ಶೀರ್ಷಿಕೆ : ವಿಶ್ವದ ಮನ್ನಣೆ ಪಡೆದಿದೆ ಭಾರತದ ಯೋಗ : ಕರಡಿ ಸಂಗಣ್ಣ
ಲಿಂಕ್ : ವಿಶ್ವದ ಮನ್ನಣೆ ಪಡೆದಿದೆ ಭಾರತದ ಯೋಗ : ಕರಡಿ ಸಂಗಣ್ಣ
ವಿಶ್ವದ ಮನ್ನಣೆ ಪಡೆದಿದೆ ಭಾರತದ ಯೋಗ : ಕರಡಿ ಸಂಗಣ್ಣ
ಕೊಪ್ಪಳ, ಜೂ.21 (ಕರ್ನಾಟಕ ವಾರ್ತೆ) : ಭಾರತ ದೇಶದಲ್ಲಿ ಋಷಿ-ಮುನಿಗಳಿಂದ ಪರಂಪರಾಗತವಾಗಿ ಬಂದಿರುವ ಭಾರತದ ಯೋಗವು ಇಡೀ ವಿಶ್ವದ ಮನ್ನಣೆಯನ್ನು ಪಡೆದಿದ್ದು, ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ಭಾರತದಲ್ಲಷ್ಟೇ ಅಲ್ಲದೇ, ಜಗತ್ತಿನ ಸುಮಾರು 181 ದೇಶಗಳು ಆಚರಿಸುತ್ತಿರುವುದೇ ಇದಕ್ಕೆ ನಿದರ್ಶನವಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಆಯುಷ್ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರದಂದು ಏರ್ಪಡಿಸಲಾಗಿದ್ದ ಮೂರನೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗವು ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದ್ದು, ಋಷಿ-ಮುನಿಗಳು ಪರಿಚಯಿಸಿದ ಯೋಗದ ಮಹತ್ವದಿಂದಾಗಿ ಇಡೀ ಜಗತ್ತು ಭಾರತದತ್ತ ತಿರುಗು ನೋಡುವಂತಾಗಿದೆ. ಜಗತ್ತಿಗೆ ಭಾರತದ ಕೊಡುಗೆಯಾಗಿರುವ ಯೋಗವು ಇಂದು ಯಾವುದೇ ಧರ್ಮಕ್ಕೆ ಸೀಮಿತಗೊಳ್ಳದೇ ವಿಶ್ವ ವ್ಯಾಪ್ತಿಯಾಗಿ ಬೆಳೆದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದೀಗ ಯೋಗ ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದ್ದು, ಜಗತ್ತಿನ 181 ದೇಶಗಳು ಇಂದು ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ. ಯೋಗಕ್ಕೆ ಹೆಚ್ಚಿನ ಮಹತ್ವ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇದರ ಶ್ರೇಯಸ್ಸು ಸಲ್ಲಬೇಕು. ಒತ್ತಡದ ನಡುವೆ ಬದುಕು ಸಾಗಿಸುವ ಇಂದಿನ ಜೀವನ ಶೈಲಿಗೆ ಯೋಗ ಅವಶ್ಯಕವಾಗಿ ಬೇಕಾಗಿದ್ದು, ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಲ್ಲರು. ದಿನನಿತ್ಯ ಯೋಗಾಭ್ಯಾಸ ಮಾಡುವವರು, ಇಡೀ ದಿನ ಹುರುಪಿನಿಂದ ಹಾಗೂ ಚೈತನ್ಯದಿಂದ ಕಾರ್ಯ ನಿರ್ವಹಿಸಲು ಸಾಧ್ಯವಿದೆ. ಯೋಗವು ಇಂದಿನ ಸಾಮಾಜಿಕ ಬದುಕಿನಲ್ಲಿನ ಒತ್ತಡಗಳನ್ನು ಕೆಲವೇ ನಿಮಿಷಗಳಲ್ಲಿ ನಿವಾರಿಸುವ ದಿವ್ಯ ಔಷಧಿಯಾಗಿದೆ. ಯೋಗದಿಂದ ಬದುಕಿನಲ್ಲಿ ಏಕಾಗ್ರತೆ ಹಾಗೂ ದೃಢ ಮನಸ್ಸು ಪಡೆಯಲು ಸಾಧ್ಯವಿದೆ. ಬದುಕಿನ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ನೀಡುವ ಸಾಮಥ್ರ್ಯ ಯೋಗಕ್ಕಿದೆ. ಹೀಗಾಗಿಯೇ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಯೋಗಕ್ಕೆ ಮೊರೆಹೋಗುತ್ತಿದ್ದು, ಯುವಕರು ಕೂಡ ಯೋಗಕ್ಕೆ ಹತ್ತಿರವಾಗುತ್ತಿದ್ದಾರೆ. ಪ್ರತಿಯೊಬ್ಬರು ತಮ್ಮ ದೈನಂದಿನ ಜೀವನದಲ್ಲಿ ದಿನಕ್ಕೆ ಒಂದು ತಾಸು ಯೋಗಕ್ಕೆ ಮೀಸಲಿಡುವುದು ಅಗತ್ಯ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ಮಾತನಾಡಿ, ಜೀವನದಲ್ಲಿ ಏನನ್ನಾದರೂ ಸಾಧಿಸಲು ಏಕಾಗ್ರತೆ ಹಾಗೂ ಶ್ರದ್ಧ ಬೇಕು. ಯೋಗದಿಂದ ಮಾತ್ರ ಏಕಾಗ್ರತೆ ಪಡೆಯಲು ಸಾಧ್ಯವಿದೆ. ರಕ್ತದೊತ್ತಡದಂತಹ ರೋಗಗಳನ್ನು ನಿಗ್ರಹಿಸಲು ಯೋಗ ಉತ್ತಮ ವಿಧಾನವಾಗಿದೆ. ಯೋಗ ಶಿಬಿರಗಳು ವರ್ಷಕ್ಕೊಮ್ಮೆ ಮಾತ್ರ ನಡೆಯದೆ, ನಿರಂತರವಾಗಿ ನಡೆಯಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ಯೋಗಾಭ್ಯಾಸ ಕೇವಲ ದಿನಾಚರಣೆ ದಿನದಂದು ಮಾತ್ರ ಸೀಮಿತವಾಗಬಾರದು. ದೈನಂದಿನ ಬದುಕಿನ ಚಟುವಟಿಕೆಯ ಭಾಗವಾಗಬೇಕು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು, ಶಾಂತ ಮನಸ್ಸು ಕಾಪಾಡಿಕೊಳ್ಳಲು ಯೋಗದಿಂದ ಸಾಧ್ಯ ಎಂದರು.
ಸಮಾರಂಭಕ್ಕೂ ಮುನ್ನ ಜಿಲ್ಲಾ ಕ್ರೀಡಾಂಗಣದಲ್ಲಿ ಕೊಪ್ಪಳದ ಯೋಗ ಗುರು ಅಶೋಕಸ್ವಾಮಿ ಹಿರೇಮಠ ಅವರು, ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ನಡೆಸಿಕೊಟ್ಟರು. ಜಿಲ್ಲಾ ಆಯುಷ್ ಅಧಿಕಾರಿ ಬಸಪ್ಪ ವಾಲಿಕಾರ್, ಈಶ್ವರಿ ವಿಶ್ವವಿದ್ಯಾಲಯದ ಯೋಗಿನಿ ಅಕ್ಕ, ನಗರಸಭೆ ಪೌರಾಯುಕ್ತ ಪರಮೇಶ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್, ಆರ್ಟ್ ಆಫ್ ಲಿವಿಂಗ್‍ನ ಡಾ. ಎಲ್. ಜುಕ್ತಿಮಠ, ಶರಣಪ್ಪ, ರೇಣುಕಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೀಗಾಗಿ ಲೇಖನಗಳು ವಿಶ್ವದ ಮನ್ನಣೆ ಪಡೆದಿದೆ ಭಾರತದ ಯೋಗ : ಕರಡಿ ಸಂಗಣ್ಣ
ಎಲ್ಲಾ ಲೇಖನಗಳು ಆಗಿದೆ ವಿಶ್ವದ ಮನ್ನಣೆ ಪಡೆದಿದೆ ಭಾರತದ ಯೋಗ : ಕರಡಿ ಸಂಗಣ್ಣ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಶ್ವದ ಮನ್ನಣೆ ಪಡೆದಿದೆ ಭಾರತದ ಯೋಗ : ಕರಡಿ ಸಂಗಣ್ಣ ಲಿಂಕ್ ವಿಳಾಸ https://dekalungi.blogspot.com/2017/06/blog-post_192.html
ಪ್ರತ್ಯುತ್ತರಅಳಿಸಿtweakbit-fixmypc-crack is a program used to update the driver. It is specially designed to detect and solve computer problems. This program checks for corrupted or incorrect window files to find all computer problems and solve all computer problems.
freeprokeys
Alien Isolation
ಪ್ರತ್ಯುತ್ತರಅಳಿಸಿCorelDraw Graphics Suite Crack
Alien Isolation
ಪ್ರತ್ಯುತ್ತರಅಳಿಸಿCorelDraw Graphics Suite Crack
easeus data recovery wizard crack
ಪ್ರತ್ಯುತ್ತರಅಳಿಸಿavira antivirus pro crack
spyhunter crack
hma pro vpn crack
minitool partition wizard technician-crack