ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ

ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ
ಲಿಂಕ್ : ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ

ಓದಿ


ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ


ಕೊಪ್ಪಳ ಜೂ. 09 (ಕರ್ನಾಟಕ ವಾರ್ತೆ): ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ಉಂಟಾದ ಕಾರಣ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ವಿತರಿಸುವುದಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಗೆ ಒಟ್ಟಾರೆ 96. 61 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈವರೆಗೆ 92435 ರೈತರಿಗೆ 77. 61 ಕೋಟಿ ರೂ. ಪರಿಹಾರ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಪ್ರಸಕ್ತ ಮುಂಗಾರು ಹಂಗಾಮಿನ ಸಿದ್ಧತೆ ಹಾಗೂ ಮಳೆಗಾಲದಲ್ಲಿ ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯ ಕಾರಣದಿಂದಾಗಿ ಬರ ಪರಿಸ್ಥಿತಿ ತಲೆದೋರಿತ್ತು.  ಮಳೆಯ ವೈಫಲ್ಯದಿಂದಾಗಿ ರೈತರು ಬೆಳೆ ನಷ್ಟ ಅನುಭವಿಸಿದ್ದರು.  ಬೆಳೆ ನಷ್ಟ ಪರಿಹಾರಕ್ಕಾಗಿ ಸರ್ಕಾರ ಹಂತ ಹಂತವಾಗಿ ಅನುದಾನ ಒದಗಿಸಿದ್ದು, ಒಟ್ಟಾರೆ 06 ಹಂತಗಳಲ್ಲಿ ಜಿಲ್ಲೆಯ 92435 ರೈತರಿಗೆ 77. 61 ಕೋಟಿ ರೂ. ಪರಿಹಾರ ಹಣ ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ.  ಪರಿಹಾರ ಹಣ ಪಡೆಯಲು ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿಸುವುದು ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ ಈವರೆಗೂ 16018 ರೈತರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಸಿಲ್ಲ.  ಆಧಾರ್ ಸಂಖ್ಯೆ ಜೋಡಣೆಯ ತೊಂದರೆ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಪರಿಹಾರ ಹಣವನ್ನು ಇದುವರೆಗೂ ಪಡೆಯದಿರುವ ರೈತರಿಗೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದಲೇ ಪರಿಹಾರ ಹಣ ಪಾವತಿಸುವಂತಾಗಲು ಸರ್ಕಾರ ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ಹೆಚ್ಚುವರಿಯಾಗಿ ಕೊಪ್ಪಳ ಜಿಲ್ಲೆಗೆ 19 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.  ಹೀಗಾಗಿ ಮುಂಗಾರು ಹಂಗಾಮಿನ ಬೆಳೆ ನಷ್ಟ ಅನುಭವಿಸಿದ ರೈತರಿಗಾಗಿ ಪರಿಹಾರ ವಿತರಿಸಲು ಒಟ್ಟಾರೆ 96. 61 ಕೋಟಿ ರೂ. ಅನುದಾನ ಒದಗಿಸಿದಂತಾಗಿದೆ.  ವಿವಿಧ ಜಿಲ್ಲೆಗಳಿಗೆ ಹೋಲಿಸಿದಲ್ಲಿ, ಕೊಪ್ಪಳ ಜಿಲ್ಲೆಗೆ ಅತಿ ಹೆಚ್ಚು ಅನುದಾನ ಒದಗಿಸಿರುವುದು ಕಂಡುಬಂದಿದೆ.  ಇದುವರೆಗೂ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿದ್ದರೂ, ಬ್ಯಾಂಕ್‍ಗಳಲ್ಲಿ ಇನ್ನೂ ಅಪ್‍ಡೇಟ್ ಆಗದಿರುವ ಕಾರಣದಿಂದಾಗಿ, ಕೆಲ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಜಮಾ ಆಗುವುದು ವಿಳಂಬವಾಗುತ್ತಿದೆ.  ತಹಸಿಲ್ದಾರರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕು.  ಸಂಬಂಧಪಟ್ಟ ಬ್ಯಾಂಕ್‍ಗಳೊಂದಿಗೆ ನಿರಂತರ ಸಂಪರ್ಕ ಮಾಡಿ, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಹಸಿಲ್ದಾರರಿಗೆ ಸೂಚನೆ ನೀಡಿದರು.
32. 54 ಕೋಟಿ ರೂ. ಬೆಳೆ ವಿಮೆ ಪರಿಹಾರ :
************ ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿದೆ.  ಜಿಲ್ಲೆಗೆ ಈಗಾಗಲೆ ಮೊದಲ ಹಂತದಲ್ಲಿ 14399 ರೈತರಿಗೆ 32. 54 ಕೋಟಿ ರೂ. ವಿಮೆ ಪರಿಹಾರ ಪಾವತಿಯಾಗಿದೆ ಎಂದು ಜಂಟಿಕೃಷಿ ನಿರ್ದೇಶಕ ವೀರೇಶ ಹುನಗುಂದ ಅವರು ಸಭೆಗೆ ಮಾಹಿತಿ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಬೆಳೆ ವಿಮೆ ಮಾಡಿಸುವ ಕುರಿತಂತೆ ರೈತರಲ್ಲಿ ಜಾಗೃತಿ ಮೂಡಿಸಿ, ಎಲ್ಲ ರೈತರು ಬೆಳೆ ವಿಮೆ ವ್ಯಾಪ್ತಿಗೆ ಬರುವಂತಾಗಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಬೀಜ-ಗೊಬ್ಬರದ ಕೊರತೆ ಇಲ್ಲ :
*************ಜಿಲ್ಲೆಯಲ್ಲಿ ಈ ವರ್ಷದ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಸಾಕಷ್ಟು ಇದ್ದು, ಯಾವುದೇ ಕೊರತೆ ಇಲ್ಲ.  ಕಳೆದ ವರ್ಷ ಮಳೆಯ ಕೊರತೆಯ ಕಾರಣದಿಂದಾಗಿ ರಸಗೊಬ್ಬರ ಹೆಚ್ಚಾಗಿ ವಿತರಣೆ ಆಗದಿರುವುದರಿಂದ, ಸಾಕಷ್ಟು ಗೊಬ್ಬರದ ದಾಸ್ತಾನು ಇದೆ.  ಸದ್ಯ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ಸಂಯುಕ್ತ ಸೇರಿದಂತೆ 38578 ಟನ್ ರಸಗೊಬ್ಬರದ ದಾಸ್ತಾನು ಇದೆ.  ಬಿತ್ತನೆ ಬೀಜಕ್ಕೆ ಸಂಬಂಧಿಸಿದಂತೆ ಸದ್ಯ ಜೋಳ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು, ಸೂರ್ಯಕಾಂತಿ ಬೆಳೆಗಳ ಬಿತ್ತನೆ ಬೀಜ ಸಾಕಷ್ಟು ದಾಸ್ತಾನು ಇದೆ.  ಜಿಲ್ಲೆಯಲ್ಲಿ ಒಟ್ಟು 2824 ಕ್ವಿಂ. ಬಿತ್ತನೆ ಬೀಜ ಲಭ್ಯವಿದೆ.  ಬಿತ್ತನೆ ಬೀಜ ಸಮರ್ಪಕವಾಗಿ ರೈತರಿಗೆ ವಿತರಣೆ ಮಾಡುವ ಉದ್ದೇಶದಿಂದ ಜಿಲ್ಲೆಯ ಒಟ್ಟು 20 ರೈತ ಸಂಪರ್ಕ ಕೇಂದ್ರಗಳ ಜೊತೆಗೆ ಹೆಚ್ಚುವರಿಯಾಗಿ ಕಿನ್ನಾಳ, ಬೇವೂರು, ತಳಕಲ್ ನಲ್ಲಿನ ಪ್ರಾಥಮಿಕ ಕೃಷಿ ಪತ್ತಿಹ ಸಹಕಾರ ಸಂಘಗಳು ಹಾಗೂ ಇಂದರಗಿ, ಹಿರೇಸಿಂದೋಗಿ, ಚಳಗೇರಾ, ದೋಟಿಹಾಳ ಮತ್ತು ಯರಗೇರಾ ನಲ್ಲಿ ಹೆಚ್ಚುವರಿ ಕೇಂದ್ರಗಳಿಂದ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಂಟಿಕೃಷಿ ನಿರ್ದೇಶಕ ವೀರೇಶ್ ಹುನಗುಂದ ಅವರು ಸಭೆಗೆ ಮಾಹಿತಿ ನೀಡಿದರು.  ಜಿಲ್ಲೆಯಲ್ಲಿ ಒಟ್ಟಾರೆಯಾಗಿ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಯಾವುದೇ ಕೊರತೆಯಾಗಬಾರದು.  ಹಾಗೂ ರೈತರಿಗೆ ಸಮರ್ಪಕ ವಿತರಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸೂಚನೆ ನೀಡಿದರು.
ಮುಂಗಾರು ಆಶಾದಾಯಕ :
************* ಪ್ರಸಕ್ತ ವರ್ಷದ ಮುಂಗಾರು ಮಳೆ ಆಶಾದಾಯಕವಾಗಿದ್ದು, ಜೂನ್ ತಿಂಗಳಿನಲ್ಲಿ 23. 90 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 39. 40 ಮಿ.ಮೀ. ಮಳೆಯಾಗಿದೆ.  ಯಲಬುರ್ಗಾ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೆ, ಗಂಗಾವತಿ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ.  ಕೊಪ್ಪಳ ತಾಲೂಕಿನಲ್ಲಿ 42. 40 ಮಿ.ಮೀ., ಕುಷ್ಟಗಿ-40. 80 ಮಿ.ಮೀ., ಯಲಬುರ್ಗಾ- 52. 50 ಮಿ.ಮೀ., ಹಾಗೂ ಗಂಗಾವತಿ ತಾಲೂಕಿನಲ್ಲಿ 20. 20 ಮಿ.ಮೀ. ಮಳೆಯಾಗಿದೆ.  ಪ್ರಸಕ್ತ ವರ್ಷ ಜನವರಿಯಿಂದ ಮೇ ವರೆಗಿನ ಪೂರ್ವ ಮುಂಗಾರು ಮಳೆಗೆ ಸಂಬಂಧಿಸಿದಂತೆ 81. 40 ಮಿ.ಮೀ. ವಾಡಿಕೆ ಮಳೆಯ ಬದಲಿಗೆ 59. 70 ಮಿ.ಮೀ. ಮಳೆಯಾಗಿದೆ.  ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ಆಶಾಭಾವನೆಯನ್ನು ಹೊಂದಿದ್ದೇವೆ.  ಮುಂಗಾರು ಹಂಗಾಮಿನಲ್ಲಿ 2. 52 ಲಕ್ಷ ಹೆ. ಬಿತ್ತನೆ ಗುರಿ ಇದ್ದು, ಈವರೆಗೆ 11770 ಹೆ. ಬಿತ್ತನೆಯಾಗಿದೆ ಎಂದು ಜಂಟಿಕೃಷಿ ನಿರ್ದೇಶಕರು ವಿವರಿಸಿದರು.
     ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ, ಉಪವಿಭಾಗಾಧಿಕಾರಿ  ಗುರುದತ್ ಹೆಗ್ಡೆ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಸೇರಿದಂತೆ ಎಲ್ಲ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ನಗರಸಭೆ, ಪುರಸಭೆ, ಪ.ಪಂ. ಗಳ ಮುಖ್ಯಾಧಿಕಾರಿಗಳು ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ

ಎಲ್ಲಾ ಲೇಖನಗಳು ಆಗಿದೆ ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2017/06/96-61.html

Subscribe to receive free email updates:

0 Response to "ಮುಂಗಾರು ಬೆಳೆ ಹಾನಿ ಪರಿಹಾರ : ಕೊಪ್ಪಳ ಜಿಲ್ಲೆಗೆ 96. 61 ಕೋಟಿ ರೂ. ಬಿಡುಗಡೆ- ಎಂ. ಕನಗವಲ್ಲಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ