NEWS AND PHOTO DATE: 29--05--2017

NEWS AND PHOTO DATE: 29--05--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 29--05--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 29--05--2017
ಲಿಂಕ್ : NEWS AND PHOTO DATE: 29--05--2017

ಓದಿ


NEWS AND PHOTO DATE: 29--05--2017

ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
****************************************
ಕಲಬುರಗಿ,ಮೇ.29.(ಕ.ವಾ.)-ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರೈತರಿಗೆ ಅರಿವು ಮೂಡಿಸಲು ಕಲಬುರಗಿ ಜಿಲ್ಲೆಯ ಎಲ್ಲ 32 ಹೋಬಳಿಗಳಲ್ಲಿ 2017ರ ಮೇ 29 ರಿಂದ ಜೂನ್ 03ರವರೆಗೆ ಹಮ್ಮಿಕೊಂಡ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಕಲಬುರಗಿಯ ಮಿನಿ ವಿಧಾನಸೌಧ ಆವರಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ವಿಧಾನ ಪರಿಷತ್ ಶಾಸಕ ಅಮರನಾಥ ಪಾಟೀಲ, ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ, ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, “ಸುಧಾರಿತ ಬೇಸಾಯ ಕ್ರಮ” ಕಿರು ಹೊತ್ತಿಗೆ, “ನೀರಿನ ಸದುಪಯೋಗ” ಮತ್ತು “ಮಣ್ಣು ಆರೋಗ್ಯ” ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೇವಣಗಿ ಸ್ವಾಗತಿಸಿದರು.
ನೀರು ಉಳಿಸಿ ಜೀವರಾಶಿ ರಕ್ಷಿಸಿ ಎಂಬ ಘೋಷ ವಾಕ್ಯದೊಂದಿಗೆ 2017-18ನೇ ವರ್ಷವನ್ನು “ಜಲ ಜಾಗೃತಿ ವóರ್ಷ” ವೆಂದು ಆಚರಿಸಲಾಗುತ್ತಿದೆ. ಕೃಷಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ರೈತರಿಗೆ ಕೃಷಿಯಲ್ಲಿ ನೀರಿನ ಸದ್ಬಳಕೆ ಮತ್ತು ಸಂರಕ್ಷಣೆ ಕುರಿತು ಮೂರು ಸಂಚಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುವುದು. ಅಭಿಯಾನದ ಅಂಗವಾಗಿ ಕೃಷಿ ವಸ್ತು ಪ್ರದರ್ಶನ, ರೈತರ ಸಂವಾದ, ಆಯಾ ಹೋಬಳಿಗೆ ಸಂಬಂಧಿಸಿದಂತೆ ವಿವರವಾಗಿ ಬೆಳೆವಾರು ಸಮಸ್ಯೆಗಳ ಚರ್ಚೆ ಹಾಗೂ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ಇತರೆ ಕೃಷಿ ಸಂಬಂಧಿತ ಇಲಾಖೆಗಳಾದ ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಮತ್ತಿತರ ಇಲಾಖೆಗಳ ಅಧಿಕಾರಿಗಳು ರೈತರ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಸೂಚಿಸುವರು. ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ವಿವಿಧ ಯೋಜನೆಗಳನ್ನು ಬಿಂಬಿಸುವ ಪ್ರದರ್ಶಿಕೆಗಳು, ಮಾದರಿಗಳು, ಪ್ರಾತ್ಯಕ್ಷಿಕೆಗಳನ್ನು ಒಳಗೊಂಡ ಕೃಷಿ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಲಾಗುತ್ತದೆ.

ಫಸಲ ವಿಮಾ ಯೋಜನೆ ಸೌಲಭ್ಯ ರೈತರಿಗೆ ತಲುಪಿಸಿ
***************************************************
ಕಲಬುರಗಿ,ಮೇ.29.(ಕ.ವಾ.)-ಪ್ರಧಾನಮಂತ್ರಿ ಫಸಲ ವಿಮಾ ಯೋಜನೆಯ ಸೌಲಭ್ಯವನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ಅಧಿಕಾರಿಗಳು ಶ್ರಮಿಸಬೇಕೆಂದು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಹೇಳಿದರು.
ಅವರು ಸೋಮವಾರ ಕಲಬುರಗಿ ತಾಲೂಕಿನ ಕೋಟನೂರ(ಡಿ) ಗ್ರಾಮದಲ್ಲಿ 47 ಲಕ್ಷ ರೂ. ವೆಚ್ಚದಿಂದ ನಿರ್ಮಿಸಿದ ನೂತನ ರೈತ ಸಂಪರ್ಕ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಈ ರೈತ ಸಂಪರ್ಕ ಕೇಂದ್ರದ ಮೂಲಕ ರೈತರಿಗೆ ಸಿಗುವ ವಿವಿಧ ಸಹಾಯ ಸೌಲಭ್ಯಗಳ ಮಾಹಿತಿ, ತಂತ್ರಜಾನ ಮುಂತಾದವನ್ನು ತಲುಪಿಸುವಲ್ಲಿ ಕೃಷಿ ಅಧಿಕಾರಿಗಳು ಮತ್ತು ಕೃಷಿಕ ಸಮಾಜದವರು ತುರ್ತಾಗಿ ಸ್ಪಂದಿಸುವ ಕಾರ್ಯಕೈಗೊಳ್ಳಬೇಕೆಂದರು.
ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಮಾತನಾಡಿ, ವಾಣಿಜ್ಯ ಬ್ಯಾಂಕುಗಳ ಮೂಲಕ ರೈತರು ಪಡೆದ ಬೆಳೆಸಾಲವನ್ನು ಕೇಂದ್ರ ಸರ್ಕಾರ ಹಾಗೂ ಸಹಕಾರ ಸಂಘಗಳ ಮೂಲಕ ರೈತರು ಪಡೆದ ಬೆಳೆ ಸಾಲದ ಬಡ್ಡಿ ಮನ್ನಾ ರಾಜ್ಯ ಸರ್ಕಾರ ಮಾಡಲಿ ಎಂದರು.
ನಬಾರ್ಡ್ ಬ್ಯಾಂಕ್ ಮ್ಯಾನೇಜರ್ ರಮೇಶ ಮಾತನಾಡಿ, ಪ್ರತಿಯೊಂದು ಹಂತದಲ್ಲಿ ರೈತರಿಗೆ ಮಾಹಿತಿ ಮತ್ತು ತಂತ್ರಜ್ಞಾನದ ತಿಳುವಳಿಕೆ ನೀಡುವುದು ಅವಶ್ಯಕವಾಗಿದೆ. ನಬಾರ್ಡ್ ಬ್ಯಾಂಕಿನಿಂದ ಕಲಬುರಗಿ ಜಿಲ್ಲೆಯ ರಸ್ತೆ, ಶಾಲೆ, ಹನಿ ಮತ್ತು ತುಂತುರ ನೀರಾವರಿ ಮುಂತಾದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ 1048 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗನಗೌಡ ಪಾಟೀಲ ಸಂಕನೂರ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ ಯಾಕಾಪುರ, ತಾಲೂಕು ಪಂಚಾಯಿತಿ ಸದಸ್ಯ ಆನಂದ, ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಸುರೇಶ ಹೊಳ್ಳಾ, ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ, ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೇವಣಗಿ ಸ್ವಾಗತಿಸಿದರು.

ಮೆಟ್ರಿಕ್ ಪೂರ್ವ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
**********************************************************
ಕಲಬುರಗಿ,ಮೇ.29.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಫಜಲಪುರ ತಾಲೂಕಿನಲ್ಲಿ ನಡೆಸಲಾಗುತ್ತಿರುವ ಕೆಳಕಂಡ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ 2017-18ನೇ ಸಾಲಿನಲ್ಲಿ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕಾಗಿ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಕ್ಕೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಸತಿ ನಿಲಯಗಳಿಗೆ ಪ್ರವೇಶ ಪಡೆಯಲು 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇಚ್ಛೆಯುಳ್ಳ ಅರ್ಹ ವಿದ್ಯಾರ್ಥಿಗಳು ಆಯಾ ವಸತಿ ನಿಲಯ/ವಸತಿ ಶಾಲೆಗಳ ಮೇಲ್ವಿಚಾರಕರಿಂದ ಉಚಿತವಾಗಿ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ 2017ರ ಜೂನ್ 15ರೊಳಗಾಗಿ ಸಂಬಂಧಿಸಿದ ವಸತಿ ನಿಲಯಗಳ ಮೇಲ್ವಿಚಾರಕರಿಗೆ ಸಲ್ಲಿಸಬೇಕು.
ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳ ವಿವರ ಇಂತಿವೆ: ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಹಾವನೂರ, ಗೊಬ್ಬೂರ(ಬಿ), ನೀಲೂರ, ಸ್ಟೇಶನ್ ಗಾಣಗಾಪುರ, ದೇವಲ ಗಾಣಗಾಪುರ, ಬಡದಾಳ, ಉಡಚಣ, ಹೊಸೂರ, ಹಿಂಚಗೇರಾ. ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಅಫಜಲಪುರ ಪಟ್ಟಣ, ಭೈರಾಮಡಗಿ, ಹಸರಗುಂಡಗಿ. ಹೆಚ್ಚಿನ ಮಾಹಿತಿಗಾಗಿ ಅಫಜಲಪುರ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ವಾಹನ ಬಾಡಿಗೆಗಾಗಿ ಟೆಂಡರ್ ಅರ್ಜಿ ಆಹ್ವಾನ
********************************************
ಕಲಬುರಗಿ,ಮೇ.29.(ಕ.ವಾ.)-ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಬಾಡಿಗೆ ಆಧಾರದ ಮೇಲೆ ವಾಹನ ಚಾಲಕರೊಂದಿಗೆ ಒಂದು ವಾಹನ ಪಡೆಯಲು ವಿವಿಧ ಟ್ರಾವೆಲ್ ಏಜೆನ್ಸಿಯವರಿಂದ ಇ-ಟೆಂಡರ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ತಿಳಿಸಿದ್ದಾರೆ.
ಭರ್ತಿ ಮಾಡಿದ ಟೆಂಡರ್ ಸಲ್ಲಿಸಲು ಜೂನ್ 24 ಕೊನೆಯ ದಿನವಾಗಿದೆ. ಜೂನ್ 27ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಾರ್ಯಾಲಯದಲ್ಲಿ ಟೆಂಡರ್ ತೆರೆಯಲಾಗುವುದು. ಟೆಂಡರ್ ಶುಲ್ಕ, ಇಎಂಡಿ ಮೊತ್ತ, ನಿಬಂಧನೆ ಮುಂತಾದ ವಿವರಗಳಿಗಾಗಿ ಕಲಬುರಗಿ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-221069ನ್ನು ಸಂಪರ್ಕಿಸಲು ಕೋರಿದೆ.

ಮೆಟ್ರಿಕ್ ಪೂರ್ವ ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*****************************************************
ಕಲಬುರಗಿ,ಮೇ.29.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಚಿಂಚೋಳಿ ತಾಲೂಕಿನಲ್ಲಿ ನಡೆಸಲಾಗುತ್ತಿರುವ ಕೆಳಕಂಡ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕ/ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ 2017-18ನೇ ಸಾಲಿನಲ್ಲಿ ಹೊಸದಾಗಿ ಪ್ರವೇಶಕ್ಕಾಗಿ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಕ್ಕೆ ಸೇರಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಸತಿ ನಿಲಯಗಳಿಗೆ ಪ್ರವೇಶ ಪಡೆಯಲು 5ನೇ ತರಗತಿಯಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇಚ್ಛೆಯುಳ್ಳ ಅರ್ಹ ವಿದ್ಯಾರ್ಥಿಗಳು ಆಯಾ ವಸತಿ ನಿಲಯ/ವಸತಿ ಶಾಲೆಗಳ ಮೇಲ್ವಿಚಾರಕರಿಂದ ಉಚಿತವಾಗಿ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ 2017ರ ಜೂನ್ 15ರೊಳಗಾಗಿ ಸಂಬಂಧಿಸಿದ ವಸತಿ ನಿಲಯಗಳ ಮೇಲ್ವಿಚಾರಕರಿಗೆ ಸಲ್ಲಿಸಬೇಕು.
ಕಳೆದ ಸಾಲಿನಲ್ಲಿ ವಿದ್ಯಾರ್ಥಿನಿಲಯದಲ್ಲಿದ್ದು, ಉತ್ತೀರ್ಣರಾದ 5 ರಿಂದ 9 ತರಗತಿಯ ವಿದ್ಯಾರ್ಥಿಗಳು ಮರು ಪ್ರವೇಶಕ್ಕಾಗಿ ನವೀಕರಣ ಅರ್ಜಿಯನ್ನು ಸಂಬಂಧಪಟ್ಟ ವಸತಿ ನಿಲಯದ ಮೇಲ್ವಿಚಾಕರಿಗೆ ಅರ್ಜಿ ಸಲ್ಲಿಸಿ ಜೂನ್ 5ರೊಳಗಾಗಿ ಪ್ರವೇಶ ಪಡೆಯಬೇಕು. ತಡವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಮೆಟ್ರಿಕ್ ಪೂರ್ವ ವಸತಿ ನಿಲಯಗಳ ವಿವರ ಇಂತಿವೆ: ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯ ಚಿಂಚೋಳಿ, ಚಂದಾಪುರ, ಚಿಮ್ಮನಚೋಡ, ಕೋಡ್ಲಿ, ರಟಕಲ್, ರಾಯಕೋಡ್. ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯ ಸಾಲೇಬೀರನಳ್ಳಿ, ಚಿಂಚೋಳಿ, ಕೋಡ್ಲಿ, ರಟಕಲ್. ಹೆಚ್ಚಿನ ಮಾಹಿತಿಗಾಗಿ ಚಿಂಚೋಳಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08475-273055ನ್ನು ಸಂಪರ್ಕಿಸಲು ಕೋರಿದೆ.

ಜೂನ್ 3ರಂದು ತಾಜಸುಲ್ತಾನಪುರದಲ್ಲಿ ಜನಸ್ಪಂದನ ಸಭೆ
*******************************************************
ಕಲಬುರಗಿ,ಮೇ.29.(ಕ.ವಾ.)-ಕಲಬುರಗಿ ತಾಲೂಕಿನ ಪಟ್ಟಣ ಹೋಬಳಿ ವ್ಯಾಪ್ತಿಯ ತಾಜಸುಲ್ತಾನಪುರ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಜೂನ್ 3ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ಗ್ರೇಡ್-2 ತಹಶೀಲ್ದಾರ್ ಜಗನ್ನಾಥ ಪೂಜಾರಿ ತಿಳಿಸಿದ್ದಾರೆ. ತಾಜಸುಲ್ತಾನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
ಕಲಬುರಗಿ,ಮೇ.29.(ಕ.ವಾ.)-ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸೇಡಂ ಪಟ್ಟಣದಲ್ಲಿ ಯು.ಜಿ.ಡಿ. ಕಾಮಗಾರಿಗಾಗಿ 2 ವೆಟ್‍ವೆಲ್‍ಗಳ ಅಗತ್ಯವಿದ್ದು, ಸದರಿ ವೆಟ್‍ವೆಲ್‍ಗಳನ್ನು ನಿರ್ಮಿಸಲು ತಾಂತ್ರಿಕವಾಗಿ ರಹೆಮತನಗರÀದಲ್ಲಿ ಬರುವ ಸರ್ವೇ ನಂಬರ್ 910ರ ಅನುಮೋದಿತ ರೂಪುರೇಷೆಯಲ್ಲಿ ಸಾರ್ವಜನಿಕ ಸೌಲಭ್ಯಕ್ಕೆ ಮೀಸಲಿಟ್ಟ ನಿವೇಶನದಲ್ಲಿ 72ಘಿ45 ಮೀಟರ ಅಳತೆಯ ಪೈಕಿ 30ಘಿ30 ಮೀ. ಅಳತೆಯ ನಿವೇಶನವನ್ನು ವೆಟ್‍ವೆಲ್ ನಿರ್ಮಾಣಕ್ಕಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಒದಗಿಸಲು ತುರ್ತು ಸಭೆಯಲ್ಲಿ ನಿರ್ಣಯಸಲಾಗಿದೆ ಎಂದು ಸೇಡಂ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಅದರಂತೆ ಸೇಡಂ ಪಟ್ಟಣದ ಯು.ಜಿ.ಡಿ. ಝೋನ್-3 ರ ಸೀವೇಝ ನೀರನ್ನು ಪಂಪು ಮಾಡಲು ವೆಟ್‍ವೆಲ್ ನಿರ್ಮಾಣಕ್ಕಾಗಿ ಸರ್ವೇ ನಂಬರ್ 910ರ ಅನುಮೋದಿತ ರೂಪುರೇಷೆÀಯಲ್ಲಿ ಸಾರ್ವಜನಿಕ ಸೌಲಭ್ಯ ಮೀಸಲಿಟ್ಟ ನಿವೇಶನದಲ್ಲಿ 72ಘಿ45 ಮೀಟರ ಅಳತೆಯ ನಿವೇಶನವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೀಡಲು ದಿನಾಂಕ 18-03-2017 ರಂದು ತುರ್ತು ಸಭೆಯ ನಡಾವಳಿ ಸಂಖ್ಯೆ: 37-2 ರನ್ವಯ ಠರಾವು ಮಾಡಿ ನಿರ್ಣಯಿಸಿರುತ್ತಾರೆ.
ಸದರಿ ವೆಟ್‍ವೆಲ್‍ಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಏನಾದರೂ ಆಕ್ಷೇಪಣೆಗಳಿದ್ದಲ್ಲಿ 2017ರ ಜೂನ್ 10ರೊಳಗಾಗಿ ಸೇಡಂ ಪುರಸಭೆ ಮುಖ್ಯಾಧಿಕಾರಿ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ತಿರಸ್ಕರಿಸಲಾಗುವುದು ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
*********************************
ಕಲಬುರಗಿ,ಮೇ.29.(ಕ.ವಾ.)-ಅಲ್ಪಸಂಖ್ಯಾತರ ಸ್ವಯಂ ಸೇವಾ ಸಂಸ್ಥೆಯಿಂದ ಕಲಬುರಗಿ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಅನಾಥಾಲಯ, ವೃದ್ಧಾಶ್ರಮ, ಹೆಚ್.ಐ.ವಿ./ಏಡ್ಸ್ ಸೋಂಕಿತ ವ್ಯಕ್ತಿಗಳ ಆಶ್ರಯಧಾಮ ಮತ್ತು ಮಾನಸಿಕ ಹಾಗೂ ದೈಹಿಕ ವಿಕಲಚೇತನರ ಆಶ್ರಯಧಾಮಗಳಿಗೆ ಸಹಾಯಧನ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮೆಹಬೂಬ್ ಪಾಷಾ ಕಾರಟಗಿ ತಿಳಿಸಿದ್ದಾರೆ.
ಕ್ರಿಶ್ಚಿಯನ್ ಸಮಗ್ರ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತರ ಸ್ವಯಂ ಸೇವಾ ಸಂಸ್ಥೆಯವರು ನಡೆಸುತ್ತಿರುವ ಅನಾಥಾಲಯ, ವೃದ್ಧಾಶ್ರಮ, ಹೆಚ್.ಐ.ವಿ./ಏಡ್ಸ್ ಸೋಂಕಿತ ವ್ಯಕ್ತಿಗಳ ಆಶ್ರಯಧಾಮ ಮತ್ತು ಮಾನಸಿಕ ಹಾಗೂ ದೈಹಿಕ ವಿಕಲಚೇತನರ ಆಶ್ರಯಧಾಮಗಳಿಗೆ ಗರಿಷ್ಠ 8 ಲಕ್ಷ ರೂ.ವರೆಗೆ ಸರ್ಕಾರದಿಂದ ಸಹಾಯ ಅನುದಾನ ನೀಡಲಾಗುತ್ತದೆ.
ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳ ಅಧ್ಯಕ್ಷರು ಸದರಿ ಯೋಜನೆಯ ಲಾಭ ಪಡೆಯಲು ಕೋರಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಯವರ ಕಾರ್ಯಾಲಯ, ಮಿನಿವಿಧಾನ ಸೌಧ ಆವರಣ, ಕಲಬುರಗಿ ಕಚೇರಿಯನ್ನು ಮತ್ತು ದೂರವಾಣಿ ಸಂಖ್ಯೆ 08472-247260ನ್ನು ಹಾಗೂ ಇಲಾಖೆಯ ವೆಬ್ ಸೈಟ್ hಣಣಠಿ://ತಿತಿತಿ.goಞಜom.ಞಚಿಡಿ.ಟಿiಛಿ.iಟಿ ನ್ನು ಸಂಪರ್ಕಿಸಲು ಕೋರಿದೆ.

ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ
*******************************
ಕಲಬುರಗಿ,ಮೇ.29.(ಕ.ವಾ.)-ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌಧ್ದ, ಪಾರ್ಸಿ ಮತ್ತು ಸಿಖ್ ವಿದ್ಯಾರ್ಥಿಗಳು ಅಲ್ಪಸಂಖ್ಯಾತರ ಸಂಬಂಧಿಸಿದ ವಿಷಯಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಜಿ.ಆರ್.ಎಫ್. ಮಾದರಿಯಲ್ಲಿ ಫೆಲೋಶೀಪ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮೆಹಬೂಬ್ ಪಾಷಾ ಕಾರಟಗಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ವಿಷಯಗಳ ಮೇಲೆ ವಿಶ್ವವಿದ್ಯಾಲಯಗಳಲ್ಲಿ ಪಿಹೆಚ್.ಡಿ. ವ್ಯಾಸಂಗ ಮಾಡುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 3 ವರ್ಷ ಮತ್ತು ಎಂ.ಫಿಲ್. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜಿ.ಆರ್.ಎಫ್ ಮಾದರಿಯಲ್ಲಿ 2 ವರ್ಷಗಳ ಅವಧಿಗೆ ಮಾಹೆಯಾನ 25000 ರೂ. ಹಾಗೂ ಪ್ರತಿ ವರ್ಷಕ್ಕೆ ಒಂದು ಬಾರಿಗೆ ನಿರ್ವಹಣಾ ವೆಚ್ಚವಾಗಿ 10000 ರೂ. ನೀಡಲಾಗುತ್ತದೆ.
ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕಲ್ಲದೇ ಪಿಹೆಚ್.ಡಿ./ಎಂ.ಫಿಲ್. ವ್ಯಾಸಂಗವನ್ನು ಭಾರತ/ಕರ್ನಾಟಕ ರಾಜ್ಯದ ಶಾಸನಬದ್ಧ ಅಂಗೀಕೃತವಾದ ವಿಶ್ವವಿದ್ಯಾಲಯಗಳಲ್ಲಿ ಮಾಡತಕ್ಕದ್ದು. ವಿದ್ಯಾರ್ಥಿಯ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ 6 ಲಕ್ಷ ರೂ. ಮೀರಿರಬಾರದು. ವಿದ್ಯಾರ್ಥಿಯು ಯಾವುದೇ ಸರ್ಕಾರಿ ಉದ್ಯೋಗಿಯಾಗಿರಬಾರದು. ವಿದ್ಯಾರ್ಥಿಯು ಅಧ್ಯಯನ ಮಾಡುತ್ತಿರುವ ವಿಷಯವು ಅಲ್ಪಸಂಖ್ಯಾತ ಸಂಬಂಧಿತ ವಿಷಯವೆಂದು ಇಲಾಖಾ ಅಡಿಯಲ್ಲಿ ನಡೆಸಲಾಗುತ್ತಿರುವ ಅಲ್ಪಸಂಖ್ಯಾತರ ಅಧ್ಯಯನ ಪೀಠವು ತೀರ್ಮಾನಿಸುವುದು.
ಅಲ್ಪಸಂಖ್ಯಾತರ ಪಿಹೆಚ್.ಡಿ./ಎಂ.ಫಿಲ್. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ ಜೂನ್ 10 ರೊಳಗಾಗಿ ನಿರ್ದೇಶಕರು, ಅಲ್ಪಸಂಖ್ಯಾತರ ನಿರ್ದೇಶನಾಲಯ 20ನೇ ಮಹಡಿ ವಿ.ವಿ ಟಾವರ್, ಡಾ|| ಬಿ.ಆರ್.ಅಂಬೇಡ್ಕರ ವಿಧಿ ಬೆಂಗಳೂರು 560001 ಕಚೇರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ hಣಣಠಿ://ತಿತಿತಿ.goಞಜom.ಞಚಿಡಿ.ಟಿiಛಿ.iಟಿನ್ನು ಸಂಪರ್ಕಿಸಲು ಕೋರಿದೆ.

ಜೂನ್ 3ರಂದು ಹೋಬಳಿ ಮಟ್ಟದ ಜನಸ್ಪಂದನ ಸಭೆಗಳು
*********************************************************
ಕಲಬುರಗಿ,ಮೇ.29.(ಕ.ವಾ.)-ಕಲಬುರಗಿ ಜಿಲ್ಲೆಯ ವಿವಿಧ ತಾಲೂಕಿನ ಗ್ರಾಮಗಳಲ್ಲಿ ಜೂನ್ 3ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆಗಳನ್ನು ನಡೆಸಲಾಗುವುದು ಎಂದು ಹೆÀಚ್ಚುವರಿ ಜಿಲ್ಲಾಧಿಕಾರಿ ಇಲಿಯಾಸ್ ಅಹ್ಮದ್ ಇಸಾಮದಿ ತಿಳಿಸಿದ್ದಾರೆ. ತಾಲೂಕುವಾರು ನಡೆಯುವ ಜನಸ್ಪಂದನ ಸಭೆಗಳ ಹೋಬಳಿ, ಗ್ರಾಮ ಮತ್ತು ಸ್ಥಳಗಳ ವಿವರ ಇಂತಿದೆ.
ಕಲಬುರಗಿ-ಪಟ್ಟಣ ಹೋಬಳಿಯ ತಾಜಸುಲ್ತಾನಪುರ ಗ್ರಾಮ ಪಂಚಾಯಿತಿ ಕಾರ್ಯಾಲಯ. ಆಳಂದ-ಆಳಂದ ಹೋಬಳಿಯ ತಡಕಲ್ ಗ್ರಾಮ ಪಂಚಾಯಿತಿ ಕಾರ್ಯಾಲಯ. ಅಫಜಲಪುರ-ಕರಜಗಿ ಹೋಬಳಿಯ ಉಡಚಾಣ ಗ್ರಾಮ ಪಂಚಾಯಿತಿ ಕಾರ್ಯಾಲಯ. ಜೇವರ್ಗಿ-ಯಡ್ರಾಮಿ ಹೋಬಳಿಯ ಜಂಬೇರಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಸೇಡಂ-ಸೇಡಂ ಹೋಬಳಿಯ ಮಳಖೇಡ(ಜೆ) ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿತ್ತಾಪುರ-ನಾಲವಾರ ಹೋಬಳಿಯ ಕಮರವಾಡಿ ಗ್ರಾಮ ಪಂಚಾಯಿತಿ ಕಾರ್ಯಾಲಯ. ಚಿಂಚೋಳಿ-ಕೋಡ್ಲಿ ಹೋಬಳಿಯ ಕಂಚನಾಳ ಸರ್ಕಾರಿ ಶಾಲಾ ಆವರಣ.

ಮೇ 31ರಂದು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ
****************************************************
ಕಲಬುರಗಿ,ಮೇ.29.(ಕ.ವಾ.)-ಅಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಯೋಗದೊಂದಿಗೆ ಕಲಬುರಗಿ ಜಿಲ್ಲಾ ಗ್ರಾಹಕರ ವೇದಿಕೆಯ ಆವರಣದಲ್ಲಿ ಮೇ 31ರಂದು ಬೆಳಿಗ್ಗೆ 8.30 ಗಂಟೆಗೆ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಗ್ರಾಹಕರ ವೇದಿಕೆಯ ಸಹಾಯಕ ನೋಂದಣಾಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಆರೋಪಿಗೆ 03 ವರ್ಷ ಜೈಲು ಶಿಕ್ಷೆ
******************************************************************
ಕಲಬುರಗಿ,ಮೇ.29.(ಕ.ವಾ.)-ಪರಿಶಿಷ್ಟ ಜಾತಿಗೆ ಸೇರಿದವನೆಂದು ಸುಳ್ಳು ಮಾಹಿತಿ ನೀಡಿ ಪ್ರಮಾಣಪತ್ರ ಪಡೆದು ಮೀಸಲಾತಿ ಕೋಟಾದಡಿ ಇಂಜಿನಿಯರಿಂಗ್ ಸೀಟು ಪಡೆದುಕೊಂಡಿರುವ ಆರೋಪಿ ಅನೀಲಕುಮಾರಗೆ 4ನೇ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು, ಈಗಿನ ಪ್ರಭಾರಿ 5ನೇ ಹೆಚ್ಚುವರಿ ನ್ಯಾಯಾಧೀಶ ಸುಭಾಷಚಂದ್ರ ರಾಠೋಡ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಆರೋಪಿ ಅನಿಲಕುಮಾರ ಹಿಂದುಳಿದ ಹಡಪದ ಜಾತಿಗೆ ಸೇರಿದ್ದು, ತಹಸೀಲ್ದಾರರಿಂದ 1991ರ ಏಪ್ರಿಲ್ 8 ಮತ್ತು ಜೂನ್ 1ರಂದು ಎರಡು ಪರಿಶಿಷ್ಟ ಜಾತಿ (ಎಸ್.ಸಿ.) ಪ್ರಮಾಣಪತ್ರ ಪಡೆದಿದ್ದಾನೆ. ಪರೀಕ್ಷಾ ಪ್ರಾಧಿಕಾರಕ್ಕೆ ಈ ಪ್ರಮಾಣಪತ್ರ ಸಲ್ಲಿಸಿ ಕಲಬುರಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೀಸಲಾತಿ ಕೋಟಾದಡಿ ಸೀಟು ಪಡೆದು ವಂಚಿಸಿದ್ದ.
ಮೀಸಲಾತಿ ಕೋಟಾದಲ್ಲಿ ಸೀಟು ಪಡೆದು ನಿಜವಾದ ಪರಿಶಿಷ್ಟ ಜಾತಿಯವರಿಗೆ ಸಿಗುವ ಸೌಲಭ್ಯವನ್ನು ಮೋಸದಿಂದ ಪಡೆದು ಸರ್ಕಾರಕ್ಕೆ ಹಾಗೂ ಎಸ್.ಸಿ.,ಎಸ್.ಟಿ. ಜನರಿಗೆ ಮೋಸ ಮಾಡಿದ್ದಾರೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿರುದ್ಯೋಗಿ ಇಂಜಿನಿಯರುಗಳ ಸಂಘ ಗುಲಬರ್ಗಾದ ಜನರಲ್ ಸೆಕ್ರೆಟರಿ ದೂರು ನೀಡಿದ್ದರು. ಬ್ರಹ್ಮಪುರ ಠಾಣೆಯ ಪೊಲೀಸರು ತನಿಖೆ ನಡೆಸಿ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಪ್ರಕರಣದ ವಿಚಾರಣೆಯು ಕಲಬುರಗಿಯ 4ನೇ ಹೆಚ್ಚುವರಿ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ನಡೆದು, ಈಗ ಪ್ರಭಾರ ಐದನೇ ಹೆಚ್ಚುವರಿ ನ್ಯಾಯಾಧೀಶ ಸುಭಾಷಚಂದ್ರ ರಾಠೋಡ ಅವರು ವಾದ ವಿವಾದವನ್ನು ಆಲಿಸಿ, ಅಭಿಯೋಜನೆಯಿಂದ ಒದಗಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ಆರೋಪಿತನು ಅಪರಾಧ ಮಾಡಿದ ಬಗ್ಗೆ ರುಜುವಾತು ಪಟ್ಟಿದ್ದರಿಂದ ಅಪರಾಧಿಗೆ 3 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಕೆ.ಆರ್. ನಾಗರಾಜ ವಾದ ಮಂಡಿಸಿದರು.





ಹೀಗಾಗಿ ಲೇಖನಗಳು NEWS AND PHOTO DATE: 29--05--2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 29--05--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 29--05--2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-date-29-05-2017.html

Subscribe to receive free email updates:

0 Response to "NEWS AND PHOTO DATE: 29--05--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ