ಶೀರ್ಷಿಕೆ : NEWS AND PHOTO DATE; 8-5-2017
ಲಿಂಕ್ : NEWS AND PHOTO DATE; 8-5-2017
NEWS AND PHOTO DATE; 8-5-2017
ಕಲಬುರಗಿಗೆ ಆದಷ್ಟು ಬೇಗ ಪೊಲೀಸ್ ಕಮೀಷನರೇಟ್ ಕಚೇರಿ
ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ನೀಡದಂತೆ ಸಕ್ರಿಯ ಪೊಲೀಸಿಂಗ್ ಮಾಡುವ ಅವಶ್ಯಕತೆಯಿದೆ. ಇದು ಈಗ ಜಾರಿಗೆ ತಂದಿರುವ ಸುಧಾರಿತ ಗಸ್ತು ವ್ಯವಸ್ಥೆಯಿಂದ ಸಾಧ್ಯವಿದೆ. ಗಸ್ತು ಸಿಬ್ಬಂದಿಗಳು ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿ ನಡೆಯಬಹುದಾದ ಜಗಳ, ಅಪರಾಧ, ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಠಾಣೆಗಳಿಗೆ ವಿವರವನ್ನು ಸಲ್ಲಿಸಿದಲ್ಲಿ ಆ ಪ್ರದೇಶದಲ್ಲಿ ಮುಂದೆ ನಡೆಯಬಹುದಾದಂತಹ ಘಟನೆಗಳನ್ನು ತಪ್ಪಿಸಬಹುದಾಗಿದೆ. ಇದರಿಂದ ಅಪರಾಧಗಳು ಕಡಿಮೆಯಾಗುತ್ತವೆ ಎಂದರು.
ರಾಜ್ಯದಲ್ಲಿ ಏಕರೂಪ ಪೊಲೀಸ್ ನೇಮಕಾತಿಗಾಗಿ ಗೃಹಸಚಿವರ ಆದೇಶದ ಮೇರೆಗೆ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು ಬೇರೆ ರಾಜ್ಯಗಳಲ್ಲಿ ಕೈಗೊಂಡಿರುವ ಏಕರೂಪ ಪೊಲೀಸ್ ನೇಮಕಾತಿ ಬಗ್ಗೆ ಅಧ್ಯಯನ ಕೈಗೊಂಡು ವರದಿ ನೀಡಲಿದೆ. ಅದನ್ನು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಸೈಬರ್ ಕ್ರೈಂ ಮತ್ತು ಎಕನಾಮಿಕ್ ಅಫೆನ್ಸ್ ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕ ಠಾಣೆಗಳನ್ನು ಪ್ರತಿ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ. ಅವರು ಖುದ್ದಾಗಿ ಸೈಬರ್ ಕ್ರೈಂ ಮತ್ತು ಎಕನಾಮಿಕ್ ಅಫೆನ್ಸ್ ದೂರುಗಳನ್ನು ಸ್ವೀಕರಿಸುವರು ಹಾಗೂ ಶೀಘ್ರ ಗತಿಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡುವರು ಎಂದರು.
ಈ ಸಂದರ್ಭದಲ್ಲಿ ಈಶಾನ್ಯ ವಲಯದ ಆರಕ್ಷಕ ಮಹಾನಿರೀಕ್ಷಕ ಅಲೋಕ ಕುಮಾರ, ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕಮ್ ಪ್ರಕಾಶ ಅಮೃತ ಉಪಸ್ಥಿತರಿದ್ದರು.
ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮಹಾನಗರ ಪಾಲಿಕೆ ಸದಸ್ಯ ಶಂಕರಸಿಂಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ|| ಅನಿಲಕುಮಾರ ತಾಳಿಕೋಟಿ, ಇಂದ್ರಧನುಷ ನೋಡಲ್ ಅಧಿಕಾರಿ ಡಾ|| ಎಂ.ಕೆ. ಪಾಟೀಲ, ಜಿಲ್ಲಾ ಲಸಿಕಾಧಿಕಾರಿ ಡಾ|| ರುಧ್ರವಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ತಾಲೂಕು ಆರೋಗ್ಯಾಧಿಕಾರಿಗಳು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಾಹನ ಬಾಡಿಗೆಗಾಗಿ ದರಪಟ್ಟಿ ಆಹ್ವಾನ
ಕಲಬುರಗಿ,ಮೇ.08.(ಕ.ವಾ.)-ಕಲಬುರಗಿ ವಿಭಾಗೀಯ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಸುಸಜ್ಜಿತ ಎಲ್ಲೋ ಬೋರ್ಡುವುಳ್ಳ ಇಂಡಿಗೊ ಸಿ.ಎಸ್./ ಸ್ವೀಫ್ಟ್ ಡಿಸೈರ್/ ಲೋಗೊನ್/ ಹೊಂಡಾಯಿ ವರುಣ ಕಾರನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಪಡೆಯಲು ವಿವಿಧ ಟ್ರಾವೆಲ್ ಏಜೆನ್ಸಿಯವರಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಇಚ್ಛೆಯುಳ್ಳವÀರು ತಮ್ಮ ಕಡಿಮೆ ದರದ ಕೊಟೇಶನ್‍ದೊಂದಿಗೆ ಮೋಹರ್ ಬಂದ ಲಕೋಟೆಯನ್ನು ಮೇ 15 ರ ಮಧ್ಯಾಹ್ನ 1.30 ಗಂಟೆಯೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಹತೆ, ನಿಬಂಧನೆ ಮುಂತಾದ ವಿವರಗಳಿಗಾಗಿ ಕಲಬುರಗಿ ವಿಭಾಗದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಮೇ 9ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಮೇ.08.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಮಹಾವೀರ ನಗರ ಪೀಡರ ವ್ಯಾಪ್ತಿಯ ಮೋಹನ ಲಾಡ್ಜ್‍ದಿಂದ ಅಂಡರ್ ಬ್ರಿಡ್ಜ್ ವರೆಗೆ ರಸ್ತೆ ಅಗಲಿಕರಣ ಕಾರ್ಯ ಹಾಗೂ 11 ಕೆ.ವಿ. ರಾಘವೇಂದ್ರ ಕಾಲೋನಿ ಫೀಡರ್ ವ್ಯಾಪ್ತಿಯ ಅನ್ನಪೂರ್ಣ ಕ್ರಾಸಿನಿಂದ ಜಯದೇವ ಆಸ್ಪತ್ರೆವರೆಗಿನ ರಸ್ತೆ ಅಗಲೀಕರಣ ಮತ್ತು ಹೆಚ್.ಟಿ./ಎಲ್.ಟಿ. ಮಾರ್ಗ/ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳುವ ಪ್ರಯುಕ್ತ ಮೇ 9ರಂದು ಬೆಳಗಿನ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ ಮಹಾವೀರನಗರ ಫೀಡರ್: ಮಹಾವೀರನಗರ, ಶಾಸ್ತ್ರಿನಗರ, ಹನುಮಾನ ನಗರ, ಪಂಚಶೀಲ ನಗರ, ವೆಂಕಟೇಶ ನಗರ. ಕೆ.ಇ.ಬಿ.ಸ್ಟೋರ್, ಕೆ.ಇ.ಬಿ. ಕ್ವಾರ್ಟರ್ಸ್, ಪಿ.ಡಬ್ಲ್ಯೂಡಿ. ಕಚೇರಿ, ಅಮಲ್‍ವಾಡಿ ಸ್ಟೇಶನ್ ಬಜಾರ್ ಅಪ್ಪÀರ ಲೆನ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ರಾಘವೇಂದ್ರ ಕಾಲೋನಿ ಫೀಡರ್: ಪಿ.ಎಲ್.ಡಿ. ಬ್ಯಾಂಕ್, ಗೊಲ್ಲರಗಲ್ಲಿ, ಜಗತ್, ಜಗತ್ ಅಪ್ಪರ್ ಮತ್ತು ಲೋವರ್ ಲೆನ್, ಮಹಾನಗರ ಪಾಲಿಕೆಯ ಆಯುಕ್ತರ ವಸತಿ ಗೃಹ, ತಿರಂದಾಜ್ ಟಾಕೀಸ್ ಎದುರುಗಡೆ ಮೈಲಾರಲಿಂಗ ದೇವಸ್ಥಾನ, ಆದಿತ್ಯ ಹೋಟೆಲ್, ಎಸ್.ಪಿ. ಕಚೇರಿ ಪ್ರದೇಶ, ಏಷಿಯನ್ ಮಾಲ್, ಆಮಂತ್ರಣ ಹೋಟೆಲ್, ಕಕ್ಕೇರಿ ಕಾಂಪ್ಲೆಕ್ಸ್, ಪಶು ವೈದ್ಯಕೀಯ ಆಸ್ಪತ್ರೆ ಟ್ರೈನಿಂಗ್ ಸೆಂಟರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಹೀಗಾಗಿ ಲೇಖನಗಳು NEWS AND PHOTO DATE; 8-5-2017
ಎಲ್ಲಾ ಲೇಖನಗಳು ಆಗಿದೆ NEWS AND PHOTO DATE; 8-5-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE; 8-5-2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-date-8-5-2017.html
0 Response to "NEWS AND PHOTO DATE; 8-5-2017"
ಕಾಮೆಂಟ್ ಪೋಸ್ಟ್ ಮಾಡಿ