news and photos Date; 4-5-2017

news and photos Date; 4-5-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photos Date; 4-5-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photos Date; 4-5-2017
ಲಿಂಕ್ : news and photos Date; 4-5-2017

ಓದಿ


news and photos Date; 4-5-2017

ಮೇ 8ರಿಂದ ಇಂದ್ರಧನುಷ ವಿಶೇಷ ಲಸಿಕಾ ಕಾರ್ಯಕ್ರಮ
ಕಲಬುರಗಿ,ಮೇ.04.(ಕ.ವಾ.)-ಇಂದ್ರಧನುಷ ಕಾರ್ಯಕ್ರಮದಡಿ ಧನುರ್ವಾಯ, ದಢಾರ, ನಾಯಿಕೆಮ್ಮು, ಗಳಗಂಡ, ಕ್ಷಯ, ಕಾಮಾಲೆ ಮತ್ತು ಪೋಲಿಯೋ ರೋಗಗಳ ವಿರುದ್ಧ ಲಸಿಕೆ ಹಾಕಲಾಗುವುದು. ಮಕ್ಕಳನ್ನು ಈ ಮಾರಕ ರೋಗಳಿಂದ ರಕ್ಷಿಸಲು ಪಾಲಕರು 2 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸುವಂತೆ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ಮನವಿ ಮಾಡಿದರು. 
ಅವರು ಗುರುವಾರ ಕಲಬುರಗಿಯಲ್ಲಿ ಇಂದ್ರಧನುಷ್ ಅಭಿಯಾನ-2017ರ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದ್ರಧನುಷ ಮಿಷನ್ ವಿಶೇಷ ಲಸಿಕಾ ಅಭಿಯಾನದ ನಾಲ್ಕನೇ ಹಂತದಡಿ ಲಸಿಕೆ ವಂಚಿತ ಎರಡು ವರ್ಷದೊಳಗಿನ 12812 ಮತ್ತು 2830 ಗರ್ಭಿಣಿ ಮಹಿಳೆಯರಿಗೆ ಏಳು ಮಾರಕ ರೋಗಗಳ ವಿರುದ್ಧ ಮೊದಲನೇ ಸುತ್ತಿನ ಲಸಿಕೆ ನೀಡುವ ಕಾರ್ಯಕ್ರಮ ಮೇ 8ರಿಂದ 19ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 
ಕೇಂದ್ರ ಸರ್ಕಾರದ ಇಂದ್ರಧನುಷ ವಿಶೇಷ ಲಸಿಕಾ ಅಭಿಯಾನದಡಿ 2017ರ ಆಗಸ್ಟ್‍ವರೆಗೆ ಪ್ರತಿ ತಿಂಗಳು 7ನೇ ತಾರೀಖಿನಿಂದ ಒಂದು ವಾರ ಭಾನುವಾರ ಹಾಗೂ ವಿಶೇಷ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ನಾಲ್ಕು ಸುತ್ತಿನ ಲಸಿಕೆ ನೀಡಲಾಗುವುದು. ವಿವಿಧ ಲಸಿಕಾ ಕಾರ್ಯಕ್ರಮದಡಿ ಕಡಿಮೆ ಸಾಧನೆಗೈದ ದೇಶದ 201 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯದ ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ರಾಯಚೂರು ಮತ್ತು ಬೆಂಗಳೂರು ನಗರ ಜಿಲ್ಲೆಗಳು ಸೇರಿವೆ. ಕಲಬುರಗಿ ಜಿಲ್ಲೆಯಲ್ಲಿ ಕಳೆದ 2015ರಲ್ಲಿ ಮೊದಲ ಹಂತದ ನಾಲ್ಕು ಸುತ್ತುಗಳಲ್ಲಿ ವಿವಿಧ ಲಸಿಕೆಗಳಿಂದ ವಂಚಿತರಾದ 0-2 ವರ್ಷದೊಳಗಿನ 34669 ಮಕ್ಕಳಿಗೆ ಹಾಗೂ 8981 ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲಾಗಿದೆ. 2016ರಲ್ಲಿ ಜರುಗಿದ ಮೂರನೇ ಹಂತದಲ್ಲಿ 18395 ಮಕ್ಕಳಿಗೆ ಮತ್ತು 3640 ಗರ್ಭಿಣಿಯರಿಗೆ ಲಸಿಕೆ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ ಎಂದರು.
ಇಂದ್ರಧನುಷ ಲಸಿಕಾ ಕಾರ್ಯಕ್ರಮಕ್ಕಾಗಿ ಒಟ್ಟು 1295 ಇಂದ್ರಧನುಷ್ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಅಭಿಯಾನಕ್ಕಾಗಿ ಜಿಲ್ಲೆಯಾದ್ಯಂತ 1030 ಇಂದ್ರಧನುಷ ಲಸಿಕಾ ಕೇಂದ್ರಗಳನ್ನು ಹಾಗೂ 50 ಲಸಿಕಾ ಸಂಚಾರಿ ತಂಡಗಳನ್ನು ರಚಿಸಲಾಗಿದೆ. ಇಂದ್ರಧನುಷ್ ಮಿಷನ್ ಅಭಿಯಾನಕ್ಕಾಗಿ ಆಯ್ಕೆ ಮಾಡಲಾದ ಮಕ್ಕಳ ಮತ್ತು ಗರ್ಭಿಣಿಯರ ಪೈಕಿ ಶೇ. 60ರಷ್ಟು ಕಲಬುರಗಿ ನಗರದಲ್ಲಿರುವುದರಿಂದ ನಗರದಲ್ಲಿ ಲಸಿಕಾಕರಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಕಡ್ಡಾಯವಾಗಿ ಮಕ್ಕಳನ್ನು ಲಸಿಕೆ ಹಾಕಿಸಲು ಕರೆದುಕೊಂಡು ಬರಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ|| ಅನಿಲಕುಮಾರ ತಾಳಿಕೋಟಿ, ಜಿಲ್ಲಾ ಲಸಿಕಾಧಿಕಾರಿ ಡಾ|| ರುಧ್ರವಾಡಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಕಿರಣ ದೇಸಾಯಿ, ಭಾರತೀಯ ಮಕ್ಕಳ ತಜ್ಞರ ಸಮಿತಿ ಅಧ್ಯಕ್ಷ ಡಾ. ಸಂದೀಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ತಾಲೂಕು ಆರೋಗ್ಯಾಧಿಕಾರಿಗಳು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರವಾಸಿ ಟ್ಯಾಕ್ಸಿ ಅರ್ಹತಾ ಯಾದಿ ಪ್ರಕಟ  
ಕಲಬುರಗಿ,ಮೇ.04.(ಕ.ವಾ.)-ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಟ್ಯಾಕ್ಸಿ ಸಹಾಯಧನ ಯೋಜನೆಯಡಿ 2016-17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ/ ಅಲ್ಪಸಂಖ್ಯಾತರ ವರ್ಗದ ಅಭ್ಯರ್ಥಿಗಳಿಂದ ಸ್ವೀಕೃತವಾದ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲನಾ ಸಮಿತಿ ಸಭೆಯಲ್ಲಿ ಪರಿಶೀಲಿಸಿ ಅರ್ಹತಾ ಯಾದಿ ತಯಾರಿಸಲಾಗಿದೆ. ಸದರಿ ಯಾದಿಯನ್ನು ಅಭ್ಯರ್ಥಿಗಳ ಗಮನಕ್ಕಾಗಿ 2017ರ ಮೇ 5ರಂದು ಕಲಬುರಗಿಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯ ಸೂಚನಾ ಫÀಲಕದಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಇದನ್ನು ಗಮನಿಸಲು ಕೋರಿದೆ.
 ಅರ್ಹತಾ ಪಟ್ಟಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ತಮ್ಮ ಯಾವುದೇ ಅಹವಾಲುಗಳಿದ್ದಲ್ಲಿ ಮೇ 12                                         ರೊಳಗಾಗಿ  ಲಿಖಿತ ರೂಪದಲ್ಲಿ ಕಲಬುರಗಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕೆಂದು ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. 
ವಿದ್ಯಾರ್ಥಿ ವೇತನ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ 
ಪರಿಶೀಲಿಸಲು ಮೇ 10 ಕೊನೆಯ ದಿನ 
ಕಲಬುರಗಿ,ಮೇ.04.(ಕ.ವಾ.)-ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ 2016-17 ನೇ ಸಾಲಿನಲ್ಲಿ ವಿದ್ಯಾರ್ಥಿ ವೇತನ ನೀಡಲು ನ್ಯಾಷಶನ್ ಸ್ಕಾಲರ್‍ಶಿಫ್ ಪೋರ್ಟಲ್ (ಓಚಿಣioಟಿಚಿಟ Sಛಿhoಟಚಿಡಿshiಠಿ Poಡಿಣಚಿಟ)ನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಅರ್ಜಿಗಳನ್ನು ಆನ್‍ಲೈನ್ ಮೂಲಕ ಆಯಾ ಕಾಲೇಜಿನ ಮುಖ್ಯಸ್ಥರು ಪರಿಶೀಲಿಸದೆ ಇರುವ ಪ್ರಯುಕ್ತ ಅಂತಹ ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲಿಸಲು ಕೊನೆಯ ದಿನಾಂಕವನ್ನು ಮೇ 10ರವರೆಗೆ ನಿಗದಿಪಡಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.  
  ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿದ ಪದವಿ ಪೂರ್ವ/ಪದವಿ ಇತರೆ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅರ್ಜಿಗಳನ್ನು ಆಯಾ ಕಾಲೇಜಿನ ಪ್ರಾಂಶುಪಾಲರು ನ್ಯಾಷಶನ್ ಸ್ಕಾಲರ್‍ಶಿಫ್ ಪೋರ್ಟಲ್‍ನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಿದ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಅರ್ಜಿಗಳನ್ನು ಆನ್‍ಲೈನ್ ಮೂಲಕವೇ ಪರಿಶೀಲಿಸಿ ಫಾರ್ವಡ್ ಮಾಡಲು ಇದು ಅಂತಿಮ ಅವಕಾಶ ನೀಡಲಾಗಿದೆ. ಎಲ್ಲಾ ಕಾಲೇಜಿನ ಪ್ರಾಂಶುಪಾಲರು ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಠಿಯಿಂದ ಮುತುವರ್ಜಿ ವಹಿಸಿ ಎಲ್ಲಾ ಅರ್ಜಿಗಳನ್ನು ಆನ್‍ಲೈನ್ ಮೂಲಕ ಪರಿಶೀಲಿಸಲು ಕೋರಲಾಗಿದೆ. 
ಕಾಲೇಜು ಸಂಸ್ಥೆಯವರಿಗೆ ನ್ಯಾಷಶನ್ ಸ್ಕಾಲರ್‍ಶಿಫ್ ಪೋರ್ಟಲ್‍ನಲ್ಲಿ ಲಾಗಿನ್  ಆಗಲು ಯುಸರ್ ಐಡಿ ಮತ್ತು ಪಾಸ್‍ವರ್ಡ್ ಲಭ್ಯವಾಗದೆ ಇದ್ದಲ್ಲಿ ಕಲಬುರಗಿಯ ಐವನ್-ಇ-ಶಾಹಿ ಇಂಡಿಯನ್ ಬೈತುಲ್ ಮಾಲ್ ಕಟ್ಟಡದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಕ್ಕೆ ಕಛೇರಿ ಸಮಯದಲ್ಲಿ ಸಂಪರ್ಕಿಸಲು ಅಥವಾ ದೂರವಾಣಿ ಸಂಖ್ಯೆ 08472-244006 ಸಂಪರ್ಕಿಸಿ ತಮ್ಮ ಕಾಲೇಜಿನಿಂದ ಯುಸರ್ ಐಡಿ ಮತ್ತು ಪಾಸ್‍ವರ್ಡ್ ಪಡೆಯಲು ಕೋರಲಾಗಿದೆ. 
ಅಂತರ್ ಜಾತಿ ವಿವಾಹಕ್ಕೆ ಪ್ರೋತ್ಸಾಹಧನ
ಕಲಬುರಗಿ,ಮೇ.04.(ಕ.ವಾ.)-ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಯುವಕ/ಯುವತಿಯರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯದೊಳಗೆ ಅಂತರ್ ಜಾತಿ ವಿವಾಹವಾದಲ್ಲಿ ಅಂತಹವರಿಗೆ 2 ಲಕ್ಷ ರೂ.ಗಳ ಪ್ರೋತ್ಸಾಹಧನ ಮಂಜೂರು ಮಾಡಿ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. 
  ಅಂತರ್ ಜಾತಿ ವಿವಾಹವಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ/ಯುವತಿಯರು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸೇರಿದವರಾಗಿರಬೇಕು. ಈ ಸೌಲಭ್ಯ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವತಿಯರ ವಯೋಮಿತಿ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷದೊಳಗಿರಬೇಕು ಹಾಗೂ ಯುವಕನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷದೊಳಗಿರಬೇಕು. 
ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ದಂಪತಿಗಳ ಒಟ್ಟಾರೆ ವಾರ್ಷಿಕ ಆದಾಯವು 2  ಲಕ್ಷ ರೂ. ಗಳನ್ನು ಮೀರಿರಬಾರದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಯುವಕ/ಯುವತಿಯರು ಮದುವೆಯಾದ ಒಂದು ವರ್ಷದ ಅವಧಿಯೊಳಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಬೇಕು. ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸುವ ಮುಂಚೆ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹದ ಬಗ್ಗೆ ನೋಂದಾಯಿಸಿರಬೇಕು. ಈ ಸೌಲಭ್ಯ ಒಮ್ಮೆ ಮಾತ್ರ ಪಡೆಯಬಹುದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಒಳಗೆ ಅಂತರ್ ಜಾತಿ ವಿವಾಹವಾದ ಯುವಕ ವಾಸ್ತವ್ಯವಿರುವ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಮಂಜೂರಾದ ಪ್ರೋತ್ಸಾಹಧನವನ್ನು ವಿವಾಹವಾದ ದಂಪತಿಗಳ ಜಂಟಿ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಎನ್.ಇ.ಎಫ್.ಟಿ. ಮೂಲಕ ಜಮಾ ಮಾಡಲಾಗುವುದು. 
  ಸದರಿ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲ್ಲಿಚ್ಛಿಸುವ ಅರ್ಹ ಪ.ಜಾತಿ ಮತ್ತು ಪ.ಪಂಗಡದ ಸಮುದಾಯದ ಒಳಗೆ ಅಂತರ್ ಜಾತಿ ವಿವಾಹವಾದ ದಂಪತಿಗಳು ವಧು-ವರನ ದೃಢೀಕೃ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜಿಲ್ಲಾ ನೋಂದಣಿ ಕಚೇರಿಯಿಂದ ಪಡೆದ ವಿವಾಹ ಆಗಿರುವ ಬಗ್ಗೆ ನೋಂದಣಿ ಪ್ರಮಾಣ ಪತ್ರ, ತಹಶೀಲ್ದಾರರಿಂದ ಪಡೆದ ವಾಸಸ್ಥಳ ಪ್ರಮಾಣಪತ್ರ, ವಧು-ವರನ ದೃಢೀಕೃತ ಆಧಾರ ಚೀಟಿಯ ಜಿರಾಕ್ಸ್ ಪ್ರತಿ, ವಿವಾಹವಾದ ಕುರಿತು ವಧು-ವರನ ಜಂಟಿ ಭಾವಚಿತ್ರ ಹಾಗೂ ವಧು-ವರನ ಜಂಟಿ ಖಾತೆಯ ಬ್ಯಾಂಕ್ ಪಾಸ್‍ಬುಕ್ ಝರಾಕ್ಸ್ ಪ್ರತಿಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.   
ಡೋಲು-ನಾದಸ್ವರ ಸಂಗೀತ ಕಲೆಗಳಲ್ಲಿ ತರಬೇತಿಗಾಗಿ ಅರ್ಜಿ ಆಹ್ವಾನ
ಕಲಬುರಗಿ,ಮೇ.04.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18ನೇ ಸಾಲಿಗೆ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ 4 ವರ್ಷಗಳ ಉಚಿತ ಊಟ, ವಸತಿ, ಶಿಕ್ಷಣ ಮತ್ತು ತರಬೇತಿ ಭತ್ಯೆಯೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯ ಸವಿತಾ ಸಮಾಜದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹಿಂದುಳಿದ ವರ್ಗಗ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. 
ಸವಿತಾ ಸಮಾಜದ ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಕಲಬುರಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಾರ್ಯಾಲಯದಿಂದ ಪಡೆದು ಭರ್ತಿ ಮಾಡಿ ಮೇ 16ರೊಳಗಾಗಿ ಸದರಿ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ. 
ಮೇ 5ರಂದು ಕಾರ್ಮಿಕರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ
ಕಲಬುರಗಿ,ಮೇ.04.(ಕ.ವಾ.)-ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಕಲಬುರಗಿ, ತಾಲೂಕು ನ್ಯಾಯವಾದಿಗಳ ಸಂಘ ಶಹಾಬಾದ ಹಾಗೂ ಕಾರ್ಮಿಕ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಮಿಕರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಶಹಾಬಾದಿನ ಜಿ.ಇ. ಪವರ್ ಲಿಮಿಟೆಡ್ ಆವರಣದಲ್ಲಿ ಮೇ 5ರಂದು ಮಧ್ಯಾಹ್ನ 3 ಗಂಟೆಗೆ ಆಯೋಜಿಸಲಾಗಿದೆ. 
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಹಾಬಾದ್ ಜಿ.ಇ. ಪವರ್ ಲಿಮಿಟೆಡ್ ನಿರ್ದೇಶಕ ಅಶೋಕ ಕುಮಾರ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಶಹಾಬಾದ್ ಸಿವಿಲ್ ನ್ಯಾಯಾಧೀಶ (ಕ್ರಿ.ಶ್ರೇ.) ಮುತಾಲಿಕ ರಮೇಶ ದೇಸಾಯಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ಆರ್. ಪಾಟೀಲ ಹಾಗೂ ಶಹಾಬಾದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅತುಲ್ ಎಲ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಕಲಬುರಗಿ ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಸಿಂಧಿಹತ್ತಿ ಅವರು ಕಾರ್ಮಿಕ ಕಾಯ್ದೆ ಕುರಿತು ಹಾಗೂ ನ್ಯಾಯವಾದಿ ರಮೇಶ ರಾಠೋಡ ಜನನ-ಮರಣ ಕಾಯ್ದೆ ಕುರಿತು ಉಪನ್ಯಾಸ ನೀಡುವರು. 
ಡಾಟಾ ಎಂಟ್ರಿಗಾಗಿ ಆನ್‍ಲೈನ್ ಮೂಲಕ ಟೆಂಡರ್ ಆಹ್ವಾನ 
ಕಲಬುರಗಿ,ಮೇ.04.(ಕ.ವಾ.)-ಕಲಬುರಗಿ ಜಿಲ್ಲೆಯ ತಹಶೀಲ್ದಾರ ಕಾರ್ಯಾಲಯಗಳ ಭೂಮಾಪನ ವಿಭಾಗದ ಆಕಾರ ಬಂದ ದಾಖಲೆಗಳನ್ನು ಡಾಟಾ ಎಂಟ್ರಿ ಮಾಡಲು ಡಾಟಾ ಎಂಟ್ರಿ ಆಪರೇಟರ್ ಹಾಗೂ ಕಂಪ್ಯೂಟರ್ ಪರಿಕರಗಳನ್ನು ಹೊಂದಿರುವ ನೋಂದಾಯಿತ ಪೂರ್ವಾರ್ಹತೆವುಳ್ಳ ಟೆಂಡರ್‍ದಾರರಿಂದ ಆನ್‍ಲೈನ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ತಿಳಿಸಿದ್ದಾರೆ. 
ಖಾಲಿ ಟೆಂಡರ್ ಫಾರ್ಮ ಬೆಲೆಯು ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಪ್ರಕಾರ ಇರುತ್ತದೆ. ಟೆಂಡರ್‍ನ್ನು ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ hಣಣಠಿ://eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‍ಲೈನ್ ಮೂಲಕ ಟೆಂಡರ್‍ನ್ನು ಮೇ 15 ರ ಸಂಜೆ 4 ಗಂಟೆಯೊಳಗಾಗಿ ಸಲ್ಲಿಸಬೇಕು. ಇ.ಎಂ.ಡಿ. ಮೊತ್ತ 80,000 ಇರುತ್ತದೆ.  ಆನ್‍ಲೈನ್ ಟೆಂಡರ್‍ನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತೆರೆಯಲಾಗುವುದು. ಷರತ್ತು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ. 
ಸೂಪರ ಮಾರ್ಕೇಟ್ ಜಾಗ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಸೂಚನೆ
ಕಲಬುರಗಿ,ಮೇ.04.(ಕ.ವಾ.)-ಸೂಪರ ಮಾರ್ಕೆಟ ಪ್ರದೇಶದಲ್ಲಿ 10000 ಚ.ಅ. ಜಾಗವನ್ನು ಕಲಬುರಗಿ ಮಹಾನಗರ ಪಾಲಿಕೆ ಹಸ್ತಾಂತರಿಸಿದರೆ ಕಲಬುರಗಿ ಮಹಾನಗರ ಪಾಲಿಕೆ ಒಡೆತನದಲ್ಲಿದ್ದ ರಂಗಮಂದಿರವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುವುದಾಗಿ ಲೊಕೋಪಯೋಗಿ ಇಲಾಖೆಯೊಂದಿಗೆ ಈ ಹಿಂದೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಮಹಾನಗರ ಪಾಲಿಕೆಯಿಂದ ಲೋಕೋಪಯೋಗಿ ಇಲಾಖೆಗೆ ರಂಗಮಂದಿರ ಕಟ್ಟಡವನ್ನು ಹಸ್ತಾಂತರಿಸಲಾಗಿರುತ್ತದೆ. ಆದರೆ ಲೋಕೋಪಯೋಗಿ ಇಲಾಖೆಯವರು ಸೂಪರ ಮಾರ್ಕೆಟ ಪ್ರದೇಶದಲ್ಲಿ 10000 ಚ.ಅ. ಜಾಗವನ್ನು ಪಾಲಿಕೆಗೆ ಹಸ್ತಾಂತರಿಸದೆ ಇರುವ ಕ್ರಮಕ್ಕೆ ಮಹಾಪೌರ ಶರಣಕುಮಾರ ಎಂ. ಮೋದಿ ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ಜರುಗಿದ ಪಾಲಿಕೆಯ ಹಲವಾರು ಸಾಮಾನ್ಯ ಸಭೆಗಳಲ್ಲಿ ಸಾಕಷ್ಟು ಬಾರಿ ನಿರ್ಣಯಿಸಿದ್ದರೂ ಯಾವುದೇ ಪ್ರತಿಕ್ರಿಯೆ ದೊರಕಿರುವುದಿಲ್ಲ. ಈ ಬಗ್ಗೆ ಬೆಂಗಳೂರಿನಲ್ಲಿ ಉನ್ನತ ಮಟ್ಟದಲ್ಲಿ ಸಭೆ ಜರುಗಿದ್ದು, ಲೋಕೋಪಯೋಗಿ ಇಲಾಖೆಯವರು 10000 ಚ.ಅ. ಜಾಗವನ್ನು ಪಾಲಿಕೆಗೆ ಹಸ್ತಾಂತರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಒಂದುವೇಳೆ ಉನ್ನತ ಮಟ್ಟದ ಸಭೆಯಲ್ಲಿ ಕೈಕೊಂಡ ನಿರ್ಣಯವನ್ನು ಅನುಷ್ಠಾನಗೊಳಿಸದಿದ್ದಲ್ಲಿ ರಂಗಮಂದಿರವನ್ನು ಪಾಲಿಕೆಯ ಸುಪರ್ಧಿಗೆ ಹಸ್ತಾಂತರಿಸಿಕೊಳ್ಳಲಾಗುವುದೆಂದು ಮಹಾನಗರ ಪಾಲಿಕೆಯ ಮಹಾಪೌರ ಶರಣಕುಮಾರ ಎಂ. ಮೋದಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಮೇ 5ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಮೇ.04.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಗಾಜಿಪುರ ಪೀಡರ ವ್ಯಾಪ್ತಿಯ ನಿರ್ವಹಣಾ ಕಾರ್ಯ ಹಾಗೂ 11 ಕೆ.ವಿ. ರಾಘವೇಂದ್ರ ಕಾಲೋನಿ ಫೀಡರ್ ವ್ಯಾಪ್ತಿಯ ಅನ್ನಪೂರ್ಣ ಕ್ರಾಸಿನಿಂದ ಜಯದೇವ ಆಸ್ಪತ್ರೆವರೆಗಿನ ರಸ್ತೆ ಅಗಲೀಕರಣ ಮತ್ತು ಹೆಚ್.ಟಿ./ಎಲ್.ಟಿ. ಮಾರ್ಗ/ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ ಮೇ 5ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ. 
11 ಕೆ.ವಿ. ಗಾಜಿಪುರ ಫೀಡರ್: ಅಂದು ಬೆಳಿಗಿನ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಜಿ.ಡಿ.ಎ., ಗೋಕುಲ ನಗರ ಜಿಲ್ಲಾಧಿಕಾರಿಗಳ ಕಚೇರಿ, ಮಾಲಿ ಪಾಟೀಲ್ ಟಿ.ಸಿ, ಬಸವಣ್ಣ ಟೆಂಪಲ್, ಮಿಲನ್ ಚೌಕ್, ಶಂಕರಲಿಂಗ್ ಟೆಂಪಲ್, ಮಟನ್ ಮಾರ್ಕೆಟ್, ಕಾವೇರಿ ನಗರ, ತಹಶೀಲ್ದಾರ ಕಚೇರಿ, ಚನ್ನಮಲ್ಲೇಶ್ವರ ನಗರ, ಮಜಗಿ ಲೇಔಟ್, ಸುಪರ್ ಮಾರ್ಕೆಟ್ ರೇಮಾಂಡ್ ಟಿ.ಸಿ. ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ರಾಘವೇಂದ್ರ ಕಾಲೋನಿ ಫೀಡರ್: ಬೆಳಗಿನ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಿ.ಎಲ್.ಡಿ. ಬ್ಯಾಂಕ್, ಗೊಲ್ಲರಗಲ್ಲಿ, ಜಗತ್, ಜಗತ್ ಅಪ್ಪರ್ ಮತ್ತು ಲೋವರ್ ಲೆನ್, ಮಹಾನಗರ ಪಾಲಿಕೆಯ ಆಯುಕ್ತರ ವಸತಿ ಗೃಹ, ತಿರಂದಾಜ್ ಟಾಕೀಸ್ ಎದುರುಗಡೆ ಮೈಲಾರಲಿಂಗ ದೇವಸ್ಥಾನ, ಆದಿತ್ಯ ಹೋಟೆಲ್, ಎಸ್.ಪಿ. ಕಚೇರಿ ಪ್ರದೇಶ, ಏಷಿಯನ್ ಮಾಲ್, ಆಮಂತ್ರಣ ಹೋಟೆಲ್, ಕಕ್ಕೇರಿ ಕಾಂಪ್ಲೆಕ್ಸ್, ಪಶು ವೈದ್ಯಕೀಯ ಆಸ್ಪತ್ರೆ ಟ್ರೈನಿಂಗ್ ಸೆಂಟರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಅದರಂತೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರಿಂದ 110 ಕೆ.ವಿ. ಆಳಂದ ವಿತರಣಾ ಕೇಂದ್ರದ ಮೇಲೆ ಸುಧಾರಣಾ ಕಾರ್ಯ ಕೈಗೊಂಡಿರುವ ಪ್ರಯುಕ್ತ ಮೇ 5ರಂದು ಬೆಳಗಿನ 9 ರಿಂದ ಸಂಜೆ 6 ಗಂಟೆಯವರೆಗೆ 11 ಕೆ.ವಿ. ಬ್ಯಾಂಕ್-1ರ ಆಳಂದ ಪಟ್ಟಣ, ವಾಟರ್‍ಸಪ್ಲೈ, ಹನುಮಾನ ಟೆ., ಖಾನಾಪುರ. 11 ಕೆ.ವಿ. ಬ್ಯಾಂಕ್-2ರ ಕಿಣ್ಣಿ ಸುಲ್ತಾನ, ಹೆಬ್ಳಿ, ತೆಲ್‍ಕೊಣಿ, ಭೂಸನೂರ ಮತ್ತು 33 ಕೆ.ವಿ. ಫೀಡರಿನ ಖಜೂರಿ, ತಡಕಲ್, ಸರಸಂಬಾ, ಮಾದನ ಹಿಪ್ಪರಗಾ ಫೀಡರುಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು



ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.

ಪ್ರತಿಯೊಬ್ಬರು ಕಾನೂನಿನ ಅರಿವು ಹೊಂದುವುದು ಅವಶ್ಯಕ  
ಕಲಬುರಗಿ,ಮೇ.04.(ಕ.ವಾ.)-ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರವು ಪ್ರತಿಯೊಬ್ಬ ನಾಗಕರಿಗೆ ಕಾನೂನು ಅರಿವನ್ನು ಮೂಡಿಸಲು ಮತ್ತು ಅಗತ್ಯವಿದ್ದಲ್ಲಿ ಕಾನೂನು ನೆರವನ್ನು ನೀಡಲು ಕಾನೂನು ಸೇವೆಗಳ ಕಾಯ್ದೆ 1987ರಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವುದಕ್ಕಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ತಿಳಿಸಿದ್ದಾರೆ. 
ಅವರು ಕಲಬುರಗಿಯ ಹೆಚ್.ಚಿಂಚೋಳಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಸಹರಾ ಸೇವಾ ಸಂಸ್ಥೆ ಮತ್ತು ರಹೆನುಮಾ ಕಾನೂನು ಕೇಂದ್ರ, ಶಿಕ್ಷಣ ಇಲಾಖೆ ಹಾಗೂ ಕೃಷಿ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ತಮ್ಮ ಜೀವನದಲ್ಲಿ ಕಾನೂನಿನ ಅರಿವು ಹೊಂದುವುದು ಅವಶ್ಯಕವಾಗಿದೆ. ಕಾನೂನನ್ನು ಪರಿಪಾಲನೆ ಮಾಡುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯವಾಗಿದೆ. ಇದಕ್ಕಾಗಿ ದಿನನಿತ್ಯದ ಜೀವನಕ್ಕೆ ಬೇಕಾಗುವ ಜನನ-ಮರಣ ನೋಂದಣಿ ಕಾಯ್ದೆ, ಮೋಟಾರು ವಾಹನ, ಸ್ವತ್ತು ಹಸ್ತಾಂತರ ಕಾಯ್ದೆ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಮೂಲಭೂತ ಕರ್ತವ್ಯಗಳು ಹಾಗೂ ಹಕ್ಕುಗಳ ಬಗ್ಗೆ, ಅಪರಾಧ ಸಂಹಿತೆಗಳ ಬಗ್ಗೆ ಜ್ಞಾನ ಹೊಂದುವುದು ಅವಶ್ಯಕವಾಗಿದೆ ಎಂದರು. 
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಚಿಂಚೋಳಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಗುಂಡಪ್ಪ ಜಾಲಿಂದರ್ ಮಾತನಾಡಿ, ಮಳೆಗಾಲದ ಅವಧಿಯಲ್ಲಿ ರೈತರಿಗೆ ಸರ್ಕಾರದಿಂದ ಕೃಷಿ ಕೇಂದ್ರದಲ್ಲಿ ಉತ್ತಮ ಬೀಜಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಅದರ ಜೊತೆಗೆ ಗ್ರಾಮ ಸಂಪರ್ಕ ಸಭೆಗಳು ಮತ್ತು ಇತರೆ ಸಮಾರಂಭಗಳಲ್ಲಿಯೂ ಕೃಷಿ ಕೇಂದ್ರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ರೈತರ ವ್ಯವಸಾಯಕ್ಕೆ ಬೇಕಾಗುವ ಕೃಷಿ ಉಪಕರಣ, ಟ್ರ್ಯಾಕ್ಟರ್‍ಗಳನ್ನು ಖರೀದಿಸಲು ಸರ್ಕಾರದಿಂದ ವಿಶೇಷ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರಲ್ಲದೇ ರೈತರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು. 
ಸಂಪನ್ಮೂಲ ವ್ಯಕ್ತಿಯಾಗಿ ಕಲಬುರಗಿಯ ಪತ್ರಾಂಕಿತ ಅಧಿಕಾರಿ ಮಲ್ಲಣ್ಣ ಮಡಿವಾಳ ಮಾತನಾಡಿ ಕಡ್ಡಾಯ ಶಿಕ್ಷಣ ಕಾಯ್ದೆ ಕುರಿತು ಮಾತನಾಡಿದರು. ಸಹರಾ ಸೇವಾ ಸಂಸ್ಥೆಯ ನಿರ್ದೇಶಕ ಮಸ್ತಾನ್ ಬಿರಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾನೂನು ಸೇವಾ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ. ಎಲ್ಲ ಕಾನೂನಿನ ಬಗ್ಗೆ ಮತ್ತು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ ಎಂದರು. ಹೆಚ್. ಚಿಂಚೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಸಾಯಬಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಬನ್ನಿಹಟ್ಟಿ ಉಪಸ್ಥಿತರಿದ್ದರು.  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲಾಸ ಕುಲಕರ್ಣಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಗ್ರಾಮದ ಜನರು ಹಾಗೂ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. 



ಹೀಗಾಗಿ ಲೇಖನಗಳು news and photos Date; 4-5-2017

ಎಲ್ಲಾ ಲೇಖನಗಳು ಆಗಿದೆ news and photos Date; 4-5-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photos Date; 4-5-2017 ಲಿಂಕ್ ವಿಳಾಸ https://dekalungi.blogspot.com/2017/05/news-and-photos-date-4-5-2017.html

Subscribe to receive free email updates:

0 Response to "news and photos Date; 4-5-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ