ಶೀರ್ಷಿಕೆ : news and photo 16-05-2017
ಲಿಂಕ್ : news and photo 16-05-2017
news and photo 16-05-2017
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
ಕಲಬುರಗಿ,ಮೇ.16(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಮೇ 17 ರಿಂದ 20ರವರೆಗೆ ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಮಾದಕ ವಸ್ತುಗಳ ಬಳಕೆ ನಿ
ಷೇಧಕ್ಕೆ ಪ್ರಯತ್ನ
ಕಲಬುರಗಿ,ಮೇ.16(ಕ.ವಾ.)-ರಾಜ್ಯದಲ್ಲಿ ಮಧ್ಯಪಾನ ಸಂಯಮ ಮಂಡಳಿಯಿಂದ ಬೀದಿನಾಟಕ, ವಿಚಾರ ಸಂಕಿರಣ, ಆಕಾಶವಾಣಿ ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಯುವ ಜನಾಂಗದಲ್ಲಿ ಮತ್ತು ಮಹಿಳೆಯರಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಅವುಗಳ ಬಳಕೆ ನಿಷೇಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹೆಚ್.ಸಿ.ರುದ್ರಪ್ಪ ತಿಳಿಸಿದರು.
ಅವರು ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೊಲೀಸ್ ಮತ್ತು ಅಬಕಾರಿ ಇಲಾಖೆಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿದರೆ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಬಹುದಾಗಿದೆ. ಮನೆಯಲ್ಲಿ ಒಬ್ಬರು ಮಾದಕ ವಸ್ತುಗಳ ಅಥವಾ ಕುಡಿತದ ಚಟಕ್ಕೆ ಬಲಿಯಾದರೆ ಅಂಥಹ ಮನೆಯು ಸಂಪೂರ್ಣ ಅಧೋಗತಿಯನ್ನು ಕಾಣುತ್ತದೆ. ನಿರಾಶ್ರಿತ ಮಕ್ಕಳು ಮತ್ತು ವಸತಿ ನಿಲಯಗಳಲ್ಲಿ ವಾಸ ಮಾಡುವ ಮಕ್ಕಳು ಮಾದಕ ವಸ್ತುಗಳನ್ನು ಬಳಸುವ ಬಗ್ಗೆ ದೂರುಗಳು ಮಂಡಳಿಗೆ ಬರುತ್ತವೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು ಎಂದರು.
ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯ 500 ಮೀಟರ್ ವ್ಯಾಪ್ತಿಯಲ್ಲಿ ಮದ್ಯಪಾನ ಅಂಗಡಿಗಳು ಇರಕೂಡದು ಎಂದು ಸುಪ್ರಿಂ ಕೋರ್ಟ್ ಆದೇಶಿಸಿತ್ತು. ಇತ್ತೀಚಿಗೆ ಇದನ್ನು ತಿದ್ದುಪಡಿಗೊಳಿಸಿ 220 ಮೀಟರ್ ವ್ಯಾಪ್ತಿಯನ್ನು ನಿಗದಿಪಡಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 238 ಮದÀ್ಯದಂಗಡಿಗಳಿವೆ. ಈ ಪೈಕಿ ಹೆದ್ದಾರಿಯ 500 ಮೀಟರ್ ವ್ಯಾಪ್ತಿಯಲ್ಲಿ ಸುಮಾರು 204 ಮದ್ಯದಂಗಡಿಗಳಿವೆ. ಇವುಗಳಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ. ಇತ್ತೀಚಿಗೆ ತಿದ್ದುಪಡಿಗೊಂಡ ಸುಪ್ರಿಂ ಕೋರ್ಟ್ ಆದೇಶದಂತೆ 197 ಅಂಗಡಿಗಳು 220 ಮೀಟರ್ ವ್ಯಾಪ್ತಿಯಲ್ಲಿವೆ. ಮದÀ್ಯದಂಗಡಿಗಳ ನವೀಕರಣ ಜೂನ್ ತಿಂಗಳಲ್ಲಿ ಇರುವುದರಿಂದ ಸುಪ್ರಿಂ ಕೋರ್ಟ್ ಆದೇಶದಂತೆ ಹೆದ್ದಾರಿಯಿಂದ 220 ಮೀಟರ ದೂರದ ಪ್ರದೇಶಕ್ಕೆ ಮದ್ಯದಂಗಡಿ ಸ್ಥಳಾಂತರಗೊಳಿಸಿದವರಿಗೆ ಮಾತ್ರ ನವೀಕರಣ ಮಾಡಲಾಗುವುದು ಎಂದು ಕಲಬುರಗಿ ಉಪವಿಭಾಗದ ಅಬಕಾರಿ ಉಪಾಧೀಕ್ಷಕಿ ಇಂದುಬಾಯಿ ಮಾಹಿತಿ ನೀಡಿದರು.
ಕಲಬುರಗಿ ಜಿಲ್ಲೆಯಲ್ಲಿ ಕುಡಿತದ ಚಟದಿಂದ ಮುಕ್ತರನ್ನಾಗಿಸಲು ಭಾಗ್ಯ ಡಿಎಡಿಕ್ಷನ್ ಮತ್ತು ರಿಹ್ಯಾಬಿಲಿಟೇಷನ್ ಸೆಂಟರ್ ಕೆಲಸ ಮಾಡುತ್ತಿದೆ. 15 ಹಾಸಿಗೆಯ ಹಾಸ್ಪಿಟಲ್ ಇದ್ದು, 4 ವರ್ಷಗಳಿಂದ ಸುಮಾರು 400ಕ್ಕೂ ಹೆಚ್ಚು ಕುಡುಕರಿಗೆ ಸಮಾಲೋಚಿಸಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 29 ಜನ ಕುಡಿತದ ಚಟದಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ ಎಂದು ಯೋಜನಾ ನಿರ್ದೇಶಕಿ ರೇಣುಕಾ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿಯೂ ಸಹ ಮದ್ಯ ಮತ್ತು ಮಾದಕವಸ್ತುಗಳ ವ್ಯಸನಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವ್ಯಸನಿಗಳನ್ನು ಗುರುತಿಸಿ ಅವರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಇದಕ್ಕಾಗಿ ಮನೋರೋಗಿಗಳಿದ್ದು, ಜಿಲ್ಲೆಯಲ್ಲಿ ನೂತನವಾಗಿ 115 ಪುರುಷ ಮತ್ತು 17 ಮಹಿಳೆಯರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೆರೋಷಿನ್ ವಾಸನೆ ತಗೆದುಕೊಳ್ಳುವುದು ಮತ್ತು ಮಕ್ಕಳು ವೈಟನರ್ ಬಳಸುವ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಗಾಂಜಾ ವ್ಯಸನಿಗಳು ಸಹ ಇದ್ದು, ತಂಬಾಕಿನಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ|| ಜೋಶಿ ತಿಳಿಸಿದರು.
ಕಳೆದ ವರ್ಷ ಜಿಲ್ಲೆಯಲ್ಲಿ 24 ಕ್ವಿಂಟಲ್ ಗಾಂಜಾ ಜಪ್ತು ಮಾಡಲಾಗಿದೆ ಹಾಗೂ 6 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಈ ವರ್ಷ ಎರಡು ಪ್ರಕರಣಗಳು ದಾಖಲಾಗಿವೆ. ಅಕ್ರಮವಾಗಿ ಸೇಂದಿ ಸಾಗಿಸುತ್ತಿದ್ದ 12 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕಳ್ಳಭಟ್ಟಿ ಸರಾಯಿ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಹ್ಮದ್ ಇಲಿಯಾಸ್ ಇಸಾಮದಿ, ಶಿಷ್ಟಾಚಾರ ತಹಸೀಲ್ದಾರ್ ಪ್ರಕಾಶ ಚಿಂಚೋಳಿಕರ್, ಚಿತ್ತಾಪೂರ ಉಪವಿಭಾಗದ ಅಬಕಾರಿ ಉಪಾಧಿಕ್ಷಕ ಗ್ಲ್ಯಾಡ್‍ಸನ್ ಸಂಜಯ, ಕಲಬುರಗಿ ಉಪವಿಭಾಗದ ಅಬಕಾರಿ ಉಪಾಧೀಕ್ಷಕ ನಿಂಬಣ್ಣ ಕಾಮಗೋಡ, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಮದÀ್ಯಪಾನ ವ್ಯಸನವನ್ನು ಬಿಡಿಸಲು ಮಂಡಳಿಯಿಂದ 12 ದಿನಗಳ ಮದÀ್ಯ ವರ್ಜನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಸಧ್ಯ ಶಿಬಿರವು ರಾಯಚೂರಿನಲ್ಲಿ ನಡೆಯುತ್ತಿದ್ದು, ಮೇ 24 ಕ್ಕೆ ಮುಕ್ತಾಯಗೊಳ್ಳಲಿದೆ. ಸುಮಾರು 125 ಕುಟುಂಬಗಳನ್ನು ಗುರುತಿಸಿ ಶಿಬಿರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿಯೂ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದರು.
ಕರ್ನಾಟಕ ಮದÀ್ಯಪಾನ ಸಂಯಮ ಮಂಡಳಿಯನ್ನು ಬಲಪಡಿಸಲು ಜಿಲ್ಲೆಗೆ ಒಟ್ಟರಂತೆ ಒಟ್ಟು 32 ಸದಸ್ಯರನ್ನು ನೇಮಿಸಲಾಗಿದೆ. ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯು ಪಿಡುಗಾಗಿ ಪರಿಣಮಿಸುತ್ತಿದೆ. ಇದರಿಂದ ಯುಜನಾಂಗವನ್ನು ಹೊರತರಲು ಸರ್ಕಾರ, ಸಮಾಜ, ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಒಟ್ಟಾಗಿ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಮಾದಕ ವಸ್ತುಗಳ ವ್ಯಸನವನ್ನು ನಿಯಂತ್ರಿಸಲು ತಮ್ಮನ್ನು ತಾವು ತೊಡಗಿಸಿಕೊಂಡವರನ್ನು ಗುರುತಿಸಿ ಅವರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಕಾರ್ಯ ಮಂಡಳಿ ಮಾಡುತ್ತಿದೆ ಎಂದರು.
ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ
ಕಲಬುರಗಿ,ಮೇ.16.(ಕ.ವಾ.)-ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕಲಬುರಗಿ ತಾಲೂಕಿನಲ್ಲಿ ನಡೆಯುತ್ತಿರುವ ಕೆಳಕಂಡ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಮೆಟ್ರಿಕ್ ಪೂರ್ವ ಬಾಲಕ/ ಬಾಲಕಿಯರ ವಸತಿ ನಿಲಯಕ್ಕೆ 2017-18ನೇ ಸಾಲಿಗೆ ಖಾಲಿ ಇರುವ ಸ್ಥಾನಗಳಿಗೆ 5 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಅರ್ಹ ಬಾಲಕ ಮತ್ತು ಬಾಲಕಿಯರಿಂದ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರಿ ವಸತಿ ನಿಲಯಗಳು ಇಂತಿವೆ: ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕರುಣೇಶ್ವರ ನಗರ ಕಲಬುರಗಿ, ಸೊಂತ, ಹರಸೂರ, ಸಾವಳಗಿ(ಬಿ),ಶ್ರೀನಿವಾಸ ಸರಡಗಿ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಗಂಗಾನಗರ, ಡೊಂಗರಗಾಂವ, ಅಲೆಮಾರಿ/ ಅರೆಅಲೆಮಾರಿ ಆಶ್ರಮ ಶಾಲೆ ಜಗತ್ ಕಲಬುರಗಿ. ಖಾಸಗಿ ಅನುದಾನಿತ ವಸತಿ ನಿಲಯಗಳು ಇಂತಿವೆ: ರಾಕೇಶ ರೋಷನ್ ಶಿಕ್ಷಣ ಸಂಸ್ಥೆಯ ದಿ.ಮಾಪಣ್ಣ ಸ್ಮಾರಕ ಬಿಸಿಎಂ ಬಾಲಕರ ವಸತಿ ನಿಲಯ ಕಾಂತಾ ಲೇಔಟ್ ಕಲಬುರಗಿ, ಢಾಕಪ್ಪ ಜಾಧವ ಬಿಸಿಎಂ ಬಾಲಕರ ವಸತಿ ನಿಲಯ ಫಿಲ್ಟರಬೆಡ್ ಕಲಬುರಗಿ, ಶ್ರೀ ಗುರುಬಸವೇಶ್ವರ ಅನಾಥಾಲಯ ಮಕ್ತಂಪುರ ಕಲಬುರಗಿ, ಸೇವಾ ನಿಕೇತನ ಶಿಕ್ಷಣ ಸಂಸ್ಥೆಯ ಬಿಸಿಎಂ ಬಾಲಕರ ವಸತಿ ನಿಲಯ ಮೇಳಕುಂದಾ, ಶ್ರೀ ಕರಿಬಸವೇಶ್ವರ ಉಚಿತ ಪ್ರಸಾದ ನಿಲಯ ಹೊನ್ನಕಿರಣಗಿ ಮತ್ತು ಶ್ರೀ ಮಾತಾ ಮಾಣಿಕೇಶ್ವರಿ ಬಿಸಿಎಂ ಬಾಲಕರ ವಸತಿ ನಿಲಯ ಸಣ್ಣೂರ.
ನಿಲಯ ಪ್ರವೇಶ ಬಯಸುವ ಅಭ್ಯರ್ಥಿಗಳು ನಿಲಯದಿಂದ 5 ಕಿ.ಮೀ. ದೂರದ ಊರಿನವರಾಗಿರಬೇಕು, ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನವು 2ಎ, 2ಬಿ, 3ಎ, 3ಬಿಗೆ ಸೇರಿದವರಿಗೆ 44,500 ರೂ., ಪ್ರವರ್ಗ-1ಕ್ಕೆ ಸೇರಿದವರಿಗೆ 1 ಲಕ್ಷ ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಿಗೆ 2 ಲಕ್ಷ ರೂ. ನಿಗದಿಪಡಿಸಲಾಗಿದೆ.
ನಿಗದಿತ ಅರ್ಜಿಯನ್ನು ಆಯಾ ತಾಲೂಕಾ ಬಿ.ಸಿ.ಎಂ. ವಿಸ್ತರಣಾಧಿಕಾರಿ ಕಚೇರಿ ಅಥವಾ ಸಂಬಂಧಪಟ್ಟ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರಿಂದ ಉಚಿತವಾಗಿ ಪಡೆದು ಭರ್ತಿ ಮಾಡಿ ಅದರೊಂದಿಗೆ ತಹಶೀಲ್ದಾರದಿಂದ ಪಡೆದ ಜಾತಿ ಆದಾಯ ಪ್ರಮಾಣ ಪತ್ರ, ಗ್ರಾಮ ಪಂಚಾಯತಿ ಪಿ.ಡಿ.ಓ ಗಳಿಂದ ಪಡೆದ ವಾಸಸ್ಥಳ ಮತ್ತು ವಿದ್ಯಾರ್ಥಿಯ ಸ್ವಂತ ಸ್ಥಳಕ್ಕೂ ವಸತಿ ನಿಲಯಕ್ಕೂ ಇರುವ ಅಂತರದ ಪ್ರಮಾಣಪತ್ರ, ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಅಂಕಪಟ್ಟಿ ಮತ್ತು ಶಾಲೆಯಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಮುಖ್ಯೊಪಾಧ್ಯಾಯರಿಂದ ದೃಢೀಕರಣ ಪತ್ರ ಲಗತ್ತಿಸಿ ಮೇ 25ರೊಳಗೆ ಸಲ್ಲಿಸಬೇಕು.
ಇಚ್ಛೆಯುಳ್ಳ ಅರ್ಹ ಬಾಲಕ, ಬಾಲಕಿಯರು ಅರ್ಜಿ ನಮೂನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗೆ ಆಯಾ ವಸತಿ ನಿಲಯದ ಮೇಲ್ವಿಚಾರಕರು ಹಾಗೂ ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಮೇ 17ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಮೇ.16.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಸಿದ್ದೇಶ್ವರ ಫೀಡರ್ ಮೇಲೆ ವ್ಯಾಪ್ತಿಯ ರಸ್ತೆ ಅಗಲೀಕರಣ ಕಾರ್ಯ ಹಾಗೂ ಕಂಬಗಳನ್ನು ಸ್ಥಳಾಂತರ ಕೈಗೊಳ್ಳುವ ಪ್ರಯುಕ್ತ ಕೈಗೊಳ್ಳುವ ಪ್ರಯುಕ್ತ ಮೇ 17 ರಂದು ಬುಧವಾರ ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ ಸಿದ್ದೇಶ್ವರ ನಗರ: ಸಂತ್ರಾಸವಾಡಿ, ಜಿ.ಡಿ.ಎ., ಎಂ.ಜಿ. ರೋಡ, ದರ್ಶನಾಪುರ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಬಾಲಕರ ಬಾಲಮಂದಿರದ ವಿದ್ಯಾರ್ಥಿ ಸಾಧನೆ
ಕಲಬುರಗಿ,ಮೇ.15.(ಕ.ವಾ.)-ಕಲಬುರಗಿ ಸರ್ಕಾರಿ ಬಾಲಕರ ಬಾಲಮಂದಿರದ ನಿವಾಸಿ ನಾಗೇಶ ಸಿದ್ದವೀರ ಇತನು 2007ರ ಸೆಪ್ಟೆಂಬರ್ 26ರಿಂದ ಸಂಸ್ಥೆಯ ನಿವಾಸಿಯಾಗಿದ್ದು, ಈ ಬಾಲಕನು 2016-17ನೇ ಸಾಲಿನ ನಡೆದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ. 82.4 ರಷ್ಟು ಅಂಕ ಪಡೆದು ತೇರ್ಗಡೆಯಾಗಿರುತ್ತಾನೆ.
ಈ ಬಾಲಕನ ಸಾಧನೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಸಂಸ್ಥೆಯ ಅಧೀಕ್ಷಕ ಭೀಮರಾಯ ಹಾಊ ಎಲ್ಲ ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸರ್ಕಾರಿ ಬಾಲಕರ ಬಾಲ ಮಂದಿರದ ಅಧೀಕ್ಷಕರು ತಿಳಿಸಿದ್ದಾರೆ.
ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನ ಪ್ರವೇಶ ಪ್ರಕ್ರಿಯೆ ಪ್ರಾರಂಭ
ಕಲಬುರಗಿ,ಮೇ.16.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಲ್ಲಿ 2017-18ನೇ ಸಾಲಿನ ಐದು ವರ್ಷದ ಬಿ.ಎ.-ಎಲ್.ಎಲ್.ಬಿ. ಮತ್ತು ಮೂರು ವರ್ಷದ ಎಲ್.ಎಲ್.ಬಿ. ಕಾನೂನು ಪದವಿಗಳ ಪ್ರವೇಶ ಪ್ರಕ್ರಿಯೆಯು ಪ್ರಾರಂಭವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
05 ವರ್ಷದ ಬಿ.ಎ.-ಎಲ್.ಎಲ್.ಬಿ. ಪ್ರವೇಶಕ್ಕಾಗಿ ದ್ವಿತೀಯ ವರ್ಷದ ಪಿ.ಯು.ಸಿ. ಅಥವಾ ತತ್ಸಮಾನದಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಒಟ್ಟು ಶೇ. 45ರಷ್ಟು ಅಂಕ ಪಡೆದಿರಬೇಕು (ಇತರೆ ಹಿಂದುಳಿದ ವರ್ಗದವರು ಶೇ. 42 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಶೇ. 40 ರಷ್ಟು ಅಂಕ ಪಡೆದಿರಬೇಕು). ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಯೋಮಿತಿ ಗರಿಷ್ಠ 20 ವರ್ಷ. (1997ರ ಮೇ 15ರಂದು ಅಥವಾ ನಂತರ ಜನಿಸಿರಬೇಕು) ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗರಿಷ್ಠ 22 ವರ್ಷ (1995 ರ ಮೇ 15ರಂದು ಅಥವಾ ನಂತರ ಜನಿಸಿರಬೇಕು) ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
03 ವರ್ಷದ ಎಲ್.ಎಲ್.ಬಿ. ಪ್ರವೇಶಕ್ಕಾಗಿ ಅಂಗೀಕರಿಸಿದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸಾಗಿರಬೇಕು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಯೋಮಿತಿ ಗರಿಷ್ಠ 30 ವರ್ಷ. (1987ರ ಮೇ 15ರಂದು ಅಥವಾ ನಂತರ ಜನಿಸಿರಬೇಕು) ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮತ್ತು ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗರಿಷ್ಠ 35 ವರ್ಷ. (1982 ರ ಮೇ 15 ರಂದು ಅಥವಾ ನಂತರ ಜನಿಸಿರಬೇಕು) ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ನೇಮಕಾತಿಯಲ್ಲಿ ಸರ್ಕಾರದ ಮೀಸಲಾತಿ ನಿಯಮಗಳನ್ನು ಪಾಲಿಸಲಾಗುವುದು. ಅರ್ಜಿ ನಮೂನೆಗಳನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿಜ್ಞಾನೇಶ್ವರ ಸರ್ಕಾರಿ ಕಾನೂನು ಕಾಲೇಜಿನಿಂದ ಪಡೆದು ಭರ್ತಿ ಮಾಡಿ ಆಗಸ್ಟ್ 8ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ: ರೇಖಾ ಚವ್ಹಾಣ ಮೊಬೈಲ್ ಸಂಖ್ಯೆ 9448231891, ಡಾ: ಶೈಲಜಾ: 9886223349 ಹಾಗೂ ವಾಣಿ ಮರಡಿ: 9035695232ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆಗಾಗಿ ಅರ್ಜಿ ಆಹ್ವಾನ
ಕಲಬುರಗಿ,ಮೇ.16.(ಕ.ವಾ.)-ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃಧ್ಧಿ ನಿಗಮದಿಂದ 2017-18 ನೇ ಸಾಲಿಗೆ ಅನುಷ್ಠಾನಗೊಳಿಸುತ್ತಿರುವ ಅರಿವು/ಶೈಕ್ಷಣಿಕ ಸಾಲ ಯೋಜನೆಯಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಸಾಲ ಮಂಜೂರಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
2017-18ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ನಿಗಮದಿಂದ ಸಾಲ ಪಡೆಯಬಯಸುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ (ವಿಶ್ವಕರ್ಮ ಮತ್ತು ಉಪ ಸಮುದಾಯಗಳನ್ನು ಹಾಗೂ ಮತೀಯ ಅಲ್ಪ ಸಂಖ್ಯಾತರನ್ನು ಹೊರತುಪಡಿಸಿ) ಸೇರಿದವರಾಗಿರಬೇಕು.
ಬಿ.ಇ. (ಸಿ.ಇ.ಟಿ.), ಎಂ.ಬಿ.ಬಿ.ಎಸ್., ಬಿ.ಯು.ಎಂ.ಎಸ್., ಬಿ.ಡಿ.ಎಸ್. ಬಿ.ಎ.ಎಂ.ಎಸ್. ಬಿ.ಎಚ್.ಎಂ.ಎಸ್., ಎಂ.ಬಿ.ಎ., ಎಂ.ಟೆಕ್., ಎಂ.ಇ., ಎಂ.ಡಿ., ಪಿಹೆಚ್.ಡಿ., ಬಿ.ಸಿ.ಎ./ಎಂ.ಸಿ.ಎ., ಎಂ.ಎಸ್.ಆಗ್ರ್ರಿಕಲ್ಚರ್, ಬಿ.ಎಸ್‍ಸಿ. ನರ್ಸಿಂಗ್, ಬಿ.ಫಾರ್ಮ/ಎಂ.ಫಾರ್ಮ, ಬಿ.ಎಸ್.ಸಿ. ಪ್ಯಾರಾ ಮೆಡಿಕಲ್, ಬಿ.ಎಸ್.ಸಿ. ಬಯೋ ಟೆಕ್ನಾಲಜಿ, ಬಿ.ಟೆಕ್, ಬಿ.ಪಿ.ಟಿ., ಬಿ.ವಿ.ಎಸ್‍ಸಿ/ಎಂ.ವಿ.ಎಸ್‍ಸಿ, ಬಿ.ಎನ್.ಎಂ., ಬಿ.ಹೆಚ್.ಎಮ್., ಎಂ.ಡಿ.ಎಸ್., ಎಂ.ಎಸ್.ಡಬ್ಲ್ಯೂ, ಎಲ್.ಎಲ್.ಎಂ., ಎಂ.ಎಫ್.ಎ., ಎಂ.ಎಸ್‍ಸಿ., ಬಯೋ ಟೆಕ್ನಾಲಜಿ ಮತ್ತು ಎಂ.ಎಸ್‍ಸಿ. ಎ.ಜಿ ಇತ್ಯಾದಿ ವೃತ್ತಿಪರ ಕೋರ್ಸ್‍ಗಳು. 2017-18ನೇ ಸಾಲಿಗೆ ಸಾಲ ಪಡೆಯಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿ.ಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸಿದ ಮುಂಗಡ ಹಣದ ಮೊತ್ತದಲ್ಲಿ ಜಮಾ ಮಾಡಲಾಗುತ್ತದೆ.
ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದ ಕುಟುಂಬದ ವಾರ್ಷಿಕ ಆದಾಯ 3.50ಲಕ್ಷ ರೂ. ಮಿತಿಯೊಳಗಿರಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರತು ಪಡಿಸಿ ಇತರೆ ಪ್ರವೇಶ ಪರೀಕ್ಷೆ ಮುಖಾಂತರ ಮೆರಿಟ್ ಆಧಾರದ ಮೇಲೆ ಕೆಳಕಂಡ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೋರ್ಸ್‍ನ ಅವಧಿಗೆ ಶೇ. 2ರ ಬಡ್ಡಿ ದರದಲ್ಲಿ ಗರಿಷ್ಠ ವಾರ್ಷಿಕ 1 ಲಕ್ಷ ರೂ.ಗಳವರೆಗೆ ಸಾಲ ಒದಗಿಸಲಾಗುವುದು. ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 40,000 ರೂ. ಹಾಗೂ ಪಟ್ಟಣ ಪ್ರದೇಶದವರಿಗೆ 55,000 ರೂ.ಗಳ ಒಳಗಿರಬೇಕು, ಅರ್ಜಿದಾರರು ಆಧಾರ್ ಸಂಖ್ಯೆ ಹಾಗೂ ಐ.ಎಫ್.ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.
ಸಾಲ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಜbಛಿಜಛಿ ರಲ್ಲಿ ಲಾಗಿನ್ ಆಗಿ ವೆಬ್‍ಸೈಟ್‍ನಲ್ಲಿ ಲಭ್ಯವಿರುವ Useಡಿಟಿಚಿmeiಟಿಜಿಡಿಚಿ\ಜbಛಿಜಛಿಚಿಡಿivu ಮತ್ತು Pಚಿssತಿಚಿಡಿಜ - ಆಃ(ಜ#098 ನ್ನು ನಮೂದಿಸಿ ಅರ್ಜಿಯನ್ನು ಆನ್‍ಲೈನ್‍ಲ್ಲಿ ಭರ್ತಿ ಮಾಡಬೇಕು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ. ಆಧಾರ್ ಕಾರ್ಡ್ ಸಂಖ್ಯೆ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಹಾಗೂ ಸಿ.ಇ.ಟಿ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್‍ಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಆನ್‍ಲೈನ್‍ಲ್ಲಿ ಮೇ 20 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಕೋಣೆ ಸಂಖ್ಯೆ: 22, 3ನೇ ಮಹಡಿ, ವಿಕಾಸ ಭವನ, ಮಿನಿ ವಿಧಾನ ಸೌಧ ಕಲಬುರಗಿ ದೂರವಾಣಿ ಸಂಖ್ಯೆ 08472-278635 ಹಾಗೂ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೆÉೀರಿಯನ್ನು ಸಂಪರ್ಕಿಸಬಹುದು. ನಿಗಮದ ವೆಬ್ ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಜbಛಿಜಛಿ ನ್ನು ಸಂಪರ್ಕಿಸಲು ಕೋರಲಾಗಿದೆ.
ಮೇ 17ರಂದು ನೇರ ಫೋನ್-ಇನ್ ಕಾರ್ಯಕ್ರಮ
ಕಲಬುರಗಿ,ಮೇ.16.(ಕ.ವಾ.)-ಕಲಬುರಗಿಯ ದೂರದರ್ಶನ ಕೇಂದ್ರವು ರೈತ ಬಾಂಧವರಿಗಾಗಿ ಮೇ 17ರಂದು ಸಾಯಂಕಾಲ 5.30 ರಿಂದ 6 ಗಂಟೆಯವರೆಗೆ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಕಲಬುರಗಿ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕ ಗುರುಲಿಂಗಪ್ಪಾ ಬಗಲಿ ಹಾಗೂ ಸೇಡಂ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಂಕರಗೌಡ ಅವರು ಭಾಗವಹಿಸಿ “ಮುಂಗಾರು ಹಂಗಾಮಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ” ಕುರಿತು ರೈತರ ಪ್ರಶ್ನೆಗಳಿಗೆ ಉತ್ತರಿಸುವರು. ಪ್ರಕಾಶ ಕೆ. ಮುಜಮದಾರ ಕಾರ್ಯಕ್ರಮ ಪ್ರಸ್ತುತ ಪಡಿಸುವರು. ರೈತರು ದೂರವಾಣಿ ಸಂಖ್ಯೆ 08472-220491, 220492ಗಳನ್ನು ಸಂಪರ್ಕಿಸಿ ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಮೇ.16.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ 2017-18ನೇ ಸಾಲಿನ ಶೇ.3ರ ಎಸ್.ಎಫ್.ಸಿ. ಅನುದಾನದಲ್ಲಿ ಅಂಗವಿಕಲರಿಗೆ ವ್ಯಕ್ತಿಗತ ಸಂಬಂಧಿಕ ಕಲ್ಯಾಣ ಕಾರ್ಯಕ್ರಮಗಳ ಆಯ್ದ ಚಟುವಟಿಕೆಯಲ್ಲಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಇತರೆ ಬಡಜನರಿಗೆ ಸಣ್ಣ ಉದ್ದಿಮೆ ಪ್ರಾರಂಭಿಸಲು ಸಹಾಯಧನ ಯೋಜನೆಯಡಿ ಸಣ್ಣ ಉದ್ದಿಮೆಯನ್ನು ಆರಂಭಿಸಲಿಚ್ಛಿಸುವ ಸಣ್ಣ ಉದ್ದಿಮೆದಾರರಿಗೆ ಯೋಜನಾ ವೆಚ್ಚದ ಶೇ. 50 ಅಥವಾ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಮೊತ್ತದ ಸಹಾಯಧನ, ಪಿ.ಯು.ಸಿ., ಉದ್ಯೋಗ ಆಧಾರಿತ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಸಹಾಯಧನ, ಬಿ.ಎ., ಬಿ.ಎಸ್.ಸಿ., ಬಿ.ಕಾಂ. ವಿದ್ಯಾರ್ಥಿಗಳಿಗೆ ಸಹಾಯಧನ, ಎಂ.ಎ., ಎಂ.ಎಸ್.ಸಿ., ಎ.ಕಾಂ., ಎಂ.ಎಸ್.ಡಬ್ಲ್ಯೂ., ಎಂ.ಸಿ.ಎ., ಬಿ.ಇ. ವಿದ್ಯಾರ್ಥಿಗಳಿಗೆ ಸಹಾಯಧನ, ಎಂ.ಬಿ.ಬಿ.ಎಸ್., ಬಿ.ಇ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಖರೀದಿಗಾಗಿ ಸಹಾಯಧನ, ಅಂಗವಿಕಲರ ಪ್ರತ್ಯೇಕ ಮನೆಯ ಮೇಲ್ಛಾವಣಿ ದುರಸ್ತಿಗಾಗಿ ಸಹಾಯಧನ, ಇತರೆ ಬಡಜನರಿಗಾಗಿ ಗ್ಯಾಸ್ ಸ್ಟೋಗಾಗಿ ಸಹಾಯಧನ, ನಗರದಲ್ಲಿರುವ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಗಳಿಗೆ ಸಂಗೀತದ ಸಾಧನ ಸಲಕರಣೆ ಪೂರೈಕೆಗಾಗಿ, ನಗರ ಸಾರ್ವಜನಿಕ ವಿಕಲಚೇತನರಿಗೆ ಅವಶ್ಯಕವಿರುವ ವಿವಿಧ ಸಲಕರಣೆಗಳ ಪೂರೈಕೆ (ಕಿವುಡ, ಮೂಕ ಮತ್ತು ಇತರೆ ವಿಕಲಚೇತನರಿಗೆ ಮಾತ್ರ) ಹಾಗೂ ನಗರದಲ್ಲಿರುವ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಗಳಿಗೆ ಕಂಪ್ಯೂಟರ್ ಪೂರೈಕೆಗಾಗಿ ಸಹಾಯಧನ ನೀಡಲಾಗುವುದು.
ನಿಗದಿತ ಅರ್ಜಿಗಳನ್ನು ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿಯಲ್ಲಿನ ನಲ್ಮ್ ಉತ್ತರ ಶಾಖೆಯಲ್ಲಿ ಮೇ 18ರಿಂದ 31ರವರೆಗೆ ಪ್ರತಿದಿನ ಬೆಳಗಿನ 10.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3 ರಿಂದ ಸಾಯಂಕಾಲ 5 ಗಂಟೆಯವರೆಗೆ ಅರ್ಜಿಗಳನ್ನು ಪಡೆಯಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 5ರ ಸಂಜೆ 5 ಗಂಟೆಯೊಳಗಾಗಿ (ಸಾರ್ವಜನಿಕ ರಜಾ ದಿನ ಹೊರತುಪಡಿಸಿ) ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಸಲ್ಲಿಸಬೇಕು. ಅಪೂರ್ಣವಾದ ಅರ್ಜಿಗಳನ್ನು ತಿರಸ್ಕÀರಿಸಲಾಗುವುದು. ಅರ್ಹತೆ ಹಾಗೂ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ನಲ್ಮ್ (ಸಿ.ಎಲ್.ಎಫ್. ಉತ್ತರ) ಯೋಜನೆ ಸಮುದಾಯ ವ್ಯವಹಾರಿಕ ಅಧಿಕಾರಿಗಳು (ಉತ್ತರ) ಸಂಪರ್ಕಿಸಲು ಕೋರಲಾಗಿದೆ.
ರೇವಗ್ಗಿ ಮೊರಾಜಿ ದೇಸಾಯಿ ವಸತಿ ಶಾಲೆ: ಶೇ.100ರಷ್ಟು ಎಸ್.ಎಸ್.ಎಲ್.ಸಿ. ಫಲಿತಾಂಶ
ಕಲಬುರಗಿ,ಮೇ.16.(ಕ.ವಾ.)-ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರೇವಗ್ಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯು 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶದ ಸಾಧನೆ ಮಾಡಿದ್ದು, ಸದರಿ ವಸತಿ ಶಾಲೆಯ 50 ವಿದ್ಯಾರ್ಥಿಗಳಲ್ಲಿ 15 ಡಿಸ್ಟಿಂಕ್ಷನ್ ಹಾಗೂ 35 ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ರೇವಗ್ಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಈ ವಸತಿ ಶಾಲೆ ಮಕ್ಕಳ ಗಣನೀಯ ಸಾಧನೆಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೆಹಬೂಬ ಪಾಷಾ ಕಾರಟಗಿ, ಚಿತ್ತಾಪುರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ಬನ್ನಿಕಟ್ಟಿ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ರವೀಂದ್ರ ಚಟ್ನಳ್ಳಿ ಹಾಗೂ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಹೆಸರು, 625 ಅಂಕಗಳ ಪೈಕಿ ಒಟ್ಟು ಪಡೆದ ಅಂಕ ಹಾಗೂ ಶೇಕಡಾವಾರು ಫಲಿತಾಂಶ ವಿವರ ಇಂತಿದೆ. ಶರಣಬಸವ ಅಮಾತೇಪ್ಪ ಹೂಗಾರ-590 ಮತ್ತು ಶೇ. 94.4. ಶರಣಕುಮಾರ ಮಲ್ಲಿಕಾರ್ಜುನ-587 ಮತ್ತು ಶೇ. 93.92, ವಾಣಿಶ್ರೀ ಗಂಗಾಧರ-581 ಮತ್ತು ಶೇ. 92.96, ಭಗವಂತ್ರಾಯ ನಾಗಣ್ಣ ಬಿರಾದಾರ-575 ಮತ್ತು ಶೇ. 92. ಪ್ರಕಾಶ ಬಸವರಾಜ-571 ಮತ್ತು ಶೇ. 91.36, ಮಲ್ಲಿಕಾರ್ಜುನ ಮಡಿವಾಳಪ್ಪ-568 ಮತ್ತು ಶೇ. 90.88,
ಹೀಗಾಗಿ ಲೇಖನಗಳು news and photo 16-05-2017
ಎಲ್ಲಾ ಲೇಖನಗಳು ಆಗಿದೆ news and photo 16-05-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo 16-05-2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-16-05-2017.html
0 Response to "news and photo 16-05-2017"
ಕಾಮೆಂಟ್ ಪೋಸ್ಟ್ ಮಾಡಿ