ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ !

ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ ! - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ !, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ !
ಲಿಂಕ್ : ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ !

ಓದಿ


ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ !

Arsikere


ಮೊನ್ನೆ ಮೊನ್ನೆ ಅರಸೀಕೆರೆ ಕೆರೆಯ ಏರಿ ಮೇಲೆ ಬಸ್ಸಿನಲ್ಲಿ ಹೋಗುವಾಗ ಕಂಡ ದೃಶ್ಯವದು.  ಈಗ್ಗೆ ಎರಡು ವರ್ಷಗಳ ಹಿಂದೆ ತುಂಬಿ ತುಳುಕುತ್ತಿದ್ದ ಕೆರೆ ಈಗ ಬರಡು ಮೈದಾನದಂತಾಗಿದೆ. ಕೆರೆಯಲ್ಲಿದ್ದ ಅಷ್ಟೂ ನೀರು ಬಸಿದು, ಆವಿಯಾಗಿ ಖಾಲಿಯಾಗಿದೆ. ಕೆರೆಯ ತಳ ಕಾಣುತ್ತಿದೆ. ತಳದಲ್ಲಿರುವ ಆಳೆತ್ತರದ ಹೂಳೂ ಕಾಣುತ್ತಿದೆ.

ಊರಿಂದೂರಿಗೆ ಏರಿ ಮೇಲೆ ಪ್ರಯಾಣಿಸುವ ನಮ್ಮ ಕಣ್ಣಿಗೇ ಕೆರೆಯಲ್ಲಿನ ಹೂಳು ಕಾಣುತ್ತದೆ. ಅಲ್ಲೇ ಇರುವ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ಕಣ್ಣಿಗೆ ಹೂಳು ಬೀಳುತ್ತಿಲ್ಲವೇ ?

ಮಳೆಗಾಲ ಆರಂಭವಾಗಿತ್ತಿದೆ. ಅಷ್ಟರೊಳಗೆ ಹೂಳೆತ್ತಿದರೆ, ಹೆಚ್ಚು ಮಳೆ ನೀರು ಸಂಗ್ರಹಣೆಯಾಗುತ್ತದೆ. ಹೇಮಾವತಿ, ಹಾರನಹಳ್ಳಿ ಕೆರೆಗಳಿಂದ ನೀರು ತರುವುದು ತಪ್ಪುತ್ತದೆ. ಕೆರೆಯಲ್ಲಿನ ರೈತರ ಜಮೀನಿಗೆ ಎರೆಗೋಡಾಗುತ್ತದೆ. ಇದ್ಯಾವುದೂ ಆಗದಿದ್ದರೆ, ಹೂಳಿರುವ ಕೆರೆ ಒಂದೇ ಮಳೆಗೆ ತುಂಬುತ್ತದಷ್ಟೇ. ಆ ನೀರು ಹೆಚ್ಚು ದಿನ ಇರುವುದಿಲ್ಲ. ಎಂದಿನಂತೆ ಅರಸೀಕೆರೆ ಮಹಾಜನತೆಯ ತೆರಿಗೆ ಹಣ ಖರ್ಚು ಮಾಡಿ ಹೇಮೆಯಿಂದ ನೀರು ತರುವ ಭಾರೀ ಭಗೀರಥ ಪ್ರಯತ್ನವಂತೂ ನಡೆಯುತ್ತದೆ.

ಇದೆಲ್ಲ ಆಗಬಾರದೆಂದಿದ್ದರೆ ಕೂಡಲೇ ಹೂಳೆತ್ತಬೇಕು. ಈಗಾಗಲೇ ಬರಪೀಡಿತ ತಾಲೂಕಿನ ಪಟ್ಟಿಗೆ ಸೇರಿರುವ ಅರಸೀಕೆರೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಜಾಬ್ ಕಾರ್ಡ್ ಪಡೆದವರು ಕೆಲಸವಿಲ್ಲದೆ ಕುಳಿತಿದ್ದಾರೆ. ಅವರನ್ನೆಲ್ಲಾ ಬಳಸಿಕೊಳ್ಳಲು ಅನುಮತಿ ಸಿಕ್ಕರೆ ಕೆರೆಯ ಹೂಳು ರೈತರ ಜಮೀನಿಗೆ ಚಿನ್ನದಂಥ ಗೊಬ್ಬರವಾದೀತು. ಹೂಳು ತುಂಬಿ ಮೈದಾನದಂತಾಗಿರುವ ಕೆರೆಯ ಹೂಳು ಕರಗಿದರೆ ಕೆರೆ ಕೆರೆಯಂತಾಗುವುದರಲ್ಲಿ ಸಂದೇಹವಿಲ್ಲ.

ಆಳುವವರು ಈ ಕೆಲಸ ಮಾಡದಿದ್ರೂ ಪರ್ವಾಗಿಲ್ಲ ಎನ್ನುವವರು, ತಾವಾಗಿಯೇ ಕೆರೆಗಿಳಿದು ಹೂಳೆತ್ತಬಹುದು.

ಸಾಮಗ ಶೇಷಾದ್ರಿ
ಬೆಂಗಳೂರು
http://ift.tt/2qB4s9X

ಹೂಳು ತುಂಬಿ ಮೈದಾನದಂತಾಗಿರುವ ಅರಸೀಕೆರೆ ಕೆರೆ



ಹೀಗಾಗಿ ಲೇಖನಗಳು ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ !

ಎಲ್ಲಾ ಲೇಖನಗಳು ಆಗಿದೆ ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ ! ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ ! ಲಿಂಕ್ ವಿಳಾಸ https://dekalungi.blogspot.com/2017/05/blog-post_574.html

Subscribe to receive free email updates:

0 Response to "ಅರಸೀಕೆರೆ ಕೆರೆಯ ಹೂಳೆತ್ತಿಲ್ಲವೇಕೆ !"

ಕಾಮೆಂಟ್‌‌ ಪೋಸ್ಟ್‌ ಮಾಡಿ