ಶೀರ್ಷಿಕೆ : ಉದ್ಯೋಗ ಖಾತ್ರಿ : ಬಿ. ಹೊಸಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ
ಲಿಂಕ್ : ಉದ್ಯೋಗ ಖಾತ್ರಿ : ಬಿ. ಹೊಸಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ
ಉದ್ಯೋಗ ಖಾತ್ರಿ : ಬಿ. ಹೊಸಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ
ಕೊಪ್ಪಳ, ಮೇ. 26 (ಕರ್ನಾಟಕ ವಾರ್ತೆ): ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ. ಹೊಸಳ್ಳಿ ಗ್ರಾಮದಲ್ಲಿ ಕರೆ ಹೂಳೆತ್ತುವ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕೊಪ್ಪಳ ತಾಲೂಕ ಪಂಚಾಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಬರಗಾಲ ಪ್ರಯುಕ್ತ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿ. ಹೊಸಳ್ಳಿ ಗ್ರಾಮದಲ್ಲಿ ಕರೆ ಹೂಳೆತ್ತುವ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಕಾಮಗಾರಿ ಅಂದಾಜು ಮೊತ್ತ ರೂ.40 ಲಕ್ಷ ಇದ್ದು, ಕಾಮಗಾರಿಗ ಸ್ಥಳದಲ್ಲಿ ಕೂಲಿಕಾರರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಪ್ರಥಮ ಚಿಕಿತ್ಸಾ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿದೆ. 20 ರಿಂದ 25 ಜನ ಕೂಲಿಕಾರರಿಗೆ ಒಬ್ಬ ಕಾಯಕ ಬಂಧುವನ್ನು ನೇಮಿಸಲಾಗಿದ್ದು, ಒಟ್ಟು 15 ಕಾಯಕ ಬಂಧುಗಳು ನಿರಂತರವಾಗಿ ಕಾಮಗಾರಿಯಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುವ ಮಾಹಿತಿ, ಅವರ ಹಾಜರಾತಿ ಪಡೆಯುವುದು, ಅಳತೆ ಪಡೆಯುವುದು, ಅವರ ಕೂಲಿ ಪಾವತಿ ಅಲ್ಲದೆ, ಅವರಿಗೆ ಸಮರ್ಪಕವಾಗಿ ಕೂಲಿ ಹಣ ದೊರೆಯಲು ಅವರು ಗ್ರಾಮ ಪಂಚಾಯತಿಯ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾರೆ.
ಪ್ರಸಕ್ತ ವರ್ಷದಲ್ಲಿ ಕೂಲಿ, ಪ್ರತಿ ದಿನಕ್ಕೆ ರೂ.236/- ಇದ್ದು, ಅವರ ಸಲಕರಣೆಗಳ ಹರಿತಗೊಳಿಸಲು ರೂ.10/- ಪ್ರತ್ಯೇಕವಾಗಿ ಅವರ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ. ಕಾಮಗಾರಿಯಲ್ಲಿ ಬಹದ್ದೂರಬಂಡಿ, ಹ್ಯಾಟಿ, ಬಿ. ಹೊಸಳ್ಳಿ ಗ್ರಾಮಗಳ ಸೇರಿ ಒಟ್ಟು 620 ಕೂಲಿಕಾರರು ಕೂಲಿ ಕೆಲಸ ನಿರ್ವಹಿಸುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೂಲಿಕಾರರಿಗೆ ಕೆಲಸ ಒದಗಿಸಿದೆ. ಬಹದ್ದೂರಬಂಡಿ ಗ್ರಾಮ ಪಂಚಾಯತಿಯಲ್ಲಿ 1951 ಜಾಬಕಾರ್ಡದಾರರು ಇದ್ದಾರೆ. 471 ಕುಟುಂಬಗಳಿಗೆ ಕೂಲಿ ಕೆಲಸ ನೀಡಿದ್ದು, ರೂ. 28.84 ಲಕ್ಷ ಖರ್ಚಾಗಿದೆ. ಈವರೆಗೆ 7357 ಮಾನವ ದಿನಗಳನ್ನು ಸೃಜಿಸಲಾಗಿದೆ. ಕಾಮಗಾರಿ ನಡೆಸುತ್ತಿರುವ ಸಂದರ್ಭದಲ್ಲಿ ಕೊಪ್ಪಳ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಉಪಕಾರ್ಯದರ್ಶಿಗಳು ಹಾಗೂ ಯೋಜನಾ ನಿರ್ದೇಶಕರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹೊಸದಾಗಿ ಕೂಲಿ ಬಯಸಿ ಅರ್ಜಿ ಸಲ್ಲಿಸಿದವರಿಗೆ ಕೂಲಿ ಕೆಲಸ ನೀಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಉದ್ಯೋಗ ಖಾತ್ರಿ : ಬಿ. ಹೊಸಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ
ಎಲ್ಲಾ ಲೇಖನಗಳು ಆಗಿದೆ ಉದ್ಯೋಗ ಖಾತ್ರಿ : ಬಿ. ಹೊಸಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಉದ್ಯೋಗ ಖಾತ್ರಿ : ಬಿ. ಹೊಸಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ ಲಿಂಕ್ ವಿಳಾಸ https://dekalungi.blogspot.com/2017/05/blog-post_559.html
0 Response to "ಉದ್ಯೋಗ ಖಾತ್ರಿ : ಬಿ. ಹೊಸಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾಮಗಾರಿ ಅನುಷ್ಠಾನ"
ಕಾಮೆಂಟ್ ಪೋಸ್ಟ್ ಮಾಡಿ