ಶೀರ್ಷಿಕೆ : ಜೂ. 17 ರಂದು ಕೊಪ್ಪಳದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ
ಲಿಂಕ್ : ಜೂ. 17 ರಂದು ಕೊಪ್ಪಳದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ
ಜೂ. 17 ರಂದು ಕೊಪ್ಪಳದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ
ಕೊಪ್ಪಳ, ಜೂ. 15 (ಕರ್ನಾಟಕ ವಾರ್ತೆ): ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ, ಶೇ. 100 ಫಲಿತಾಂಶ ಪಡೆದ ಪ್ರೌಢಶಾಲಾ ಮುಖ್ಯೋಪಾಧ್ಯಯರಿಗೆ ಹಾಗೂ ಜಿಲ್ಲಾ ಟಾಪ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಜೂ. 17 ರಂದು ಬೆಳಿಗ್ಗೆ 9-30 ಗಂಟೆಗೆ ಜಿಲ್ಲಾಡಳಿತ ಭವನ ಆಡಿಟೋರಿಯಂ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಗಾರಕ್ಕೆ ಜಿಲ್ಲೆಯ ಎಲ್ಲಾ ಸರಕಾರಿ/ ಅನುದಾನಿತ/ ಅನುದಾನರಹಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಪ್ರತಿನಿಧಿಯನ್ನು ನಿಯೋಜಿಸದೆ ತಾವೆ ಖುದ್ದಾಗಿ ಮತ್ತು ಕಡ್ಡಾಯವಾಗಿ ಹಾಜರಾಗಬೇಕು. ಕಾರ್ಯಕ್ರಮಕ್ಕೆ ಬರುವಾಗ ತಮ್ಮ ಶಾಲೆಯ 2017ರ ಎಸ್.ಎಸ್.ಎಲ್.ಸಿ ಫಲಿತಾಂಶದ ವಿವರ ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮ ಪಡಿಸಲು ಸಿದ್ದಪಡಿಸಲಾದ ಕ್ರಿಯಾ ಯೋಜನೆಯೊಂದಿಗೆ ಹಾಜರಾಗಬೇಕು. 100% ಫಲಿತಾಂಶ ಪಡೆದ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು, ಹಾಗೂ ಜಿಲ್ಲಾ ಟಾಪ್ ಟೆನ್ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗುವಂತೆ ಸಂಬಂಧಿಸಿದ ಮುಖ್ಯೋಪಾಧ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಶೇ. 100 ಫಲಿತಾಂಶ ಪಡೆದ ಶಾಲೆಗಳು :
************** ಸರ್ಕಾರಿ ಪ್ರೌಢ ಶಾಲೆ ಚಿಕ್ಕಮಾದಿನಾಳ, ಸರ್ಕಾರಿ ಪ್ರೌಢ ಶಾಲೆ (ಆರ್.ಎಂ.ಎಸ್.ಸಿ) ಗೌರಿಪುರ, ಸರ್ಕಾರಿ ಪ್ರೌಢ ಶಾಲೆ ಮಾಳೇಕೊಪ್ಪ, ಮೋರಾರ್ಜಿ ವಸತಿ ಶಾಲೆ ಹನಕುಂಟಿ, ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆ ವಡ್ಡರಹಟ್ಟಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಚಿಕ್ಕಬೆಣಕಲ್, ಹಿಂದುಳಿದ ವರ್ಗಗಳ ಮುರಾರ್ಜಿ ದೇಸಾಯಿ ವಸತಿ ಪ್ರೌಢ ಶಾಲೆ ಕಾಟಾಪೂರ, ಕಿತ್ತೂರರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ ತಾವರಗೇರಾ, ಮುರಾರ್ಜಿ ದೇಸಾಯಿ ವಸತಿ ಶಾಲೆ ಸಿದ್ದಾಪುರ, ಮುರಾರ್ಜಿ ದೇಸಾಯಿ ವಸತಿ ಶಾಲೆ ಕನಕಗಿರಿ, ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಯಲಬುರ್ಗಾ, ಮೋರಾರ್ಜಿ ದೇಸಾಯಿ ಶಾಲೆ ಹಿರೇವಂಕಲಕುಂಟಾ, ಗ್ರೀನ್ ವ್ಯಾಲಿ ರೂರಲ್ ಕಾರಟಗಿ, ನ್ಯಾಷನಲ್ ಪ್ರೌಢಶಾಲೆ ಭಾಗ್ಯನಗರ, ಕ್ರೈಸ್ತ್ ದ ಕಿಂಗ್ ಪ್ರೌಢ ಶಾಲೆ ಕುಷ್ಟುಗಿ, ಬರೂಕಾ ಪ್ರೌಢ ಶಾಲೆ ಶಿವಪೂರ, ಎಸ್.ಎಫ್.ಎಸ್ ಪ್ರೌಢ ಶಾಲೆ ಕೊಪ್ಪಳ, ಎಸ್.ಎಫ್.ಎಸ್ (ಆಂಗ್ಲ) ಪ್ರೌಢ ಶಾಲೆ ಕುಕನೂರು, ರಡ್ಡಿ ವೀರಣ್ಣ ಪ್ರೌಢ ಶಾಲೆ ಮರ್ಲಾನಹಳ್ಳಿ, ವಿಜ್ಞಾನ ಜ್ಯೋತಿ ಪ್ರೌಢ ಶಾಲೆ ಕಾರಟಗಿ, ಶಿಕ್ಷಾಯತನ ಮುನಿರಾಬಾದ ಆರ್.ಎಸ್, ಕೇಂದೋಳೆ ರಾಮಣ್ಣ ಪ್ರೌಢ ಶಾಲೆ (ಆಂಗ್ಲ ಮಾಧ್ಯಮ), ಗುಡ್ ಶಫರ್ಡ ಪ್ರೌಢ ಶಾಲೆ ಯಲಬುರ್ಗಾ, ಶಾಂತಿನಿಕೇತನ ಪಬ್ಲೀಕ್ ಸ್ಕೂಲ್ ಕಾರಟಗಿ, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೇಸರಟ್ಟಿ, ಸೇಂಟ್ರಲ್ ಪಬ್ಲೀಕ್ ಸ್ಕೂಲ್ ಕಾರಟಗಿ, ಸಿದ್ದರಾಮೇಶ್ವರ ಆಂಗ್ಲ ಪ್ರೌಢ ಶಾಲೆ ಯಲಬುರ್ಗಾ, ಒಟ್ಟು ಕೊಪ್ಪಳ ಜಿಲ್ಲೆಯ 27 ಶಾಲೆಗಳು ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 100% ಫಲಿತಾಂಶ ಪಡೆದಿವೆ.
ಜಿಲ್ಲಾ ಟಾಪ್ ವಿದ್ಯಾರ್ಥಿಗಳು :
********** ಕೊಪ್ಪಳದ ವರ್ಷಾ ಜಿ.ಭೀಮರಡ್ಡಿ (620), ಕುಕನೂರಿನ ಅದಿತ್ಯಾ ಎಸ್.ಚಂಗಲಿ (619), ಕಾರಟಗಿಯ ಬಸಮ್ಮ (618), ದೊಟಿಹಾಳದ ಪವನ್ ಕುಮಾರ (617), ಕೊಪ್ಪಳದ ಅಫೀಯಾ ನಾಜ್ (617), ಗಂಗಾವತಿಯ ರಘುನಾನಂದನ ಗುಡುಗುಂಟಿ (617), ಕೊಪ್ಪಳದ ಶ್ರೀಪ್ರಿಯಾ ಎಸ್.ಆರ್ (617), ತಳವಗೇರಾದ ಧರ್ಮೇಶ ಜಿ.ಕುಡತಿನಿ (616), ಗಂಗಾವತಿಯ ಅವಾನಿ ಅಯೋಧ್ಯ (616), ಕೊಪ್ಪಳದ ವೈಷ್ಣವಿ (615), ಕುರುಬನಾಳದ ವಿಶ್ವೇಶ್ವರ ವೀರೆಶಿ ಅಕ್ಕಿ (615), ಕೊಪ್ಪಳ ಜಿಲ್ಲೆಯ ಒಟ್ಟು 11 ವಿದ್ಯಾರ್ಥಿಗಳು ಟಾಪ್ ಟೆನ್ ಲಿಸ್ಟ್‍ನಲ್ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಜೂ. 17 ರಂದು ಕೊಪ್ಪಳದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ
ಎಲ್ಲಾ ಲೇಖನಗಳು ಆಗಿದೆ ಜೂ. 17 ರಂದು ಕೊಪ್ಪಳದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜೂ. 17 ರಂದು ಕೊಪ್ಪಳದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ ಲಿಂಕ್ ವಿಳಾಸ https://dekalungi.blogspot.com/2017/06/17.html
0 Response to "ಜೂ. 17 ರಂದು ಕೊಪ್ಪಳದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ವಿಶ್ಲೇಷಣೆ ಕಾರ್ಯಗಾರ"
ಕಾಮೆಂಟ್ ಪೋಸ್ಟ್ ಮಾಡಿ