ಶೀರ್ಷಿಕೆ : ರೈತರ ನೆರವಿಗೆ ಸರ್ಕಾರ ಸದಾ ಸನ್ನದ್ಧ -ಶಾಸಕ ಇಕ್ಬಾಲ್ ಅನ್ಸಾರಿ
ಲಿಂಕ್ : ರೈತರ ನೆರವಿಗೆ ಸರ್ಕಾರ ಸದಾ ಸನ್ನದ್ಧ -ಶಾಸಕ ಇಕ್ಬಾಲ್ ಅನ್ಸಾರಿ
ರೈತರ ನೆರವಿಗೆ ಸರ್ಕಾರ ಸದಾ ಸನ್ನದ್ಧ -ಶಾಸಕ ಇಕ್ಬಾಲ್ ಅನ್ಸಾರಿ
ಕೊಪ್ಪಳ ಮೇ. 02 (ಕರ್ನಾಟಕ ವಾರ್ತೆ): ಪ್ರಸಕ್ತ ವರ್ಷದ ಭೀಕರ ಬರದ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಸದಾ ಸನ್ನದ್ಧವಿದ್ದು ಯಾವುದೇ ಕಾರಣಕ್ಕೂ ರೈತರು ಎದೆಗುಂದಬಾರದು ಎಂದು ಶಾಸಕರಾದ ಇಕ್ಬಾಲ್ ಅನ್ಸಾರಿ ಅವರು ಹೇಳಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇರಕಲ್ಲಗಡ ಗ್ರಾಮದಲ್ಲಿ ಜಾನುವಾರುಗಳ ರಕ್ಷಣೆಗಾಗಿ ಪ್ರಾರಂಭಿಸಲಾದ ಗೋಶಾಲೆಗೆ ಮಂಗಳವಾರದಂದು ಚಾಲನೆ ನೀಡಿ ಅವರು ಮಾತನಾಡಿದರು.
ಬರಗಾಲದ ಸಂದರ್ಭಕ್ಕೆ ಮುಂಚಿತವಾಗಿ ಪ್ರತಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಿದ್ದು ಕುಡಿಯುವ ನೀರಿನ ಸಮಸ್ಯೆ ನೀಗಿದೆ. ಗೋಶಾಲೆಗೆ ನೀರಿನ ಕೊರತೆಯಾಗದಂತೆ, ಕೂಡಲೇ ಹೊಸ ಬೋರ್‍ವೆಲ್ ಕೊರೆಯಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗ್ರಾಮೀಣಭಿವೃದ್ದಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗೋಶಾಲೆಯಲ್ಲಿ ಯಾವುದೇ ಕೊರತೆ ಉಂಟಾಗದಂತೆ ಜಾಗೃತೆ ವಹಿಸುವಂತೆ ತಹಶೀಲ್ದಾರ ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಶಾಸಕ ಇಕ್ಬಾಲ್ ಅನ್ಸಾರಿ ಅವರು ಸೂಚನೆ ನೀಡಿದರು.
ತಹಸೀಲ್ದಾರ ಗುರುಬಸವರಾಜ, ಡಿವೈಎಸ್‍ಪಿ ಶ್ರೀಕಾಂತ ಕಟ್ಟಿಮನಿ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ, ಮುಖಂಡರಾದ ಮಲ್ಲೇಶಪ್ಪ ಗುಮಗೇರಿ, ಬಸವಕುಮಾರ ಪಟ್ಟಣಶೆಟ್ಟರ, ಗಾಳೆಪ್ಪ ಗಂಟಿ, ಹನುಮಂತಪ್ಪ ವನಬಳ್ಳಾರಿ, ಭೀಮನಗೌಡ, ಶ್ಯಾಮೀದ ಮನಿಯಾರ ಇತರರು ಉಪಸ್ಥಿತರಿದ್ದರು. ಸಂಗಮೇಶ ಬಾದವಾಡಗಿ ಕಾರ್ಯಕ್ರಮ ನಿರ್ವಹಿಸಿದರು.
ಹೀಗಾಗಿ ಲೇಖನಗಳು ರೈತರ ನೆರವಿಗೆ ಸರ್ಕಾರ ಸದಾ ಸನ್ನದ್ಧ -ಶಾಸಕ ಇಕ್ಬಾಲ್ ಅನ್ಸಾರಿ
ಎಲ್ಲಾ ಲೇಖನಗಳು ಆಗಿದೆ ರೈತರ ನೆರವಿಗೆ ಸರ್ಕಾರ ಸದಾ ಸನ್ನದ್ಧ -ಶಾಸಕ ಇಕ್ಬಾಲ್ ಅನ್ಸಾರಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ರೈತರ ನೆರವಿಗೆ ಸರ್ಕಾರ ಸದಾ ಸನ್ನದ್ಧ -ಶಾಸಕ ಇಕ್ಬಾಲ್ ಅನ್ಸಾರಿ ಲಿಂಕ್ ವಿಳಾಸ https://dekalungi.blogspot.com/2017/05/blog-post_99.html
0 Response to "ರೈತರ ನೆರವಿಗೆ ಸರ್ಕಾರ ಸದಾ ಸನ್ನದ್ಧ -ಶಾಸಕ ಇಕ್ಬಾಲ್ ಅನ್ಸಾರಿ"
ಕಾಮೆಂಟ್ ಪೋಸ್ಟ್ ಮಾಡಿ