NEWS AND PHOTO DATE; 23---05---2017

NEWS AND PHOTO DATE; 23---05---2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE; 23---05---2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE; 23---05---2017
ಲಿಂಕ್ : NEWS AND PHOTO DATE; 23---05---2017

ಓದಿ


NEWS AND PHOTO DATE; 23---05---2017

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
*************************************************
ಕಲಬುರಗಿ,ಮೇ.23.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಕರ್ನಾಟಕ ಎಕ್ಸ್‍ಪ್ರೆಸ್ ರೈಲಿನ ಮೂಲಕ ಮೇ 24ರಂದು ಬೆಳಿಗ್ಗೆ 5.39 ಗಂಟೆಗೆ ಕಲಬುರಗಿಗೆ ಆಗಮಿಸಿ, ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಮೇ 25ರಂದು ಬೆಳಗಿನ 11 ಗಂಟೆಗೆ ಹೆಚ್.ಕೆ.ಆರ್.ಡಿ.ಬಿ. ಕಚೇರಿಯಲ್ಲಿ ಹೆಚ್.ಕೆ.ಆರ್.ಡಿ.ಬಿ.ಯ 2017-18ನೇ ಸಾಲಿನ ಪ್ರಥಮ ಮಂಡಳಿ ಸಭೆಯಲ್ಲಿ ಭಾಗವಹಿಸುವರು. ನಂತರ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ, ಸಂಜೆ 5 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರೋತ್ಥಾನ ಸಭೆಯಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು. ಮೇ 26ರಂದು ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಮೇ 27ರಂದು ಬೆಳಗಿನ 11.30 ಗಂಟೆಗೆ ಕಲಬುರಗಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮುಖ್ಯಮಂತ್ರಿಗಳೊಂದಿಗೆ ಕಲಬುರಗಿಯಲ್ಲಿ ನಿರ್ಮಿಸಿರುವ ನೂತನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಲೋಕಾರ್ಪಣೆ ಹಾಗೂ ಇನ್ಫೋಸಿಸ್ ಸಂಸ್ಥೆಯಿಂದ ನಿರ್ಮಿಸಲಾಗುವ ಧರ್ಮಶಾಲೆ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 1 ಗಂಟೆಗೆ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.30 ಗಂಟೆಗೆ ಇಂದಿರಾ ಸ್ಮಾರಕ ಭವನದ ಎದುರುಗಡೆಯಲ್ಲಿ ಮಾಜಿ ಉಪಪ್ರಧಾನಿ ಶ್ರೀ ಬಾಬು ಜಗಜೀವನರಾಂ ಪುತ್ಥಳಿಯ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಚಿವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ವಾಹನ ಬಾಡಿಗೆಗಾಗಿ ದರಪಟ್ಟಿ ಆಹ್ವಾನ
***************************************
ಕಲಬುರಗಿ,ಮೇ.23.(ಕ.ವಾ.)-ಕಲಬುರಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸುಸಜ್ಜಿತ ಎಲ್ಲೋ ಬೋರ್ಡುವುಳ್ಳ ಸ್ವೀಫ್ಟ್ ಡಿಸೈರ್/ಮಹೇಂದ್ರಾ ಲೋಗೊನ್/ಇಂಡಿಗೊ ಸಿ.ಎಸ್. ಕಾರನ್ನು ಮಾಸಿಕ ಬಾಡಿಗೆ ಆಧಾರದ ಮೇಲೆ ಪಡೆಯಲು ವಿವಿಧ ಟ್ರಾವೆಲ್ ಏಜೆನ್ಸಿಯವರಿಂದ ದರಪಟ್ಟಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಇಚ್ಛೆಯುಳ್ಳವÀರು ತಮ್ಮ ಕಡಿಮೆ ದರದ ಕೊಟೇಶನ್‍ದೊಂದಿಗೆ ಮೋಹರ್ ಬಂದ ಲಕೋಟೆಯನ್ನು ಜೂನ್ 05ರ ಸಂಜೆ 5.30 ಗಂಟೆಯೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಬೇಕು. ಅರ್ಹತೆ, ನಿಬಂಧನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಮೊದಲನೇ ಮಹಡಿ, ನಗರಾಭಿವೃದ್ಧಿ ಪ್ರಾಧಿಕಾರ, ಸ್ಟೇಶನ್ ರಸ್ತೆ ಕಲಬುರಗಿ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ರಾಜೀವಗಾಂಧಿ ಮಾನಸ ಸೇವಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
**********************************************************
ಕಲಬುರಗಿ,ಮೇ.23.(ಕ.ವಾ.)-ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣೆ, ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿರುವಂತಹ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಗುರುತಿಸಿ ರಾಜೀವಗಾಂಧಿ ಮಾನವ ಸೇವಾ ಪ್ರಶಸ್ತಿಯನ್ನು 03 ವ್ಯಕ್ತಿಗಳಿಗೆ ಹಾಗೂ 05 ಸಂಸ್ಥೆಗಳಿಗೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಇದಕ್ಕಾಗಿ ಕಲಬುರಗಿ ಜಿಲ್ಲೆಯ ಅರ್ಹ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ತಿಳಿಸಿದ್ದಾರೆ.
ಪ್ರತಿ ವ್ಯಕ್ತಿಗೆ ನೀಡುವ ಪ್ರಶಸ್ತಿಯು 1,00,000 ರೂ. ನಗದು ಮತ್ತು ಪ್ರಶಸ್ತಿ ಪತ್ರ ಹಾಗೂ ಪ್ರತಿ ಸಂಸ್ಥೆಗೆ ನೀಡುವ ಪ್ರಶಸ್ತಿಯು 3,00,000 ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಸಂಘ ಸಂಸ್ಥೆಗಳಲ್ಲಿ ವೇತನ ಪಡೆಯುತ್ತಿರುವ ವ್ಯಕ್ತಿಗಳು ಈ ಪ್ರಶಸ್ತಿಗೆ ಅರ್ಹರಿರುವುದಿಲ್ಲ. ಈ ಪ್ರಶಸ್ತಿಗೆ ಆಯ್ಕೆ ಮಾಡಲು ಇರುವ ಒಂದೇ ಮಾನದಂಡ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ವ್ಯಕ್ತಿಗಳು ಮಾಡಿರುವ ಕೆಲಸದ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ.
ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಎದುರಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ದ್ವಿಪ್ರತಿಯಲ್ಲಿ ಇದೇ ಕಚೇರಿಯಲ್ಲಿ 2017ರ ಜೂನ್ 1ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278659ನ್ನು ಸಂಪರ್ಕಿಸಲು ಕೋರಲಾಗಿದೆ.
ಮೇ 25 ಹಾಗೂ 26ರಂದು ಕ್ಯಾಂಪಸ್ ಸಂದರ್ಶನ
*************************************************
ಕಲಬುರಗಿ,ಮೇ.23.(ಕ.ವಾ.)-ಬೆಂಗಳೂರಿನ ಮೇ|| ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆಯಿಂದ ಐಟಿಐ ತರಬೇತಿ ಹೊಂದಿದ ಹಾಗೂ ಹೊಂದುತ್ತಿರುವ (ಕೊನೆಯ ಸೆಮಿಸ್ಟರ್) ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ವೃತ್ತಿಯ ತರಬೇತಿದಾರರಿಗೆ ಮೇ 25ರಂದು ಹಾಗೂ ಫಿಟ್ಟರ್, ಡಿಎಂಎಂ, ಪಾಸಾ/ಕೋಪಾ, ಟರ್ನರ್, ವೆಲ್ಡರ್, ಮಶಿನಿಸ್ಟ್ ಮತ್ತು ಆರ್‍ಎಸಿ ವೃತ್ತಿಯ ತರಬೇತಿದಾರಿಗೆ ಮೇ 26ರಂದು ಬೆಳಗಿನ 9 ಗಂಟೆಗೆ ಕಲಬುರಗಿ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಪುರುಷ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಂದರ್ಶನ ನಡೆಯಲಿದೆ ಎಂದು ಸಂಸ್ಥೆಯ ಪ್ರಾಚಾರ್ಯ ಎನ್.ಎಸ್. ಪಾಂಚಾಳ ತಿಳಿಸಿದ್ದಾರೆ.
ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಪುರುಷ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಸಂಪರ್ಕಿಸಲು ಕೋರಿದೆ.
ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
****************************
ಕಲಬುರಗಿ,ಮೇ.23.(ಕ.ವಾ.)-ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃಧ್ಧಿ ನಿಗಮದಿಂದ 2017-18 ನೇ ಸಾಲಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಸಾಲ ಮಂಜೂರಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 9 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಡಾ. ಎಂ.ಆರ್. ಏಕಾಂತಪ್ಪ ತಿಳಿಸಿದ್ದಾರೆ.
ಸಾಲ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಜbಛಿಜಛಿರಲ್ಲಿ ಲಾಗಿನ್ ಆಗಿ ವೆಬ್‍ಸೈಟ್‍ನಲ್ಲಿ ಲಭ್ಯವಿರುವ Useಡಿಟಿಚಿme-iಟಿಜಿಡಿಚಿ \ಜbಛಿಜಛಿಚಿಡಿivu ಮತ್ತು Pಚಿssತಿಚಿಡಿಜ-ಆಃ(ಜ#098ನ್ನು ನಮೂದಿಸಿ ಅರ್ಜಿಯನ್ನು ಆನ್‍ಲೈನ್‍ಲ್ಲಿ ಭರ್ತಿ ಮಾಡಬೇಕು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ. ಆಧಾರ್ ಕಾರ್ಡ್ ಸಂಖ್ಯೆ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಹಾಗೂ ಸಿ.ಇ.ಟಿ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್‍ಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಆನ್‍ಲೈನ್‍ಲ್ಲಿ ಜೂನ್ 9 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಕೋಣೆ ಸಂಖ್ಯೆ: 22, 3ನೇ ಮಹಡಿ, ವಿಕಾಸ ಭವನ, ಮಿನಿ ವಿಧಾನ ಸೌಧ ಕಲಬುರಗಿ ದೂರವಾಣಿ ಸಂಖ್ಯೆ 08472-278635 ಹಾಗೂ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೆÉೀರಿಯನ್ನು ಸಂಪರ್ಕಿಸಬಹುದು. ನಿಗಮದ ವೆಬ್ ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಜbಛಿಜಛಿ ನ್ನು ಸಂಪರ್ಕಿಸಲು ಕೋರಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಮೇ 20 ನಿಗದಿಪಡಿಸಲಾಗಿತ್ತೆಂದು ಅವರು ತಿಳಿಸಿದ್ದಾರೆ.
ಅರವಿಂದಕುಮಾರ ಭದ್ರಶೆಟ್ಟಿಗೆ ಪಿಹೆಚ್.ಡಿ.
*****************************************
ಕಲಬುರಗಿ,ಮೇ.23.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯವು ಲೈಬ್ರೆರಿ ಆ್ಯಂಡ್ ಇನ್‍ಫಾರ್ಮೇಶನ್ ಸೈನ್ಸ್ ವಿಷಯದಲ್ಲಿ ಅರವಿಂದಕುಮಾರ ಮಲ್ಲಿನಾಥ ಭದ್ರಶೆಟ್ಟಿ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಡಾ. ಬಿ.ಎಸ್. ಮಹೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ “ಪರಸೆಪ್ಷನ್, ಅವೇರ್ನೆಸ್, ನಾಲೇಡ್ಜ್, ಇನ್‍ಫಾರ್ಮೇಶನ್ ನೀಡ್ಸ್ ಆ್ಯಂಡ್ ಸೊರ್ಸ್ ಯುಸ್ ಬಿಹೆವಿಯರ್ ಆಫ್ ಜನರಲ್ ಪಬ್ಲಿಕ್: ಎ ಸ್ಟಡಿ ವಿತ್ ಸ್ಪೆಷಲ್ ರೆಫರೆನ್ಸ್ ಟು ಹೆಲ್ತ್ ಇನ್‍ಫಾರ್ಮೇಶನ್” ಕುರಿತು ಅರವಿಂದಕುಮಾರ ಮಲ್ಲಿನಾಥ ಭದ್ರಶೆಟ್ಟಿ ಪ್ರಬಂಧವನ್ನು ಮಂಡಿಸಿದ್ದರು.
ಮೇ 24 ಮತ್ತು 25ರಂದು ಎ.ಸಿ.ಬಿ.ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಕಲಬುರಗಿ,ಮೇ.23.(ಕ.ವಾ.)-ಕಲಬುರಗಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿಗಳು ಕಲಬುರಗಿ ಜಿಲ್ಲೆಯ ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕುಗಳಿಗೆ ಕ್ರಮವಾಗಿ ಮೇ 24 ಮತ್ತು 25ರಂದು ಭೇಟಿ ನೀಡಿ ಬೆಳಗಿನ 11 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಕಲಬುರಗಿ ಭ್ರಷ್ಟಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಪೊಲೀಸ್ ಉಪ ಅಧೀಕ್ಷಕರು ತಿಳಿಸಿದ್ದಾರೆ.
ಭೇಟಿ ದಿನಾಂಕ, ವಾರ, ಅಧಿಕಾರಿಗಳ ಹೆಸರು, ತಾಲೂಕಿನ ಹೆಸರು ಹಾಗೂ ಅಹವಾಲು ಸ್ವೀಕರಿಸುವ ಸ್ಥಳದ ವಿವರ ಇಂತಿದೆ. ಮೇ 24ರಂದು ಬುಧವಾರ: ಪೊಲೀಸ್ ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನ ಡಪ್ಪಿನ್ ಮೊಬೈಲ್ ಸಂ. 9480803609, 9663548820-ಜೇವರ್ಗಿ ಪ್ರವಾಸಿ ಮಂದಿರ. ಮೇ 25ರಂದು ಗುರುವಾರ: ಪೊಲೀಸ್ ಇನ್ಸ್‍ಪೆಕ್ಟರ್ ಕೃಷ್ಣಪ್ಪ ಕಲ್ಲೆದೇವರು ಮೊಬೈಲ್ ಸಂ. 9480803610, 9448828787-ಚಿತ್ತಾಪುರ ಪ್ರವಾಸಿ ಮಂದಿರ.
ನಿವೃತ್ತ ಅಧಿಕಾರಿಗಳ ಸೇವೆಗಾಗಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಮೇ.23.(ಕ.ವಾ.)-ಹೈದರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಗಳ ಕಾರ್ಯಾನುಷ್ಠಾನಕ್ಕಾಗಿ ನಿವೃತ್ತ ಅಧಿಕಾರಿಗಳನ್ನು ವೈಯಕ್ತಿಕ ಸಮಾಲೋಚನೆ ಆಧಾರದ ಮೇರೆಗೆ ಸೇವೆ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ ಘೋಷ್ ತಿಳಿಸಿದ್ದಾರೆ.
ತಾಂತ್ರಿಕ ಸಲಹೆಗಾರ ಹುದ್ದೆಗೆ ನಿವೃತ್ತ ಮುಖ್ಯ ಇಂಜಿನಿಯರ್/ಅಧೀಕ್ಷಕ ಇಂಜಿನಿಯರ್ ಅಥವಾ ಕನಿಷ್ಠ 15 ವರ್ಷಗಳ ಅನುಭವವುಳ್ಳ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ/ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರು/ ಸಹ ಪ್ರಾಧ್ಯಾಪಕರು (ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆ ಕಾರ್ಯಾಲಯಗಳಿಗೆ-ಜಿಲ್ಲೆಗೆ ಒಬ್ಬರಂತೆ) ಅರ್ಹರಾಗಿದ್ದು, 40000ರೂ. ಗೌರವಧನ ನೀಡಲಾಗುವುದು. ಪ್ರೊಜೆಕ್ಟ್ ಅನುಷ್ಠಾನ ಮತ್ತು ಸಮನ್ವಯ ಅಧಿಕಾರಿ ಹುದ್ದೆಗೆ ನಿವೃತ್ತ ಜಿಲ್ಲಾಮಟ್ಟದ ಅಧಿಕಾರಿ (ಉಪ ನಿರ್ದೇಶಕರ ಹುದ್ದೆ ಮೇಲ್ಪಟ್ಟ) ಅರ್ಹರಾಗಿದ್ದು, 30000 ರೂ. ಸಂಚಿತ ವೇತನ ನೀಡಲಾಗುತ್ತದೆ.
ತಾಂತ್ರಿಕ ಅಧಿಕಾರಿ ಹುದ್ದೆಗೆ ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್/ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅರ್ಹರಾಗಿದ್ದು, ನಿವೃತ್ತ ಕಾರ್ಯನಿರ್ವಾಹಕ ಇಂಜಿನಿಯರ್‍ಗೆ 30000 ರೂ. ಗೌರವಧನ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ಗೆ 20000ರೂ. ಸಂಚಿತ ವೇತನ ನೀಡಲಾಗುತ್ತದೆ. ಲೆಕ್ಕ ಅಧೀಕ್ಷಕರ ಹುದ್ದೆಗೆ ನಿವೃತ್ತ ಲೆಕ್ಕ ಅಧೀಕ್ಷಕರು ಅರ್ಹರಾಗಿದ್ದು, 20000ರೂ. ಸಂಚಿತ ವೇತನ ನೀಡಲಾಗುತ್ತದೆ. ಅಭ್ಯರ್ಥಿಗಳನ್ನು ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿ ಹಾಗೂ ದಾಖಲಾತಿಗಳೊಂದಿಗೆ ಮೇ 30ರಂದು ಬೆಳಗಿನ 10 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಹಾಜರಾಗಲು ಕೋರಿದೆ.
ಹೈದರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಗಳ ಕಾರ್ಯಾನುಷ್ಠಾನಕ್ಕಾಗಿ ಕಚೇರಿ ಸಿಬ್ಬಂದಿ ಮತ್ತು ತಾಂತ್ರಿಕ ಬಲವರ್ಧನೆಗಾಗಿ ನಿರ್ಣಯಿಸಲಾಗಿದೆ. ಅದರಂತೆ ಮಂಡಳಿಯು ಯೋಜನೆಗಳ ಕಾರ್ಯಾನುಷ್ಠಾನಕ್ಕೆ ಸಹಕಾರಿಯಾಗಲು ಪ್ರತಿಯೊಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಕಾರ್ಯಾಲಯದಲ್ಲಿ ಹಾಗೂ ಬಳ್ಳಾರಿ ಮತ್ತು ಕಲಬುರಗಿ ಮಹಾನಗರ ಪಾಲಿಕೆಗಳಲ್ಲಿ ಕೋಶ ಸ್ಥಾಪಿಸಿ, ಪ್ರತ್ಯೇಕವಾಗಿ ವೈಯಕ್ತಿಕ ಸಮಾಲೋಚನೆ ಆಧಾರದ ಮೇರೆಗೆ ನುರಿತ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿಗಳ ಸೇವೆಯನ್ನು ಪಡೆದುಕೊಳ್ಳಲು ಅನುಮತಿ ನೀಡಿ ಮಂಡಳಿಯ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.
ಗುಂಡಗುರ್ತಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ
******************************************************
ಕಲಬುರಗಿ,ಮೇ.23.(ಕ.ವಾ.)-ಚಿತ್ತಾಪುರ ತಾಲೂಕಿನ ಗುಂಡಗುರ್ತಿ (ಎಸ್.ಸಿ.) ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯು 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದಿದೆ. ಸದರಿ ವಸತಿ ಶಾಲೆಯ ಒಟ್ಟು 40 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 09 ಡಿಸ್ಟಿಂಕ್ಷನ್ ಹಾಗೂ 31 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಪ್ರಾಚಾರ್ಯ ಸುರೇಶ ಆಲ್ದಾರ್ಥಿ ತಿಳಿಸಿದ್ದಾರೆ.
ಈ ವಸತಿ ಶಾಲೆಯ ಮಕ್ಕಳ ಗಣನೀಯ ಸಾಧನೆಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ರಾಜಪ್ಪ, ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ಬನ್ನಿಕಟ್ಟಿ ಹಾಗೂ ಶಾಲೆಯ ಪ್ರಾಂಶುಪಾಲ ಸುರೇಶ ಆಲ್ದಾರ್ಥಿ ಹಾಗೂ ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಹೆಸರು, 625 ಅಂಕಗಳ ಪೈಕಿ ಒಟ್ಟು ಅಂಕ ಪಡೆದ ಹಾಗೂ ಶೇಕಡಾವಾರು ಫಲಿತಾಂಶ ವಿವರ ಇಂತಿದೆ. ಅರ್ಚನಾ ನಿಂಗಣ್ಣ ನಾಟೇಕರ್ 573 ಮತ್ತು ಶೇ. 92. ಅಕ್ಷತಾ ಎಂ. ನಂದರ್ಗಿಮಠ 559 ಮತ್ತು ಶೇ. 90. ಸ್ನೇಹಾ ಭರಮಣ್ಣ 549 ಮತ್ತು ಶೇ. 88, ರಾಧಿಕಾ ಲುಪ್ಪಟ್ಟಿ ಮತ್ತು ಸ್ನೇಹಾ ರಾಜು ಅವರು ತಲಾ 547 ಮತ್ತು ಶೇ. 87.
ಮೇ 24ರಂದು ನೇರ ಫೋನ್-ಇನ್ ಕಾರ್ಯಕ್ರಮ
**********************************************
ಕಲಬುರಗಿ,ಮೇ.23.(ಕ.ವಾ.)-ಕಲಬುರಗಿಯ ದೂರದರ್ಶನ ಕೇಂದ್ರವು ರೈತ ಬಾಂಧವರಿಗಾಗಿ ಮೇ 24ರಂದು ಸಾಯಂಕಾಲ 5.30 ರಿಂದ 6 ಗಂಟೆಯವರೆಗೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಎನ್.ಮಂಜುನಾಥ ಮತ್ತು ಝಹೀರ ಅಹ್ಮದ್ ಅವರು ಭಾಗವಹಿಸಿ “ಮುಂಗಾರು ಹಂಗಾಮಿನ ಪೂರ್ವಸಿದ್ಧತೆ” ಕುರಿತು ರೈತರ ಪ್ರಶ್ನೆಗಳಿಗೆ ಉತ್ತರಿಸುವರು. ರೈತರು ದೂರವಾಣಿ ಸಂಖ್ಯೆ 08472-220491, 220492ಗಳನ್ನು ಸಂಪರ್ಕಿಸಿ ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೊಯ್ಸಳ-ಕೆಳದಿ ಚೆನ್ನಮ್ಮ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
****************************************************
ಕಲಬುರಗಿ,ಫೆ.23.(ಕ.ವಾ.)-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2017-18ನೇ ಸಾಲಿನಿಂದ 6 ರಿಂದ 18 ವರ್ಷದೊಳಗಿನ ಮಕ್ಕಳು ನಾವೀನ್ಯತೆ, ತಾರ್ಕಿಕ ಸಾಧನೆಗಳು sಸಮಾಜ ಸೇವೆ, ಸಂಗೀತ, ಕಲೆ, ಕ್ರೀಡೆ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಕಲಬುರಗಿ ಜಿಲ್ಲೆಯ ಮಕ್ಕಳಿಂದ ಜಿಲ್ಲಾ ಮಟ್ಟದ ಹೊಯ್ಸಳ ಮತ್ತು ಕೆಳದಿನ ಚೆನ್ನಮ್ಮ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ತಿಳಿಸಿದ್ದಾರೆ.
ನಿಗದಿತ ಅರ್ಜಿ ನಮೂನೆಯನ್ನು ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಎದುರಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಮಗುವಿನ ಭಾವಚಿತ್ರ, ಅಸಾಧಾರಣ ಸಾಧನೆ ಮಾಡಿದ ಬಗ್ಗೆ ಪತ್ರಿಕಾ ವರದಿ ಮತ್ತು ಇತರೆ ದಾಖಲಾತಿ ಮತ್ತು ಜನ್ಮದಿನಾಂಕದ ಬಗ್ಗೆ ಶಾಲೆಯಿಂದ ಪಡೆದ ಪ್ರಮಾಣಪತ್ರಗಳ ಮತ್ತು ಇತರೆ ದಾಖಲಾತಿಗಳನ್ನು ದ್ವಿಪ್ರತಿಯಲ್ಲಿ ಲಗತ್ತಿಸಿ 2017ರ ಜೂನ್ 1ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278659ನ್ನು ಸಂಪರ್ಕಿಸಲು ಕೋರಲಾಗಿದೆ.
ಮುಂಗಾರು: 5.19ಲಕ್ಷ ಮೆ.ಟನ್ ಆಹಾರಧಾನ್ಯ ಉತ್ಪಾದಿಸುವ ಗುರಿ
****************************************************************
ಕಲಬುರಗಿ,ಮೇ.23.(ಕ.ವಾ.)-ಕಲಬುರಗಿ ಜಿಲ್ಲೆಯ ರೈತಾಪಿ ವರ್ಗಕ್ಕಾಗಿ ಕೃಷಿ ಇಲಾಖೆಯು ರೂಪಿಸಿದ 2017-18ನೇ ಸಾಲಿನ ಮುಂಗಾರು ಕೃಷಿ ಕಾರ್ಯಕ್ರಮದನ್ವಯ ಒಟ್ಟು 559785 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ 446735 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 519760 ಮೆಟ್ರಿಕ್ ಟನ್ ಆಹಾರಧಾನ್ಯ ಹಾಗೂ 38050 ಹೆಕ್ಟೇರ್ ಕ್ಷೇತ್ರದಲ್ಲಿ 50935 ಮೆಟ್ರಿಕ್ ಟನ್ ಎಣ್ಣೆಕಾಳು ಮತ್ತು 75000 ಹೆಕ್ಟೇರ್ ಕ್ಷೇತ್ರದಲ್ಲಿ 2679785 ಮೆಟ್ರಿಕ್ ಟನ್ ವಾಣಿಜ್ಯ ಬೆಳೆಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್.ಮೊಕಾಶಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 49800 ಹೆಕ್ಟೇರ್ ನೀರಾವರಿ ಹಾಗೂ 509985 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಸೇರಿದಂತೆ ಒಟ್ಟು 559785 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಈ ಪೈಕಿ 23285 ಹೆಕ್ಟೇರ್ ಪ್ರದೇಶದಲ್ಲಿ ತೃಣಧಾನ್ಯ (ಏಕದಳ ಧಾನ್ಯ) ಬೆಳೆಗಳನ್ನು ಬೆಳೆಯಲಾಗುವುದು. ಇದರಲ್ಲಿ 3700 ಹೆಕ್ಟೇರ್ ನೀರಾವರಿ ಮತ್ತು 19585 ಹೆಕ್ಟೇರ್ ಮಳೆಯಾಶ್ರಿತ (ಖುಷ್ಕಿ) ಪ್ರದೇಶ ಸೇರಿರುತ್ತದೆ. ಬೆಳೆವಾರು ನಿಗದಿಪಡಿಸಿದ ಕ್ಷೇತ್ರದ ವಿವರ ಹೆಕ್ಟೇರ್‍ಗಳಲ್ಲಿ ಇಂತಿದೆ. ಸಜ್ಜೆ-14150, ಜೋಳ-1550, ಮೆಕ್ಕೆಜೋಳ-5200, ಭತ್ತ-2200. ಇತರೆ-185. ಬೇಳೆಕಾಳು: ಒಟ್ಟು ಕ್ಷೇತ್ರ-423450 ಹೆಕ್ಟೇರ್. ನೀರಾವರಿ-2900 ಹೆಕ್ಟೇರ್ ಮತ್ತು ಮಳೆಯಾಶ್ರಿತ-420550 ಹೆಕ್ಟೇರ್. ಬೆಳೆವಾರು ವಿವರ ಹೆಕ್ಟೇರ್‍ಗಳಲ್ಲಿ ಇಂತಿದೆ. ತೊಗರಿ-362800, ಹೆಸರು-35100, ಉದ್ದು-25000, ಅಲಸಂದಿ-100, ಹುರುಳಿ-200, ಅವರೆ-150, ಮಟಕಿ-100. ಎಣ್ಣೆಕಾಳು: ಒಟ್ಟು ಕ್ಷೇತ್ರ-38050 ಹೆಕ್ಟೇರ್. ನೀರಾವರಿ-1200 ಹೆಕ್ಟೇರ್ ಮತ್ತು ಮಳೆಯಾಶ್ರಿತ-36850 ಹೆಕ್ಟೇರ್. ಬೆಳೆವಾರು ವಿವರ ಹೆಕ್ಟೇರ್‍ಗಳಲ್ಲಿ ಇಂತಿದೆ. ಸೂರ್ಯಕಾಂತಿ-16550, ಶೇಂಗಾ-1100, ಎಳ್ಳು-5000, ಗುರೆಳ್ಳು-300, ಔಡಲ-100, ಸೋಯಾಬಿನ್-15000. ಇದಲ್ಲದೆ 48000 ಹೆಕ್ಟೇರ್ ಪ್ರದೇಶವನ್ನು ಹತ್ತಿ ಬೆಳೆಗಾಗಿ ಕಾಯ್ದಿರಿಸಿದ್ದು, ಇದರಲ್ಲಿ 15000 ಹೆಕ್ಟೇರ್ ನೀರಾವರಿ ಪ್ರದೇಶವಾಗಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಒಟ್ಟು 519760 ಮೆಟ್ರಿಕ್ ಟನ್ ಆಹಾರಧಾನ್ಯ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಪೈಕಿ 54660 ಮೆ.ಟನ್ ತೃಣಧಾನ್ಯ (ಏಕದಳ ಧಾನ್ಯ) ಹಾಗೂ 465100 ಮೆ.ಟನ್ ಬೇಳೆಕಾಳು(ದ್ವಿದಳ ಧಾನ್ಯ) ಉತ್ಪಾದಿಸಲಾಗುವುದು. ಬೆಳೆವಾರು ಉತ್ಪಾದನಾ ಗುರಿಯ ವಿವರ ಮೆಟ್ರಿಕ್ ಟನ್‍ಗಳಲ್ಲಿ ಇಂತಿದೆ. ಭತ್ತ-11150, ಜೋಳ-2337, ಮೆಕ್ಕೆಜೋಳ-20450, ಸಜ್ಜೆ-20630, ಇತರೆ-93. ಬೇಳೆಕಾಳು: ಒಟ್ಟು-465100 ಮೆ.ಟನ್. ತೊಗರಿ-418340, ಹೆಸರು-26350, ಉದ್ದು-20000, ಅಲಸಂದಿ-60, ಅವರೆ-165, ಹುರುಳಿ-120, ಮಟಕಿ-65. ಎಣ್ಣೆಕಾಳು: ಒಟ್ಟು ಗುರಿ-50935 ಮೆಟ್ರಿಕ್ ಟನ್. ಬೆಳೆವಾರು ಗುರಿ ಮೆ.ಟನ್‍ಗಳಲ್ಲಿ ಇಂತಿದೆ. ಸೂರ್ಯಕಾಂತಿ-15885, ಶೇಂಗಾ-1450, ಎಳ್ಳು-3500, ಔಡಲ-25, ಗುರೆಳ್ಳು-75, ಸೋಯಾಬಿನ್-30000.
ಕಲಬುರಗಿ ಜಿಲ್ಲೆಯಾದ್ಯಂತ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ವ್ಯಾಪಕ, ಸಕಾಲಿಕ ಮತ್ತು ಸಮೃದ್ಧ ಮಳೆಯಾದರೆ ನಿಗದಿತ ಕ್ಷೇತ್ರದಲ್ಲಿ ಬಿತ್ತನೆ ಮಾಡುವ ಹಾಗೂ ಉತ್ಪಾದನಾ ಗುರಿ ಸಾಧನೆ ಮಾಡುವ ಆಶಾಭಾವವನ್ನು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್.ಮೊಕಾಶಿ ಅವರು ಹೊಂದಿದ್ದಾರೆ.


ಹೀಗಾಗಿ ಲೇಖನಗಳು NEWS AND PHOTO DATE; 23---05---2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE; 23---05---2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE; 23---05---2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-date-23-05-2017.html

Subscribe to receive free email updates:

0 Response to "NEWS AND PHOTO DATE; 23---05---2017"

ಕಾಮೆಂಟ್‌‌ ಪೋಸ್ಟ್‌ ಮಾಡಿ