ಶೀರ್ಷಿಕೆ : ಅಡುಗೆಯವರ ಹುದ್ದೆಗೆ ನೇಮಕಾತಿ : 110 ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ
ಲಿಂಕ್ : ಅಡುಗೆಯವರ ಹುದ್ದೆಗೆ ನೇಮಕಾತಿ : 110 ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ
ಅಡುಗೆಯವರ ಹುದ್ದೆಗೆ ನೇಮಕಾತಿ : 110 ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ
ಕೊಪ್ಪಳ ಜೂ. 22 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರ ಹುದ್ದೆಗೆ ನೇರ ನೇಮಕಾತಿ ಮಾಡುತ್ತಿದ್ದು ಅರ್ಜಿ ಸಲ್ಲಿಸಿದ ಅಬ್ಯರ್ಥಿಗಳ ದಾಖಲಾತಿ ಪರಿಶೀಲನೆ ಗುರುವಾರದಂದು ಕೊಪ್ಪಳದ ಬಾಲಕಿಯರ ವಸತಿ ನಿಲಯದಲ್ಲಿ ನೆರವೇರಿತು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರ ಹುದ್ದೆಗೆ ನೇರ ನೇಮಕಾತಿ ಮಾಡಲಾಗುತ್ತಿದ್ದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಖಾಲಿ ಇರುವ ಹುದ್ದೆಗೆ ಅನುಗುಣವಾಗಿ 1:5 ರಂತೆ ದಾಖಲಾತಿ ಪರಿಶೀಲನೆಗಾಗಿ ಒಟ್ಟು 205 ಅಭ್ಯರ್ಥಿಗಳಿಗೆ ಕರೆಯಲಾಗಿತ್ತು. ಗುರುವಾರದಂದು ಕೊಪ್ಪಳದ ಕವಲೂರ ನಗರದ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ದಾಖಲಾತಿ ಪರಿಶಿಲನೆ ಕಾರ್ಯ ಕೈಗೊಂಡಿದ್ದು ದಾಖಲಾತಿ ಪರಿಶಿಲನೆಗೆ ಅರ್ಹರಾದ 205 ಅಭ್ಯರ್ಥಿಗಳ ಪೈಕಿ 110 ಅಭ್ಯರ್ಥಿಗಳು ದಾಖಲಾತಿ ಪರಿಶೀಲನೆಗೆ ಹಾಜರಾದರು. ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ದಾಖಲಾತಿ ಪರಿಶೀಲನಾ ಕೇಂದ್ರಕ್ಕೆ ಭೇಟಿ ನೀಡಿ, ದಾಖಲಾತಿ ಪರಿಶೀಲನೆ ಕಾರ್ಯ ವೀಕ್ಷಿಸಿದರು.
ಅಡುಗೆ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಜೂ. 23 ರಂದು ಕೊಪ್ಪಳದ ಕವಲೂರ ನಗರದ ಹರಿಪ್ರಿಯಾ ಎಕ್ಸ್‍ಟೆನ್ಷನ್ ಏರಿಯಾದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ದಾಖಲಾತಿ ಪರಿಶೀಲನೆ ನಡೆಯಲಿದ್ದು ಖಾಲಿ ಇರುವ 92 ಹುದ್ದೆಗಳಿಗೆ 1:5 ರಂತೆ ಒಟ್ಟು 410 ಅಭ್ಯರ್ಥಿಗಳಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಲು ತಿಳಿಸಲಾಗಿದೆ. ಅರ್ಹ ಅಭ್ಯರ್ಥಿಗಳು www.koppal.nic.in ವೆಬ್‍ಸೈಟ್‍ನಲ್ಲಿ ಆನ್‍ಲೈನ್‍ನಲ್ಲಿ ಸೂಚನಾ ಪತ್ರವನ್ನು ಡೌನಲೋಡ ಮಾಡಿಕೊಂಡು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಅಡುಗೆಯವರ ಹುದ್ದೆಗೆ ನೇಮಕಾತಿ : 110 ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ
ಎಲ್ಲಾ ಲೇಖನಗಳು ಆಗಿದೆ ಅಡುಗೆಯವರ ಹುದ್ದೆಗೆ ನೇಮಕಾತಿ : 110 ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಡುಗೆಯವರ ಹುದ್ದೆಗೆ ನೇಮಕಾತಿ : 110 ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಲಿಂಕ್ ವಿಳಾಸ https://dekalungi.blogspot.com/2017/06/110.html
0 Response to "ಅಡುಗೆಯವರ ಹುದ್ದೆಗೆ ನೇಮಕಾತಿ : 110 ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ"
ಕಾಮೆಂಟ್ ಪೋಸ್ಟ್ ಮಾಡಿ