ಶೀರ್ಷಿಕೆ : ಕೃಷಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪದವಿ ಓದಲು ಮುಂದಾಗುತ್ತಿರುವ ಮೊದಲ ಮೊಗೇರ ವಿದ್ಯಾರ್ಥಿನಿ
ಲಿಂಕ್ : ಕೃಷಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪದವಿ ಓದಲು ಮುಂದಾಗುತ್ತಿರುವ ಮೊದಲ ಮೊಗೇರ ವಿದ್ಯಾರ್ಥಿನಿ
ಕೃಷಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪದವಿ ಓದಲು ಮುಂದಾಗುತ್ತಿರುವ ಮೊದಲ ಮೊಗೇರ ವಿದ್ಯಾರ್ಥಿನಿ
MOGERAWORLD NEWS:- ಕಾಲ ಬದಲಾದಂತೆ ಮೊಗೇರರ ಶಿಕ್ಷಣ ಮಟ್ಟವೂ ಉತ್ತುಂಗಕ್ಕೆ ಬೆಳೆಯುತ್ತಿದೆ ಎಂಬುದಕ್ಕೆ ಅನೇಕ ರೀತಿಯ ಬೆಳವಣಿಗೆಯನ್ನು ಸಮಾಜದಲ್ಲಿ ಕಾಣುತ್ತಿದ್ದೆವೆ. ಇದಕ್ಕೆ ಪೂರಕ ಎಂಬಂತೆ ಈಗ ಮಂಗಳೂರು ನಗರದಲ್ಲೆ ಹುಟ್ಟಿ ಬೆಳೆದ ಕು.ಮೇಘ ಈಗ ಕೃಷಿ ಜೈವಿಕ ತಂತ್ರಜ್ಞಾನ (agricultural engineering) ವಿಷಯದಲ್ಲಿ ಪದವಿ ಓದಲು ಆಸಕ್ತಿ ತೋರಿದ್ದಾರೆ. ಈ ಬಗೆಗೆ ಎಲ್ಲಾ ಪೂರ್ವ ತಯಾರಿಗಳು ನಡೆಯುತ್ತಿದೆ. ಶ್ರೀ ಹರಿಶ್ಚಂದ್ರ ಕಾಪಿಕಾಡ್ ಹಾಗೂ ಶ್ರೀ ಮಂಜುಳಾ ಹರಿಶ್ಚಂದ್ರ ರವರ ಮಗಳಾದ ಕು.ಮೇಘ ರವರು ಸಂತ ಆಗ್ನೇಸ್ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 76.33% ಅಂಕಗಳನ್ನು ಪಡೆದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಹೆತ್ತರವರ ಸಂಪೂರ್ಣ ಸಹಕಾರವಿದ್ದು ಓದಿನ ಆಯ್ಕೆ ಆಕೆಗೆ ಬಿಟ್ಟದ್ದು. ಕೃಷಿ ಜೈವಿಕ ಕ್ಷೇತ್ರದಲ್ಲಿ ಅನೇಕ ಅವಕಾಶಗಳಿದ್ದು ನಮ್ಮ ಸಮುದಾಯದ ವಿಧ್ಯಾವಂತರು ಸದುಪಯೋಗ ಮಾಡಿಕೊಂಡರೆ ಉತ್ತಮ ಎನ್ನುತ್ತಾರೆ ಈಕೆಯ ತಾಯಿ ಶ್ರೀಮತಿ ಮಂಜುಳಾ ಹರಿಶ್ಚಂದ್ರ. ಕೃಷಿ ಜೈವಿಕ ತಂತ್ರಜ್ಞಾನ ಆಯ್ಕೆ ಮಾಡಿಕೊಳ್ಳುವುದರಿಂದ ಡೈರಿ ಪಾನೀಯ ಯೋಜನೆಗಳು, ನೀರಾವರಿ, ಒಳಚರಂಡಿ, ಪ್ರವಾಹ ನೀರಿನ ನಿಯಂತ್ರಣ ವ್ಯವಸ್ಥೆಗಳು, ಪರಿಸರೀಯ ಪ್ರಭಾವದ ಮೌಲ್ಯಮಾಪನಗಳನ್ನು, ಕೃಷಿ ಉತ್ಪನ್ನದ ಸಂಸ್ಕರಣೆ ಮತ್ತು ಸಂಶೋಧನಾ ಫಲಿತಾಂಶಗಳನ್ನು ಅರ್ಥೈಸಿಕೊಳ್ಳುವ ಮತ್ತು ಸೂಕ್ತ ಅಭ್ಯಾಸಗಳನ್ನು ಜಾರಿಗೆ ತರಲು ಯೋಜನೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಯಂತಹ ಕಾರ್ಯಗಳನ್ನು ಮಾಡಲು ಸಾಧ್ಯವಿದೆ.
ಕು.ಮೇಘ |
"ಅರಣ್ಯ ಮತ್ತು ಆಹಾರ ಪ್ರಕ್ರಿಯೆ ಸೇರಿದಂತೆದಂತೆ ಅನೇಕ ಬದಲಾವಣೆಗಳು ಆಗುತ್ತಿವೆ. ಹೊಸ ಬಗೆಯ ಅಧ್ಯಯನ ಮತ್ತು ಪ್ರಯೋಗದಿಂದ ಸಾಧನೆ ಮಾಡಲು ಸಾಧ್ಯವಿದೆ. ಆಹಾರ ಕ್ಷೇತ್ರವಲ್ಲದೆ ಹೊಸ ಮಾದರಿಯ ಉಪಯೋಗಗಳಿಗೂ ಸಹ ಜೈವಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.ಆದ್ದರಿಂದ ಮನೆಯವರು ನನಗೆ ಓದಿಗಾಗಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ವ್ಯವಹಾರ, ಕೃಷಿ ವಿಜ್ಞಾನ, ಪ್ರಾಣಿ ವಿಜ್ಞಾನ ಮತ್ತು ಸಾರ್ವಜನಿಕ ನೀತಿಯಂಥ ವಿವಿಧ ಹಿನ್ನೆಲೆಗಳಿಂದ ಜನರೊಂದಿಗೆ ಕೆಲಸ ಮಾಡುಲು ಸಾಧ್ಯವಿದೆ"- ಕು.ಮೇಘ -ವಿದ್ಯಾರ್ಥಿನಿ
“ಹಿಂದೆ ಮಕ್ಕಳು ಹೆತ್ತವರು ಹೇಳಿದ ವಿಷಯಗಳನ್ನು ಆಯ್ದುಕೊಂಡು ಶಿಕ್ಷಣ ಪಡೆಯುತ್ತಿದ್ದರು.ಈಗ ಕಾಲ ಬದಲಾಗಿದೆ.ಮಕ್ಕಳು ಯಾವ ಕ್ಷೇತ್ರದಲ್ಲಿ ಸಾಗಿ ಜೀವನದ ದಾರಿ ಕಂಡುಕೊಳ್ಳಬೇಕೆಂದು ಮಕ್ಕಳೇ ನಿರ್ಧರಿಸಿದರೆ ಉತ್ತಮ .ಸ್ವ ಇಚ್ಚೆಯ ವಿಷಯಗಳನ್ನು ಅಭ್ಯಾಸ ಮಾಡುವುದರಿಂದ ಉದ್ಯೋಗ ಕಂಡುಕೊಳ್ಳಲು ಬೇಗ ಸಾಧ್ಯವಾಗುತ್ತದೆ. ನನ್ನ ಮಗಳಿಗೆ ನನ್ನ ಬೆಂಬಲವಿದೆ"ಹರಿಶ್ಚಂದ್ರ ಕಾಪಿಕಾಡ್(ಕು.ಮೇಘಳ ತಂದೆ)
ಹೀಗಾಗಿ ಲೇಖನಗಳು ಕೃಷಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪದವಿ ಓದಲು ಮುಂದಾಗುತ್ತಿರುವ ಮೊದಲ ಮೊಗೇರ ವಿದ್ಯಾರ್ಥಿನಿ
ಎಲ್ಲಾ ಲೇಖನಗಳು ಆಗಿದೆ ಕೃಷಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪದವಿ ಓದಲು ಮುಂದಾಗುತ್ತಿರುವ ಮೊದಲ ಮೊಗೇರ ವಿದ್ಯಾರ್ಥಿನಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೃಷಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪದವಿ ಓದಲು ಮುಂದಾಗುತ್ತಿರುವ ಮೊದಲ ಮೊಗೇರ ವಿದ್ಯಾರ್ಥಿನಿ ಲಿಂಕ್ ವಿಳಾಸ https://dekalungi.blogspot.com/2017/05/blog-post_68.html
0 Response to "ಕೃಷಿ ಜೈವಿಕ ತಂತ್ರಜ್ಞಾನ ವಿಷಯದಲ್ಲಿ ಪದವಿ ಓದಲು ಮುಂದಾಗುತ್ತಿರುವ ಮೊದಲ ಮೊಗೇರ ವಿದ್ಯಾರ್ಥಿನಿ"
ಕಾಮೆಂಟ್ ಪೋಸ್ಟ್ ಮಾಡಿ