NEWS AND PHOTO 03-05-2017

NEWS AND PHOTO 03-05-2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO 03-05-2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO 03-05-2017
ಲಿಂಕ್ : NEWS AND PHOTO 03-05-2017

ಓದಿ


NEWS AND PHOTO 03-05-2017

ಮೇ 10ರಂದು ವಿಜೃಂಭಣೆಯಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲು ನಿರ್ಧಾರ
ಕಲಬುರಗಿ,ಮೇ.03.(ಕ.ವಾ.)-ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯೋತ್ಸವÀವನ್ನು ಮೇ 10ರಂದು ವಿಜೃಂಭಣೆಯಿಂದ ಜಿಲ್ಲೆಯಾದ್ಯಂತ ಆಚರಿಸಲು ಕಲಬುರಗಿಯಲ್ಲಿ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಸಭೆಯು ಸರ್ವಾನುಮತದ ನಿರ್ಣಯ ಕೈಗೊಂಡಿತು.
ಸರ್ಕಾರವು ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ರಾಜ್ಯದಾದ್ಯಂತ ಆಚರಿಸಲು ಏಪ್ರಿಲ್ 26ರಂದು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಪ್ರಪ್ರಥಮಬಾರಿಗೆ ಜಿಲ್ಲಾಡಳಿತ, ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಜಯಂತಿ ಆಚರಿಸಲಾಗುತ್ತಿದೆ. ಜಯಂತಿಯ ಅಂಗವಾಗಿ ಬೆಳಗಿನ 9 ಗಂಟೆಯಿಂದ ಸರ್ದಾರ್ ವಲ್ಲಭಭಾಯಿ ವೃತ್ತದಿಂದ ರಂಗಮಂದಿರದವರೆಗೆ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರದ ಮೆರವಣಿಗೆ ಹಾಗೂ ಬೆಳಗಿನ 11 ಗಂಟೆಗೆ ಡಾ. ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಮುಖ್ಯ ಕಾರ್ಯಕ್ರಮ ಜರುಗಿಸಲು ಸಭೆ ತೀರ್ಮಾನಿಸಿತು.
ಜಯಂತಿಯ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಜನ ಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಎಂ.ಎಸ್.ಐ. ಪದವಿ ಕಾಲೇಜಿನ ಪ್ರಾಂಶುಪಾಲ ಡಾ|| ಈಶ್ವರ ಮಠ ಅವರಿಂದ ವಿಶೇಷ ಉಪನ್ಯಾಸ ಹಾಗೂ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಪ್ರಥಮ ಬಾರಿಗೆ ಆಚರಿಸುತ್ತಿರುವುದರಿಂದ ಜಿಲ್ಲಾ ರೆಡ್ಡಿ ಸಮಾಜದ ವತಿಯಿಂದ ಸಮಾಜದ ಗಣ್ಯರಿಗೆ ಸನ್ಮಾನ ಮಾಡುವಂತೆ ತೀರ್ಮಾನಿಸಲಾಯಿತು.
ಮಹಾನಗರ ಪಾಲಿಕೆಯಿಂದ ಸಮರ್ಪಕ ಕುಡಿಯುವ ನೀರಿನ ಮತ್ತು ಮೆರವಣಿಗೆ  ವ್ಯವಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಆಕರ್ಷಕ ಪ್ರದರ್ಶನ ವ್ಯವಸ್ಥೆ ಮಾಡಬೇಕೆಂದು ತಿಳಿಸಲಾಯಿತು.
  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ, ಜಿಲ್ಲಾ ರೆಡ್ಡಿ ಸಮಾಜದ ಪದಾಧಿಕಾರಿಗಳಾದ ಬಿ.ಆರ್.ಪಾಟೀಲ, ವಿ. ಶಾಂತರೆಡ್ಡಿ, ಪ್ರೋ. ಚನ್ನಾರೆಡ್ಡಿ, ಆವಂತಿ ಸಗಣ್ಣ, ಚಂದ್ರಶೇಖರರೆಡ್ಡಿ ಪರಸರೆಡ್ಡಿ, ಶಂಕರಗೌಡ ಪಾಟೀಲ, ರಮೇಶ ಪಾಟೀಲ, ರಮೇಶ ಪಾಟೀಲ ರಬ್ಬನಳ್ಳಿ, ಶಾಂತರೆಡ್ಡಿ ಪೇಠಶಿರೂರ, ಅರುಣರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಹೇಮರಡ್ಡಿ ಮಲ್ಲಮ್ಮ ಸಂಸಾರದಲ್ಲಿ ಇದ್ದುಕೊಂಡು ಶ್ರೀಶೈಲ ಮಲ್ಲಿಕಾರ್ಜುನನ್ನು ಆರಾಧಿಸುತ್ತ ಅವನನ್ನು ಸಾಕ್ಷಾತ್ಕರಿಸಿಕೊಂಡ ಮಹಾಸಾಧ್ವಿ. ಎಂಥ ಕಷ್ಟ-ಕಾರ್ಪಣ್ಯಗಳು ಎದುರಾದರೂ ಸದಾ ಮಲ್ಲಿಕಾರ್ಜುನನ್ನು ಪೂಜಿಸುತ್ತ ಮುಕ್ತಿ ಪಡೆದ ಶಿವಶರಣೆ.
ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಯ ರಾಮಾಪುರದ ರೆಡ್ಡಿ ಅರಸೊತ್ತಿಗೆಯ ನಾಗರಡ್ಡಿ-ಗೌರಮ್ಮ ದಂಪತಿಗಳ ಉದರದಲ್ಲಿ ಜನಿಸಿದ ಮಲ್ಲಮ್ಮ ಬಾಲ್ಯದಿಂದಲೇ ದೈವಿಭಕ್ತಳು. ಸದಾಕಾಲ ಮಲ್ಲಿಕಾರ್ಜುನನ ಪೂಜೆ, ಜಪ-ತಪಗಳಲ್ಲಿ ಮಗ್ನಳಾಗಿರುತ್ತಿದ್ದಳು.
ಮಲ್ಲಮ್ಮಳನ್ನು ಸಿದ್ದಾಪುರದ ಭರಮರಡ್ಡಿ ಅವರೊಂದಿಗೆ ಮದುವೆ ಮಾಡಿದಾಗ, ಮುಗ್ಧ ಸ್ವಭಾವದ ಪತಿ ಭರಮರಡ್ಡಿಯನ್ನು ದೇವರಂತೆ ಉಪಚರಿಸಿದಳು. ಲಂಪಟನಾಗಿದ್ದ ಮೈದುನ ವೇಮನನ್ನು ಪ್ರೀತಿಯಿಂದ ಕಂಡು ತಿದ್ದಿ, ತೀಡಿ ಮಹಾಯೋಗಿಯನ್ನಾಗಿ ಪರಿವರ್ತಿಸಿದಳು. ಮುಂದೆ ವೇಮನು ಲೋಕ ಬೆಳಗಿದನು. ಮಲ್ಲಮ್ಮ ತನ್ನ ಕಾರ್ಯಗಳಿಂದ ಜನಪ್ರಿಯತೆಯನ್ನು ಗಳಿಸಿಕೊಂಡಳು.
ಮಲ್ಲಮ್ಮನ ಜನಪ್ರಿಯತೆ ಆಕೆಯನ್ನು ಮನೆಯಿಂದ ಹೊರಹೋಗುವಂತೆ ಮಾಡಿತು. ಮಲ್ಲಮ್ಮ ಕಾಡಿನಲ್ಲಿ ಗೋವುಗಳನ್ನು ಕಾಯುತ್ತ ಮಲ್ಲಿಕಾರ್ಜುನನನ್ನು ಧ್ಯಾನಿಸುತ್ತ ಭಕ್ತಿಯಲ್ಲಿ ತಲ್ಲೀನಳಾಗಿರುತ್ತಿದ್ದಳು. ಇದನ್ನು ಸಹಿಸದ ಕುಟುಂಬದವರು ಮಲ್ಲಮ್ಮನನ್ನು ಕೊಲ್ಲಲು ಗಂಡ ಭರಮರೆಡ್ಡಿಯನ್ನು ಕಳುಹಿಸುತ್ತಾರೆ. ಭರಮರೆಡ್ಡಿ ಮಲ್ಲಮ್ಮನನ್ನು ಕೊಲ್ಲಲು ಹೋದಾಗ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನವಾಗಿ ತನ್ನ ಪತ್ನಿ ದೈವಿಭಕ್ತೆ ಎಂಬುದು ಗೊತ್ತಾಗುತ್ತದೆ.
ಮಲ್ಲಮ್ಮ ತನ್ನ ಜೀವಿತಾವದಿಯವರೆಗೆ ಕಷ್ಟದಲ್ಲಿ ಕಳೆದರು. ತನಗೆ ನೋವುಂಟುಮಾಡಿದವರ ಹಿತವನ್ನು ಬಯಸಿದ ಮಹಾನ್ ವ್ಯಕ್ತಿ. ಮಲ್ಲಮ್ಮ ತನ್ನ ಅಂತಿಮ ಸಮಯದಲ್ಲಿ ಮಲ್ಲಿಕಾರ್ಜುನನನ್ನು ಧ್ಯಾನಿಸುತ್ತಿರುವಾಗ ಮಲ್ಲಿಕಾರ್ಜುನ ಪ್ರತ್ಯಕ್ಷರಾಗಿ ವರವನ್ನು ಕೇಳುವಂತೆ ತಿಳಿಸಿದಾಗ ಮಲ್ಲಮ್ಮ ತನ್ನ ಬಳಗಕ್ಕೆ ಎಂದಿಗೂ ಬಡತನ ಬಾರದಂತೆ ವರವನ್ನು ಪಡೆಯುತ್ತಾಳೆ.
ಮಲ್ಲಿಕಾರ್ಜುನನಿಂದ ವರಪಡೆದ ಮಲ್ಲಮ್ಮ ತನ್ನ ಬಳಗವನ್ನು ಕರೆದು ಸಂಪತ್ತಿಗೆ ಸೊಕ್ಕಬೇಡಿ, ದಾನಗುಣಗಳನ್ನು ಬೆಳೆಸಿಕೊಳ್ಳುವಂತೆ ತಿಳಿಸುತ್ತಾಳೆ. ರೆಡ್ಡಿ ಸಮಾಜ ಇಂದಿಗೂ ಮಲ್ಲಮ್ಮನ ಉಪದೇಶವನ್ನು ಪರಿಪಾಲಿಸುತ್ತಿದೆ. ಮಲ್ಲಮ್ಮನ ಜೀವನ ಮತ್ತು ಮೌಲ್ಯಗಳು ಸ್ತ್ರೀಕುಲಕ್ಕೆ ದಾರಿದೀಪವಾಗಿವೆ.
ವಿಧವೆಯರು ಮರು ವಿವಾಹವಾದಲ್ಲಿ ಪ್ರೋತ್ಸಾಹಧನ
ಕಲಬುರಗಿ,ಮೇ.03.(ಕ.ವಾ.)-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಧವೆಯರು ಮರು ವಿವಾಹವಾದಲ್ಲಿ ಅವರಿಗೆ 3 ಲಕ್ಷ ರೂ.ಗಳ ಪ್ರೋತ್ಸಾಹಧನ ಮಂಜೂರು ಮಾಡಿ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಮರು ವಿವಾಹವಾಗುವ ವಿಧವೆಯರು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಾಗಿರಬೇಕು. ಈ ಸೌಲಭ್ಯ ಪಡೆಯುವ ವಿಧವೆಯು ಕನಿಷ್ಠ 18 ರಿಂದ ಗರಿಷ್ಠ 45 ವರ್ಷ ವಯೋಮಿತಿಯೊಳಗಿರಬೇಕು.  ವರನಿಗೆ ಕನಿಷ್ಠ 21 ರಿಂದ 45 ವರ್ಷ ವಯೋಮಿತಿಯೊಳಗಿರಬೇಕು. ಮದುವೆಯಾದ ಒಂದು ವರ್ಷ ಅವಧಿಯೊಳಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಸಲ್ಲಿಸಬೇಕು. ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವ ಮುಂಚೆ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹದ ಬಗ್ಗೆ ನೋಂದಾಯಿಸಿರಬೇಕು. ಈ ಸೌಲಭ್ಯ ಒಮ್ಮೆ ಮಾತ್ರ ಪಡೆಯಬಹುದಾಗಿದೆ. ಪುನರ್ ವಿವಾಹವಾದ ವಿಧವೆಯು ವಾಸ್ತವ್ಯವಿರುವ ಜಿಲ್ಲೆಯಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಮಂಜೂರಾದ ಪ್ರೋತ್ಸಾಹಧನ ಹಣವನ್ನು ವಿವಾಹವಾದ ವಿಧವೆಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಎನ್.ಇ.ಎಫ್.ಟಿ. ಮೂಲಕ ಜಮಾ ಮಾಡಲಾಗುವುದು.
ಸದರಿ ಯೋಜನೆಗಳಡಿ ಸೌಲಭ್ಯ ಪಡೆಯಲಿಚ್ಛಿಸುವ ಅರ್ಹ ವಿಧವಾ ದಂಪತಿಗಳು ವಧು-ವರನ ದೃಢೀಕೃತ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಜಿಲ್ಲಾ ನೋಂದಣಿ ಕಚೇರಿಯಿಂದ ಪಡೆದ ವಿವಾಹವಾಗಿರುವ ಬಗ್ಗೆ ನೋಂದಣಿ ಪ್ರಮಾಣಪತ್ರ, ತಹಶೀಲ್ದಾರರಿಂದ ಪಡೆದ ವಾಸಸ್ಥಳದ ಪ್ರಮಾಣಪತ್ರ, ವಧು-ವರನ ದೃಢೀಕೃತ ಆಧಾರ ಚೀಟಿಯ ಜಿರಾಕ್ಸ್ ಪ್ರತಿ, ಮರು ವಿವಾಹವಾದ ಕುರಿತು ವಧು-ವರನ ಜಂಟಿ ಭಾವಚಿತ್ರ ಹಾಗೂ ಜಂಟಿ ಖಾತೆಯ ಬ್ಯಾಂಕ್ ಪಾಸ್‍ಬುಕ್ ಜಿರಾಕ್ಸ್ ಪ್ರತಿಗಳ ದಾಖಲಾತಿಗಳನ್ನು ಜಂಟಿ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಗ್ರಾಮೀಣ ಪಡಿತರ ಚೀಟಿದಾರರಿಗೆ ಪುನರ್ಬೆಳÀಕು ಹಾಗೂ ಅನಿಲ ಭಾಗ್ಯ ಯೋಜನೆ  
          ಕಲಬುರಗಿ,ಮೇ.03.(ಕ.ವಾ.)-ಸರ್ಕಾರದ ಆದೇಶದಂತೆ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಆದ್ಯತಾ ಅಥವಾ ಅಂತ್ಯೋದಯ ಅನಿಲ ಪಡಿತರ ಚೀಟಿದಾರರು ಸಹಾಯಧನಯುಕ್ತ ಒಂದು ಲೀಟರ ಸೀಮೆಎಣ್ಣೆಯನ್ನು ಪಡೆಯಲು ತಮ್ಮ ಇಚ್ಚೆಯನ್ನು ಗ್ರಾಮ ಪಂಚಾಯಿತಿ ತಂತ್ರಾಂಶದಲ್ಲಿ ದಾಖಲಿಸಿರುವ ಕುಟುಂಬಗಳು ಸಹಾಯಧನಯುಕ್ತ ಸೀಮೆಎಣ್ಣೆಯನ್ನು ಅದ್ಯರ್ಪಿಸಿದಲ್ಲಿ ಅವರಿಗೆ ಪುನರಭರ್ತಿ (ರೀಚಾರ್ಜೆಬಲ್) ಮಾಡಬಹುದಾದ 300ರೂ. ಮೌಲ್ಯದ ಎಲ್‍ಇಡಿ ಬಲ್ಬ್‍ನ್ನು “ಪುನರ್ಬೆಳಕು” ಯೋಜನೆಯಡಿ ಉಚಿತವಾಗಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಉಜ್ವಲ್‍ಕುಮಾರ್ ಘೋಷ್ ತಿಳಿಸಿದ್ದಾರೆ.
ಇದಕ್ಕಾಗಿ ಅರ್ಹ ಕುಟುಂಬಗಳು ಸಹಾಯಧನ ಸೀಮೆಎಣ್ಣೆಯನ್ನು ಆಧ್ಯರ್ಪಣೆ ಮಾಡಲು ತಮ್ಮ ಇಚ್ಚೆಯನ್ನು ಇಲಾಖೆಯ ಸೇವಾ ಕೇಂದ್ರಗಳಲ್ಲಿ ದಾಖಲಿಸುವುದು ಹಾಗೂ ಅನಿಲ ಸಂಪರ್ಕ ಹೊಂದದೇ ಇರುವ ಕುಟುಂಬಗಳು ಅನಿಲ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಆಹಾರ ಇಲಾಖೆ ಸಿದ್ಧಪಡಿಸಿದ ತಂತ್ರಾಂಶದಲ್ಲಿ ಇಲಾಖೆಯ ಸೇವಾ ಕೇಂದ್ರಗಳಾದ ಗ್ರಾಮ ಪಂಚಾಯಿತಿಗಳು, ಖಾಸಗಿ ಪ್ರಾಂಚೈಸಿ, ಗುಲಬರ್ಗಾ ಒನ್, ಜನಸ್ನೇಹಿ ಕೇಂದ್ರ ಇತ್ಯಾದಿಗಳಲ್ಲಿ ಅರ್ಜಿ ಸಲ್ಲಿಸಿದ ನಂತರ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯವು ನೀಡಿರುವ ಶೋದಿಸಿದ ಎಸ್‍ಇಸಿಸಿ ಪಟ್ಟಿಯಲ್ಲಿರುವ ಕುಟುಂಬಗಳನ್ನು ಉಜ್ಜಲ ಯೋಜನೆಯಡಿ ಅನಿಲ ಸಂಪರ್ಕವನ್ನು ಪಡೆದುಕೊಳ್ಳಲು ಅನುವು ಮಾಡಿಕೊಡಲಾಗುವುದು.
ಇನ್ನುಳಿದ ಅರ್ಹ ಕುಟುಂಬಗಳು ಆದ್ಯತಾ ಅಥವಾ ಅಂತ್ಯೋದಯ ಪಡಿತರ ಚೀಟಿಗಳನ್ನು ಹೊಂದಿದ್ದಲ್ಲಿ ಅನಿಲ ಭಾಗ್ಯ ಯೋಜನೆಯಡಿ ಅನಿಲ ಸಂಪರ್ಕ ಪಡೆದುಕೊಳ್ಳಲು ಸಹಾಯಧನವನ್ನು ಪಾವತಿಸಲಾಗುವುದು. ಇದಕ್ಕಾಗಿ ಫಲಾನುಭವಿಯು ಮೊದಲ ಹಣ ಪಾವತಿಸಿ ಅನಿಲ ಸಂಪರ್ಕ ಪಡೆದುಕೊಂಡ ನಂತರ ಸಹಾಯಧನವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ತಂತ್ರಾಂಶದ ಮೂಲಕ ವರ್ಗಾಯಿಸಲಾಗುವುದು. ಅನಿಲ ಸಂಪರ್ಕ ಪಡೆದುಕೊಳ್ಳಲು ಉಜ್ವಲ್ ಯೋಜನೆಯಡಿಯಲ್ಲಿ ಪ್ರತಿ ಅನಿಲ ಸಂಪರ್ಕ ವಿಶೇಷ ದರ 1600 ರೂ.ಗಳ ಬದಲಾಗಿ ಸಾಮಾನ್ಯ ಅನಿಲ ಸಂಪರ್ಕ ದರ 1920 ರೂ.ರಂತೆ ಸಹಾಯಧನವನ್ನು ಪಾವತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೇಸಿಗೆ ತರಬೇತಿ ಶಿಬಿರಕ್ಕೆ ಹೆಸರು ನೋಂದಾಯಿಸಿ
ಕಲಬುರಗಿ,ಮೇ.03.(ಕ.ವಾ.)-ಬೇಸಿಗೆ ತರಬೇತಿ ಶಿಬಿರವನ್ನು 2017ರ ಮೇ 8 ರಿಂದ 17 ರವರೆಗೆ 10 ದಿನಗಳ ಕಾಲ ಕಲಬುರಗಿ ನಗರದ ಜಿಲ್ಲಾ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಸದರಿ ಶಿಬಿರದಲ್ಲಿ ಚಿತ್ರಕಲೆ, ಯೋಗ, ಸಮೂಹ ನೃತ್ಯ ಮತ್ತು ಕರಾಟೆ ತರಬೇತಿ ನೀಡಲಾಗುವುದು. ಆಸಕ್ತಿಯಿರುವ 8 ರಿಂದ 15 ವರ್ಷದೊಳಗಿನ ಮಕ್ಕಳು ಮೇ 4 ರಿಂದ 6 ರವರೆಗೆ ಪ್ರತಿದಿನ ಬೆಳಗಿನ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾ ಬಾಲ ಭವನದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಮೊದಲ ಬಂದ 50 ಜನ ಶಿಬಿರಾರ್ಥಿಗಳಿಗೆ ಪ್ರಥಮಾದ್ಯತೆ ನೀಡಲಾಗುವುದೆಂದು ಅವರು ತಿಳಿಸಿದ್ದಾರೆ.
ದಂಡ ರಹಿತ ಆಸ್ತಿ ತೆರಿಗೆ ಪಾವತಿಸಲು ಕಾಲಾವಕಾಶ 
ಕಲಬುರಗಿ,ಮೇ.03.(ಕ.ವಾ.)-ಕಲಬುರಗಿ ನಗರ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮಾಲೀಕರು ಚಾಲ್ತಿ ವರ್ಷದ 2017-18ನೇ ಸಾಲಿನ ದಂಡ ರಹಿತ ಆಸ್ತಿ ತೆರಿಗೆ ಪಾವತಿಸಲು ಸರ್ಕಾರವು 2017ರ ಮೇ 1 ರಿಂದ ಜೂನ್ 30ರವರೆಗೆ (ಎರಡು ತಿಂಗಳವರೆಗೆ) ಕಾಲಾವಕಾಶ ಕಲ್ಪಿಸಿದೆ. ಸಾರ್ವಜನಿಕರು ಸದರಿ ಸೌಲಭ್ಯದ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಕೋರಿದ್ದಾರೆ.
ಸಾರ್ವಜನಿಕರು ತಮ್ಮ ಬಾಕಿಯಿರುವ ಆಸ್ತಿ ತೆರಿಗೆಯನ್ನು ಪಾವತಿಸಿ ದಂಡದಿಂದ ಮುಕ್ತರಾಗಬೇಕಲ್ಲದೇ ಮಹಾನಗರ ಪಾಲಿಕೆಯು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಹಾಗೂ ಆಸ್ತಿ ತೆರಿಗೆ ಪಾವತಿಸಲು ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಮಹಾನಗರ ಪಾಲಿಕೆಯ ವಲಯ ಕಚೇರಿ-3ರ ಆವರಣ ಹಾಗೂ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರದ ಹೌಸಿಂಗ್ ಬೋರ್ಡ್ ಕಾಂಪ್ಲೆಕ್ಸ್‍ನಲ್ಲಿರುವ ಗುಲಬರ್ಗಾ ಒನ್ ಶಾಖೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.  
ಅದರಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಖುಲ್ಲಾ ನಿವೇಶನ, ಮನೆ, ಅಂಗಡಿ, ವಾಣಿಜ್ಯ ಕಟ್ಟಡ, ಕಲ್ಯಾಣ ಮಂಟಪ, ನರ್ಸಿಂಗ್ ಹೋಮ್, ಬಹುಮಹಡಿ ಕಟ್ಟಡ, ಅಪಾರ್ಟ್‍ಮೆಂಟ್, ಫಂಕ್ಷನ್ ಹಾಲ್ ಮತ್ತು ಇತರ ಮಾಲೀಕರು ಈಗಾಗಲೇ ಸಾಕಷ್ಟು ಆಸ್ತಿ ಮಾಲೀಕರು ತಮ್ಮ ಆಸ್ತಿಗಳ ತೆರಿಗೆಯನ್ನು ಶೇ. 5ರ ರಿಯಾಯಿತಿಯೊಂದಿಗೆ ಏಪ್ರಿಲ್ 30ರವರೆಗೆ ಪಾವತಿಸಿದ್ದಕ್ಕೆ ಮಹಾನಗರ ಪಾಲಿಕೆಯಿಂದ ಅಭಿನಂದಿಸಿದ್ದಾರೆ.  
ಕಲಬುರಗಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬಳಕೆ ನಿಷೇಧ 
ಕಲಬುರಗಿ,ಮೇ.03.(ಕ.ವಾ.)-ಕಲಬುರಗಿ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಕರ್ನಾಟಕ ರಾಜ್ಯಪತ್ರ ಸಂಖ್ಯೆ: ಅಪಜೀ/17/ಇಪಿಸಿ/2012 ಬೆಂಗಳೂರು ದಿನಾಂಕ: 11-03-2016ರ ಅಧಿಸೂಚನೆಯಂತೆ ಯಾವುದೇ ವ್ಯಕ್ತಿ, ಅಂಗಡಿ ಮಾಲೀಕ, ಮಾರಾಟಗಾರ, ಸಗಟು ಮಾರಾಟಗಾರ ಅಥವಾ ಚಿಲ್ಲರೆ ವ್ಯಾಪಾರಿ ಮತ್ತು ಮಾರಾಟಗಾರು ಯಾವುದೇ ದಪ್ಪದ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್‍ದಿಂದ ತಯಾರಿಸಿದ ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಕ್ಲಿಂಗ್‍ಪಿಲ್ಮ್ಸ್ ಮತ್ತು ಊಟದ ಮೇಜಿನ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್ ಮೈಕೋ ಬೀಡ್ಸ್‍ದಿಂದ ತಯಾರಾದಂತಹ ವಸ್ತುಗಳ, ಬಳಕೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಈ ಕೆಳಗಿನ  ಸಂದರ್ಭ ಹಾಗೂ ಚಟುವಟಿಕೆಗಳಿಗಾಗಿ ಬಳಸುವ ಪ್ಲಾಸ್ಟಿಕ್ ವಸ್ತುಗಳಿಗೆ ಅಧಿಸೂಚನೆಯಿಂದ ವಿನಾಯಿತಿ ನೀಡಲಾಗಿದೆ. ವಿಶೇಷ ಆರ್ಥಿಕ ವಲಯ (ಎಸ್.ಇ.ಝಡ್) ಮತ್ತು ರಫ್ತು ಉದ್ದೇಶಿತ ಘಟಕಗಳಲ್ಲಿ (ಇ.ಓ.ಯು) ಸ್ಥಾಪಿತವಾದ ಪ್ಲಾಸ್ಟಿಕ್ ಉದ್ಯಮದಲ್ಲಿ ರಫ್ತು ಮಾಡುವ ಉದ್ದೇಶಕ್ಕೆಂದು ಪ್ರತ್ಯೇಕವಾಗಿ ಹಾಗೂ ರಫ್ತು ಆರ್ಡರ್ ಮೇರೆಗೆ ಉತ್ಪಾದಿಸಲ್ಪಡುವ ಪ್ಲಾಸ್ಟಿಕ್ ವಸ್ತುಗಳು. ಸಾಮಾಗ್ರಿಗಳನ್ನು ಬಳಸುವುದಕ್ಕೆ ಮೊದಲು ಉತ್ಪಾದನಾ/ಸಂಸ್ಕರಣಾ ಘಟಕಗಳಲ್ಲಿ ಪ್ಯಾಕ್ ಮಾಡಿ ಸೀಲ್ ಮಾಡಲು ಬಳಸುವ ಹಾಗೂ ಸಾಮಗ್ರಿಗಳ ಪ್ಯಾಕೇಜಿಂಗ್ ಮಾಡುವ ಸಂದರ್ಭದಲ್ಲಿ ಅವಿಭಾಜ್ಯವಾಗಿ ಉಪಯೋಗಿಸುವ ಪ್ಲಾಸ್ಟಿಕ್ ಬ್ಯಾಗ್‍ಗಳು.
 ಸರ್ಕಾರಿ ಇಲಾಖೆಗಳಿಂದ ಅಥವಾ ಇತರೆ ಸಂಬಂಧಪಟ್ಟ ಸಂಸ್ಥೆಗಳಿಂದ ಸ್ವೀಕೃತವಾದ ಆರ್ಡರ್‍ಗೆ ಎದುರಾಗಿ ಅರಣ್ಯ ಮತ್ತು ತೋಟಗಾರಿಕೆ ನರ್ಸರಿಗಳಲ್ಲಿ ಬಳಸುವ ಪ್ಲಾಸ್ಟಿಕ್ ವ್ಹಿಲ್‍ಗಳು ಮತ್ತು ಹಾಳೆಗಳು ಹಾಗೂ ಹಾಲು ಮತ್ತು ಹಾಲು ಉತ್ಪನ್ನಗಳ (ಹೈನು ಉತ್ಪನ್ನಗಳು) ಪ್ಯಾಕಿಂಗ್‍ಗೆ ಬಳಸುವ ಪ್ಯಾಸ್ಟಿಕ್‍ಗಳು. ಮೇಲೆ ತಿಳಿಸಿದ ನಿರ್ದೇಶನಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಪರಿಸರ ಸಂರಕ್ಷಣೆ ಕಾಯ್ದೆ 1986ರ ಸೆಕ್ಷನ್ 19ರನ್ವಯ ಪ್ರದತ್ತವಾಗಿರುವ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಲಾಗುತ್ತದೆ ಅವರು ತಿಳಿಸಿದ್ದಾರೆ.
ಜಿಲ್ಲಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಆಹ್ವಾನ
ಕಲಬುರಗಿ,ಮೇ.03.(ಕ.ವಾ.)-ಗ್ರಾಮೀಣ ವಸತಿ ಯೋಜನೆ ನಿರ್ವಹಣೆಗಾಗಿ ಓರ್ವ ಜಿಲ್ಲಾ ವ್ಯವಸ್ಥಾಪಕ ಹುದ್ದೆಯನ್ನು ಮ್ಯಾನ್ ಪವರ್ ಏಜೆನ್ಸಿ ಮೂಲಕ ತಾತ್ಕಾಲಿಕವಾಗಿ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಯಾವುದೇ ಇಂಜಿನಿಯರಿಂಗ್ ಅಥವಾ ಮಾಸ್ಟರ್ ಇನ್ ಕಂಪ್ಯೂಟರ್ ಅಪ್ಲಿಕೇಶನ್‍ನಲ್ಲಿ ಪದವಿ ಪಾಸಾಗಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು. ವಯೋಮಿತಿ 50 ವರ್ಷಗಿಂತ ಕಡಿಮೆಯಿರಬೇಕು. ಕನ್ನಡ ಅಥವಾ ಇಂಗ್ಲೀಷ್‍ನಲ್ಲಿ ಪ್ರತಿ ನಿಮಿಷಕ್ಕೆ 25 ಶಬ್ದಗಳಿಗೆ ಕಡಿಮೆ ಇಲ್ಲದಂತೆ ಕಂಪ್ಯೂಟರ್ ಬೆರಳಚ್ಚು ಮಾಡುವ ಸಾಮಥ್ರ್ಯ ಹೊಂದಿರಬೇಕು.
ಗ್ರಾಮೀಣ ವಸತಿ ಯೋಜನೆಗಳ ಆಡಳಿತಾತ್ಮಕ ಮತ್ತು ತಾಂತ್ರಿಕ ಜವಾಬ್ದಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧೀನದಲ್ಲಿನ ವಸತಿ ಯೋಜನೆಗಳ ನಿರ್ವಹಣೆ, ಮೊಬೈಲ್ ಅಪ್ಲಿಕೇಶನ್ ಮತ್ತು ಸಾಫ್ಟವೇರ್‍ಗಳ ಪರಿಜ್ಞಾನ ಹೊಂದಿರುವುದಲ್ಲದೇ ಪ್ರತಿ ತಿಂಗಳು ಕನಿಷ್ಠ 10 ದಿನಗಳ ಪ್ರವಾಸ ಮಾಡಬೇಕು. ಗ್ರಾಮಸಭಾ, ಡಾಟಾ ಎಂಟ್ರಿ ಮತ್ತು ಫಲಾನುಭವಿಗಳ ಅನುಮೋದನೆ ಕುರಿತು ಮೇಲ್ವಿಚಾರಣೆ ಮಾಡುವುದರೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚಿಸಿರುವ ಇನ್ನಿತರ ವಸತಿ ಕೆಲಸಗಳನ್ನು ನಿರ್ವಹಿಸಬೇಕು. ಪ್ರತಿ ತಿಂಗಳು 35000 ರೂ. ವೇತನ ನೀಡಲಾಗುವುದು.  
ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ದಾಖಲಾತಿಗಳ ಜಿರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಮೇ 8ರಂದು ಮಧ್ಯಾಹ್ನ 12 ಗಂಟೆಯೊಳಗಾಗಿ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿಗಳ ಶಾಖೆಯಲ್ಲಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅಭ್ಯರ್ಥಿಗಳನ್ನು ಕಂಪ್ಯೂಟರ್ ನೈಪುಣ್ಯತೆ ಪರೀಕ್ಷೆ ಮತ್ತು ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮೇ 4ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಮೇ.03.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆ.ವಿ. ಗಣೇಶ ನಗರ, 11 ಕೆ.ವಿ. ಮೆಹಬೂಬ ನಗರ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ, 11 ಕೆ.ವಿ. ದರ್ಗಾ ಮತ್ತು ಮಿಜಗುರಿ (ಭಾಗಶ:) ಫೀಡರ್ ವ್ಯಾಪ್ತಿಯಲ್ಲಿನ 11 ಕೆ.ವಿ. ಎ.ಬಿ. ಕೇಬಲ್ ಬದಲಾಯಿಸುವ ಕಾರ್ಯ, 11 ಕೆ.ವಿ. ಆಳಂದ ಕಾಲೋನಿ, 11 ಕೆ.ವಿ. ಎಂ.ಎಸ್.ಕೆ. ಮಿಲ್, 11 ಕೆ.ವಿ. ದೇವಿ ನಗರ, 11 ಕೆ.ವಿ. ಶಾಂತಿ ನಗರ ಫೀಡರುಗಳ ವ್ಯಾಪ್ತಿಯಲ್ಲಿ ಕೆ.ಪಿ.ಟಿ.ಸಿ.ಎಲ್. ಬೃಹತ್ ಕಾಮಗಾರಿ ವಿಭಾಗದಿಂದ 110 ಕೆ.ಇ. ವೆಸ್ಟ್ ಲೈನ್ ವಿದ್ಯುತ್ ಮಾರ್ಗದ ನಿರ್ವಹಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಮೇ 4ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಫೀಡರುಗಳ ವ್ಯಾಪ್ತಿಯ ಬಡಾವಣೆಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ. ವಿದ್ಯುತ್ ವ್ಯತ್ಯಯದ ಬಡಾವಣೆಗಳ ವಿವರ ಇಂತಿದೆ.
11 ಕೆ.ವಿ ಗಣೇಶ ನಗರ ಫೀಡರ್: ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಎಂ.ಬಿ.ನಗರ, ಬಾಕರ್ ಪಂಕ್ಷನ್ ಹಾಲ್, ಆದರ್ಶ ನಗರ ಕೆ.ಹೆಚ್.ಬಿ. ಲೇಔಟ್, ಗಣೇಶ ನಗರ, ಉಸ್ಮಾನಿಯಾ ಕಾಲೇಜ್, ಜಾಗೃತಿ ಕಾಲೋನಿ, ಬಸವೇಶ್ವರ ಕಾಲೋನಿ, ಎಂ.ಜಿ.ರೋಡ್, ಪ್ರಗತಿ ಕಾಲೋನಿ, ನ್ಯೂ ಜಿ.ಡಿ.ಎ. ವೀರೆಂದ್ರ ಪಾಟೀಲ್ ಬಡವಾಣೆ, ಬಾರೆ ಹಿಲ್ಸ್ , ಗ್ರೀನ್ ಹಿಲ್ಸ್, ಮೆಹತಾ ಲೇಔಟ್, ಸಿದ್ದೇಶ್ವರ ಕಾಲೋನಿ, ಎಂ.ಜಿ ರೋಡ್, ಗುಬ್ಬಿ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಮೆಹಬೂಬ ನಗರ ಫೀಡರ್: ಬೆಳಗಿನ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸೈಯದ ಗಲ್ಲಿ, ಜಲಾಲವಾಡಿ, ಪಯನ್, ಪಾಶಾಪುರ, ದರ್ಗಾ, ಹಳೆಕಾಲಿ ಗುಮ್ಮಜ್, ಮಕಬರಾ, ಬಡಿದೇವಡಿ, ಛೋಟಾದೆವಡಿ, ದರ್ಗಾ, ನೂರ್ ಬಾಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ದರ್ಗಾ ಮತ್ತು ಮಿಜಗುರಿ (ಭಾಗಶಃ) ಫೀಡರ್: ಬೆಳಗಿನ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಜ್ ಕಮಿಟಿ ಪ್ರದೇಶ, ನಯಾ ಮೊಹಲ್ಲಾ, ಜವಾನ ಹಿಂದ-ಶಾಲೆ ಪ್ರದೇಶ, ಬಕರಿಕಾ ಮೇಳಾ, ಮೊತಿ ವೈನ್ ಶಾಪ್ ಹಿಂದುಗಡೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ ಆಳಂದ ಕಾಲೋನಿ ಫೀಡರ್: ಬೆಳಗಿನ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಚಿಂಚೋಳಿ ಲೇಔಟ್, ಚೊರ ಬಜಾರ್, ಫಿಲ್ಟರ್ ಬೆಡ್, ಚೆಕ್ ಪೋಸ್ಟ್, ಶಿವಾದಾಲ್ ಮಿಲ್, ರಾಮತೀರ್ಥ, ರಾಣೇಶ ಪೀರ್ ದರ್ಗಾ, ವಿಶ್ವರಾಧ್ಯ ಮಂದಿರ, ಸಿದ್ದರಾಮೇಶ್ವರ ನಗರ, ಆಯ್ಯೋಧ್ಯಾ ನಗರ, ಲಕ್ಷ್ಮೀ ನಗರ, ಎಂ.ಜಿ.ಟಿ.ಟಿ., ಆಶ್ರಯ ಕಾಲೋನಿ, ದುಬೈ ಕಾಲೋನಿ, ಅಹ್ಮದ್ ನಗರ, ಪಿ.ಎಫ್. ಕಚೇರಿ, ಆಳಂದ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಕಸ್ತೂರಿ ನಗರ, ಖಾದ್ರಿ ಚೌಕ್, ಸ್ವರ್ಗೆಶ ನಗರ, ಕಡಗಂಚಿ ಮಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಎಮ್.ಎಸ್.ಕೆ.ಮಿಲ್ ಫೀಡರ್: ಬೆಳಗಿನ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮದೀನಾ ಕಾಲೋನಿ, ನ್ಯೂ ಮದೀನಾ ಕಾಲೋನಿ, ಮೀಸ್‍ಬಾ ನಗರ, ಇಕ್ಬಾಲ್ ಕಾಲೋನಿ, ಹುಸೇನ್ ಗಾರ್ಡನ್, ಕೃಷ್ಟ ಮಿನರಲï್ಸ, ನ್ಯೂ ರಾಘವೇಂದ್ರ ಕಾಲೋನಿ, ಖಾನಿ ಏರಿಯಾ, ಮಹ್ಮದಿ ಚೌಕ್, ಕೆ.ಬಿ.ಎನ್. ಹುಸೇನ್ ಕೊಲ್ಡ್‍ಸ್ಟೊರೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ದೇವಿ ನಗರ ಫೀಡರ್: ಬೆಳಗಿನ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ದೇವಿ ನಗರ, ಸಂತೋಷ ಕಾಲೋನಿ, ಖಾದ್ರಿ ಚೌಕ್, ನಬಿ ಕಾಲೋನಿ, ಚಿಂಚೋಳಿ ಲೇಔಟ್, ಜಾಫರಾಬಾದ್, ಪ್ರಭುದೇವ ನಗರ, ಮಾಳೇವಾಡಿ, ಜೆ.ಆರ್. ನಗರ, ಶೇಖ್ ನಗರ, ವಿಶ್ವರಾಧ್ಯ ಕಾಲೋನಿ, ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಶಾಂತಿ ನಗರ ಫೀಡರ್: ಬೆಳಗಿನ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಎಂ.ಎಸ್.ಕೆ. ಮಿಲ್ ಗೇಟ್, ಅಶೋಕನಗರ, ಶಾಂತಿನಗರ, ವಿದ್ಯಾನಗರ, ಕೆ.ಹೆಚ್.ಬಿ. ಕಾಂಪ್ಲೇಕ್ಸ್, ಪೋಲಿಸ್ ಕ್ವಾರ್ಟರ್ಸ್, ಕೆ.ಎಸ್.ಆರ್.ಟಿ.ಸಿ.ಕ್ವಾರ್ಟರ್ಸ್, ಬೋರ ಆಬಾಯಿ ನಗರ, ಬಸವ ನಗರ, ಹೀರಾ ನಗರ, ಹಿರಾಪುರ, ಭೀಮ ನಗರ, ಮಿಸಬಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ವಿಭಾಗ-1ರಿಂದ 110 ಕೆ.ವಿ. ಪಶ್ವಿಮ (ವೆಸ್ಟ್) ವಿತರಣಾ ಕೇಂದ್ರದ ಮೇಲೆ ಸುಧಾರಣಾ ಕಾರ್ಯ ಕೈಗೊಂಡಿರುವ ಪ್ರಯುಕ್ತ ಮೇ 4ರಂದು ಬೆಳಗಿನ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಫರಾಬಾದ್ ಮತ್ತು ಪಟ್ಟಣ ಎನ್.ಜೆ.ವೈ. ಫೀಡರುಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಮತ್ತು ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.



ಹೀಗಾಗಿ ಲೇಖನಗಳು NEWS AND PHOTO 03-05-2017

ಎಲ್ಲಾ ಲೇಖನಗಳು ಆಗಿದೆ NEWS AND PHOTO 03-05-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO 03-05-2017 ಲಿಂಕ್ ವಿಳಾಸ https://dekalungi.blogspot.com/2017/05/news-and-photo-03-05-2017.html

Subscribe to receive free email updates:

0 Response to "NEWS AND PHOTO 03-05-2017"

ಕಾಮೆಂಟ್‌‌ ಪೋಸ್ಟ್‌ ಮಾಡಿ