ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ

ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ
ಲಿಂಕ್ : ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ

ಓದಿ


ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ


ಕೊಪ್ಪಳ, ಜೂ. 01 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರ ಪಟ್ಟಣಕ್ಕೆ ಹೊಸ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ರೂ. 6 ಕೋಟಿ ಮಂಜೂರು ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಹೇಳಿದರು.

ಕೊಪ್ಪಳ ಜಿಲ್ಲಾಡಳಿತ ಮತ್ತು ಕುಕನೂರ ಪಟ್ಟಣ ಪಂಚಾಯತ್ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್.ಸಿ ಹಾಗೂ 14ನೇ ಹಣಕಾಸು ಯೋಜನೆಯ ಅಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಎಚ್.ಕೆ.ಡಿ.ಪಿ ಯೋಜನೆಯ ಬುದ್ಧ, ಬಸವ, ಅಂಬೇಡ್ಕರ ಭವನದ ಕಾಮಗಾರಿಗಳ ಅಡಿಗಲ್ಲು ಮತ್ತು ಬಾಲಕರ ವಸತಿ ನಿಲಯದ ಉದ್ಘಾಟನಾ ಸಮಾರಂಭಕ್ಕೆ ಗುರುವಾರದಂದು ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕ ಸರ್ಕಾರ ನೂತನವಾಗಿ ಹೊಸ ತಾಲೂಕುಗಳನ್ನು ಘೋಷಿಸಿದ್ದು, ನವೆಂಬರ್. 01 ರಂದು ಎಲ್ಲಾ ತಾಲೂಕುಗಳು ಚಾಲನೆಗೊಳ್ಳಲಿವೆ.  ಹೊಸ ತಾಲೂಕುಗಳಲ್ಲಿ ಕುಕನೂರು ಕೂಡ ಒಂದಾಗಿದ್ದು, 100 ಏಕರೆ ಜಮೀನು ಖರೀದಿಸಿ ತಾಲೂಕಿನ ಆಡಳಿತಕ್ಕೆ ಬೇಕಾಗುವ ವಿವಿಧ ಕಛೇರಿಗಳನ್ನು ನಿರ್ಮಾಣ ಮಾಡಲಾಗುವುದು.  ಕುಕನೂರಿನ ನಿವಾಸಿಗಳಿಗೆ ಒಂದು ಸಾವಿರ ಮನೆಗಳು ಮಂಜೂರಾಗಿದ್ದು, ಇದೇ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು.  ಕುಕನೂರಿನ ಸಿಸಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ರೂ. 8.30 ಕೋಟಿ ಮಂಜೂರಾಗಿದೆ.   

ಸರ್ಕಾರದ ಉದ್ದೇಶವು ಎಲ್ಲರಿಗೂ ಮೂಲಭೂತ ಸೌಲಭ್ಯ ಒದಗಿಸುವುದಾಗಿದೆ.  ಇದರನ್ವಯ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತಿದೆ.  ಯಲಬುರ್ಗಾ ತಾಲೂಕಿನ 144 ಹಳ್ಳಿಗಳಲ್ಲಿ ಸಿಮೇಂಟ್ ರಸ್ತೆ ನಿರ್ಮಾಣ ಮಾಡಿದ್ದು, ಇದರಲ್ಲಿ ಶೇ.70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.  ಕುಕನೂರಿನಲ್ಲಿ ಕೂಡ ಶೇ.75 ರಷ್ಟು ಸಿಮೇಂಟ್ ರಸ್ತೆ ನಿರ್ಮಾಣ ಆಗಿದೆ.  ಕುಕನೂರು-ಯಲಬುರ್ಗಾ ಮಾರ್ಗವಾಗಿ ಹುಬ್ಬಳ್ಳಿ-ಮುಂಬೈ ರೈಲ್ವೆ-ಲೈನ್ ಕಾಮಗಾರಿ ಹದಿನೈದು ದಿನಗಳ ಒಳಗಾಗಿ ಪ್ರಾರಂಭಗೊಳ್ಳಲಿದೆ.  ಜೂನ್ ತಿಂಗಳ ಕೊನೆಯ ವಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯಲಬುರ್ಗಾ ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವರು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಕನೂರ ಪಟ್ಟಣ ಪಂಚಾಯತಿಯ ಅಧ್ಯಕ್ಷೆ ಸುಭದ್ರಾ ಮಲಿಯಪ್ಪ ಅಣ್ಣಿಗೇರಿ ವಹಿಸಿದ್ದರು.  ಯಲಬುರ್ಗಾ ತಾ.ಪಂ. ಅಧ್ಯಕ್ಷೆ ಲಕ್ಷ್ಮೀ ದ್ಯಾಮನಗೌಡ್ರ, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ, ತಹಶಿಲ್ದಾರ ರಮೇಶ ಅಳವಂಡಿಕರ್, ಜಿಲ್ಲಾ ಪಂಚಾಯತ್ ಸದಸ್ಯ ಹನಮಂತಗೌಡ ಮಾಲಿಪಾಟೀಲ, ಗಣ್ಯರಾದ ಬಸವರಾಜ ಉಳಾಗಡ್ಡಿ, ಯಕ್ಕಣ್ಣ ಯರಾಶಿ, ಖಾಸಿಂಸಾಬ್ ತಳಕಲ್, ವೀರಣ್ಣ ಬಳೂಟಗಿ, ಕುಕನೂರ ಪ.ಪಂ ಮುಖ್ಯಾಧಿಕಾರಿ ಶ್ರೀಶೈಲಗೌಡ, ಉಪಾಧ್ಯಕ್ಷ ಸಿರಾಜುದ್ದೀನ್ ಕರಮುಡಿ, ಹನಮಂತ, ಮಂಜುನಾಥ ಕಡೆಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  ಆತ್ಮಹತ್ಯೆ ಮಾಡಿಕೊಂಡ ರೈತರ ಕುಂಟುಬಗಳಿಗೆ ಸುವರ್ಣ ಆರೋಗ್ಯ ಟ್ರಸ್ಟ್‍ವತಿಯಿಂದ ಸುರಕ್ಷಾ ಕಾರ್ಡನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. 


ಹೀಗಾಗಿ ಲೇಖನಗಳು ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ

ಎಲ್ಲಾ ಲೇಖನಗಳು ಆಗಿದೆ ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ ಲಿಂಕ್ ವಿಳಾಸ https://dekalungi.blogspot.com/2017/06/6.html

Subscribe to receive free email updates:

0 Response to "ಕುಕನೂರ ಹೊಸ ಬಸ್ ನಿಲ್ದಾಣಕ್ಕೆ ರೂ.6 ಕೋಟಿ ಮಂಜೂರು : ಬಸವರಾಜ ರಾಯರಡ್ಡಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ