ಶೀರ್ಷಿಕೆ : news and photos date: 13-05-2017
ಲಿಂಕ್ : news and photos date: 13-05-2017
news and photos date: 13-05-2017
ಪ್ರಸಕ್ತ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್
ಕಲಬುರಗಿ,ಮೇ.13.(ಕ.ವಾ.)-ಪ್ರಸಕ್ತ ವರ್ಷದಿಂದ ಪದವಿ ಪ್ರವೇಶ ಪಡೆದ ಎಲ್ಲ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣ ಪ್ರಕಾಶ ಪಾಟೀಲ ಹೇಳಿದರು.
ಅವರು ಶನಿವಾರ ಡಾ. ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಿದ ಜನಮನ ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾಸಿರಿ ಫಲಾನುಭವಿಗಳು ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಹಾಗೂ ವೈಜ್ಞಾನಿಕ ಕ್ಯಾಲ್ಕುಲೇಟರ್ ಹಾಗೂ ಪುಸ್ತಕಗಳನ್ನು ಉಚಿತವಾಗಿ ನೀಡಬೇಕು ಎಂಬ ಮನವಿಗೆ ಸ್ಪಂದಿಸಿದ ಸಚಿವರು ಹೆಚ್.ಕೆ.ಆರ್.ಡಿ.ಬಿ.ಯಿಂದ ಎಲ್ಲ ಪುಸ್ತಕಗಳನ್ನು ಡಿಜಿಟಲೈಜ್ ಮಾಡಲಾಗುತ್ತಿದ್ದು, ಶೀಘ್ರದಲ್ಲಿ ಆನ್‍ಲೈನ್‍ನಲ್ಲಿ ಲಭ್ಯವಾಗಲಿವೆ ಎಂದರು.
ಜನಮನ ಕಾರ್ಯಕ್ರಮಲ್ಲಿ ವ್ಯಕ್ತವಾದ ಎಲ್ಲ ಮೆಚ್ಚುಗೆಗೆ ಋಣಭಾರ ವ್ಯಕ್ತಪಡಿಸಿ ಆದಷ್ಟು ಬೇಗ ತಮ್ಮ ಅನಿಸಿಕೆಗಳನ್ನು ಸಂಬಂಧಿಸಿದ ಸಚಿವರೊಂದಿಗೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡುವ ಭರವಸೆ ಸಚಿವರು ನೀಡಿದರು.
ಅನ್ಯಭಾಗ್ಯ: ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5ಕೆಜಿ. ಬದಲು 7 ಕೆಜಿ ಅಕ್ಕಿಯನ್ನು ಪಡಿತರ ವ್ಯವಸ್ಥೆಯಲ್ಲಿ, ಸಕ್ಕರೆ, ಗೋಧಿ, ತೊಗರಿ ಬೆಳೆ, ಹೆಸರು ಬೆಳೆ ನೀಡುವಂತೆ ಫಲಾನುಭವಿಗಳು ಮನವಿ ಮಾಡಿದರು. ಚಿಂಚೋಳಿಯ ಕಮಲಮ್ಮ ಜೋಕಾಲಿ, ಜೇವರ್ಗಿಯ ಅನುರಾಧ, ಆಳಂದದ ಚಂದ್ರಕಾಂತ ಮಾತನಾಡಿ, ಅನ್ನಭಾಗ್ಯ ಯೋಜನೆ ತುಂಬಾ ಚೆನ್ನಾಗಿದೆ. ಹಸಿವಿನಿಂದ ದಿನ ದೂಡುವ ಜನರ ಬಗ್ಗೆ ಆಲೋಚನೆ ಮಾಡಿದ್ದು, ನಿಜಕ್ಕೂ ನಮ್ಮ ಪುಣ್ಯ. ಈಗ ನೀಡುತ್ತಿರುವ ಅಕ್ಕಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದರು.
ಕ್ಷೀರಭಾಗ್ಯ, ಕ್ಷೀರಧಾರೆ, ಪಶುಭಾಗ್ಯ; ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಹಾಲಿನ ಕುರಿತು ಮಕ್ಕಳು ತುಂಬಾ ಚೆನ್ನಾಗಿ ಮಾತನಾಡಿದರು. ನಗರದ ವಿಜಯ ನಗರ ಕಾಲೋನಿಯ ದಿವ್ಯ ಜ್ಯೋತಿ ಮಾತನಾಡಿ, ಹಾಲಿನ ಉಪಯೋಗ ಮತ್ತು ಯಾವ ರಾಷ್ಟ್ರದಲ್ಲಿ ಹಾಲಿಗೆ ಎಷ್ಟು ಮಹತ್ವವಿದೆ. ಹಾಲು ಕೊಡುತ್ತಿರುವುದರಿಂದ ಮಕ್ಕಳಿಗೆ ಮತ್ತು ದೊಡ್ಡವರಿಗೆ ಆಗುವ ಉಪಯೋಗಗಳ ಕುರಿತು ಗಮನ ಸೆಳೆದರು. ಆಶ್ವಿನಿ, ಆನಂದ, ಭಾಗ್ಯಶ್ರೀ ಹಣಮಂತ, ಹಾವನೂರು, ಶಾಖಂಬರಿ ಮಲ್ಲಿಕಾರ್ಜುನ ಕೂಡ ಧ್ವನಿ ಸೇರಿಸಿದರು.
ಸರ್ಕಾರ ಹಾಲಿಗೆ ನೀಡುತ್ತಿರುವ 5ರೂ.ಗಳ ಪ್ರೋತ್ಸಾಹಧನವನ್ನು 1-2ರೂ. ಹೆಚ್ಚಳ ಮಾಡಬೇಕು. ಹಿಂದೆ ಇದ್ದುದ್ದಕ್ಕಿಂತ ಹೆಚ್ಚು ಹಣವನ್ನು ಸಿದ್ದರಾಮಯ್ಯ ಸರ್ಕಾರ ನೀಡಿದೆ. ಇದರಿಂದ ನಮಗೆ ತುಂಬಾ ಅನುಕೂಲವಾಗಿದೆ. ಸಕಾಲಕ್ಕೆ ಹಣವೂ ಖಾತೆಗಳಿಗೆ ಜಮೆ ಆಗುತ್ತಿದೆ ಎಂದು ಆಳಂದ ತಾಲೂಕಿನ ಭೂಸನೂರ ಗ್ರಾಮದ ಬಸವರಾಜ ಗಮನ ಸೆಳೆದರು. ಚಿಂಚೋಳಿ ತಾಲೂಕಿನ ಹಣಮಂತ ಹೊಸಮನಿ ಬೀದರ ಜಿಲ್ಲೆಯ ಹಸುಗಳಿಗೆ ಕ್ಯಾಟಲ್‍ಪೀಡ್ ಖರೀದಿಗೆ ಸಬ್ಸಿಡಿ ನೀಡಲಾಗುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು. ಸಚಿವ ಶರಣಪ್ರಕಾಶ ಪಾಟೀಲ ಈ ಕುರಿತು ಸಂಬಂಧಿತ ಸಚಿವರೊಂದಿಗೆ ಮಾತನಾಡಿ, ಕಲಬುರಗಿಗೂ ಸಬ್ಸಿಡಿ ದೊರೆಯುವಂತೆ ಮಾಡುವುದಾಗಿ ಭರವಸೆ ನೀಡಿದರು.
ವಿದ್ಯಾಸಿರಿ, ಬಿದಾಯಿ: ನಾವು ಮಧ್ಯಮ ವರ್ಗದಿಂದ ಬಂದಿದ್ದು, ನಮಗೆ ಹಾಸ್ಟೆಲ್ ಸೌಲಭ್ಯಗಳು ಸಿಗುತ್ತಿಲ್ಲ. ಏನಪ್ಪಾ ಮಾಡೋಡು, ದೊಡ್ಡ ಪಟ್ಟಣಗಳಲ್ಲಿ ರೂಂ. ಬಾಡಿಗೆ ಪಡೆದು ಓದಬೇಕಲ್ಲಾ, ಮೊದಲೇ ದುಬಾರಿ ದಿನಗಳು ಎನ್ನುವಾಗ ವಿದ್ಯಾಸಿರಿ ಯೋಜನೆ ನಮಗೆ ನಿಜಕ್ಕೂ ಅನುಕೂಲವಾಗಿದೆ ಎಂದು ಚಿಂಚೋಳಿಯ ಚಾಂದ ಪಟೇಲ್, ಅಕ್ಕಮಹಾದೇವಿ ಗೋಗಿ, ಅಂಕಿತಾ, ಬಾಹುಬಲಿ, ಬಸವಕಲ್ಯಾಣದ ಶೃತಿ ಹೇಳಿದರು.
ಅಲ್ಲದೇ ಈಗ ಪ್ರತಿ ತಿಂಗಳು ನೀಡುವ 1500 ರೂ.ಗಳನ್ನು 3000ಕ್ಕೂ ಹೆಚ್ಚಳ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಅದರಲ್ಲೂ ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಉಚಿತವಾಗಿ ಪುಸ್ತಕಗಳನ್ನು, ಲ್ಯಾಪ್‍ಟಾಪ್, ಸೈಂಟಿಫಿಕ್ ಕ್ಯಾಲ್ಕುಲೇಟರ್ ನೀಡುವಂತೆ ಮನವಿ ಮಾಡಿದರು.
ಕೃಷಿ ಭಾಗ್ಯ, ಕೃಷಿ ಯಂತ್ರಧಾರೆ ರಾಜ್ಯದ ರೈತರಿಗೆ ತುಂಬಾ ನೆರವು ಮತ್ತು ಬರಗಾಲದಲ್ಲಿ ಆಸರೆಯಾಗಿರುವ ಯೋಜನೆ ಎಂದು ಕೃಷಿ ಭಾಗ್ಯ ಯೋಜನೆ. ಇದರಿಂದ ಬಹಳಷ್ಟು ನೇಗಿಲಯೋಗಿಯ ಕಷ್ಟಗಳು ದೂರವಾಗಿವೆ. ನೇಗಿಲು ಹೊಡೆಯುವುದು, ಕೃಷಿಹೊಂಡ ನಿರ್ಮಾಣ, ರೈತರ ಹೊಲಗಳಿಗೆ ಒಡ್ಡು ಹಾಕಿಸುವುದು, ಸೆಡ್‍ನೆಟ್ ನಂತಹ ಯೋಜನೆಗಳಿಗೆ ಉಪಕಾರವಾಗಿವೆ ಎಂದು ಜೇವರ್ಗಿಯ ಪ್ರಭುಗೌಡ, ಈರಣ್ಣ ಹಾಗೂ ಆಳಂದದ ಶಂಕರ ಹೇಳಿದರು.
ಸಾಫ್ಟವೇರ್ ಇಂಜಿನಿಯರ್‍ರಾಗಿ ಈಗ ರೈತಾಪಿಗೆ ಇಳಿದಿರುವ ಎಂ.ಎ. ಖದೀರ್ ಮಾತನಾಡಿ, ಸರ್ಕಾರ ಯೋಜನೆಯಿಂದಾಗಿ ನೌಕರಿ ಬಿಟ್ಟು ಒಕ್ಕಲುತನಕ್ಕೆ ಇಳಿದೆ ಎಂದು ಹೇಳಿದರು. ಅಲ್ಲದೆ ಸೆಡ್‍ನೆಟ್ ಹಾಕಿಕೊಂಡು ತಿಂಗಳಿಗೆ 2 ಲಕ್ಷ ರೂ. ಆದಾಯ ಮಾಡುತ್ತಿದ್ದೇನೆ. ನಿರುದ್ಯೋಗಿ ಯುವಕರಿಗೆ ಈ ಯೋಜನೆ ದೊಡ್ಡ ಆಶಾಕಿರಣ, ಇದನ್ನು ಮುಂದುವರಿಸಬೇಕು ಎಂದರು. ಆದರೆ, ನಮಗೆ ಶೇ. 50ರಷ್ಟು ಸಬ್ಸಿಡಿ ಇದೆ. ತೆಲಂಗಾಣದಲ್ಲಿ ಶೇ. 75ರಷ್ಟು ನೀಡಲಾಗುತ್ತಿದೆ.
ಲಾಡಮುಗಳಿಯ ಬಾಬುರಾವ ಅಂತೂ ಕೃಷಿ ಹೊಂಡ ನಿರ್ಮಾಣ ಮಾಡದೇ ಹೋಗಿದ್ದರೆ ನಾನು ಉಳಿತಿರಲಿಲ್ಲ. ದಾಳಿಂಬೆ ಸಂಪೂರ್ಣ ಕೈಕೊಟ್ಟಿತ್ತು. ಕೊನೆ ಘಳಿಗೆಯಲ್ಲಿ ಹೊಂಡದ ನೀರು ಬದುಕಿಸಿತು ಎಂದರು.
ಮನಸ್ವಿನಿ ಮತ್ತು ಮೈತ್ರಿ: ಮನಸ್ವಿನಿ ಮತ್ತು ಮೈತ್ರಿ ಯೋಜನೆ ಅಡಿಯಲ್ಲಿನ ಫಲಾನುಭವಿಗಳಾದ ಮನೀಷಾ ಚವ್ಹಾಣ, ಚಾಂದನಿ, ಮೋನಿಕಾ ಮಾತನಾಡಿ, ನಮಗೆ ತಿಂಗಳಿಗೆ 500 ರೂ. ಕೊಡುವ ಬದಲು ನಮಗೆ ಕೆಲಸ ಕೊಡಿ, ನಾವು ಇತರರಂತೆ ಜೀವನ ನಡೆಸಲು ಆಸಕ್ತಿ ಇರುವವರಾಗಿದ್ದೇವೆ. ನಮಗೆ ಅನುಕಂಪಕ್ಕಿಂತ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ನೌಕರಿಯೂ ಬೇಡ. ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸಿ. ಇಲ್ಲದೆ ಹೋದರೆ ನಾವು ಭೀಕ್ಷೆ ಬೇಡಬೇಕು ಇಲ್ಲವೇ ಲೈಂಗಿಕ ಕಾರ್ಯಕರ್ತೆಯರಾಗಿ ದುಡಿಯಬೇಕು. ಇದು ಸಮಾಜದ ಇತರೆ ವರ್ಗಕ್ಕೆ ಹಿಡಿಸುವುದಿಲ್ಲ. ಆದ್ದರಿಂದ ನಾವು ಗೌರವಯುತವಾಗಿ ಜೀವಿಸುವ ಮನೋಭಾವನೆ ಹೊಂದಿದ್ದೇವೆ ನಮಗೂ ನೌಕರಿ ಕೊಡಿಸಿ, ಪಡಿತರ ಚೀಟಿ, ಆಧಾರ ಕಾರ್ಡ್ ಮನೆಗಳು ಕೊಡಿಸಿ ಎಂದರು. ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ, ಕೂಡಲೇ ಇವರಿಗೆ ವಿವಿಧ ಇಲಾಖೆಯ ಕಾವಲುಗಾರ ಸೇರಿದಂತೆ ಅವರ ಶೈಕ್ಷಣಿಕ ಅರ್ಹತೆಯಂತೆ ನೌಕರಿ ನೀಡುವಂತೆ ಸೂಚನೆ ನೀಡಿದರು. ಅಲ್ಲದೆ, ಪಡಿತರ ಮತ್ತು ಆಧಾರ ಕಾರ್ಡು, ವಸತಿ ಸೌಲಭ್ಯ ನೀಡಲು ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಋಣಮುಕ್ತ: ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾನು ಪ್ರಾಮಾಣಿಕನಾಗಿದ್ದು, ಅಧಿಕಾರಿಗಳು ಭ್ರಷ್ಟಾಚಾರದಿಂದ ದೂರ ಇರಬೇಕು. ಒಂದು ವೇಳೆ ಯಾರಾದರೂ ನಿಮಗೆ ಹಣ ಕೇಳಿದರೆ, ಕೆಲಸದಲ್ಲಿ ವಿಳಂಬ ಮಾಡಿ ದೂರು ಕೊಡಿ, ಇಲ್ಲವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹೂಡಿ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಸಚಿವ ಡಾ|| ಶರಣಪ್ರಕಾಶ ಪಾಟೀಲ ಅವರು ಎಲ್ಲವನ್ನು ಸಮಚಿತ್ತದಿಣದ ಕೇಳಿದರು. ಆದಷ್ಟು ಬೇಗ ಏನೇನು ವಿಸ್ತರಣೆ, ಪರಿಹಾರ ಹೆಚ್ಚಳ, ಮಾಸಾಶನ, ಪ್ರೋತ್ಸಾಹಧನ, ತೊಗರಿ ಖರೀದಿ ಕೇಂದ್ರ ಆರಂಭಿಸುವುದು ಸೇರಿದಂತೆ ಇತರೆ ಯೋಜನೆಗಳಲ್ಲಿ ಲಾಭ ಮಾಡಿಕೊಡಲು ಎಷ್ಟು ಸಾಧ್ಯವೋ ಅಷ್ಟು ಮಾಡುವ ಭರವಸೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಆಗಮಿಸಿದ್ದ ಫಲಾನುಭವಿಗಳು ಪಾಲ್ಗೊಂಡಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಛಾಯಾಗ್ರಾಹಕ ಟಿ.ಎಸ್. ಪವಾರ ಸ್ವಾಗತಿಸಿದರು. ಮಹಿಪಾಲರೆಡ್ಡಿ ಮುನ್ನೂರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಜಿಲ್ಲಾ ಸಚಿವ ಡಾ|| ಶರಣಪ್ರಕಾಶ ಪಾಟೀಲ್ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದ ನಾಲ್ಕು ವರ್ಷಗಳ ಕಲಬುರಗಿ ಜಿಲ್ಲಾ ಸಾಧನೆಯ ಪುಸ್ತಕ ಬಿಡುಗಡೆ ಮಾಡಿದರು.
ಕೂಸು ಯೋಜನೆಯಡಿ ಸೀಮಂತ ಸಮಾರಂಭ
ಕಲಬುರಗಿ,ಮೇ.13(ಕ.ವಾ.)-ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿಗಳಲ್ಲಿ ಹಾಗು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದೆ. ಇವರೆಲ್ಲರೂ ಮಹಿಳೆಯರಿಗೆ ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಟ್ಟು ಅನುಕೂಲ ಮಾಡಿಕೊಡಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ ತಿಳಿಸಿದರು.
ಅವರು ಶನಿವಾರ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಪಂಚಾಯತಿಯಿಂದ ಗ್ರಾಮೀಣ ಪ್ರದೇಶದ ಗರ್ಭಿಣಿಯರಿಗಾಗಿ ಏರ್ಪಡಿಸಿದ್ದ ವಿಶೇಷ ಸೀಮಂತ ಕಾರ್ಯಕ್ರಮದಲ್ಲಿ ಶುಭ ಕೋರಿ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿವರ್ಷ ಸುಮಾರು 5000 ಮಹಿಳೆಯರು ಗರ್ಭಧರಿಸುತ್ತಾರೆ. ಅವರಲ್ಲಿ ಕನಿಷ್ಠ 4000 ಗರ್ಭೀಣಿಯರಿಗಾದರೂ ಶೌಚಾಲಯ ನಿರ್ಮಿಸಿಕೊಡಬೇಕು. ಆಶಾ ಕಾರ್ಯಕರ್ತೆಯರು ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು. ಶುಚಿತ್ವ ಹಾಗೂ ಆರೋಗ್ಯದ ಕಡೆ ಮಹಿಳೆಯರ ದಿಟ್ಟ ಹೆಜ್ಜೆ ಇಡುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ತಿಳಿಸಿದ ಅವರು ಕೂಸು ಯೋಜನೆಯಡಿ ಗ್ರಾಮೀಣ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವ ದಿಸೆಯಲ್ಲಿ ಈ ಕಾರ್ಯಕ್ರಮ ರೂಪಿಸಿದ್ದಕ್ಕೆ ಜಿಲ್ಲಾ ಪಂಚಾಯತಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಎಚ್.ಮಾಲಾಜಿ ಕೂಸು ಯೋಜನೆ ಉದ್ಘಾಟಿಸಿ ಮಾತನಾಡಿ, ಇಡೀ ರಾಜ್ಯದಲ್ಲಿಯೇ ಮೊದಲಬಾರಿಗೆ ಕಲಬುರಗಿ ಜಿಲ್ಲಾ ಪಂಚಾಯತಿಯು ಕೂಸು ಯೋಜನೆಯನ್ನು ರೂಪಿಸಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲೆಯಲ್ಲಿ ಬರುವ ಎಲ್ಲಾ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವಲ್ಲಿ ಕೂಸು ಎಂಬ ಹೊಸ ಶೀರ್ಷಿಕೆಯೊಂದಿಗೆ ಗ್ರಾಮೀಣ ಪ್ರದೇಶದ ಮಹಿಳೆಯರು ಬಯಲು ಬಹಿರ್ದೆಸೆಗೆ ಹೋದಾಗ ಅನುಭವಿಸುತ್ತಿರುವ ತೊಂದರೆಗಳಿಂದ ಮುಕ್ತ ಮಾಡುವುದು ಮತ್ತು ಗ್ರಾಮೀಣ ಜನರ ದಿನನಿತ್ಯದ ಜೀವನದಲ್ಲಿ ಪರಸ್ಪರ ಗೌರವ-ಘನತೆ ಕಾಪಾಡಿಕೊಂಡು ಗೌರವಯುತ ಹಾಗೂ ಆರೋಗ್ಯಕರವಾದ ಸುಸಜ್ಜಿತ ಜೀವನವನ್ನು ನಡೆಸುವುದು ಈ ಯೋಜನೆಯ ಉz್ದÉೀಶ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪ್ರಾಸ್ತಾವಿಕ ಮಾತನಾಡಿ, ಜಿಲ್ಲಾ ಪಂಚಾಯತ, ಕಲಬುರಗಿಯು ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಕುಟುಂಬಗಳಿಗೂ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಸುವ ಗುರಿ ಹೊಂದಿದೆ. ಈ ಭಾಗದಲ್ಲಿ ಪ್ರೀತಿಯ ಸಂಕೇತವಾಗಿ ಕೂಸು ಎಂದು ಕರೆಯುವುದು ವಾಡಿಕೆಯಿದೆ. ಹಾಗೆಯೇ ಉತ್ತಮ ಭವಿಷ್ಯದ ಒಂದು ಸಂಕೇತವಾಗಿ, ಶುಚಿತ್ವ ಹಾಗೂ ಆರೋಗ್ಯದ ಕಡೆ ಮಹಿಳೆಯರ ದಿಟ್ಟ ಹೆಜ್ಜೆಯನ್ನು ಬಿಂಬಿಸುವ ಈ ಕಾರ್ಯಕ್ರಮಕ್ಕೆ ಕೂಸು ಎಂಬ ಹೆಸರನ್ನು ಇಡಲಾಗಿದೆ ಎಂದರು.
ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಕೂಸು ಶೀರ್ಷಿಕೆಯಡಿ ಜಿಲ್ಲೆಯಲ್ಲಿರುವ ಗ್ರಾಮೀಣ ಪ್ರದೇಶದ ಎಲ್ಲಾ ಗರ್ಭಿಣಿ ಮಹಿಳೆಯರ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕೂಸು ಎಂದರೆ ಪ್ರತಿಯೊಬ್ಬರಲ್ಲೂ ಮಮತೆಯ, ಮಾತೃತ್ವ ಹಾಗೂ ಮುಗ್ಧ ಭಾವನೆಗಳು ಮೂಡುವದು. ಈ ಎಲ್ಲಾ ಅಂಶಗಳಿಗೆ ಪಾತ್ರಧಾರಿ ಹೆಣ್ಣು ಆಗಿರುವುದರಿಂದ ಅಂತಹ ಹೆಣ್ಣಿಗೆ ಗೌರವಾರ್ಥವಾಗಿ ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆ ಒದಗಿಸುವುದು ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಶೌಚಾಲಯ ಮತ್ತು ಆರೋಗ್ಯ ಕೇಂದ್ರಗಳಂತಹ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಸ್ತ್ರೀಯರಿಗೆ ಸಮಾಜದಲ್ಲಿ ರಕ್ಷಣೆಯನ್ನು ಒದಗಿಸಿ ಸುರಕ್ಷತೆಯಿಂದ ಜೀವನವನ್ನು ಮಾಡಲು ಅನುವು ಮಾಡಿಕೊಡುವುದು ಕೂಸು ಕಾರ್ಯಕ್ರಮದ ಉz್ದÉೀಶವಾಗಿದೆ ಎಂದು ವಿವರಿಸಿದರು.
ತಪಾಸಣೆಗೆ ಬರುವ ಮೂರು ತಿಂಗಳ ಗರ್ಭಿಣಿ ಮಹಿಳೆಯರ ಮನೆಯಲ್ಲಿ ಶೌಚಾಲಯ ಇದೆಯೇ ಎಂಬ ಬಗ್ಗೆ ವೈದ್ಯರು ವಿಚಾರಿಸಿಕೊಂಡು, ಇಲ್ಲದಿದ್ದರೆ ನಿರ್ಮಾಣ ಮಾಡಿಕೊಳ್ಳುವ ಕುರಿತು ತಿಳುವಳಿಕೆ ನೀಡುವರು. ಕೂಡಲೇ ಶೌಚಾಲಯ ನಿರ್ಮಾಣದ ಅರ್ಜಿ ತುಂಬಿಸಿಕೊಂಡು ತದನಂತರ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು. ಮೊದಲನೇ ಹಂತದಲ್ಲಿ ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕಿನಿಂದ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಈ ಗ್ರಾಮಗಳಲ್ಲಿ ಗರ್ಭಿಣಿ ಮಹಿಳೆಯರ ಮನೆಗಳಲ್ಲಿ ಶೌಚಾಲಯದ ಕುರಿತು ಸಮೀಕ್ಷೆ ಮಾಡಿಸಿ ಅದರಲ್ಲಿ ಶೌಚಾಲಯ ಹೊಂದದ ಒಟ್ಟು 127 ಗರ್ಭಿಣಿ ಮಹಿಳೆಯರ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ಕಟ್ಟಿಕೊಳ್ಳಲು ಕೂಸು ಕಾರ್ಯಕ್ರಮದ ಮೂಲಕ ಆರಂಭಿಸಲಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿರುವ ಪ್ರತಿ ತಾಲ್ಲೂಕಿನಿಂದ ಒಬ್ಬರು ಗರ್ಭಿಣಿ ಮಹಿಳೆಯನ್ನು ಜಿಲ್ಲಾ ಮಟ್ಟದಲ್ಲಿ ಕರೆಯಿಸಿ ಬೃಹತ್ ಸೀಮಂತ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು, ಬಾಕಿ ಉಳಿದ ಗರ್ಭಿಣಿ ಮಹಿಳೆಯರಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿಯಲ್ಲಿಯೇ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಪಂ ಉಪಾಧ್ಯಕ್ಷೆ ಶೋಭಾ ಎಸ್.ಸಿರಸಗಿ, ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ ಉಪಸ್ಥಿತರಿದ್ದರು. ಆಕಾಶವಾಣಿಯ ಡಾ.ಸೋಮಶೇಖರ ರುಳಿ ನಿರೂಪಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ|| ಶಿವರಾಜ
ಸಜ್ಜನಶೆಟ್ಟಿ ಸ್ವಾಗತಿಸಿದರು. ಜಿಪಂ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್ ವಂದಿಸಿದರು.
ಕಲಬುರಗಿ ನಗರ ಸಿಡಿಪಿಓ ಅಮಾನತ್ತು
ಕಲಬುರಗಿ,ಮೇ.13.(ಕ.ವಾ.)-ಶಿಶು ಅಭಿವೃದ್ಧಿ ಯೋಜನಾ ಕಚೇರಿಯಲ್ಲಿನ ಅಂಗನವಾಡಿ ಫಲಾನುಭವಿಗಳ ಉಪಯೋಗಕ್ಕಾಗಿ ಸರಬರಾಜು ಆಗಿದ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಕರಣದಲ್ಲಿ ಪರೋಕ್ಷವಾಗಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣ ಅವರನ್ನು ಸರ್ಕಾರದ ಆದೇಶದ ಮೇರೆಗೆ ಹಾಗೂ ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 1966ರ ನಿಯಮ 3(i) ರಿಂದ (iii)ನ್ನು ಉಲ್ಲಂಘಿಸಿರುವುದರಿಂದ ಅವರ ವಿರುದ್ದ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 10(1) (ಡಿ) ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು news and photos date: 13-05-2017
ಎಲ್ಲಾ ಲೇಖನಗಳು ಆಗಿದೆ news and photos date: 13-05-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photos date: 13-05-2017 ಲಿಂಕ್ ವಿಳಾಸ https://dekalungi.blogspot.com/2017/05/news-and-photos-date-13-05-2017.html
0 Response to "news and photos date: 13-05-2017"
ಕಾಮೆಂಟ್ ಪೋಸ್ಟ್ ಮಾಡಿ