ಶೀರ್ಷಿಕೆ : ಆರ್.ಟಿ.ಇ ಕಾಯ್ದೆಯಡಿ ಸೀಟು ಹಂಚಿಕೆ : ದಾಖಲಾತಿಗೆ ಸೂಚನೆ
ಲಿಂಕ್ : ಆರ್.ಟಿ.ಇ ಕಾಯ್ದೆಯಡಿ ಸೀಟು ಹಂಚಿಕೆ : ದಾಖಲಾತಿಗೆ ಸೂಚನೆ
ಆರ್.ಟಿ.ಇ ಕಾಯ್ದೆಯಡಿ ಸೀಟು ಹಂಚಿಕೆ : ದಾಖಲಾತಿಗೆ ಸೂಚನೆ
ಕೊಪ್ಪಳ, ಮೇ. 03 (ಕರ್ನಾಟಕ ವಾರ್ತೆ): ವಿವಿಧ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಾಗಿ ಆರ್.ಟಿ.ಇ ಕಾಯ್ದೆಯಡಿಯಲ್ಲಿ ಸೀಟು ಹಂಚಿಕೆಯನ್ನು ಏ.28 ರಂದು ಆನ್‍ಲೈನ್ ತಂತ್ರಾಂಶದಲ್ಲಿ ಲಾಟರಿ ಮೂಲಕ ಮೊದಲ ಸುತ್ತಿನಲ್ಲಿ ಮಾಡಲಾಗಿದ್ದು, ಸೀಟು ಹಂಚಿಕೆಯಾದ ಪ್ರತಿ ಮಗುವಿನ ಪಾಲಕರು/ಪೋಷಕರ ಮೊಬೈಲ್ ಸಂಖ್ಯೆಗೆ ಏ.29 ಮತ್ತು 30 ರಂದು ಪ್ರತಿದಿನ 4 ಬಾರಿ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಎಸ್.ಎಂ.ಎಸ್ ಕಳುಹಿಸಲಾಗಿದೆ.
ಆಯ್ಕೆಯಾದ ಮಗುವಿನ ಪೋಷಕರು ಇಲಾಖಾ ವೆಬ್‍ಸೈಟ್‍ಗೆ ಭೇಟಿ ನೀಡಿ, ಸೀಟು ಆಯ್ಕೆಯಾದ ಅರ್ಜಿಯ ಸಂಖ್ಯೆಯನ್ನು ನಮೂದಿಸಿ, ಸೀಟು ಹಂಚಿಕೆಯಾದ ಪ್ರತಿ ಪ್ರಿಂಟ್ ಪಡೆದುಕೊಂಡು, ಈಗಾಗಲೇ ಆರ್.ಟಿ.ಇ ಅರ್ಜಿಯೊಂದಿಗೆ ನೀಡಿದ ಆಧಾರ್ ಸಂಖ್ಯೆಯ ಆಧಾರದೊಂದಿಗೆ ಆಯ್ಕೆಯಾದ ಶಾಲೆಯನ್ನು ಸಂಪರ್ಕಿಸಿ, ಮಗುವನ್ನು ಶಾಲೆಗೆ ದಾಖಲಾತಿ ಮಾಡಿಸಬಹುದು.
ಸೀಟು ಹಂಚಿಕೆಯಾಗಿರುವ ಪೋಷಕರು/ಪಾಲಕರು ಹಾಗೂ ಮಗುವಿನ ಎಲ್ಲಾ ದಾಖಲೆಗಳನ್ನು ಈಗಾಗಲೇ ಇಲಾಖೆಯ ಹಂತದಲ್ಲಿ ಸಂಪೂರ್ಣವಾಗಿ ಪರಿಶೀಲಿಸಿರುವುದರಿಂದ, ಯಾವುದೇ ಕಾರಣಕ್ಕೂ ಆಡಳಿತ ಮಂಡಳಿಯವರು ದಾಖಲೆಗಳನ್ನು ಮರುಪರಿಶೀಲನೆ ಮಾಡವ ಅವಶ್ಯಕತೆ ಇರುವುದಿಲ್ಲ. ಪ್ರವೇಶದ ಸಂದರ್ಭದಲ್ಲಿ ಪೋಷಕರು ನೀಡಿರುವ ಆಧಾರ ಸಂಖ್ಯೆಯನ್ನು ಪೋಷಕರು ಹಾಗೂ ಮಗುವನ್ನು ಗುರುತಿಸಲು ಮಾತ್ರ ಪರಿಗಣಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಗಮನಕ್ಕೆ ತರಬೇಕು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಆರ್.ಟಿ.ಇ ಕಾಯ್ದೆಯಡಿ ಸೀಟು ಹಂಚಿಕೆ : ದಾಖಲಾತಿಗೆ ಸೂಚನೆ
ಎಲ್ಲಾ ಲೇಖನಗಳು ಆಗಿದೆ ಆರ್.ಟಿ.ಇ ಕಾಯ್ದೆಯಡಿ ಸೀಟು ಹಂಚಿಕೆ : ದಾಖಲಾತಿಗೆ ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಆರ್.ಟಿ.ಇ ಕಾಯ್ದೆಯಡಿ ಸೀಟು ಹಂಚಿಕೆ : ದಾಖಲಾತಿಗೆ ಸೂಚನೆ ಲಿಂಕ್ ವಿಳಾಸ https://dekalungi.blogspot.com/2017/05/blog-post_3.html
0 Response to "ಆರ್.ಟಿ.ಇ ಕಾಯ್ದೆಯಡಿ ಸೀಟು ಹಂಚಿಕೆ : ದಾಖಲಾತಿಗೆ ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ