಬಂದಂತಹ ಎಲ್ಲಾ ಮಕ್ಕಳಿಗೂ ಆಟದೊಂದಿಗೆ ಪಾಠವನ್ನು ಹೇಳಿಕೊಟ್ಟು, ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇದರಿಂದ ಕೂಲಿಕಾರರು ನಮ್ಮ ಮಕ್ಕಳಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಅಕ್ಷರ ಕಲಿಕೆ ಅಭಿಯಾನ ಮಾಡಿರುವುದರಿಂದ ಹರ್ಷ ವ್ಯಕ್ತಪಡಿಸಿದರು. ಮೈಲಾಪೂರ ಮತ್ತು ಬೇವಿನಾಳ ಗ್ರಾಮದ 1100 ಕೂಲಿಕಾರರು ಕೆರೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿದ ಎಲ್ಲಾ ಕೂಲಿಕಾರರಿಗೂ ಸಕಾಲದಲ್ಲಿ ಅವರವರ ವೈಯಕ್ತಿಕ ಬ್ಯಾಂಕ್ ಖಾತೆಗೆ ಇ-ಎಫ್.ಎಂ.ಎಸ್ ಮೂಲಕ ನೇರವಾಗಿ ಕೂಲಿ ಹಣ ಪಾವತಿಸಲಾಗಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಐ.ಇ.ಸಿ. ಸಂಯೋಕ ಶ್ರೀನಿವಾಸ ಚಿತ್ರಗಾರ, ರೋಜ್‍ಗಾರ್ ದಿವಸ್ ಆಚರಿಸಿ ಕಾಯಕ ಬಂಧುಗಳ ಮತ್ತು ಕೂಲಿಕಾರರ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ವಿವರಿಸಿದರು. ಕೂಲಿಕಾರರಿಗೆ ಕೆರೆ ಅಭಿವೃದ್ದಿಯೊಂದಿಗೆ ಕೃಷಿ ಹೊಂಡ, ದನದದೊಡ್ಡಿ, ಕೊಳವೆ ಭಾವಿ ಮರುಪೂರಣ ಘಟಕ ಇನ್ನಿತರೆ ಕಾಮಾಗರಿಗಳಲ್ಲಿ ಕೆಲಸ ನಿರ್ವಹಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿಅಧಿಕಾರಿಗಳು, ತಾಲ್ಲೂಕು ಐ.ಇ.ಸಿ ಸಂಯೋಜಕರು, ತಾಂತ್ರಿಕ ಸಹಾಯಕರು, ಬಿ.ಎಫ್.ಟಿ. ಮತ್ತು ಗಣಕಯಂತ್ರ ನಿರ್ವಾಹಕರು ಹಾಜರಿದ್ದರು.
ಹೀಗಾಗಿ ಲೇಖನಗಳು ನವಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ : ಆದಾಪೂರ ಕೆರೆಯಲ್ಲಿ ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಪಾಠ
ಎಲ್ಲಾ ಲೇಖನಗಳು ಆಗಿದೆ ನವಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ : ಆದಾಪೂರ ಕೆರೆಯಲ್ಲಿ ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಪಾಠ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನವಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ : ಆದಾಪೂರ ಕೆರೆಯಲ್ಲಿ ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಪಾಠ ಲಿಂಕ್ ವಿಳಾಸ https://dekalungi.blogspot.com/2017/06/blog-post_2.html
0 Response to "ನವಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ : ಆದಾಪೂರ ಕೆರೆಯಲ್ಲಿ ಕೂಲಿಕಾರರ ಮಕ್ಕಳಿಗೆ ಆಟದೊಂದಿಗೆ ಪಾಠ"
ಕಾಮೆಂಟ್ ಪೋಸ್ಟ್ ಮಾಡಿ