ಶೀರ್ಷಿಕೆ : ವಿಶೇಷ ಸಂಪನ್ಮೂಲ ಶಿಕ್ಷಕರ ಭರ್ತಿಗೆ ಜೂ. 29 ರಂದು ಕೌನ್ಸಿಲಿಂಗ್
ಲಿಂಕ್ : ವಿಶೇಷ ಸಂಪನ್ಮೂಲ ಶಿಕ್ಷಕರ ಭರ್ತಿಗೆ ಜೂ. 29 ರಂದು ಕೌನ್ಸಿಲಿಂಗ್
ವಿಶೇಷ ಸಂಪನ್ಮೂಲ ಶಿಕ್ಷಕರ ಭರ್ತಿಗೆ ಜೂ. 29 ರಂದು ಕೌನ್ಸಿಲಿಂಗ್
ಕೊಪ್ಪಳ ಜೂ. 24 (ಕರ್ನಾಟಕ ವಾರ್ತೆ): ಸಮನ್ವಯ ಶಿಕ್ಷಣ ಚಟುವಟಿಕೆ ಅನುಷ್ಠಾನಕ್ಕಾಗಿ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ಕೌನ್ಸಿಲಿಂಗ್ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಜೂ. 29 ರಂದು ಬೆ. 10-45 ಗಂಟೆಗೆ ಕೊಪ್ಪಳದ ಸರ್ವಶಿಕ್ಷಣ ಅಭಿಯಾನ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಕೌನ್ಸಿಲಿಂಗ್ ಏರ್ಪಡಿಸಲಾಗಿದೆ.
ವಿಶೇಷ ಸಂಪನ್ಮೂಲ ಶಿಕ್ಷಕರ ಹುದ್ದೆಗಳಿಗಾಗಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ವಿಶೇಷ ಬಿ.ಇಡಿ/ ಡಿ.ಇಡಿ ಪದವಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ನೇಮಿಸಲಾಗುವುದು. ಇದರಲ್ಲಿ ಎಂ.ಆರ್ (ಬುದ್ದಿಮಾಂದ್ಯತೆ) ವಿಶೇಷ ಬಿಇಡಿ ಆದವರಿಗೆ ಪ್ರಥಮ, ದೃಷ್ಟಿದೋಷದಲ್ಲಿ ವಿಶೇಷ ಬಿಇಡಿ ಆದವರಿಗೆ ದ್ವಿತೀಯ ಹಾಗೂ ಶ್ರವಣದೋಷದಲ್ಲಿ ಬಿಇಡಿ ಆದವರಿಗೆ ತೃತೀಯ ಮತ್ತು ಕಲಿಕಾ ಹಾಗೂ ಇತರೆ ಯಾವುದಾದರೂ ನ್ಯೂನತೆಯಲ್ಲಿ ವಿಶೇಷ ಬಿಇಡಿ ಆದವರಿಗೆ ನಂತರದ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು. ಇದಕ್ಕಾಗಿ ಜೂ. 29 ರಂದು ಬೆ. 10-45 ಗಂಟೆಗೆ ಕೊಪ್ಪಳದ ಸರ್ವಶಿಕ್ಷಣ ಅಭಿಯಾನ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಕೌನ್ಸಿಲಿಂಗ್ ಏರ್ಪಡಿಸಲಾಗಿದ್ದು, ವಿಶೇಷ ಬಿಇಡಿ ಪದವಿ ಪಡೆದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು ಸೇವಾ ಪ್ರಮಾಣ ಪತ್ರ ಮತ್ತು ವಿದ್ಯಾರ್ಹತೆಯ ಪ್ರಮಾಣ ಪತ್ರಗಳೊಂದಿಗೆ ಕೌನ್ಸಿಲಿಂಗ್‍ಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ 9480488001 ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ವಿಶೇಷ ಸಂಪನ್ಮೂಲ ಶಿಕ್ಷಕರ ಭರ್ತಿಗೆ ಜೂ. 29 ರಂದು ಕೌನ್ಸಿಲಿಂಗ್
ಎಲ್ಲಾ ಲೇಖನಗಳು ಆಗಿದೆ ವಿಶೇಷ ಸಂಪನ್ಮೂಲ ಶಿಕ್ಷಕರ ಭರ್ತಿಗೆ ಜೂ. 29 ರಂದು ಕೌನ್ಸಿಲಿಂಗ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಶೇಷ ಸಂಪನ್ಮೂಲ ಶಿಕ್ಷಕರ ಭರ್ತಿಗೆ ಜೂ. 29 ರಂದು ಕೌನ್ಸಿಲಿಂಗ್ ಲಿಂಕ್ ವಿಳಾಸ https://dekalungi.blogspot.com/2017/06/29.html
0 Response to "ವಿಶೇಷ ಸಂಪನ್ಮೂಲ ಶಿಕ್ಷಕರ ಭರ್ತಿಗೆ ಜೂ. 29 ರಂದು ಕೌನ್ಸಿಲಿಂಗ್"
ಕಾಮೆಂಟ್ ಪೋಸ್ಟ್ ಮಾಡಿ