ಶೀರ್ಷಿಕೆ : ಕೊಪ್ಪಳ : ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಲಿಂಕ್ : ಕೊಪ್ಪಳ : ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪಳ : ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪಳ, ಮೇ. 10 (ಕರ್ನಾಟಕ ವಾರ್ತೆ): ಕೊಪ್ಪಳ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ/ ಬಾಲಕಿಯರ ವಸತಿ ನಿಲಯಗಳಲ್ಲಿ 2017-18 ನೇ ಸಾಲಿಗಾಗಿ ಖಾಲಿ ಇರುವ ಸ್ಥಾನಗಳ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೊಪ್ಪಳದ ಗಣೇಶ ತಗ್ಗು ಹಾಗೂ ಅಳವಂಡಿಯಲ್ಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಗಳು, ಬನ್ನಿಕಟ್ಟಿ, ಹಿರೇಸಿಂದೋಗಿ, ಕಾತರಕಿ-ಗುಡ್ಲಾನೂರ, ಅಳವಂಡಿ, ಕಿನ್ನಾಳ, ಮುನಿರಾಬಾದ, ಹಿರೇಬೊಮ್ಮನಾಳದ ಮೆಟ್ರಿಕ್ ಪೂರ್ವ ಬಾಲಕ ವಸತಿ ನಿಲಯಗಳು ಸೇರಿದಂತೆ ಒಟ್ಟು 09 ವಸತಿ ನಿಲಯಗಳಲ್ಲಿ ಸ್ಥಾನಗಳಲ್ಲಿ 2017-18 ನೇ ಸಾಲಿಗೆ ಪ್ರವೇಶ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು 5 ರಿಂದ 10ನೇ ತರಗತಿಯವರೆಗೆ ಓದುತ್ತಿರಬೇಕು, ಅನುತ್ತೀರ್ಣರಾದ ವಿದ್ಯಾರ್ಥಿಗಳು ಅರ್ಹರಲ್ಲ. ಜಾತಿ/ ಆದಾಯ ಪ್ರಮಾಣಪತ್ರ ಲಗತ್ತಿಸಬೇಕು. ಪ್ರವರ್ಗ 2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ ರೂ. 44,500/- ಗೆ ಮೀರಿರಬಾರದು. ಪರಿಶಿಷ್ಟ ಜಾತಿ/ ಪ.ಪಂಗಡದ ಗುಂಪಿಗೆ ಸೇರಿದ ವಿದ್ಯಾರ್ಥಿಗಳಿಗೆ ಆದಾಯಮಿತಿ ರೂ. 1 ಲಕ್ಷ ಮೀರಿರವಾರದು. ಪ್ರಸಕ್ತ ಸಾಲಿನ ಶಾಲೆಗಳಲ್ಲಿ ಪ್ರವೇಶ ಪಡೆದು ವಸತಿ ನಿಲಯದ ಅರ್ಜಿಫಾರಂನಲ್ಲಿ ಶಾಲೆಯ ದೃಢೀಕರಣ ಪತ್ರ ಲಗತ್ತಿಸಬೇಕು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು/ ಕಾರ್ಯದರ್ಶಿಗಳಿಂದ ದೃಢೀಕರಿಸಿದ ಅಂತರದ ಸರ್ಟಿಫಿಕೇಟು (ವಸತಿ ನಿಲಯಕ್ಕೂ ವಿದ್ಯಾರ್ಥಿಯ ಸ್ವಂತ ಸ್ಥಳಕ್ಕೆ ಇರುವ ಅಂತರ) ಹಾಗೂ ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಬಗ್ಗೆ ಧೃಢೀಕೃತ ಅಂಕಪಟ್ಟಿ ಲಗತ್ತಿಸಬೇಕು.
ಅಂಗವಿಕಲ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ನವೀಕರಣ ಅಭ್ಯರ್ಥಿಗಳು ಸಂಬಂಧಪಟ್ಟ ವಸತಿ ನಿಲಯಗಳ ನಿಲಯ ಪಾಲಕರಿಗೆ ಜೂ. 01 ರೊಳಗಾಗಿ ನವೀಕರಣಗೊಳಿಸಲು ತಪ್ಪದೇ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ ಅವಶ್ಯವಿದ್ದಲ್ಲಿ ಕೊಪ್ಪಳ ತಾಲೂಕ ಹಿಂದುಳಿದ ವರ್ಗಗಳ ವಿಸ್ತೀಣಾಧಿಕಾರಿಗೆ, ಕಛೇರಿ ವೇಳೆಯಲ್ಲಿ ಹಾಗೂ ಸಂಬಂಧಪಟ್ಟ ವಸತಿ ನಿಲಯಗಳ ನಿಲಯ ಪಾಲಕರಲ್ಲಿ ಪಡೆಯಬಹುದು.
ಭರ್ತಿಮಾಡಿದ ನಿಗದಿತ ಅರ್ಜಿ ನಮೂನೆಯನ್ನು, ದೃಢೀಕೃತ ದಾಖಲೆಗಳೊಂದಿಗೆ ಲಗತ್ತಿಸಿ ಜೂನ್ 09 ರೊಳಗಾಗಿ ಕೊಪ್ಪಳ ತಾಲೂಕ ಹಿಂದುಳಿದ ವರ್ಗಗಳ ವಿಸ್ತೀರ್ಣಾಧಿಕಾರಿ, ಅಥವಾ ಸಂಬಂಧಿಸಿದ ವಸತಿ ನಿಲಯದ ಮೇಲ್ವಿಚಾರಕರಲ್ಲಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಕೊಪ್ಪಳ : ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ : ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ : ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2017/05/blog-post_30.html
0 Response to "ಕೊಪ್ಪಳ : ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ